ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೇಶ ಕಾಂತಿ

ಕೇಶ ಕಾಂತಿ ಹೆಚ್ಚಿಸುವ ಹಾಗಲಕಾಯಿ

ಕೇಶ ಕಾಂತಿ ಹೆಚ್ಚಿಸುವ ಹಾಗಲಕಾಯಿ

 

ಹಾಗಲಕಾಯಿ ಬರಿ ಆಹಾರವಾಗಿ ಮಾತ್ರವಲ್ಲ ಕೂದಲ ಕಾಂತಿ ಹಾಗೂ ಆರೋಗ್ಯಕರ ಕೇಶಕ್ಕಾಗಿ ಕೂಡ ಬಳಸಬಹುದು. ಇದಕ್ಕೆ ಹಾಗಲಕಾಯಿ ಜ್ಯೂಸ್ ಉತ್ತಮ ಪರಿಣಾಮ ಬೀರಬಲ್ಲದು.

ಹಾಗಲಕಾಯಿಯನ್ನು ಜಜ್ಜಿ ಅದರಿಂದ ದಪ್ಪ ರಸವನ್ನು ತೆಗೆದು ಬಾಲ ನೆರೆ ಉಂಟಾಗಿದ್ದರೆ ಅದಕ್ಕೆ ಈ ರಸವನ್ನು ಲೇಪಿಸಿ. ಒಂದೆರಡು ತಾಸು ಕಳೆದ ಬಳಿಕ ಸ್ನಾನ ಮಾಡಿ. ಪ್ರತಿ ಹತ್ತು ದಿನಕ್ಕೊಮ್ಮೆ ಈ ರೀತಿ ಮಾಡುತ್ತಿದ್ದರೆ ಬಾಲ ನೆರೆಯ ಸಮಸ್ಯೆ ಕಡಿಮೆಯಾಗುತ್ತದೆ.

ಸೀಳು ಕೂದಲಿನ ಸಮಸ್ಯೆಯಿದ್ದವರು ಹಾಗಲಕಾಯಿಯನ್ನು ಕತ್ತರಿಸಿ ನೆತ್ತಿಯ ಮೇಲೆ ಚೆನ್ನಾಗಿ ಉಜ್ಜಬೇಕು. ಜತೆಗೆ ಇದರ ರಸವನ್ನು ಕೂದಲಿಗೆ ಹಚ್ಚಬೇಕು. ಗಮನಾರ್ಹವಾದ ಫಲಿತಾಂಶಕ್ಕಾಗಿ ಈ ರೀತಿ ವಾರಕ್ಕೆರಡು ಬಾರಿ ಮಾಡಿದರೆ ಸೀಳು ಕೂದಲಿನಿಂದ ಮುಕ್ತಿ ಪಡೆಯಬಹುದು.

ಸಾಮಾನ್ಯವಾಗಿ ಕೂದಲು ಹೊಳಪು ಕಳೆದುಕೊಳ್ಳುವುದು ಸಹಜ. ಇದಕ್ಕೂ ಹಾಗಲಕಾಯಿಂದ ಪರಿಹಾರ ಇದೆ. ಹಾಗಲಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರೆಯಿರಿ. ಅದು ತಣ್ಣಗಾದ ಬಳಿಕ ಹಾಗಲಕಾಯಿಯನ್ನು ತೆಗದು ಚೆನ್ನಾಗಿ ಹಿಂಡಿ. ಆ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡರೆ ಮತ್ತೆ ಹೊಳಪನ್ನು ಪಡೆಯಬಹುದು. ವಾರಕ್ಕೆ ಒಂದು ಬಾರಿ ಅಥವಾ ವಾರಕ್ಕೆರಡು ಬಾರಿ ಈ ರೀತಿ ಮಾಡುತ್ತಿದ್ದರೆ ಕೂದಲು ಕಾಂತಿಯುಕ್ತವಾಗಿ ದಟ್ಟವಾಗಿ ಬೆಳೆಯುತ್ತದೆ.

ಮೂಲ : ವಿಜಯ ಕರ್ನಾಟಕ

2.95698924731
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ನಂದಿನಿ Feb 21, 2017 03:35 PM

ನನಗೆ ೨೪ ವರ್ಷ ಮದುವೆ ಆಗಿ ಇಬ್ಬರೂ ಮಕ್ಕಳಿದ್ದಾರೆ. ನಾನು ಕಂಪ್ಯೂಟರ್ ಆಪರೇಟ್ರ್ ಆಗಿ ಕೆಲಸನಿರ್ವಹಿಸುತ್ತಿದ್ದೇನೆ. ನನ್ನ ಕೂದಲು ತುಂಬಾ ಉದುರುತ್ತಿದೆ ಹಾಗೂ ತುಂಬಾ ಸಣ್ಣ ಮತ್ತು ಉದ್ದವಾಗಿಲ್ಲ. ನನ್ನ ಕೂದಲು ಉದುರುವುದು ನಿಲ್ಲಲು ಮತ್ತು ಬೆಳೆಯಲು ಸಲಹೆ ಕೊಡಿ

krishna Dec 05, 2015 10:38 AM

ಉದುರಿದ ಕೂದಲು ಬೆಳೆಯುವುದೇ ?

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top