ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚರ್ಮ

ಚರ್ಮ

ಚರ್ಮಕ್ಕೆ ಬರುವ ಖಾಯಿಲೆಗಳು ಹಲವಾರು, ರಕ್ತದ ದೋಷದಿಂದಲೆ ಬಹುತೇಕ ಚರ್ಮರೋಗಗಳು ಬರುತ್ತವೆ. ರಕ್ತ ದೋಷವು, ಕೆಟ್ಟ ಆಹಾರ, ಅಶುದ್ಧ ನೀರು ಮತ್ತು ಕಲುಷಿತ ವಾತಾವರಣದಿಂದ ಬರುತ್ತದೆ. ಎಲ್ಲ ಚರ್ಮ ಖಾಯಿಲೆಗಳಿಗೆ ಮನೆ ಮದ್ದು.
 • ಚರ್ಮಕ್ಕೆ ಶ್ರೀಗಂಧ ಮತ್ತು ಅರಿಷಿಣವನ್ನು ನಿಂಬೆರಸದಲ್ಲಿ ಗಂಧಮಾಡಿ ಲೇಪಿಸುವುದು.
 • ಲೋಳೆಸರದೊಂದಿಗೆ ಅರಿಷಿಣ ಕಲೆಸಿ ಲೇಪಿಸುವುದು.
 • ಪಚ್ಚ ಕರ್ಪೂರಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ಲೇಪಿಸುವುದು.
 • ದೇಶಿ ಆಕಳ ಸಗಣಿಯನ್ನು ಗೋಮೂತ್ರ ಕಲೆಸಿ ಲೇಪಿಸುವುದು.
 • ಸ್ನಾನಕ್ಕೆ ಕಡ್ಲೆ ಹಿಟ್ಟು, ಹೆಸರು ಹಿಟ್ಟು, ಅರಿಷಿಣ ಚೂರ್ಣ ಕರ್ಪೂರ ಸೇರಿಸಿ ಉಪಯೋಗಿಸಬೇಕು.
 • ಊಟದಲ್ಲಿ ಸೈಂಧ್ರ ಲವಣ, ಮೆಣಸು, ನಿಂಬೆ ಹುಳಿ, ಬೆಲ್ಲ, ರುಚಿಗಾಗಿ ಬಳಸಬೇಕು.
 • ನಿತ್ಯ ಸ್ನಾನವನ್ನು ತಣ್ಣೀರಿನಿಂದ ಮಾಡಬೇಕು. ನೀರಿನಲ್ಲಿ ಗೋಮೂತ್ರ ಹಾಕಬೇಕು.
 • ದಿನಾಲು 4 ಚಮಚ ದೇಶಿ ಆಕಳ ಗೋಮೂತ್ರ ಸೋಸಿ ಸೇವಿಸಬೇಕು ಅಥವಾ ಗೋ ಅರ್ಕ ಸೇವಿಸುವುದು.
 • ದಿನಾಲು ನೀರಿನಲ್ಲಿ 2 ಚಮಚ ಜೇನು ಹಾಕಿ ಸೇವಿಸಬೇಕು.
 • ಬಟ್ಟೆಯನ್ನು ಹತ್ತಿಯಿಂದ ತಯಾರಿಸಿದ್ದನ್ನು ಉಪಯೋಗಿಸಬೇಕು.
 • ತಾಮ್ರದ ಪಾತ್ರೆ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಉಪಯೋಗಿಸಬೇಕು.
 • ದಿನಾಲೂ 2 ಸಲ ತುಳಸಿ ಕಷಾಯ ಸೇವಿಸಬೇಕು.
 • ವಾರಕ್ಕೊಮ್ಮೆ 1 ಲೀಟರ್ ಬಿಸಿ ನೀರಿಗೆ ಸ್ವಲ್ಪ ಸೈಂಧ್ರ ಲವಣ ಹಾಕಿ ಸೇವಿಸಬೇಕು (ಬೆಳಿಗ್ಗೆ)
 • ರಾತ್ರಿ ಊಟ ಮಾಡಬಾರದು.
 • ಕಷಾಯವನ್ನು ತಯಾರಿಸುವಾಗ ನೀರಿಗೆ ಹಾಕುವ ಮೂಲಿಕೆಗಳನ್ನು 10 ನಿಮಿಷ ಕುದಿಸಿ ಸೋಸಿ ಸೇವಿಸಬೇಕು, ಹಾಲು ಸೇರಿಸಬಾರದು.

ಎಲ್ಲ ವ್ಯಾಧಿಗಳಿಗೆ ಸಂಬಂಧಪಟ್ಟ ಪಥ್ಯ ಕ್ರಮಗಳನ್ನು ತಪ್ಪದೆ ಅನುಸರಿಸುವುದು

ಮೂಲ: ವಿಕ್ರಮ

2.97183098592
Manohar M Aug 14, 2019 11:44 PM

Good info

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top