ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಚರ್ಮದ ಆರೈಕೆ / ನುಣುಪಾದ ತ್ವಚೆಗೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನುಣುಪಾದ ತ್ವಚೆಗೆ

ಮಹಿಳೆಯರ ಉಲ್ಲಾಸದ ಮೂಲ ಇರುವುದೇ ಪುಟಿಯುವ ಆತ್ಮವಿಶ್ವಾಸದಲ್ಲಿ. ಮೃದುವಾದ ತ್ವಚೆ, ಅಂದದ ನೋಟ ಇವೆರಡೂ ಆತ್ಮವಿಶ್ವಾಸದ ಖನಿಯಾಗಿಸುತ್ತವೆ. ಈ ನಿಟ್ಟಿನಲ್ಲಿ ಬೇಡದ ರೋಮನಿವಾರಣೆಗಾಗಿ ಎಲ್ಲ ವರ್ಗದ ಜನರೂ ಶಕ್ತ್ಯಾನುಸಾರ ಸಮಯ ಹಣ ವ್ಯಯ ಮಾಡುತ್ತಾರೆ.

ಮಹಿಳೆಯರ ಉಲ್ಲಾಸದ ಮೂಲ ಇರುವುದೇ ಪುಟಿಯುವ ಆತ್ಮವಿಶ್ವಾಸದಲ್ಲಿ. ಮೃದುವಾದ ತ್ವಚೆ, ಅಂದದ ನೋಟ ಇವೆರಡೂ ಆತ್ಮವಿಶ್ವಾಸದ ಖನಿಯಾಗಿಸುತ್ತವೆ. ಈ ನಿಟ್ಟಿನಲ್ಲಿ ಬೇಡದ ರೋಮನಿವಾರಣೆಗಾಗಿ ಎಲ್ಲ ವರ್ಗದ ಜನರೂ ಶಕ್ತ್ಯಾನುಸಾರ ಸಮಯ ಹಣ ವ್ಯಯ ಮಾಡುತ್ತಾರೆ.

ಆದರೆ ಶೇವಿಂಗ್ ಸರಳ ಉಪಾಯವಾದರೂ ಹಲವಾರು ತಪ್ಪು ಕಲ್ಪನೆಗಳು ಇದರ ಸುತ್ತ ಹುತ್ತ ಕಟ್ಟಿವೆ. ಅವೆಷ್ಟು ಸತ್ಯ ಎನ್ನುವುದು ಅರಿಯುವ.

 • ಪ್ರತಿದಿನ ಶೇವ್ ಮಾಡಿಕೊಳ್ಳುವುದರಿಂದ ಕೂದಲು ಇನ್ನಷ್ಟು ದಟ್ಟವಾಗಿ, ಕಪ್ಪಾಗಿ ಮತ್ತು ವೇಗವಾಗಿ ಬೆಳೆಯುತ್ತದೆ.
 • ಇದು ಸುಳ್ಳು.  ಕೂದಲು ಪುನಃ ಬೆಳೆಯುವುದು ನಿಮ್ಮ ದೇಹದ ಪ್ರಕೃತಿ, ಹಾರ್ಮೋನ್ ಮತ್ತು ವಂಶವಾಹಿಯನ್ನು ಆಧರಿಸಿದೆ. ನಿತ್ಯ ಶೇವ್ ಮಾಡಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. ಕಂಕುಳಲ್ಲಿನ ಕೂದಲು ಕಾಲಿಗಿಂತ ಶೇ. 50ರಷ್ಟು ವೇಗವಾಗಿ ಬೆಳೆಯುತ್ತವೆ. ಹೀಗಾಗಿ ತಪ್ಪು ಕಲ್ಪನೆ ಮನೆ ಮಾಡಿರಬಹುದು.
 • ತ್ವಚೆ ಕಪ್ಪಾಗುತ್ತದೆ ಮತ್ತು ಬಿರುಕು ಮೂಡುತ್ತದೆ.
 • ತ್ವಚೆಯಲ್ಲಿನ ನಿರ್ಜೀವ ಕೋಶಗಳ ನಿರ್ಮೂಲನೆಯಾಗುತ್ತದೆ. ತ್ವಚೆ ನುಣುಪಾಗುತ್ತದೆ.
 • ಕೂದಲು ವೇಗವಾಗಿ ಬೆಳೆಯುತ್ತದೆ.
 • ಇಲ್ಲ. ಕೂದಲು ವೇಗವಾಗಿ ಬೆಳೆಯುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ಕೂದಲು ಬೆಳೆಯಲು ಭಿನ್ನ ಅವಧಿಯನ್ನು ತೆಗೆದುಕೊಳ್ಳುತ್ತದೆ. ವಯಸ್ಸು, ಋತುಮಾನ ಇವೆರಡನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಇಳಿವಯಸ್ಸಿನಲ್ಲಾದರೆ ಕೂದಲು ಬೆಳವಣಿಗೆಯಾಗುವುದೇ ನಿಧಾನ. ಬೇಸಿಗೆಯಲ್ಲಿ ಬಲುಬೇಗ ಕೂದಲು ಬೆಳೆಯುತ್ತದೆ.
 • ಹಳೆ ಬ್ಲೇಡಿಗಿಂತ ಹೊಸ ಬ್ಲೇಡ್ ಹೆಚ್ಚು ಗಾಯಗಳನ್ನು ಮಾಡುತ್ತದೆ.
 • ವಾಸ್ತವ ಏನೆಂದರೆ ಹಳೆ ಬ್ಲೇಡ್ ಗಾಯಗಳನ್ನು ಮಾಡುವುದು ಹೆಚ್ಚು. ಅಲ್ಲದೇ ಅದರಿಂದ ಮೃದುವಾದ ಶೇವಿಂಗ್ ಸಾಧ್ಯವಾಗುವುದಿಲ್ಲ. ಸಿಂಗಲ್ ಬ್ಲೇಡ್ ಬಳಕೆ ಅಥವಾ ರೇಜರ್ ಮೇಲೆ ಅತಿಯಾದ ಒತ್ತಡ ಹಾಕುವುದರಿಂದ ಗಾಯಗಳು ಆಗಬಹುದು.
 • ರೇಜರ್ ಗಟ್ಟಿಯಾಗಿ ಒತ್ತಿದರೆ ಮೃದುವಾದ ಶೇವಿಂಗ್ ಸಾಧ್ಯ.
 • ಯಾರು ಹೇಳಿದ್ದು ಹಾಗೆ? ರೇಜರ್ ಮೇಲೆ ಅತಿಯಾದ ಒತ್ತಡ ಹಾಕಿದರೆ ಗಾಯಗಳಾಗಬಹುದು. ನಿಮ್ಮ ತ್ವಚೆಗೆ ವಿರುದ್ಧ ದಿಕ್ಕಿನಲ್ಲಿ ರೇಜರ್ ಓಡಿಸಿ. ಇದರಿಂದ ಕೆಲಸ ಸುಲಭವಾಗುತ್ತದೆ. ಒಳ್ಳೆಯ ಶೇವಿಂಗ್‌ಗೆ ಲೈಟ್ ಟಚ್ ನೀಡಿದರೆ ಸಾಕು.
 • ಒಂದೇ ಜಾಗದಲ್ಲಿ ಪುನಃಪುನಃ ಶೇವ್ ಮಾಡಿಕೊಳ್ಳುತ್ತಿದ್ದರೆ ಉತ್ತಮ ಫಲಿತಾಂಶ ಪಡೆಯಬಹುದು.
 • ಇದೂ ತಪ್ಪು ಕಲ್ಪನೆ. ಹೀಗೆ ಮಾಡುವುದರಿಂದ ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಳ್ಳಬಹುದು. ರೇಜರ್ ಮೊದಲಿನ ಮೃದು ಅನುಭವ ನೀಡುತ್ತಿಲ್ಲ ಎನ್ನುವುದು ಅರಿವಿಗೆ ಬಂದ ತಕ್ಷಣ ಬ್ಲೇಡ್ ಬದಲಿಸುವುದು ಉತ್ತಮ.
 • ಮಂಡಿ ಮೇಲ್ಭಾಗದಲ್ಲಿ ಮಾತ್ರವೇ ಶೇವ್ ಮಾಡಿಕೊಳ್ಳಬೇಕು.
 • ಇದು ನಿಮ್ಮ ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು. ನಿಮಗೆ ಯಾವುದು ಆರಾಮ ಅನ್ನಿಸುತ್ತದೆಯೊ ಹಾಗೂ ನಿಮ್ಮ ಸೌಂದರ್ಯಪ್ರಜ್ಞೆಗೆ ಯಾವುದು ಸೂಕ್ತ ಅನ್ನಿಸುತ್ತದೆಯೊ ಹಾಗೆ ಮಾಡಿ.
 • ಪುರುಷರ ರೇಜರ್ ಅನ್ನೇ ಸ್ತ್ರೀಯರೂ ಬಳಸಬಹುದು.
 • ಇದು ಖಂಡಿತವಾಗಿಯೂ ಸರಿಯಲ್ಲ. ನೈರ್ಮಲ್ಯದ ಕಾರಣದಿಂದ ಹೀಗೆ ಮಾಡುವುದು ಸರಿಯಲ್ಲ.  ಮಹಿಳಾ ರೇಜರ್‌ಗಳನ್ನು ನಿಮ್ಮ ಅಂಗಾಂಗಗಳ ತಿರುವುಗಳಿಗೆ (ಕರ್ವ್) ಅನುಗುಣವಾಗಿ ವಿಶಿಷ್ಟವಾಗಿ ರೂಪಿಸಲಾಗಿರುತ್ತದೆ.
 • ಪ್ರತಿದಿನ ಶೇವಿಂಗ್ ಮಾಡಿಕೊಳ್ಳುವುದು ತ್ವಚೆ ಆರೋಗ್ಯಕ್ಕೆ ಒಳ್ಳೆಯದಲ್ಲ.
 • ಇದೂ ತಪ್ಪು. ನಿಮ್ಮ ಕಂಕುಳು ಅಥವಾ ಕಾಲುಗಳಲ್ಲಿ ಅತಿವೇಗವಾಗಿ ಕೂದಲು ಬೆಳೆಯುತ್ತಿದ್ದರೆ ಅಥವಾ ದಟ್ಟವಾಗಿ ಬೆಳೆಯುತ್ತಿದ್ದರೆ ನಿತ್ಯ ಶೇವ್ ಮಾಡಿಕೊಳ್ಳುವುದು ಜಾಣ ಆಯ್ಕೆ.

ಮೂಲ : ಪ್ರಜಾವಾಣಿ

3.01162790698
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top