অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ

ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ ಎಂದರೇನು?

ಟಾನ್ಸಿಲ್ಸ ಗಳು ಗಂಟಲಿನ ಪಕ್ಕದಲ್ಲಿರುವ ಎರಡು ಅಂಗಾಂಶಗಳ ಮುದ್ದೆಗಳು. ಅವು ಅಂಗುಳಿನ ಅವಕಾಶದಲ್ಲಿ ಇರುತ್ತವೆ. ಪ್ರತಿ ಟಾನ್ಸಿಲ್ ನ ಕೆಳ ತುದಿಯು ನಾಲಿಗೆಯ ಬದಿ ಇರುವುದು... ಗಂಟಲಿನ ಹಿಂಭಾಗದಲ್ಲಿರುವುದು. ಅಡೆನಾಯಿಡ್ಸ ಮೂಗಿನ ಹಿಂದೆ ಇರುವ ಅಂಗಾಂಶಗಳ ಒಂದು ಗಂಟು. ವಯಸ್ಕರಲ್ಲಿ ಅವು ಗಂಟಲಿನ ಹಿಂದಿನ ಗೋಡೆಯ ಮೇಲೆ ಇರುತ್ತದೆ...ಕಿರುನಾಲಗೆಯ ಮೇಲೆ ಒಂದು ಅಂಗುಲದ ಅಂತರದಲ್ಲಿದೆ. ಅದು ಕಣ್ಣೀರಿನ ಆಕಾರದಲ್ಲಿದ್ದು ಮೃದು ಅಂಗುಳದ ಮಧ್ಯದಲ್ಲಿ ಓಲಾಡುತ್ತಿರುತ್ತದೆ ಟಾನ್ಸಿಲ್ಗಳು ಲಿಂಫೆಟಿಕ್ ವ್ಯವಸ್ಥೆಯ ಭಾಗವಾಗಿವೆ. ಅವು ಸೊಂಕನ್ನು ಎದುರಿಸಲು ಸಹಾಯ ಮಾಡುತ್ತವೆ. ಆದರೂ ಅವುಗಳನ್ನು ತೆಗೆದು ಹಾಕುವುದರಿಂದ ಸೋಂಕಿಗೆ ಒಳಗಾಗುವ ಸಂಭವ ಹೆಚ್ಚಾಗುವುದಿಲ್ಲ. ಟಾನ್ಸಿಲ್ಗಳು ಗಾತ್ರದಲ್ಲಿ ಬೇರೆ ಬೇರೆ ಯಾಗಿರುವುವು. ಸೊಂಕು ತಗುಲಿದಾಗ ಬಾಯುವವು.

ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ್ ಗಳ ಕೆಲಸ ವೇನು ?

ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ್ ಗಳು ಬಹುತೇಕ ಲಿಂಫಾಯಿಡ್ ಅಂಗಾಂಶಗಳಿಂದ ರಚಿತವಾಗಿವೆ. ಅವು ಜೀರ್ಣ ನಾಳಗಳುದ್ದಕ್ಕೂ ಕಂಡುಬರುವವು ಮತ್ತು ನಾಲಿಗೆಯ ತಳದಲ್ಲಿರುವವು. ಲಿಂಫಿಡ್ ಅಂಗಾಂಶಗಳು ಲಿಂಫೊಸೈಟುಗಳಿಂದ ರಚಿತವಾಗಿವೆ. ಅವು ಆಂಟಿ ಬಾಡಿ ಉತ್ಪನ್ನ ಕ್ಕೆ ಕಾರಣ ವಾಗಿವೆ. ಆಂಟಿಬಾಡಿಗಳು ಉಪಯುಕ್ತವಾಗಿರುವುದರಿಂದ ಅನೇಕ ಅಧ್ಯಯನಗಳನ್ನು ಟಾನ್ಸಿಲ್ಸಗಳ ಪ್ರಾಮುಖ್ಯತೆ ಅರಿಯಲು ಮಾಡಲಾಗಿದೆ ಆದರೆ ಅವುಗಳನ್ನು ತೆಗೆಯುವುದರಿಂದ ದೇಹದ ನಿರೋಧ ವ್ಯವಸ್ಥೆಯ ಮೇಲೆ ಯಾವುದೆ ಪರಿಣಾಮ ವಾಗುವುದಿಲ್ಲ. ಸಕರಾತ್ಮಕ ಪರಿಣಾಮವೆ ಕಂಡು ಬರುವದು. ಟಾನ್ಸಿಲ್ಸ ಮತ್ತು ಅಡೆನಾಯಿಡ್ಸಗಳು ನಗರದ ಮಕ್ಕಳಲ್ಲಿ ಕಂಡುಬರುವ ಬಹುವಿಧವಾದ ಸೊಂಕನ್ನು. ಪರಿಣಾಮಕಾರಿಯಾಗಿ ಎದುರಿಸಲು ಶಕ್ತವಾಗುವಂತೆ ವಿನ್ಯಾಸ ವಾಗಿಲ್ಲ ಎಂದು ಕಂಡುಬರುವುದು. ಬಹುಶಃ ನಿರೋಧ ವ್ಯವಸ್ಥೆಯು ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ ಗಳು ಸೇರಿದಂತೆ ಮಕ್ಕಳು ಈರೀತಿಯ ಬಹು ಸೋಂಕಿತ ಜನಗಳ ಸಂಪರ್ಕಕ್ಕೆ ಬಾರದ ಕಾಲದಲ್ಲಿ ಅಭಿವೃದ್ಧಿಯಾಗಿರಬೇಕು. ಅಲ್ಲದೆ ಅವು ನಿರ್ದಿಷ್ಟ ರೀತಿಯ ಕ್ರಿಮಿ ಮತ್ತು ಪರೋಪಜೀವಿಗಳನ್ನು ಎದುರಿಸಲು ಮಾತ್ರ ಶಕ್ತವಾಗಿದ್ದು, ಈಗ ಅವು ವಿರಳವಾಗಿರಬಹುದು. ಇದರಿಂದ ಒಂದು ಸ್ಪಷ್ಟವಾಗಿದ ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ ಗಳು ಈಗ ನಿಷ್ಕ್ರಿಯವಾಗಿವೆ. ಅವುಗಳಿಂದ ಲಾಭ ಕ್ಕಿಂತ ನಷ್ಟವೆ ಹೆಚ್ಚು.

ಟಾನ್ಸಿಲ್ಸ ಗೆ ಸಂಬಂಧಿಸಿದ ಸಮಸ್ಯೆಗಳು

ಗಂಟಲು ಕಟ್ಟುವುದು ಈಗ ಟಾನ್ಸಿಲ್ಸಗಳನ್ನು ತೆಗೆದುಹಾಕಲು ಇದು ಮುಖ್ಯ ಕಾರಣ. ಟಾನ್ಸಿಲ್ಸಗಳು ದೊಡ್ಡದಾಗುವುದರಿಂದ ಉಸಿರಾಟ, ಆಹಾರಸೇವನೆ ಮತ್ತು ಸ್ಪಷ್ಟವಾಗಿ ಮಾತನಾಡಲು ತೊಂದರೆಯಾಗುವುದು. ಉಸಿರಾಟದ ತೊಂದರೆಯು ಬಾಯಿಯಿಂದ ಉಸಿರಾಡುವುದು ಮೊದಲುಗೊಂಡು, ತೀವ್ರ ಗೊರಕೆ ಅಥವ ಮಲಗಿದಾಗ ಊಸಿರಾಟ ನಿಲ್ಲುವ ವರೆಗೂ ಇರಬಹುದು. ಇದರಿಂದ ಆರೋಗ್ಯಕ್ಕೆ ಆಗುವ ಅಪಾಯ ಕಡಿಮೆ ಪ್ರಮಾಣದಿಂದ ಪ್ರಾಣಾಪಾಯವೂ ಆಗಬಹುದು. ದೊಡ್ಡದಾಗಿ ಕಾಣುವ ತಡೆಮಾಡುವ ಎಲ್ಲ ಟಾನ್ಸಿಲ್ ಗಳು ಪ್ರಾಣಾಪಾಯಕಾರಿಗಳಾಗಿ ಇರುವುದಿಲ್ಲ. ಹಿನ್ನೆಲೆ ಮತ್ತು ಕುಶಲ ವೈದ್ಯರ ತಪಾಸಣೆಯು ಇದನ್ನು ಪತ್ತೆ ಮಾಡಲು ಸಹಾಯಕ.

ದೀರ್ಘಕಾಲಿನ ಮತ್ತು ಪದೆ ಪದೇ ಬರುವ ಟಾನ್ಸಿಲೈಟಿಸ್ / ಗಂಟಲು ನೋವು ಇದು ಟಾನ್ಸಿಲ್ಸ ಅನ್ನು ತೆಗೆದುಹಾಕಲು ಅತಿ ಸಾಮಾನ್ಯ ಕಾರಣ. ಈಗಲೂ ವಿಶ್ವದ ಅನೇಕ ಭಾಗಗಳಲ್ಲಿ ಹಾಗೆ ಮಾಡಲಾಗುತ್ತಿದೆ. ಕೆಲವು ರೋಗಿಗಳಿಗೆ ಪದೇಪದೇ ತೀವ್ರ ಟಾನ್ಸಿಲೈಟಿಸ್ ಕಾಣಬರುವುದು.

ಟಾನ್ಸಿಲ್ಸ್ ನಲ್ಲಿ ಅನೇಕ ಗುಳಿ ಮತ್ತು ಸಂಚಿಗಳು ಇವೆ, ಅವನ್ನು ಕ್ರಿಪ್ಟ್ಸ್ ಗಳು ಎನ್ನವರು. ಅಲ್ಲಿ ಬಿಳಿಯ ದುರ್ವಾಸನೆಯ ತ್ಯಾಜ್ಯಗಳು ಇರುವವು. ಅವು ಬ್ಯಾಕ್ಟೀರಿಯಾ ಮತ್ತು ಮೃತ ಜೀವಕೋಶಗಳಿಂದ ಆಗಿವೆ. ಇದರಿಂದ ಆಗಾಗ ತುಸು ಗಂಟಲ ನೋವು ಬರುವುದು. ಆಂಟಿ ಬಯಾಟಿಕ್ಸಗಳು ತತ್ಕಾಲಿಕ ಶಮನ ಕೊಡುವವು. ಅದಕ್ಕೆ ಶಾಸ್ವತ ಪರಿಹಾರವೆಂದರೆ ಟಾನ್ಸಿಲ್ಕ್ಟಮಿ.

ಅಸಹಜ ಬೆಳವಣಿಗೆ ಅಥವ ಸ್ವರೂಪ ಬೇರೆ ಇತರ ಅಂಗಾಶ ಗಳಂತೆ , ಟಾನ್ಸಿಲ್ಸ್ ಗಳು ದುರ್ಮಾಂಸ ಬೆಳೆಯುವ ತಾಣಗಳಾಗಬಹುದು. ಅಸಹಜವಾದ ಮತ್ತು ದೊಡ್ಡದಾಗಿ ಕಾಣುವ ಟಾನ್ಸಿಲ್ ಕೆಲವು ಬಾರಿ ಹಾಗೆನಿಸುವಂತೆ ಮಾಡುವುದು. ಲಿಂಫೋಮ ಮಕ್ಕಳಲ್ಲಿ ಕಾಣುವ ಸಾಮನ್ಯ ಗಡ್ಡೆ. ವಯಸ್ಕರಲ್ಲಿ ಲಿಂಫೋಮ ಅಥವ ಕರ್ಸಿನೊಮ ಕಾಣಬಹುದು.

ಟಾನ್ಸಿಲೊ ಕ್ಟಮಿಯ ಸಮಸ್ಯೆಗಳಾವು?

ಬಹುತೇಕ ಶಸ್ತ್ರಕ್ರಿಯೆಗಳು ಅರಿವಳಿಕೆಯ ಸಾಮಾನ್ಯ ಆತಂಕಗಳನ್ನು ಹೊಂದಿರುತ್ತವೆ. ರಕ್ತ ಸ್ರಾವ, ಸೊಂಕು ಇರಬಹುದು. ಅರಿವಳಿಕೆಯ ಅಪಾಯವು ರೋಗಿಯ ಆರೋಗ್ಯಕ್ಕೆ ಅನುಗುಣವಾಗಿರುವುದು: ಮತ್ತು ಗಂಭೀರ ಸಮಸ್ಯೆಗಳು ಅತಿ ಕಡಿಮೆ. ರಕ್ತ ಸ್ರಾವವು ಬಹು ತಡವಾಗಿ ಆಗುವುದು. ಶಸ್ತ್ರಕ್ರಿಯೆಯಾದ ಐದು ಹತ್ತು ದಿನಗಳ ಮೇಲೆ ಆಗಬಹುದು. ಶಸ್ತ್ರಕ್ರಿಯೆನಂತರದ ರಕ್ತಸ್ರಾವವು ಹದಿ ಹರೆಯದವರಲ್ಲಿ ಮತ್ತು ವಯಸ್ಕರಲ್ಲಿ ಹೆಚ್ಚು ಮಕ್ಕಳಲ್ಲಿ ಕಡಿಮೆ. ಕಾರಣ ರಕ್ತನಾಳಗಳು ಚಿಕ್ಕವಿರುತ್ತವೆ. ಟಾನ್ಸಿಲ್ಸನ್ನು ತೆಗೆದುಹಾಕಿದ ಮೇಲೆ ಆ ಜಾಗವು ಹೆಚ್ಚು ಸಂಖ್ಯೆಯ ಬ್ಯಾಕ್ಟೀರಿಯಾಗಳ ತಾಣವಾಗುವುದು. ಅದರಿಂದ ತುಸು ಜ್ವರ ಬರಬಹುದು. ಗಂಭೀರ ಸೋಂಕುಗಳು ಅತಿ ವಿರಳ. ಟಾನ್ಸಿಲ್ ದೊಡ್ಡದಾಗಿದ್ದರೆ ಶಸ್ತ್ರಕ್ರಿಯೆಯ ನಂತರ ಧ್ವನಿ ಬದಲಾಗಬಹುದು. ಇದರಿಂದ ಮರಣ ಬರುವುದು ಬಹು ವಿರಳ. ಆದರೂ ಲಘುವಾಗಿ ತೆಗೆದುಕೊಳ್ಳಲಾಗದು.

ಟಾನ್ಸಿಲ್ಸ್ ಪರಿಸ್ಥಿತಿ

  • ತೀವ್ರ ಟಾನ್ಸಿಲೈಟಿಸ್ ಬ್ಯಾಕ್ಟೀರಿಯಾ ಅಥವ ವೈರಸ್ ಟಾನ್ಸಿಲ್ಸಗೆ ಸೊಂಕು ತಗುಲಿಸ ಬಹುದು. ಅದರಿಂದ ಬಾವು ಮತ್ತು ನೋವು ಬರುವುದು. ಅದರ ಮೇಲೆ ಬೂದು ಇಲ್ಲವೆ ಬಿಳಿಬಣ್ಣದ ಆವರಣ ಬರಬಹುದು.
  • ದೀರ್ಘಾವಧಿ ಟಾನ್ಸಿಲೈಟಿಸ್ : ಟಾನ್ಸಿಲ್ಸನ ಸತತ ಸೊಂಕು, ಪದೇ ಪದೇ ಬರುವ ತೀವ್ರ ಟಾನ್ಸಿಲ್ಸನ ಪರಿಣಾಮದಿಂದ ಬರುವುದು.
  • ಪೆರಿ ಟಾನ್ಸಿಲರ್ ಕೀವು : ಸೊಂಕು ಟಾನ್ಸಿಲ್ಸನ ಬದಿಯಲ್ಲಿ ಕೀವಿನ ಸಂಚಿಗಳನ್ನು ಉಂಟುಮಾಡುವುದು. ಅದನ್ನು ವಿರುದ್ಧ ದಿಕ್ಕಿಗೆ ತಳ್ಳುವುದು. ಪೆರಿ ಟಾನ್ಸಿಲ್ಸ್ ಕೀವು ಅನ್ನು ಆದಷ್ಟು ಬೇಗ ಹೊರಹಾಕಬೇಕು.
  • ಅಕ್ಯೂಟ್ ಮೋನೋನ್ಯೂಲ್ಕಿಯೋಸಿಸ್ : ಸಾಧಾರಣವಾಗಿ ಎಪಿಸ್ಟಿನ್-ಬಾರ್ ವಯರ ನಿಂದ ಆಗುವುದು. ”ಮೊನೊ” ತೀವ್ರ ಬಾಧೆಗೆ ಕಾರಣವಾಗುವುದು, ಜ್ವರ, ಗಂಟಲು ನೋವು, ಗುಳ್ಳೆಗಳು ಮತ್ತು ಸುಸ್ತಿಗೆ ಕಾರಣ.
  • ಸ್ಟ್ರೆಪ್ ಗಂಟಲು :ಸ್ಟ್ರೆಪ್ತೊಕೊಕಸ್ ಬ್ಯಾಕ್ಟಿರಿಯವು ಟಾನ್ಸಿಲ್ ಮತ್ತು ಗಂಟಲಿಗೆ ಸೋಂಕು ತಗುಲಿಸುತ್ತದೆ. ಜ್ವರ, ಕತ್ತು ನೋವು ಜೊತೆಗೆ ಗಂಟಲ ನೋವು ಬರಬಹುದು .
  • ದೊಡ್ಡದಾದ ಟಾನ್ಸಿಲ್ಸಗಳು (ಹೈಪರ್ ಟ್ರೊಪಿಕ್) : ದೊಡ್ಡದಾದ ಟಾನ್ಸಿಲ್ಸಗಳು ಶ್ವಾಸ ಮಾರ್ಗವನ್ನು ಕಿರಿದಾಗಿಸುವವು. ಅದರಿಂದ ಗೊರಕೆ ಅಥವ ನಿದ್ದೆಯಲ್ಲಿ ಉಸಿರು ಕಟ್ಟುಬಹುದು .
  • ಟಾನ್ಸಿಲ್ಲೋಲಿಥ್ಸ್ (ಟಾನ್ಸಿಲ್ ಕಲ್ಲುಗಳು) : ಟಾನ್ಸಿಲ್ ಕಲ್ಲುಗಳು ಅಥವ ಟಾನ್ಸಿಲ್ಲೋಲಿಥ್ಸ್ ಗಳು ಸಿಕ್ಕಿಹಾಕಿಕೊಂಡ ತ್ಯಾಜ್ಯವು ಗಟ್ಟಿಯಾಗುವುದು ಅಥವ ಕಾಲ್ಸಿಫೈ ಅಗುವುದು.

ಟಾನ್ಸಿಲ್ ಪರೀಕ್ಷೆಗಳು

  • ಗಂಟಲ ಸ್ವಾಬು: ವೈದ್ಯರು ಹತ್ತಿಯ ಸ್ವಾಬನ್ನು ಬ್ಯಾಕ್ಟೀರಿಯಾ ಟಾನ್ಸಿಲ್ಗಗಳು ಮತ್ತು ಗಂಟಲಿಗೆ ಉಜ್ಜುವರು ಅದನ್ನು ಪರೀಕ್ಷೆಗೆ ಕಳುಹಿಸುವರು. ಇದನ್ನು ಸಾಮಾನ್ಯವಾಗಿ ಸ್ಟ್ರೆಪೊಕೊಕಸ್ ಪತ್ತೆಗೆ ಬಳಸುವರು.
  • ಮನೊಸ್ಪಾಟ್ ಪರೀಕ್ಷೆ : ರಕ್ತ ಪರೀಕ್ಷೆಯು ಕೆಲವು ಆಂಟಿಬಾಡಿಗಳನ್ನು ಪತ್ತೆ ಹಚ್ಚುವುದು. ಇದರಿಂದ ವ್ಯಕ್ತಿಯ ಲಕ್ಷಣಗಳು ಮಾನೊನ್ಯುಕ್ಲಿಯಾಸಿಸ್ ನಿಂದ ಬಂದಿವೆ ಎಂದು ಖಚಿತ ಪಡಿಸುವುದು..
  • ಎಪಿಸ್ಟಿನ್-ಬಾರ್ ವಯರಸ್ ಸೊಂಕು :ಮಾನೊ ಸ್ಪಾಟ್ ಪರೀಕ್ಷೆಯು ನೆಗಿಟಿವ್ ಆದರೆ, ರಕ್ತದಲ್ಲಿನ ಇಬಿವಿ ವಿರುದ್ಧದ ಆಂಟಿಬಾಡಿಗಳು ಮಾನೊನ್ಯುಕ್ಲಿಯಾಸಿಸ್ ಅನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ .

ಟಾನ್ಸಿಲ್ ಚಿಕಿತ್ಸೆಗಳು

  • ಆಂಟಿ ಬಯಾಟಿಕ್ಸ: ಬ್ಯಾಕ್ಟೀರಿಯಾ ಸೋಂಕಿನಿಂದಾದ ಟಾನ್ಸಿಲಲೈಟಿಸ್ ಅನ್ನು ಆಂಟಿ ಬಯಾಟಿಕ್ಸ ಬಳಸಿ ಗುಣ ಮಾಡಬಹುದು
  • ಕೀವನ್ನು ಹೊರಹಾಕುವುದು :ಚುಚ್ಚಿ ಪೆರಿಟಾನ್ಸಿಲರ್ ವ್ರಣವನ್ನು ಸಾಮಾನ್ಯವಾಗಿ ಸೂಜಿಯಿಂದ ಚುಚ್ಚಿ ಸೋಂಕು ಸೋರಿ ಹೋಗಲು ಬಿಡುವರು ನಂತರ ಅದು ಗುಣವಾಗುವುದು. ಅತಿ ದೊಡ್ಡದಾದ ಟಾನ್ಸಿಲ್ಸ ನ ವಿಷಯದಲ್ಲಿ ಪದೇ ಪದೇ ಸೋಂಕು ಆಗುತ್ತಿದ್ದರೆ ಅದನ್ನು ತೆಗೆಯಲು ಶಸ್ತ್ರಚಿಕಿತ್ಸೆ ಅಗತ್ಯ..
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate