অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಯೂರಾಸನ

ಮಯೂರಾಸನ

ಮಯೂರಾಸನದಲ್ಲಿ ಪದ್ಮಮಯೂರಾಸನ (ಮಯೂರಿ), ಹಂಸಾಸನ, ಪಿಂಛ ಮಯೂರಾಸನ ಎಂಬ ಪ್ರಭೇದಗಳೂ ಇವೆ.

ಮಾಡುವಕ್ರಮ

1)    ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು.

2)    ಅನಂತರ ಅಂಗೈಗಳನ್ನು (ಬೆರಳುಗಳು ಪಾದದ ಕಡೆ ಚಾಚಿರುವ ರೀತಿಯಲ್ಲಿ) ನೆಲದ ಮೇಲೆ ಊರಬೇಕು ಹಾಗೂ ಇದೇ ಸ್ಥಿತಿಯಲ್ಲಿ ಕಿರುಬೆರಳುಗಳು ಪರಸ್ಪರ ಒಂದಕ್ಕೊಂದು ಸ್ಪರ್ಶಿಸಬೇಕು.

3)   ಎರಡೂ ಕಾಲುಗಳನ್ನು ಹಿಂದಕ್ಕೆ ಚಾಚಿ ಮೊಳಕೈಗಳ ಮೇಲೆ ಹೊಕ್ಕಳು ಬರುವಂತೆ ಶರೀರವನ್ನು ಇಟ್ಟುಕೊಳ್ಳಬೇಕು. ಅನಂತರ ಉಸಿರನ್ನು  ನಿಧಾನವಾಗಿ ಹೊರಗೆ ಬಿಡಬೇಕು.

4)   ಉಸಿರನ್ನು ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮುಂದಕ್ಕೆ ಬಗ್ಗಿ, ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಬೇಕು. ಈ ಸ್ಥಿತಿಯಲ್ಲಿ ಕಾಲು, ಸೊಂಟ ಮತ್ತು ಬೆನ್ನು ಇವು  ಭೂಮಿಗೆ ಸಮಾನಾಂತರವಾಗಿರಬೇಕು ಮತ್ತು ಮೊಳಕೈ ಭೂಮಿಗೆ ಲಂಬವಾಗಿರಬೇಕು. ಒಮ್ಮೆ ಚಿತ್ರದಲ್ಲಿರುವಂತೆ ಸ್ಥಿತಿಯನ್ನು ತಲುಪಿ ಅನಂತರ ಅದೇ ಸ್ಥಿತಿಯಲ್ಲಿ ಸಮತೋಲನ ಪಡೆಯುವುದು ಅವಶ್ಯಕ.

ಲಾಭಗಳು

ಮಯೂರಾಸನದ ಅಭ್ಯಾಸದಿಂದ ಉದರದ ಅನೇಕ ವ್ಯಾಧಿಗಳು ದೂರವಾಗುವವು. ಬೆನ್ನುಮೂಳೆ ನೇರವಾಗುತ್ತದೆ. ಜಠರಾಗ್ನಿ ಉದ್ದೀಪನಗೊಂಡು ಹಸಿವು ಹೆಚ್ಚುತ್ತದೆ. ವಿಶೇಷವಾಗಿ ಸಿಹಿಮೂತ್ರ ರೋಗಿಗಳಿಗೆ ಹೆಚ್ಚು ಉಪಯೋಗಿ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate