অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೂಗಿನಿಂದ ರಕ್ತಸ್ರಾವ

ಕಾರಣ

  • ಮೂಗಿನ ಗಾಯ
  • ವಾತಾವರಣದ ಶುಷ್ಕತೆಯಿಂದ ಮೂಗಿನ ಒಳಭಾಗ ಒಣಗುವುದು.
  • ಕಠಿನ ಪರಿಶ್ರಮ
  • ಏರಿದ ರಕ್ತದ ಒತ್ತಡ
  • ಹೆಚ್ಚಿನ ಎತ್ತರದ ಪ್ರದೇಶದಲ್ಲಿರುವುದು
  • ಗಟ್ಟಿಯಾಗಿ ಸೀನುವುದು

ಮೂಗಿನಿಂದ ರಕ್ತ ಸುರಿದಾಗ ಏನು ಮಾಡಬೇಕು ?

  • ಕುಳಿತು ಕೊಳ್ಳಿ
  • ರಕ್ತವು ಗಂಟಲಿಗೆ ಹೋಗದಂತೆ ಮುಂದಕ್ಕೆ ಬಾಗಿ.
  • ತಂಪಾದ ಒದ್ದೆ ಟವೆಲ್ ಅನ್ನು ಮೂಗಿನ ಮೇಲೆ ಇರಿಸಿ. ರಕ್ತನಾಳಗಳು ಸಂಕುಚಿತಗೊಂಡು ರಕ್ತಸ್ರಾವ ನಿಲ್ಲುವುದು .
  • ಮೂಗಿನ ಒಂದು ಹೊಳ್ಳೆ ಯಿಂದ ರಕ್ತ ಬರುತ್ತಿದ್ದರೆ ಅದರ ಮೇಲ್ಭಾಗವನ್ನು ಒತ್ತಿ ಹಿಡಿಯಿರಿ
  • ಎರಡೂ ಕಡೆ ರಕ್ತ ಬರುತ್ತಿದ್ದರೆ ಮೂಗನ್ನು 10 ನಿಮಿಷ ಒತ್ತಿ ಹಿಡಿಯಿರಿ.
  • ರಕ್ತ ಬರುವುದು ಮುಂದುವರಿದರೆ ಇನ್ನೂ 10 ನಿಮಿಷ ಒತ್ತಿ ಹಿಡಿಯಿರಿ.
  • ಮೂಗಿನ ಗಾಯದಿಂದಾಗಿ ರಕ್ತ ಸ್ರಾವವಾಗುತ್ತಿದರೆ ಹಗುರವಾಗಿ ಹಿಡಿಯಿರಿ.
  • ರಕ್ತ ಸ್ರಾವ ಹೆಚ್ಚಾದರೆ ಅಥವ ಪದೇ ಪದೇ ಮುಂದುವರೆದರೆ ವೈದ್ಯರ ಸಲಹೆ ಪಡೆಯಿರಿ
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate