অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಿಮ್ಮ ಪುಟ್ಟ ಹೃದಯ ಜೋಪಾನ

ನಿಮ್ಮ ಪುಟ್ಟ ಹೃದಯ ಜೋಪಾನ

ನಿಮ್ಮ ಪುಟ್ಟ ಹೃದಯ ಜೋಪಾನ

ನಮ್ಮ ದೇಹದ ಇತರ ಅಂಗಗಳಿಗಿಂತ ಇದು ಸ್ವಲ್ಪ ಭಿನ್ನ. ಏಕೆಂದರೆ ಇತರ ಅಂಗಗಳು ಬರೀ ನಮ್ಮ ದೈಹಿಕ ಆರೋಗ್ಯಕ್ಕೆ ಅವಶ್ಯಕವಾದರೆ, ಹೃದಯ ಮಾತ್ರ ನಮ್ಮ ಮಾನಸಿಕ ಆರೋಗ್ಯಕ್ಕೂ ಅವಶ್ಯಕ. ಪ್ರತೀವರ್ಷ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚಾಗುತ್ತಿವೆ. ಅದರಲ್ಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಹೃದಯಕ್ಕೆ ಸಂಬಂಧಿಸಿ ಸಮಸ್ಯೆಗಳು ಹೆಚ್ಚಾಗಲು ನಮ್ಮ ಜೀವನ ಶೈಲಿ ಪ್ರಮುಖ ಕಾರಣ ಎಂಬುವುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಇದರ ಬಗ್ಗೆ ಜಾಗ್ರತೆವಹಿಸಿದರೆ ಹೃದಯಾಘಾತ, ಇತರ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಜನರನ್ನು ಜಾಗ್ರತೆಗೊಳಿಸಲು ಈ ವಿಶ್ವ ಹೃದಯವನ್ನು ಆಚರಿಸಲಾಗುವುದು. ನಿಮ್ಮ ಪುಟ್ಟ ಹೃದಯವನ್ನು ಜೋಪಾನ ಮಾಡಲು ನೀವು ನಿಮ್ಮ ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ತಂದರೆ ಸಾಕು. ಅದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ:

image 7a

ಒತ್ತಡ ಕಡಿಮೆ ಮಾಡಿಕೊಳ್ಳಿ

ಹೃದಯಾಘಾತಕ್ಕೆ ಪ್ರಮುಖ ಕಾರಣ ಮಾನಸಿಕ ಒತ್ತಡ. ನೀವು ಗಮನಿಸಿರಬಹುದು ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾದಾಗ ವ್ಯಕ್ತಿಗೆ ಹೃದಯಾಘಾತವಾಗುತ್ತದೆ. ಖುಷಿಯಾಗಲಿ, ದುಃಖವನ್ನಾಗಲಿ ಹೆಚ್ಚು ಉದ್ವೇಗಕ್ಕೆ ಒಳಗಾಗದೆ ತೆಗೆದುಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ. ಇದಕ್ಕೆ ಯೋಗ ಸಹಾಯ ಮಾಡುತ್ತದೆ.

ಮಧುಮೇಹ

image7b

ಮಧುಮೇಹವಿದ್ದರೆ ಅದನ್ನು ಆಹಾರಕ್ರಮ ಮತ್ತು ವ್ಯಾಯಾಮದಿಂದ ನಿಯಂತ್ರಣದಲ್ಲಿಡಬೇಕು. ಆರೋಗ್ಯವಂತರು ಕೂಡ ನಮಗೆ ಮಧುಮೇಹ ಬರದಂತೆ ಜೀವನಶೈಲಿಯಲ್ಲಿ ಬದಲಾವಣೆ ತನ್ನಿ.

ಮೈ ತೂಕ

ಮೈ ತೂಕ ಹೆಚ್ಚಾದಂತೆ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಉಂಟಾಗುವುದು. ಮೈ ತೂಕವನ್ನು ನಿಯಂತ್ರಣದಲ್ಲಿಡುವುದು ಎಲ್ಲಾ ರೀತಿಯ ಆರೋಗ್ಯಕ್ಕೆ ಅವಶ್ಯಕ.

ವೈದ್ಯರನ್ನು ಕಂಡು ಪರೀಕ್ಷಿಸಿ

ಆಗಾಗ ವೈದ್ಯರನ್ನು ಕಂಡು ನಿಮ್ಮ ದೇಹದ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ.

ಸೋಮಾರಿಗಳಾಗಬೇಡಿ

ಸದಾ ಓಡಾಡುತ್ತಾ ಚಟುವಿಟಕೆಯಿಂದ ಇರಿ. ಚಟುವಿಟಕೆಯಿಂದ ಓಡಾಡುತ್ತಿದ್ದರೆ ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗುವುದರಿಂದ ಹೃದಯದ ಆರೋಗ್ಯ ಹೆಚ್ಚುವುದು.

ಆಹಾರಕ್ರಮ

ಹೆಚ್ಚು ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನಬೇಡಿ(ತಿನ್ನುವುದಾದರು ಮಿತಿಯಲ್ಲಿ ತಿನ್ನಿ). ಕೆಲವೊಂದು ಆಹಾರಗಳು ಹೃದಯದ ಆರೋಗ್ಯ ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ. ಆ ಆಹಾರಗಳ ಬಗ್ಗೆ ತಿಳಿಯಲು ಮುಂದಿನ ಸ್ಲೈಡ್ ನೋಡಿ:

ಚಾಕಲೇಟ್

ನೀವು ಚಾಕಲೇಟ್ ಪ್ರಿಯರಾ? ಹಾಗಾದರೆ ಚಾಕಲೇಟ್ ತಿನ್ನಲು ಇನ್ನು ಮುಂದೆ ಹಿಂದೇಟಾಕಬೇಕಾಗಿಲ್ಲ. ಚಾಕಲೇಟ್ ತಿನ್ನುವುದರಿಂದ ನಿಮ್ಮ ಆರೋಗ್ಯ ಹೆಚ್ಚಾಗುತ್ತದಂತೆ. ಇದರಿಂದ ಹೃದಯದ ಖಾಯಿಲೆ ಬರುವ ಸಾಧ್ಯತೆ 37 % ಕಡಿಮೆಯಾಗುತ್ತದೆ.

ವೈನ್

ವೈನ್ ದ್ರಾಕ್ಷಿಯಿಂದ ಮಾಡಲಾಗಿದ್ದು ಅದರಲ್ಲಿರುವ ಕೊಲೆಸ್ಟ್ರಾಲ್ ಒತ್ತಡ ಕಡಿಮೆ ಮಾಡುತ್ತೆ. ದೇಹದಲ್ಲಿ ಅಧಿಕ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ರಕ್ತ ಸಂಚಲನೆಯನ್ನು ತಡೆಯುವುದರಿಂದ ಹೃದಯಾಘತ ಉಂಟಾಗುತ್ತದೆ. ವೈನ್ ದೇಹದಲ್ಲಿ ರಕ್ತ ಸಂಚಲನ ಸರಾಗವಾಗುವಂತೆ ಮಾಡುತ್ತದೆ.


ಡ್ರೈ ನಟ್ಸ್

ನಿಮ್ಮ ಹೃದಯವನ್ನು ಜೋಪಾನವಾಗಿಡಬೇಕೆಂದರೆ ನೀವು ಡ್ರೈ ನಟ್ಸ್ ಸಹಾಯ ತೆಗೆದುಕೊಳ್ಳಲೇಬೇಕು. ಹೌದು. ಡ್ರೈ ನಟ್ಸ್ ಹೃದಯಾಘಾತದಂತಹ ಗಂಭೀರ ಸಮಸ್ಯೆ ನಿಮ್ಮ ಬಳಿ ಸುಳಿಯದಂತೆ ತಡೆಯುತ್ತೆ.

ಕೊನೆಯ ಮಾರ್ಪಾಟು : 7/10/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate