অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಿಂಜಿವೈಟಿಸ್

ಜಿಂಜಿವೈಟಿಸ್ ಬಹು ಸಾಮಾನ್ಯವಾದ ಲಘುವಾದ ವಸಡಿನ ರೋಗ. ಇದರಿಂದ ವಸಡಿನ ಬಾವು ಬರುವುದು.ಅದು ಎಷ್ಟು ಲಘುವಾಗಿರುವುದೆಂದರೆ ಅನೇಕ ಸಾರಿ ನಾವು ಅದನ್ನು ಗಮನಿಸುವುದೆ ಇಲ್ಲ. ಆದರೆ ಜಿಂಜಿವೈಟಿಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಚಿಕಿತ್ಸೆಪಡೆಯಬೇಕು ಇಲ್ಲವಾದರೆ ಅತಿ ಗಂಭೀರವಾದ ವಸಡಿನ ರೋಗಕ್ಕೆ ಅದು ಕಾರಣವಾಗಬಹುದು

ನಿಮ್ಮವಸಡಿನಲ್ಲಿ ಬಾವು ಇದ್ದರೆ ಮತ್ತು ಹಲ್ಲ ಉಜ್ಜಿದಾಗ ರಕ್ತ ಬಂದರೆ, ನಿಮಗೆ ಜಿಂಜಿವೈಟಿಸ್ ಇದೆ ಎಂದು ಅರ್ಥ. ಜಿಂಜಿವೈಟಿಸ್ ಗೆ ಅತಿಸಾಮಾನ್ಯವಾದ ಕಾರಣ ಎಂದರೆ ಬಾಯಿಯ ಸ್ವಚ್ಛತೆಗೆ ಗಮನಹರಿಸದಿರುವುದು. ಒಳ್ಳೆಯ ಬಾಯಿಯ ಆರೋಗ್ಯಕರ ಅಭ್ಯಾಸ, ಅಂದರೆ ನಿತ್ಯ ಹಲ್ಲುಜ್ಜುವುದು, ಫ್ಲಾಸಿಂಗ್ ಮಾಡಿಕೊಳ್ಳುವುದ ಜಿಂಜಿವೈಟಿಸ್ ಅನ್ನು ನಿವಾರಿಸುವವು

ಲಕ್ಷಣಗಳು

ಜಿಂಜಿವೈಟಿಸ್ ನ ಲಕ್ಷಣ ಮತ್ತು ಚಿಹ್ನೆಗಳು ಈ ಕೆಳಗಿನಂತೆ ಇರುವವು.

  1. ವಸಡಿನ ಊತ
  2. ಮೃದುವಾದ ವಸಡುಗಳು
  3. ಅಗಾಗ ಕೆಂಪಾಗುವ ವಸಡು
  4. ಬ್ರಷ್ ಮತ್ತು ಫ್ಲಾಸ್ ಮಾಡಿದಾಗ ರಕ್ತ ಬರುವುದು
  5. ದುರ್ವಾಸನೆಯುಕ್ತ ಉಸಿರು
  6. ವಸಡಡಿನ ಬಣ್ಣದಲ್ಲಿ ಬದಲಾವಣೆ ಅರೋಗ್ಯಪೂರ್ಣ ಗುಲಾಬಿ ಬಣ್ಣದಿಂದ ಕಡುಗೆಂಪಾಗುವುದು

ಜಿಂಜಿವೈಟಿಸ್ ನೋವು ರಹಿತವಾಗಿರುವುದರಿಂದ ನಿಮಗೆ ಗೊತ್ತಿಲ್ಲದೆ ಜಿಂಜಿವೈಟಿಸ್ ಬರಬಹುದು . ನಿಮ್ಮ ಬ್ರಷ್ ನ ತುದಿ ಸ್ವಲ್ಪ ಕಂಪಾದಾಗ ನಿಮಗೆ ಅನುಮಾನ ಮೂಡುವುದು- ತುಸುವೆ ಒತ್ತಡ ಬಿದ್ದರೆ ನಿಮ್ಮ ವಸಡಿನಿಂದ ರಕ್ತಸ್ರಾವ ವಾಗುವುದು.

ದಂತ ವೈದ್ಯರ ಸಲಹೆ ಯವಾಗಬೇಕು?

ಆರೋಗ್ಯ ಪೂರ್ಣ ವಸಡುಗಳು ದೃಢವಾಗಿ, ತಿಳಿ ಗುಲಾಬಿ ಬಣ್ಣದಾಗಿರುತ್ತವೆ . ನಿಮ್ಮವಸಡು ದಪ್ಪವಾದರೆ, ಕಡುಕೆಂಪಾದರೆ ಮತ್ತು ರಕ್ಕ ಒಸರಿದರೆ ತಕ್ಷಣ ದಂತ ವೈದ್ಯರನ್ನು ಕಾಣಬೇಕು. ಬೇಗ ವೈದ್ಯರಲ್ಲಿಗೆ ಹೋದರೆ ಜಿಂಜಿವೈಟಿಸ್ ಅನ್ನು ಗುಣ ಪಡಿಸಬಹುದು.. ಅದು ಗಂಭೀರವಾದರೆ ಸಮಸ್ಯೆ ಜಟಿಲ ವಾಗುವುದು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate