অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೆರಿಕಾರ್ಡಿಯಲ್ ಎಫ್ಯೂಷನ್

ಹೃದಯವನ್ನು ಆವರಿಸಿರುವ ಪೊರೆಯಂತಿರುವ ಚೀಲದಲ್ಲಿ (ಪೆರಿಕಾರ್ಡಿಯಂ) ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೀವಜೀವ ದ್ರವ ಇರುವುದನ್ನು ಪೆರಿಕಾರ್ಡಿಯಲ್ ಎಫ್ಯೂಷನ್ ಎಂದು ಹೇಳಲಾಗುತ್ತದೆ. ಇದಕ್ಕೆ ದೇಹದ ವ್ಯವಸ್ಥೆಯ ನ್ಯೂನತೆಗಳು ಕಾರಣವಿರಬಹುದು. ಅನೇಕ ಬಾರಿ ಇದಕ್ಕೆ ನಿರ್ದಿಷ್ಟ ಕಾರಣಗಳೇ ಇರಬೇಕೆಂದೇನಿಲ್ಲ. ಈ ಬಗೆಯ ಎಫ್ಯೂಷನ್ ಕೆಲ ಬಾರಿ ತೀವ್ರವಾಗಿಯೂ ಅಥವಾ ಸತತವಾಗಿಯೂ ಇರಬಹುದು. ಕಾಲ ಕ್ರಮೇಣ ಇದು ರೋಗಿಯ ಮೇಲೆ ತೀವ್ರವಾದ ಪ್ರಭಾವ ಬೀರಬಹುದು. ಹೃದಯವನ್ನು ಆವರಿಸಿರುವ ಪೊರೆಯ ನಡುವಿನ ಸ್ಥಳಾವಕಾಶದಲ್ಲಿ ಸುಮಾರು 10-15 ಮಿಲೀ ಜೀವಜೀವ ದ್ರವ ಇರುತ್ತದೆ. ಈ ಜೀವದ್ರವವು ಪೆರಿಕಾರ್ಡಿಯಮ್ಮಿನ ಕೆಲ ಸ್ತರಗಳು ಹಾಗೂ ವಿಸೇರಲ್ ನಡುವೆ ಯಾವುದೇ ಘರ್ಷಣೆ ಇಲ್ಲದಂತೆ ಮಾಡಲು ಸಹಕಾರಿಯಾಗಿದೆ. ಪೆರಿಕಾರ್ಡಿಯಂ ಹಾಗೂ ಪೆರಿಕಾರ್ಡಿಯಲ್ ಜೀವದ್ರವು, ಹೃದಯದ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೊಂಚ ಪ್ರಮಾಣದ ಜೀವದ್ರವವು ಹೆಚ್ಚಾದರೂ, ಪೆರಿಕಾರ್ಡಿಯಂ ಹೆಚ್ಚಿನ ಒತ್ತಡವಿಲ್ಲದೇ ವಿಕಸನ ಹೊಂದಿ, ಒಟ್ಟಾರೆ ಹೃದಯದ ಮೇಲೆ ಅಂತಹ ವಿಪರೀತ ಪರಿಣಾಮ ನೀಡದೇ, ಕಾರ್ಯ ನಿರ್ವಹಿಸಬಲ್ಲದು. ಮಯೋಕಾರ್ಡಿಯಂ ಸಮಪ್ರಮಾಣದಲ್ಲಿ ಸಂಕೋಚನಗೊಳ್ಳಲು ಇದು ನೆರವಾಗಬಲ್ಲದು. ಇದರಿಂದ ಹೃದಯದ ಮೇಲಿನ ಒತ್ತಡ ಸಮನಾಗಿ ಹಂಚುತ್ತದೆ.

ಹೃದಯವನ್ನು ಆವರಿಸಿರುವ ಚೀಲದಲ್ಲಿ ಸಂಗ್ರಹವಾಗುವ ಜೀವದ್ರವದ ಪ್ರಮಾಣದ ಮೇಲೆ ಈ ಸಮಸ್ಯೆಯ ತೀವ್ರತೆ ಅವಲಂಬನೆಯಾಗಿದೆ. ಸಂಗ್ರಹದ ಪ್ರಮಾಣ ಹೆಚ್ಚಾದಂತೆಲ್ಲಾ, (ಕೇವಲ 80 ಎಂ.ಎಲ್. ನಷ್ಟು ಜೀವದ್ರವವೂ) ಒತ್ತಡ ಹೆಚ್ಚುತ್ತದೆ.

ಪೆರಿಕಾರ್ಡಿಯಲ್ ಎಫ್ಯೂಷನ್ ಕಾರಣಗಳು

ಅಸ್ವಾಭಾವಿಕ ಪ್ರಮಾಣದ ಜೀವಜೀವ ದ್ರವ ಉತ್ಪಾದನೆಗೆ ಮುಖ್ಯ ಕಾರಣಗಳು

  • ಸಾಮಾನ್ಯವಾಗಿ ಆನುಷಂಗಿಕ ಹಂತದ ಗಾಯ (ಅಂದರೆ, ಪೆರಿಕಾರ್ಡಿಟಿಸ್)
  • ಜೀವಜೀವ ದ್ರವ  ವಿಸರ್ಜನೆಯಾಗುವ ಮಾರ್ಗ ಮಧ್ಯದಲ್ಲಿ ಸೋರಿಕೆ
  • ಹೃದಯದ ಪೊರೆಯೊಳಗೆ  ಉರಿಯೂತ,  ಸೋಂಕು , ಸ್ವಯಂಎಕಸಸಸ ನಿರೋಧಕ ಪ್ರಕ್ರಿಯೆ ಗಳಿಗೆ ಅನುಷಂಗಿಕವಾಗಿ ಎಕ್ಸುಡಿಟಿವ್ ಜೀವ ದ್ರವಗಳು ಬರುತ್ತವೆ.
  • ವೈರಲ್: ಈ ಬಗೆಯ ಸ್ಥಿತಿಗೆ ಇದು ಬಹು ಸಾಮಾನ್ಯ ಕಾರಣ.
  • ಇಡಿಯೋಪ್ಯಾಥಿಕ್: ಬಹುತೇಕ ಸಂದರ್ಭಗಳಲ್ಲಿ ಈ ಸ್ಥಿತಿಗೆ ಕಾರಣಗಳು ತಿಳಿಯುವುದಿಲ್ಲ.
  • ಉಲ್ಬಣಕಾರಿ
  • ಹಲವಾರು ಕಾರಣಗಳಿಂದಾಗಿ, ಎಚ್ಐವಿ ಸೋಂಕು ಪೆರಿಕಾರ್ಡಿಯಲ್ ಎಫ್ಯೂಷನ್ನಿಗೆ ಕಾರಣವಾಗಬಲ್ಲದು.
  • ಸೆಕೆಂಡರಿ ಬ್ಯಾಕ್ಟಿರಿಯಲ್ ಸೋಂಕು
  • ಅವಕಾಶವಾದಿ ಸೋಂಕು
  • ಮ್ಯಾಲಿಗ್ನೆನ್ಸಿ
  • ಇಡಿಯೋಪ್ಯಾಥಿಕ್ (ಗೊತ್ತಿಲ್ಲದ ಕಾರಣಗಳಿಂದಾಗುವ ಸಮಸ್ಯೆ):  ಬಹುತೇಕ ಸಂದರ್ಭಗಳಲ್ಲಿ ಸಮಸ್ಯೆಗೆ ಕಾರಣಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
  • ಇನ್ಫೆಕ್ಟಿಯಸ್ (ಸೋಂಕು ಹರಡಬಹುದಾದ)
  • ಎಚ್ಐಸಿ ಸೋಂಕು ಹಲವಾರು ಪ್ರಕ್ರಿಯೆಗಳಿಂದಾಗಿ, ಪೆರಿಕಾರ್ಡಿಯಲ್ ಎಫ್ಯೂನ್ನಿಗೆ ಕಾರಣವಾಗಬುಹುದು:
  • ಆನುಷಂಗಿಕ ಬ್ಯಾಕ್ಟಿರಿಯಾ ಸೋಂಕು
  • ಅವಕಾಶದ ಸೋಂಕು
  • ಮ್ಯಾಲಿಗ್ನನ್ಸಿ
  • ವೈರಲ್: ಪೆರಿಕಾರ್ಡಿಟಿಸ್ ಹಾಗೂ ಮಯೋಕಾರ್ಡಿಟಿಸ್ ಗಳ ಬಹು ಸಾಮಾನ್ಯ ಕಾರಣ ಎಂದರೆ ವೈರಸ್ಸುಗಳೇ.  ಅವುಗಳೆಂದರೆ,
  • ಪ್ಯೋಜನಿಕ್ (ನ್ಯೂಮೋಕೊಸ್ಸಿ, ಸ್ಟ್ರೆಪ್ಟೋಕೋಸ್ಸಿ, ನೈಸ್ಸಿರಿಯಾ, ಟ್ಯೂಬರ್ ಕ್ಯಲೋಸ್)
  • ಫಂಗಲ್ (ಹಿಸ್ಟೋಪ್ಲಾಸ್ಮೋಸಿಸ್, ಕೊಕ್ಕಿಡಿಯೋಡೊಮೈಕೋಸಿಸ್, ಕ್ಯಾಂಡಿಡಾ)
  • ಇತರೆ ಸೋಂಕುಗಳು.  (ಸಿಫಿಲಿಟಿಕ್, ಪ್ರೋಟೋಜೋವಲ್, ಪ್ಯಾರಾಸೈಟಿಕ್)
  • ಯುರೇಮಿಯಾ (ಮೂತ್ರಪಿಂಡ ವೈಫಲ್ಯ)
  • ಮೆಕ್ಸಿಡಿಮಾ (ಹೈಪೋಥೈರಾಯಿಡಿಸಂ)
  • ರಕ್ತನಾಳಗಳಲ್ಲಿ ತೀವ್ರ ರಕ್ತದೊತ್ತಡ
  • ವಿಕಿರಣ ಚಿಕಿತ್ಸೆ
  • ಮಯೋಕಾರ್ಡಿಯಲ್ ಇನ್ಫ್ರಾಕ್ಷನ್
  • ರಕ್ತನಾಳ ಛೇದನದಿಂದ ಪೆರಿಕಾರ್ಡಿಮ್ ನಲ್ಲಿ ಜೀವಜೀವ ದ್ರವ  ಒಸರುವ ಸ್ಥಿತಿ.
  • ಅಪಘಾತ
  • ಹೈಪರ್ ಸೆನ್ಸಿಟಿವಿ ಅಥವಾ ಆಟೋಇಮ್ಯೂನ್ ಸಂಬಂಧಿತ ಕಾಯಿಲೆಗಳು
  • ಸಿಸ್ಟಮಿಕ್ ಲ್ಯೂಪಸ್ ಎರಿತೆಮ್ಟೋಸಸ್
  • ರುಮ್ಯಾಟಿಡ್ ಅರ್ಥೈಟಿಸ್
  • ಅನ್ಯಾಸಿಂಗ್ ಸ್ಪಾಂಡಿಲೈಟಿಸ್
  • ರುಮ್ಯಾಟಿಕ್ ಜ್ವರ.
  • ಶಸ್ತ್ರಚಿಕಿತ್ಸಾ ನಂತರ: ಹೃದಯ ಟ್ರಾನ್ಸ್ ಪ್ಲಾಂಟ್ ರೋಗಿಗಳಲ್ಲಿ ಅಂಗ ನಿರಾಕರಣೆಯ ಸಾಧ್ಯತೆ ಹೆಚ್ಚಿರುವ ಪ್ರಕರಣಗಳಲ್ಲಿ ಇದೂ ಕಾಣಿಸಿಕೊಳ್ಳಬಹುದು.
  • ಬಹುಸಾಮಾನ್ಯವಲ್ಲದ ಕಾರಣಗಳ ಪೈಕಿ ಈ ಕೆಳಕಂಡವೂ ಇರಬಹುದು

ಔಷಧ ಸಂಬಂಧಿ (ಉದಾರಹಣೆಗೆ –ಪ್ರೋಕೈನಾಮೈಡ್, ಹೈಡ್ರಾಲೈಸಿನ್, ಐಸೋನಿಯಸ್ಡ್, ಮಿನಿದೋಕ್ಸಿಡಿಲ್, ಫಿನೈಟನ್, ಆಂಟಿಕಾಗುಲೆಂಟ್, ಮಿಧೈಲ್ಸರಗೈಡ್)

ರೋಗ ಲಕ್ಷಣಗಳು

  • ಹೃದಯ ಸ್ನಾಯು ಸಂಬಂಧಿ
  • ಎದೆನೋವು, ಒತ್ತಡ, ಅಸೌಕರ್ಯ: ವಿಶಿಷ್ಟ ಬಗೆಯ ನೋವು.  ಕುಳಿತಾಗ ಹಾಗೂ ಮುಂದಕ್ಕೆ ಬಗ್ಗಿದಾಗ ಎದೆನೋವು ಕಡಿಮೆಯಾದಂತೆ ಕಾಣುತ್ತದೆ ಮತ್ತು  ಮಲಗಿದಾಗ ನೋವು ಕಾಣಿಸುವುದು.
  • ಸಣ್ಣಗೆ ತಲೆ ಸುತ್ತುವಿಕೆ, ಪ್ರಜ್ಞಾಹೀನತೆ
  • ವಿಪರೀತವಾದ ನಾಡಿ ಬಡಿತ
  • ಉಸಿರಾಟ
  • ಕೆಮ್ಮು
  • ಡಿಸ್ಪನಾ
  • ಕಷ್ಟದಾಯಕ ಉಸಿರಾಟ
  • ಕರಳು-ಜಠರ
  • ಬಿಕ್ಕಳಿಕೆ
  • ನರಸಂಬಂಧಿ
  • ಆತಂಕ
  • ಗೊಂದಲ

ಪೆರಿಕಾರ್ಡಿಯಲ್ ಎಫ್ಯೂಷನ್ --ಲಕ್ಷಣಗಳು

ಪೆರಿಕಾರ್ಡಿಯಲ್ ಘರ್ಷಣೆಯುಕ್ತ ತೀಡುವಿಕೆ: ಪೆರಿಕಾರ್ಡಿಯೋಡೈಟಿಸ್ಸಿನ ಮುಖ್ಯ ದೈಹಿಕ ಲಕ್ಷಣ ಎಂದರೆ, ಪ್ರತಿ  ಹೃದಯಾವರ್ತಕ್ಕೆ 3 ಘಟಕಗಳಿರುವುದು.ಇದು ತೀವ್ರ ಸ್ಥಾಯಿಯಲ್ಲಿ ಕೆರೆದಂತೆ  ಮತ್ತು ಹೆರೆದಂತೆಇರುವುದು. ಇದರ ತೀವ್ರತೆಯನ್ನು ಸ್ಟೆತಾಸ್ಕೋಪನ ಡಯಾಫ್ರಮಅನ್ನು ಎದೆಯ ಭಿತ್ತಿಯ ಕೆಲ ಎಡಮೂಲೆಗೆ  ಒತ್ತಿ ಹಿಡಿದಾಗ ಮಾತ್ರ ಗೊತ್ತಾಗಬಹುದು.

  • ಟ್ಯಾಚಿಕಾರ್ಡಿಯಾ
  • ಟ್ಯಾಚಿಪನಿಯಾ
  • ಕಡಿಮೆಯಾಗುವ ಉಸಿರಾಟದ ಸದ್ದು
  • ಹೆಪಟೋಸ್ಪ್ಲೆನೋಮೆಗಾಲಿ  (ಊದಿಕೊಂಡ ಯಕೃತ್ತು)
  • ದುರ್ಬಲಗೊಂಡ ನಾಡಿ
  • ಎಡಿಮಾ (ಬಾವು)
  • ಸಯನೋಸಿಸ್

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate