অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಉತ್ತಮ ಕೊಲೆಸ್ಟ್ರಾಲ್ ಇರುವ ಆಹಾರಗಳು

ಕೊಲೆಸ್ಟ್ರಾಲ್, ಪಿತ್ತಕೋಶದಲ್ಲಿ ಉತ್ಪತ್ತಿಯಾಗುವಂಥ ಮೇಣದಂಥ ವಸ್ತು, ಕೆಲವು ಆಹಾರಗಳಲ್ಲಿಯೂ ಕಂಡು ಬರುತ್ತದೆ.  ವಿಟಮಿನ್ ಡಿ ಮತ್ತು ಕೆಲ ಹಾರ್ಮೋನುಗಳು, ಜೀವಕೋಶಗಳ ಭಿತ್ತಿಗಳ ನಿರ್ಮಾಣ, ಕೊಬ್ಬಿನಂಶವನ್ನು ಕರಗಿಸುವ ಬೈಲ್ ಸಾಲ್ಟ್ (ಯಕೃತ್ ಲವಣ)ಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಹವು ತನಗೆ ಅಗತ್ಯವಿರುವ ಕೊಲೆಸ್ಟ್ರಾಲನ್ನು ತಾನೇ ಉತ್ಪಾದಿಸುತ್ತದೆ.  ಇದರಿಂದ ಕೊಂಚ ಹೆಚ್ಚಿನ ಕೊಬ್ಬನ್ನು ತಿಂದರೂ ಸರಿತೂಗಬಲ್ಲದು.    ಆದರೆ, ಕೊಬ್ಬಿನಂಶ ಇರುವ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದು.  ಕಾರಣ  ಬಹುತೇಕ ಆಹಾರ ಪದಾರ್ಥಗಳು ಅದನ್ನು ಹೊಂದಿರುತ್ತವೆ.ಅತಿ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್  ಹೃದಯ ಕಾಯಿಲೆಗಳಂಥ ಗಂಭೀರ ಸ್ವರೂಪದ ಅನಾರೋಗ್ಯವನ್ನು ಉಂಟು ಮಾಡಬಲ್ಲದು.  ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಲು ಅನೇಕ ಅಂಶಗಳು ಕಾರಣ.  ಒಳ್ಳೆ ಸುದ್ದಿಯೆಂದರೆ, ಇವುಗಳನ್ನು ಸಮರ್ಥವಾಗಿ ನಿಭಾಯಿಸಬಹುದು.

  • ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಹೆಚ್.ಡಿ.ಎಲ್ (ಒಳ್ಳೆ ಕೊಬ್ಬು) ಹಾಗೂ ಎಲ್ .ಡಿ .ಎಲ್  (ಕೆಟ್ಟ ಕೊಬ್ಬು) ಗಳ ಮೇಲೆ ಅವಲಂಬಿತವಾಗಿವೆ.  ಆರೋಗ್ಯಪೂರ್ಣ ಕೊಬ್ಬನ್ನು ಹೊಂದಿರಬೇಕಾದರೆ, ಹೆಚ್.ಡಿ.ಎಲ್ ಹಾಗೂ ಎಲ್ .ಡಿ .ಎಲ್ ಪ್ರಮಾಣವೂ ಸಮರ್ಪಕ ಪ್ರಮಾಣದಲ್ಲಿರಬೇಕು.
  • ಆಹಾರದಲ್ಲಿ ಎಂಥ ಬಗೆಯ ಕೊಬ್ಬನ್ನು ಸೇವಿಸುತ್ತೀರಿ ಎಂಬುದನ್ನು ಗಮನಿಸಿ.  ವಿಶೇಷವಾಗಿ ಟ್ರಾನ್ ಫ್ಯಾಟ್ (ಅಸಂತೃಪ್ತ ಕೊಬ್ಬು) ಬಿಟ್ಟು ಬಿಡಿ.  ಇದರಿಂದ, ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಲು ಅನುಕೂಲ.
  • ನಿಯಮಿತವಾಗಿ ಹೃದಯದ ಸ್ನಾಯುಗಳಿಗೆ ಸಂಬಂಧಿಸಿದ ವ್ಯಾಯಾಮ ಮಾಡಿ.  ಆದಷ್ಟೂ ಕಡಿಮೆ ಕೊಬ್ಬಿರುವ ಆಹಾರ ಸೇವಿಸಿ.  ಹಾಗೂ ಧೂಮಪಾನವನ್ನು ಬಿಟ್ಟೇ ಬಿಡಿ.  ಇವೆಲ್ಲವೂ ಕೆಟ್ಟ ಕೊಲೆಸ್ಟ್ರಾಲ್ ದೂರ ಮಾಡಲು ಇರುವ ಉಪಾಯಗಳು.

ಹೆಚ್ಚಿದ ಹೆಚ್.ಡಿ.ಎಲ್

ಪ್ರಮಾಣದಲ್ಲಿ ಅಲ್ಲದಿದ್ದರೂ, ದೇಹಕ್ಕೆ ಕೊಬ್ಬು ಬೇಕೇ ಬೇಕು.  ಆದರೆ, ನಾವು ಬಹುತೇಕ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೇವೆ.  ದೇಹಕ್ಕೆ ದಿನವೊಂದಕ್ಕೆ ಬೇಕಾಗುವ ಒಟ್ಟು ಕ್ಯಾಲೋರಿಗಳಲ್ಲಿ ನಾಲ್ಕನೇ ಒಂದು ಭಾಗ ಕೊಬ್ಬಿನಿಂದ ಬರಬೇಕು.  ಆದರೆ, ಸ್ಪಲ್ಪ ಪ್ರಮಾಣದಲ್ಲಿ ಮಾತ್ರ ಈ ಶಕ್ತಿ ಸ್ಯಾಚುರೇಟೆಟ್ ಫ್ಯಾಟ್ (ಸಂತೃಪ್ತ ಕೊಬ್ಬು) ಗಳಿಂದ ಬರುತ್ತದೆ. ಈ ಸಂತೃಪ್ತ ಕೊಬ್ಬು ನಮ್ಮ ದೇಹಕ್ಕೆ ಬರುವುದು ಕರಿದ ತಿಂಡಿ ಹಾಗೂ ಫಾಸ್ಟ್ ಫುಡ್ ಗಳಿಂದ.  ಇವು ಕೆಟ್ಟ ಕೊಬ್ಬು ಎಲ್ .ಡಿ .ಎಲ್  ಪ್ರಮಾಣವನ್ನು ಹೆಚ್ಚಿಸುತ್ತವೆ. ದೇಹವೂ ಟ್ರಾನ್ಸ್ ಫ್ಯಾಟ್ ಗಳನ್ನು ನಿಯಂತ್ರಿಸಲು ಯತ್ನಿಸುತ್ತದೆ.  ನೀವು ವನಸ್ಪತಿ, ಡಾಲ್ಡಾದಂಥ ಹೈಡ್ರೋಜಿನೇಟೆಡ್ ಎಣ್ಣೆಗಳನ್ನು ಬಳಸುತ್ತೀರಾದರೆ, ನೀವು ಟ್ರಾನ್ಸ್ ಫ್ಯಾಟ್ ಗಳನ್ನು ತಿನ್ನುತ್ತಿದ್ದೀರಿ.  ಇವು ಕೆಟ್ಟ ಕೊಬ್ಬು.   ಇವು ಕೆಟ್ಟ ಕೊಬ್ಬು ಎಲ್ .ಡಿ .ಎಲ್  ಹೆಚ್ಚು ಮಾಡುವುದು ಮಾತ್ರವಲ್ಲ, ಒಳ್ಳೆಯ ಕೊಬ್ಬು ಹೆಚ್.ಡಿ .ಎಲ್  ಕಡಿಮೆ ಮಾಡುತ್ತವೆ.  ಇದು ದೇಹದ ಅಗತ್ಯಕ್ಕೆ ವಿರುದ್ಧ.ಇನ್ನೂ ಎರಡು ತೆರನಾದ ಫ್ಯಾಟುಗಳನ್ನು ಗಮನಿಸಿ:  ಮಾನೋಸ್ಯಾಚುರೇಟೆಡ್ ಹಾಗೂ ಪಾಲಿ ಸ್ಯಾಚುರೇಟೆಡ್ ಫ್ಯಾಟ್.    ಇವುಗಳನ್ನು ನೀವು ಆಲಿವ್ ಅಥವಾ ಕ್ಯಾನೋಲಾ ಅಥವಾ ಮೀನೆಣ್ಣೆ ಹಾಗೂ ಕೆಲ ಕಾಯಿಗಳ ಎಣ್ಣೆಗಳಲ್ಲಿ ಕಾಣಬಹುದು.  ಮಾನೋಸ್ಯಾಚುರೇಟೆಡ್ ಫ್ಯಾಟಿನ ಮೂಲವೆಂದರೆ ಅವೋಕಡ್.

ಒಮೆಗಾ-3 ಫ್ಯಾಟಿ ಆಸಿಡ್ ಹೆಚ್ಚಿರುವ ಆಹಾರ ಸೇವಿಸುವುದರಿಂದ ನಿಮ್ಮ ಹೆಚ್.ಡಿ.ಎಲ್  ಹಾಗೂ ಎಲ್ .ಡಿ .ಎಲ್  ಅನುಪಾತ ಸುಧಾರಣೆ ಸಾಧ್ಯ.  ಹಲವು ಬಗೆಯ ಜನಪ್ರಿಯ ಮೀನುಗಳಲ್ಲಿ ಈ ಬಗೆಯ ಫ್ಯಾಟಿ ಆಸಿಡ್ ದೊರಕುತ್ತದೆ.  ವಾರಕ್ಕೆರಡು ಬಾರಿ ಈ ಬಗೆಯ ಮೀನುಗಳನ್ನು ಆಹಾರವಾಗಿ ಸೇವಿಸುವುದರಿಂದ  ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸಬಹುದು.  ಮೀನೆಣ್ಣೆ, ಸೋಯಾ ಉತ್ಪನ್ನಗಳು ಹಾಗೂ ಹಸಿರು ಸೊಪ್ಪಿನ ತರಕಾರಿಗಳು ಉತ್ತಮ ಕೊಲೆಸ್ಟ್ರಾಲ್ ಮೂಲಗಳು.

ಉತ್ತಮ ಕೊಬ್ಬನ್ನು ಹೆಚ್ಚಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದೆಂದರೆ, ವ್ಯಾಯಾಮ. ವಾರದಲ್ಲಿ ಕನಿಷ್ಠ ಐದು ದಿನ 30 ನಿಮಿಷಕ್ಕೂ ಹೆಚ್ಚು ಕಾಲ ಏರೋಬಿಕ್ಸ್, (ನಡಿಗೆ, ಓಟ, ಮೆಟ್ಟಿಲು ಹತ್ತುವಂತಹ) ಕಸರತ್ತಿನಲ್ಲಿ ತೊಡಗುವಿರಾದರೆ,

ಎರಡೇ ತಿಂಗಳಲ್ಲಿ ನಿಮ್ಮಹೆಚ್.ಡಿ.ಎಲ್ ಅಂದರೆ ಉತ್ತಮ ಕೊಬ್ಬಿನ ಪ್ರಮಾಣ ಶೇ.5ರಷ್ಟು ಹೆಚ್ಚುತ್ತದೆ. ಇದೂ ಹೆಚ್ಚುವರಿ ಉತ್ತಮ ಕೊಲೆಸ್ಟ್ರಾಲ್ ಆಹಾರದಲ್ಲಿ ಸೇವಿಸದೇ, ನಿಮ್ಮ ಉತ್ತಮ ಕೊಲೆಸ್ಟ್ರಾಸ್ ಹೆಚ್ಚಿಸುವ ಬಗೆ ತಿಳಿದುಕೊಂಡಿರಿ. ಉತ್ತಮ ಕೊಲೆಸ್ಟ್ರಾಸ್ ಸೇವನೆ ಹಾಗೂ ವ್ಯಾಯಾಮಗಳಿಂದ ನಿಮ್ಮ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸಬಹುದು. ನೀವೊಬ್ಬ ಧೂಮಪಾನಿಯಾಗಿದ್ದರೆ, ಅದನ್ನು ಬಿಡುವ ಮೂಲಕ ನಿಮ್ಮ ಉತ್ತಮ ಕೊಬ್ಬಿನ ಪ್ರಮಾಣವನನ್ನು ಹೆಚ್ಚಿಸಿಕೊಳ್ಳಬಹುದು. ನೀವು ಧೂಮಪಾನ ಮಾಡಿದಾಗಲೆಲ್ಲಾ ಅದರಲ್ಲಿನ ರಸಾಯನಿಕಗಳು ನಿಮ್ಮಲ್ಲಿನ ಉತ್ತಮ ಕೊಬ್ಬನ್ನು ಕಡಿಮೆ ಮಾಡುತ್ತದೆ.

ನೀವು ಧೂಮಪಾನವನ್ನು ನಿಲ್ಲಿಸಿದ್ದೇ ಆದರೆ, ನಿಮ್ಮ ಉತ್ತಮ ಕೊಲೆಸ್ಟ್ರಾಲ್ ಶೇ. 10ಕ್ಕೂ ಹೆಚ್ಚು ಪ್ರಮಾಣದಷ್ಟು ಹೆಚ್ಚುತ್ತದೆ. ತೂಕ ಕಳೆದುಕೊಳ್ಳುವುದೂ ನಿಮ್ಮ ಉತ್ತಮ ಕೊಲೆಸ್ಟ್ರಾಲನ್ನು ಹೆಚ್ಚಿಸುವ ತಂತ್ರ. ನಿಮ್ಮ ದೇಹದ ತೂಕ ಕಳೆದುಕೊಂಡ ಪ್ರತಿ 6 ಪೌಂಡು ತೂಕವೂ 1 ಎಂ.ಜಿ  /ಡಿ ಎಲ್  ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಉತ್ತಮ ಕೊಲೆಸ್ಟ್ರಾಲನ್ನು ಹೊಂದಿರುವ ಆಹಾರ ಸೇವನೆಯಿಂದಲೂ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಕಾರಿ.

ಎಲ್ .ಡಿ .ಎಲ್  ಮತ್ತು ಹೆಚ್.ಡಿ.ಎಲ್ ಕೊಲೆಸ್ಟ್ರಾಲ್: ಒಳ್ಳೆಯದು,ಕೆಟ್ಟದ್ದು?

ರಕ್ತದಲ್ಲಿ ಕೊಲೆಸ್ಟ್ರಾಲ್ ಕರಗದು.  ಜೀವಕೋಶಗಳಿಗೆ ಹಾಗೂ ಅವುಗಳಿಂದ ಸಾಗಿಸುವ ವಾಹಕಗಳಾಗಿ ಲಿಪೋಪ್ರೋಟೀನುಗಳು ಕೆಲಸ ಮಾಡುತ್ತದೆ. ಲೋ ಡೆನ್ಸಿಟಿ ಲಿಪೋಪ್ರೋಟೀನ್ ಅಥವಾ yel.D.yel ಎಂದು ಕರೆಯಲಾಗುತ್ತದೆ.  ಇವು ಕೆಟ್ಟ ಕೊಬ್ಬು. ಹೈ ಡೆನ್ಸಿಟಿ ಲಿಪೋಪ್ರೋಟೀನ್ ಅಥವಾ eh.D.yel ಎಂದು ಗುರುತಿಸುತ್ತಾರೆ.  ಇದು ಒಳ್ಳೆಯ  ಕೊಬ್ಬು.

ಈ ಎರಡು ಲಿಪಿಡ್ಡುಗಳ ಜೊತೆಗೆ ಟ್ರೈಗ್ಲಿಸರೈಡುಗಳು ಮತ್ತು ಎಲ್ಎ ಕೊಲೆಸ್ಟ್ರಾಲುಗಳು ಸೇರಿಕೊಂಡರೆ, ನಿಮ್ಮ ಒಟ್ಟು ಕೊಲೆಸ್ಟ್ರಾಲ್ ಲೆಕ್ಕಕ್ಕೆ ಬರುತ್ತದೆ.  ಇದನ್ನು ನಿಮ್ಮ ರಕ್ತ ಪರೀಕ್ಷೆಯ ಮೂಲಕ ಪತ್ತ ಹಚ್ಚಬಹುದು.

ಎಲ್ .ಡಿ .ಎಲ್ /(ಕೆಟ್ಟ) ಕೊಲೆಸ್ಟ್ರಾಲ್

ಎಲ್ .ಡಿ .ಎಲ್  (ಕೆಟ್ಟ) ಕೊಲೆಸ್ಟ್ರಾಲ್ ರಕ್ತದೊಂದಿಗೆ ಪ್ರವಹಿಸುವಾಗ, ಅದು ನಿಧಾನವಾಗಿ ಮೆದುಳಿಗೆ ಹಾಗೂ ಹೃದಯ ರಕ್ತ ಸಾಗಿಸುವ ರಕ್ತನಾಳದ ಒಳಗೋಡೆಗಳಲ್ಲಿ ಕಟ್ಟಿಕೊಳ್ಳುತ್ತವೆ.  ಇದರಿಂದ, ರಕ್ತನಾಳಗಳು ಕಿರಿದಾಗಿ, ಹೃದಯಾಘಾತ ಅಥವಾ ಪಾರ್ಶ್ವ ವಾಯು ಉಂಟಾಗಬಹುದು.ಹೆಚ್.ಡಿ.ಎಲ್ (ಒಳ್ಳೆಯ) ಕೊಲೆಸ್ಟ್ರಾಲ್

ರಕ್ತದ ಮುಖಾಂತರ ಸಾಗಣೆಯಾಗುವ ಕೊಲೆಸ್ಟ್ರಾಲಿನ ನಾಲ್ಕನೇ ಒಂದು ಅಥವಾ ಮೂರನೇ ಒಂದು ಭಾಗ ಒಳ್ಳೇ ಕೊಲೆಸ್ಟ್ರಾಲ್  ಹೆಚ್.ಡಿ.ಎಲ್ ಇದು ಹೆಚ್ಚಿನ ಪ್ರಮಾಣದಲ್ಲಿದ್ದರೆ ಹೃದಯಾಘಾತದಿಂದ  ರಕ್ಷಣೆ ನೀಡವುದರಿಂದ ಇದನ್ನು ಒಳ್ಳೆ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ.  ಕಡಿಮೆ ಪ್ರಮಾಣದ ಹೆಚ್.ಡಿ.ಎಲ್ (40 ಎಂ ಜಿ /ಡಿ ಎಲ್ ) ಹೃದಯದ ಸಮಸ್ಯೆಗಳನ್ನು  ಹೆಚ್ಚಿಸುತ್ತದೆ.

ಟ್ರೈಗ್ಲಿಸರೈಡುಗಳು

ದೇಹದಲ್ಲಿರುವ ಕೊಬ್ಬಿನ ಮತ್ತೊಂದು ರೂಪ ಟ್ರೈಗ್ಲಿಸರೈಡ್. ಧೂಮಪಾನ, ಜಡತ್ವ, ಹೆಚ್ಚಿನ ತೂಕ, ಬೊಜ್ಜು, ಅತಿಯಾದ ಮದ್ಯಪಾನ ಹಾಗೂ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟುಗಳ ಸೇವನೆಯಿಂದ ಟ್ರೈಗ್ಲಿಸರೈಡುಗಳ ಪ್ರಮಾಣ ಹೆಚ್ಚಬಹುದು. ಇವುಗಳ ಪ್ರಮಾಣ ಹೆಚ್ಚಿದರೆ, ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಹೃದಯದ ತೊಂದರೆ, ಡಯಬಿಟೀಸ್ ಸಮಸ್ಯೆಯಿರುವವರಲ್ಲಿ ಟ್ರೈಗ್ಲಿಸರೈಡುಗಳ ಪ್ರಮಾಣ ಹೆಚ್ಚು.

ಎಲ್ ಪಿ (ಎ) ಕೊಲೆಸ್ಟ್ರಾಲ್

ಎಲ್ .ಡಿ .ಎಲ್  ಕೊಲೆಸ್ಟ್ರಾಲಿನ ಮತ್ತೊಂದು ವಿಧವೇ ಎಲ್ ಪಿ(ಎ). ಹೆಚ್ಚಿನ ಪ್ರಮಾಣದ ಎಲ್ ಪಿ(ಎ) ರಕ್ತನಾಳದ ಒಳಗೋಡೆಗಳಲ್ಲಿ ಕೊಬ್ಬು ಶೇಖರವಾಗುತ್ತದೆ.

ಮೂಲ: nutralegacy(www.nutralegacy.com)

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate