অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸರ್ವಾಂಗಾಸನ

ಸರ್ವಾಂಗಾಸನ

ಸರ್ವಾಂಗಾಸನದಲ್ಲಿ ನಿರಾಲಂಬ ಸರ್ವಾಂಗಾಸನ, ಸಾಲಂಬಗಾಸನ, ಏಕಪಾಸ ಸರ್ವಾಂಗಸನ ಎಂಬ ಪ್ರಭೇದಗಳು ಇವೆ. ಈ ಆಸನದ ಅಭ್ಯಾಸವು ಶರೀರದ ಎಲ್ಲ ಅಂಗಗಳಿಗೂ ವ್ಯಾಯಾಮ ನೀಡುತ್ತದೆ. ಆದ್ದರಿಂದ ಸರ್ವಾಂಗಾಸನ ಎನ್ನುವ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ.

ಮಾಡುವ ಕ್ರಮ :

1)    ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತನಾಗಿ, ನೇರವಾಗಿ ಮಲಗಬೇಕು.

2)    ಅನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಏಕಕಾಲದಲ್ಲಿ (ಉತ್ಥಿತ ಪಾದಾಸನದಂತೆ) ಮೇಲಕ್ಕೆ ಎತ್ತಬೇಕು.

3)    ಅನಂತರ ಉತ್ಥಿತ ಪಾದಾಸನದಲ್ಲಿ ಲಂಬವಾಗಿದ್ದ ಕಾಲುಗಳನ್ನು ತಲೆಯ ಕಡೆಗೆ ಆದಷ್ಟೂ ಬಗ್ಗಿಸಬೇಕು.

4)    ಸೊಂಟಕ್ಕೆ ಎರಡೂ ಕೈಗಳಿಂದ ಬಲವಾದ ಆಧಾರವನ್ನು ನೀಡಿ ಪುನಃ ಕಾಲುಗಳನ್ನು ಚಿತ್ರದಲ್ಲಿ ತೋರಿಸುವಂತೆ ಭೂಮಿಗೆ ಲಂಬವಾಗಿ ನಿಲ್ಲಿಸಬೇಕು. ಈ ಸ್ಥಿತಿಯಲ್ಲಿ ಸಮತೋಲನ ಪಡೆದುಕೊಂಡಲ್ಲಿ ಮಾತ್ರ ಮುಂದಿನ ಪ್ರಭೇದಗಳನ್ನು ಮಾಡಲು ಸಾಧ್ಯವಾಗುವುದು. ಕತ್ತು, ಹೆಗಲು ಮತ್ತು ಮೊಣಕೈವರೆಗಿನ ತೋಳುಗಳು ಮಾತ್ರ ಈ ಆಸನದಲ್ಲಿ ಭೂಮಿಯ ಮೇಲಿರುತ್ತವೆ.

ಲಾಭಗಳು

 

ಸರ್ವಾಂಗಾಸನದ ಅಭ್ಯಾಸದಿಂದ ವೀರ್ಯದೋಷ, ರಕ್ತದೋಷಗಳು ನಿವಾರಣೆಯಾಗುವವು. ಹಸಿವು ಹೆಚ್ಚುವುದು. ಈ ಆಸನದಲ್ಲಿ ಬೆನ್ನುಮೂಳೆ ನೇರವಾಗುವುದರಿಂದ ಜ್ಞಾನತಂತುಗಳು ವಿಶೇಷ ಲಾಭ ಪಡೆಯುವುವು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 12/21/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate