অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೃದಯ ವೈಫಲ್ಯ

ಹೃದಯ ತನ್ನ ಸಾಮರ್ಥ್ಯಕ್ಕನ್ನುಗುಣವಾಗಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ರಕ್ತವನ್ನು ಪಂಪ್ ಮಾಡದಿರುವ ಪ್ರಕ್ರಿಯೆಯನ್ನೇ “ಹೃದಯ ವೈಫಲ್ಯ” ಎಂದು ಸರಳವಾಗಿ ಹೇಳಲಾಗುತ್ತದೆ. ಹೃದಯ ವೈಫಲ್ಯ ಎಂದ ಮಾತ್ರಕ್ಕೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದರ್ಥವಲ್ಲ. ಹೃದಯ ವೈಫಲ್ಯವನ್ನು ಕಂಜೆಸ್ಟಿವ್ ಹಾರ್ಟ್ ಫೆಲ್ಯೂರ್ (ಸಿಎಚ್ಎಫ್) ಎಂದೂ ಕರೆಯಲಾಗುತ್ತದೆ. ಹೃದಯದ ಅಸಮರ್ಪಕ ಕಾರ್ಯ ನಿರ್ವಹಣೆಯಿಂದಾಗಿ, ದೇಹದಲ್ಲಿ ಅನಗತ್ಯವಾಗಿ ಜೀವಜೀವ ದ್ರವ ಶೇಖರಣೆಯಾಗುವುದನ್ನು ಕಂಜೆಸ್ಟಿವ್ ಎನ್ನಲಾಗುತ್ತದೆ.

ಹೃದಯ ವೈಫಲ್ಯಕ್ಕೆ ಕಾರಣಗಳು?

ಹಲವಾರು ವಿಭಿನ್ನ ಕಾರಣಗಳಿಗೆ ಹೃದಯ ವೈಫಲ್ಯ ಕಾಣಿಸಿಕೊಳ್ಳಬಹುದು.  ಕೆಲ ಸಂದರ್ಭಗಳಲ್ಲಿ ನಿರ್ದಿಷ್ಟ ಕಾರಣವನ್ನು ಪತ್ತೆ ಹಚ್ಚಲು ಅಸಾಧ್ಯ.  ಹೃದಯ ವೈಫಲ್ಯಕ್ಕೆ ಬಹು ಸಾಮಾನ್ಯವಾದ ಕಾರಣಗಳೆಂದರೆ:

  • ರಕ್ತನಾಳದ ಕಾಯಿಲೆ ಹಿಂದೆ ಹೃದಯಾಘಾತವಾಗಿರಬಹುದು ಇಲ್ಲದೆಯೂ ಇರಬಹುದು.,
  • ಹೃದಯದ ಸ್ನಾಯುಗಳಲ್ಲಿನ ಸಮಸ್ಯೆ  (ಕಾರ್ಡಿಯೋಮಯೋಪತಿ)
  • ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್)
  • ಹೃದಯದ ಕವಾಟಗಳಲ್ಲಿ ಸಮಸ್ಯೆ
  • ಹೃದಯದ ಬಡಿತಗಳಲ್ಲಿನ ವೈಪರಿತ್ಯ
  • ವಿಷಯುಕ್ತ ವಸ್ತುಗಳ ಬಳಕೆ (ಮಾದಕ ವಸ್ತುಗಳು, ಮದ್ಯ ಇತ್ಯಾದಿ)
  • ಕಂಜೆನಿಟಲ್ ಹೃದಯದ ಕಾಯಿಲೆ  (ಜನಿಸುವಾಗಲೇ ಕಾಣಿಸಿಕೊಳ್ಳುವ ಹೃದಯದ ನ್ಯೂನತೆ ಅಥವಾ ಸಮಸ್ಯೆ)
  • ಡಯಾಬಿಟೀಸ್
  • ಥೈರಾಯಿಡ್ ಸಮಸ್ಯೆಗಳು

ಹೃದಯ ವೈಫಲ್ಯದ ಲಕ್ಷಣಗಳು?

ಹೃದಯ ವೈಫಲ್ಯ ಸಮಸ್ಯೆಯನ್ನು ಎದುರಿಸುವವರಲ್ಲಿ ಈ ಕೆಳಕಂಡ ಲಕ್ಷಣಗಳನ್ನು ಕಾಣಬಹುದು:

  • ಉಸಿರಾಟದ ತೊಂದರೆ (ನಡೆಯುವಾಗ, ಮೆಟ್ಟಿಲುಗಳನ್ನು ಏರುವಾಗ ಅಥವಾ ತುಂಬ ಚಟುವಟಿಕೆಯಿಂದಿರುವಾಗ)
  • ಮಲಗಿರುವಾಗಲೂ ಉಸಿರಾಟದ ತೊಂದರೆ
  • ಕಡಿಮೆಯಾದ ಹಸಿವಿನ ಪ್ರಮಾಣ
  • ಉಸಿರಾಟದ ತೊಂದರೆಯಿಂದಾಗಿ, ರಾತ್ರೋ ರಾತ್ರಿ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವುದು
  • ಸುಸ್ತು, ನಿರ್ಬಲತೆ ಮತ್ತು ಕಸರತ್ತು ಮಾಡುವ ಸಾಮರ್ಥ್ಯ ಕಡಿಮೆಯಾಗುವುದು
  • ಕಾಲು, ಪಾದ ಅಥವಾ ಹಿಮ್ಮಡಿಗಳಲ್ಲಿ ಊತ
  • ಊದಿಕೊಂಡ ಹೊಟ್ಟೆ
  • ಸತತ ಅಥವಾ ಅನಿಯಮಿತ ಹೃದಯದ ಬಡಿತ
  • ದೇಹದ ತೂಕದಲ್ಲಿ ಸತತ ಏರಿಕೆ (ದಿನವೊಂದಕ್ಕೆ 1 ಅಥವಾ 2 ಪೌಂಡಗಳಷ್ಟು ಸತತ 3 ದಿನ ಏರಿಕೆ)
  • ಸತತವಾದ ಕೆಮ್ಮ ಅಥವಾ ದಮ್ಮು
  • ತಲೆ ಸುತ್ತುವಿಕೆ

ಹೃದಯ ವೈಫಲ್ಯದ ಸಾಧ್ಯತೆಗಳನ್ನು ಕಡಿಮೆ ಮಾಡಲು ಕೆಲ ಸಲಹೆಗಳು

  • ಆಹಾರ: ನಿಮ್ಮ ಆಹಾರದಲ್ಲಿ ಉಪ್ಪಿನಂಶ ತಗ್ಗಿಸಿ ಮತ್ತು ಕೊಬ್ಬಿನಂಶ ಕಡಿಮೆಯಿರುವ ಆಹಾರ ಸೇವಿಸಿ
  • ಮದ್ಯಪಾನ: ಮದ್ಯಪಾನದ ಪ್ರಮಾಣದ ಮಿತಿಯಲ್ಲಿರಲಿ
  • ದೈಹಿಕ ಚಟುವಟಿಕೆ: ಹೃದಯ ವೈಫಲ್ಯದ ಸಮಸ್ಯೆಯಿರುವವರೂ ದೈಹಿಕ ಕಸರತ್ತನ್ನು ಮುಂದುವರೆಸಬಹುದು.  ಆದರೆ, ಎಂತಹ ಕಸರತ್ತನ್ನು ಹೇಗೆ ಮತ್ತು ಎಷ್ಟು ಮಾಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.
  • ತೂಕ: ತೂಕ ಕಡಿಮೆ ಮಾಡಿಕೊಳ್ಳಬೇಕು.
  • ಕುಟುಂಬದ ಬೆಂಬಲ: ನಿಮ್ಮ ಕುಟುಂಬದ ಬೆಂಬಲವೇ ಪ್ರಮುಖ ಆಸರೆ. ಹಾಗಾಗಿ ವಿಷಯ ತಿಳಿಸಿ, ಅವರನ್ನೂ ಸಾಧ್ಯವಿದ್ದಷ್ಟೂ ಈ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಿ.
  • ಬೆಂಬಲದ ಇತರೆ ಮೂಲಗಳು: ನಿಮ್ಮ ವೈದ್ಯರು ಇಂಥ ವ್ಯಕ್ತಿಗಳ ಬೆಂಬಲಕ್ಕಿರುವ ಸಮೂಹಗಳ ಕುರಿತು ಮಾಹಿತಿ ನೀಡಬಲ್ಲರು.  ಇದೇ ಬಗೆಯ ಸಮಸ್ಯೆ ಎದುರಿಸುವವರೊಂದಿಗೆ ಚರ್ಚಿಸುವುದು ಅನೇಕ ಸಂದರ್ಭದಲ್ಲಿ ಸಹಕಾರಿ.

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate