অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಣ್ಣಿ ನ ಆರೈಕೆ

ಕಣ್ಣಿ ನ ಆರೈಕೆ

ಸುದೀರ್ಘವಾದ ಬದುಕಿನ ಆಯಾಸವನ್ನು ಯಾರೊಬ್ಬರ ಕಣ್ಣು ಬಿಂಬಿಸುತ್ತದೆ. ವಯಸ್ಸು ಕಳೆದಂತೆ ಕಣ್ಣಿನ ಸುತ್ತಲೂ ಇರುವ ಮಾಂಸಖಂಡ ಸಡಿಲವಾಗುತ್ತದೆ. ಕಣ್ಣಿನ ಕೆಳಪದರ ಬಾಗುತ್ತದೆ. ಕಣ್ಣನ್ನು ಒಬ್ಬರ ವ್ಯಕ್ತಿತ್ವದ ಕಣ್ಣು ಎಂದು ಭಾವಿಸಲಾಗುತ್ತದೆ. ಅದು ಸುಂದರ ಮತ್ತು ಆಕರ್ಷಕವಾಗಿ ಕಾಣಲು ಅದರ ನಿರ್ವಹಣೆಗೆ ಹೆಚ್ಚಿನ ಕಾಳಜಿ ಅಗತ್ಯ. ಪ್ರಮಾಣೀಕೃತ ಕ್ಲಿನಿಕಲ್ ಮತ್ತು ಎಥೆಟಿಕ್ ಡೆರ್ಮಾಟಾಲಾಜಿಸ್ಟ್ ಆಗಿರುವ ಡಾ. ಊರ್ಮಿಳಾ ನಿಶ್ಚಲ್ ಅವರು ಮಂಕಾದ, ಜೀವಸತ್ವ ಕುಂದಿದ ಕಣ್ಣುಗಳ ಆರೈಕೆ ಕುರಿತು ತಮ್ಮ ಅನುಭವದ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಕಣ್ಣಿನ ಆರೈಕೆ ಚಿಕಿತ್ಸೆ ಕ್ರಮಗಳನ್ನು ಕಣ್ಣು ಮತ್ತು ಕಣ್ಣಿನ ರೆಪ್ಪೆಗಳ ಅಂದರೆ ‘ಪೆರಿ ಆರ್ಬಿಟಲ್’ ಅಥವಾ ‘ಪೆರಿ ಆಕುಲರ್’ ಎಂದು ಹೇಳಲಾಗುವ ಭಾಗ ಚೆನ್ನಾಗಿ ಬಿಂಬಿತವಾಗುವಂತೆ ನೋಡಿಕೊಳ್ಳುವುದು. ಅನೇಕ ಮಹಿಳೆಯರು ಮತ್ತು ಪುರುಷರು ಪ್ರತಿ ವರ್ಷ ನೇತ್ರ ತಪಾಸಣಾ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಇದು ಸಾಮಾನ್ಯವಾಗಿ ಕೈಗೊಳ್ಳಲಿರುವ ಕಾಸ್ಮೆಟಿಕ್ ಪ್ರಕ್ರಿಯೆಯೂ ಆಗಿದೆ. ಆದರೆ, ಈ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗುವ ಮುನ್ನ ಕಣ್ಣಿನ ಆರೈಕೆಯನ್ನು ಅಥವಾ ಚೇತರಿಕೆಯನ್ನು ಸುರಕ್ಷಿತ ಕ್ರಮಗಳ ಮೂಲಕವೂ ಮಾಡಬಹುದು ಎಂಬುದನ್ನು ಅರಿಯಬೇಕು.

ಈ ದಿನಗಳಲ್ಲಿ ಸುರಕ್ಷಿತವಾದ ಮತ್ತು ಸಹಜವಾಗಿ ಕಾಣುವ ನೇತ್ರ ಚೇತರಿಕೆ ಚಿಕಿತ್ಸೆಗಳನ್ನು ವಿದೇಶಕ್ಕೆ ಹೋಗದೇ ಅಥವಾ ನಗರ ಪರಿಮಿತಿಯಿಂದಲೂ ಹೊರ ಹೋಗದೇ ಪಡೆಯುವುದು ಸಾಧ್ಯವಿದೆ. ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಕರಗಿಸುವುದು, ಕಣ್ಣಿನ ದೃಷ್ಟಿ ಹೆಚ್ಚಿಸುವುದು, ಐ-ಬ್ಯಾಗ್‌ನ ಕೆಳಗಿನ ಭಾಗವನ್ನು ತೆಗೆಯುವುದು ಶಸ್ತ್ರಚಿಕಿತ್ಸೆಯು ಇಲ್ಲದೇ ಪರಿಣಾಮಕಾರಿಯಾದ ಡರ್ಮಲ್ ಫಿಲ್ಲರ್ಸ್‌ ಅನ್ನು ಬಳಸುವ ಮೂಲಕ ಮಾಡಬಹುದು. ಡರ್ಮಲ್ ಫಿಲ್ಲರ್ಸ್‌ ಅನ್ನು ಬೆಂಗಳೂರಿನಲ್ಲಿ ಆಯ್ದ ಸ್ಕಿನ್ ಕ್ಲಿನಿಕ್‌ಗಳು, ನಿರ್ಮಲ್ ಸ್ಕಿನ್ ಅಂಡ್ ಹೇರ್ ಕ್ಲಿನಿಕ್‌ಗಳಲ್ಲಿ ಮಾತ್ರವೇ ಬಳಸಲಿದ್ದು, ಇದು ಹಿಲುರಾನಿಕ್ ಆ್ಯಸಿಡ್‌ಅನ್ನು ಒಳಗೊಂಡಿದೆ.

‘ಕಣ್ಣಿನ ಕೆಳಭಾಗದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗುವುದು ಮತ್ತು ಕಪ್ಪು ವರ್ತುಲ ಮೂಡುವುದು ಯಾರೊಬ್ಬರ ಮುಖ ಲಕ್ಷಣವನ್ನು ಬದಲಿಸಲಿದ್ದು, ಆಯಾಸಗೊಂಡವರು ಅಥವಾ ವಯಸ್ಸಾದವರು ಎಂಬಂತೆ ಬಿಂಬಿಸಲಿದೆ. ಕೊಬ್ಬಿನ ಅಂಶ ನಷ್ಟವಾಗುವುದು, ವೈದ್ಯಕೀಯ ಭಾಷೆಯಲ್ಲಿ ಟಿಯರ್ ಟ್ರಗ್ ಎಂದು ಹೇಳಲಾಗುವ ನೆರಿಗೆ ಮೂಡಲು ಕಾರಣವಾಗಲಿದೆ. ಇದು ಭಾರತೀಯರು ಮತ್ತು ಏಷಿಯಾದ ಜನರಲ್ಲಿ ಸಾಮಾನ್ಯವಾಗಿ ಕಾಣುವ ಅಂಶ. ಇದನ್ನು ಹಿಲುರಾನಿಕ್ ಆ್ಯಸಿಡ್ ಫಿಲ್ಲರ್ಸ್‌ಗಳನ್ನು ಬಳಸುವ ಮೂಲಕ ಸರಿಪಡಿಸಬಹುದು. ಹಿಲುರಾನಿಕ್ ಆ್ಯಸಿಡ್ ಪ್ರಕೃತಿಸಹಜವಾಗಿ ಚರ್ಮದೊಳಗೆ ಉತ್ಪಾದನೆಯಾಗಲಿದ್ದು, ಇದರಿಂದ ಅಡ್ಡ ಪರಿಣಾಮ ಉಂಟಾಗುವ ಯಾವುದೇ ಆತಂಕ ಇರುವುದಿಲ್ಲ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 12/25/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate