অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಣ್ಣಿನ ಟಿಪ್ಸ್

ಕಣ್ಣಿನ ಟಿಪ್ಸ್

ಕಣ್ಣಿನ ಆಯಾಸವನ್ನು ನಿವಾರಿಸುವ 10 ಫಲಪ್ರದ ಟಿಪ್ಸ್

ನಮಗೆ ಅತ್ಯಂತ ಹತ್ತಿರದವರನ್ನು ಕಣ್ಣುಗಳಿಗೆ ಹೋಲಿಸಿ ಅವರು ನಮಗೆಷ್ಟು ಅಮೂಲ್ಯ ಎಂದು ಬಣ್ಣಿಸುವುದು ಸಾಮಾನ್ಯ. ಏಕೆಂದರೆ ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ. ಹಾಗಾಗಿ ಈ ಅಂಗಗಳನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳಬೇಕು.

ಆದರೆ ಇಂದಿನ ವೇಗದ ಜೀವನದಲ್ಲಿ ಕಣ್ಣುಗಳಿಗೆ ಗರಿಷ್ಟ ಒತ್ತಡ ನೀಡಿ ದಿನದ ಕೆಲಸವನ್ನು ಮುಗಿಸಲೇಬೇಕಾದ ಅವಶ್ಯಕತೆ ಎಲ್ಲರಿಗೂ ಇದೆ. ಜನಬಿನಿಡ ರಸ್ತೆಗಳ ಕಾರಣ ಒಂದು ಕ್ಷಣವೂ ವಿರಾಮ ನೀಡದೇ ಎಚ್ಚರಿಕೆಯಿಂದ ತಡರಾತ್ರಿಯವರೆಗೂ ಕಣ್ಣುಗಳಿಗೆ ಕೆಲಸ ನೀಡುವ ನಿಬಿಡತೆ, ಕುಂಠಿತವಾದ ನಿದ್ದೆ, ದಿನವಿಡೀ ಕಂಪ್ಯೂಟರ್ ಮಾನಿಟರ್ ವೀಕ್ಷಿಸುವುದು, ಕಡಿಮೆ ಬೆಳಕಿನಲ್ಲಿ ಅಥವಾ ಹೆಚ್ಚು ಬೆಳಕಿನಲ್ಲಿ ಕೆಲಸ ಮಾಡಬೇಕಾಗಿ ಬರುವುದು, ಸತತವಾಗಿ ಚಿಕ್ಕ ಅಕ್ಷರಗಳನ್ನು ಓದುವುದು ಮೊದಲಾದವು ಅನಿವಾರ್ಯವಾದ ಒತ್ತಡಗಳಾದರೆ ಕಣ್ಣಿಗೆ ಅಲರ್ಜಿಯುಂಟುವಾಡುವ ವಸ್ತುಗಳ ಜೊತೆ ಕೆಲಸ ಮಾಡಬೇಕಾಗಿ ಬರುವುದು, ವೈದ್ಯರು ನೀಡಿದ ಕನ್ನಡಕದ ಸಂಖ್ಯೆಯಲ್ಲಿ ಏರುಪೇರು, ಕಣ್ಣಿನಲ್ಲಿ ಯಾವುದೋ ಕಾರಣದಿಂದಾದ ಕಣ್ಣುಗಳು ಅಗತ್ಯಕ್ಕಿಂತ ಹೆಚ್ಚು ಶ್ರಮಪಡಬೇಕಾಗಿ ಬರುತ್ತದೆ. ಈ ಶ್ರಮದ ಕಾರಣ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ.

ಕಣ್ಣಿನ ಆಯಾಸ ಹಲವು ರೀತಿಯಲ್ಲಿ ದೇಹಕ್ಕೆ ಅಹಿತಕರವಾಗಿದೆ. ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಸಾಧ್ಯವಾಗುವುದು, ಹಗಲಿನ ಬೆಳಕನ್ನು ನೋಡಲಾಗದಿರುವುದು, ಪ್ರಖರ ಬೆಳಕು ಕಣ್ಣು ಚುಚ್ಚಿದಂತಾಗುವುದು, ತಲೆನೋವು, ಗಂಟಲುನೋವು, ಭುಜ ಮತ್ತು ಬೆನ್ನುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಮೊದಲಾದವು ಕಣ್ಣು ಶ್ರಮಗೊಂಡಿರುವುದನ್ನು ಪ್ರಸ್ತುತಪಡಿಸುತ್ತವೆ.

ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಟಾಪ್ 20 ಟಿಪ್ಸ್

1. ಮೀನುಗಳು ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳ ತುಂಬಿಕೊಂಡಿರುವ ಮೀನನ್ನು ಸೇರಿಸಿ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮೀನನ್ನು ಸೇವಿಸಿ. ಇದು ಒಣ-ಕಣ್ಣಿನ ಸಿಂಡ್ರೋಮ್ ತಪ್ಪಿಸಲು ಉತ್ತಮ ಮಾರ್ಗವಾಗಿದೆ.
2. ನಿಯಮಿತ ಚೆಕ್-ಅಪ್ ನೀವು ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಮತ್ತು ಓದುವಿಕೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ, ಕನಿಷ್ಠ ವರ್ಷಕ್ಕೊಮ್ಮೆಯಾದರೂ ದೃಷ್ಟಿಯನ್ನು ಪರೀಕ್ಷಿಸಿ. ಇದು ಕಣ್ಣಿನ ಸಂಬಂಧಿತ ವಿವಿಧ ಕಾಯಿಲೆಗಳನ್ನು ಪತ್ತೆ ಮಾಡಲು ಮತ್ತು ಸರಿಯಾದ ಚಿಕಿತ್ಸೆ ನೀಡಿ ಇದನ್ನು ತಡೆಯಲು ಉತ್ತಮ ಮಾರ್ಗವಾಗಿದೆ.
3. ಕಣ್ಣು ಮಿಟುಕಿಸುವುದು ನಿರಂತರವಾಗಿ ನಿಮ್ಮ ಕಣ್ಣುಗಳನ್ನು ಮಿಟುಕಿಸುತ್ತಿರುವುದು ನಿಮ್ಮ ಕಣ್ಣುಗಳನ್ನು ಫ್ರೇಶ್ ಆಗಿಡಲು ಮತ್ತು ಕಣ್ಣಿನ ಸುಸ್ತು/ನೋವನ್ನು ತಪ್ಪಿಸಲು ಬಹಳ ಸರಳ ಮಾರ್ಗವಾಗಿದೆ. ಕಂಪ್ಯೂಟರ್ ಬಳಕೆದಾರರು ಹೀಗೆ ತಮ್ಮ ಕಣ್ಣುಗಳನ್ನು ಪ್ರತಿ ಮೂರು ನಾಲ್ಕು ಸೆಕೆಂಡುಗಳಿಗೊಮ್ಮೆ ಮಿಟುಕಿಸುತ್ತಿರುವುದು ಒಳ್ಳೆಯದು.
4. ವಿಶ್ರಾಂತಿ ವ್ಯಾಯಾಮ ಮಾಡಿ ನಿಮ್ಮ ಎರಡು ಕೈಗಳನ್ನು ಒಂದಕ್ಕೊಂದು (ಅಂಗೈ) ಉಜ್ಜಿ. ಆಗ ಬಿಸಿ ಅಥವಾ ಶಾಖ ಉತ್ಪತ್ತಿಯಾಗುತ್ತದೆ. ಈಗ ನಿಮ್ಮ ಕೈಗಳನ್ನು ಕಣ್ಣುಗಳಿಗೆ ಒತ್ತಿ. ಇದು ನಿಮ್ಮ ಕಣ್ಣುಗಳ ಸುಸ್ತನ್ನು ಶಮನ ಮಾಡಲು ಉತ್ತಮ ಕ್ರಮ. ಕಣ್ಣಿಗೆ ನೀಡಬಹುದಾದ ಇನ್ನೊಂದು ಉತ್ತಮವಾದ ವ್ಯಾಯಾಮವೆಂದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮಗಿಷ್ಟವಾದ ವಿಷಯವನ್ನು ನೆನಪಿಸಿಕೊಳ್ಳಿ. ನಿಮಗೆ ಇಷ್ಟವಾದ ಜಗತ್ತಿಗೆ ಪ್ರವೇಶಿಸುತ್ತಿದ್ದಂತೆ ನಿಮ್ಮ ಕಣ್ಣಿಗೆ ಖುಷಿಯ ಅನುಭವವಾಗುತ್ತದೆ.

5. ದೂರದೃಷ್ಟಿತ್ವ ನಾವು ವಸ್ತುಗಳನ್ನು ಅತ್ಯಂತ ನಿಕಟವಾಗಿ ನೋಡಲು ಅಭ್ಯಾಸ ಮಾಡಿಕೊಂಡಿರುತ್ತೇವೆ. ನೀವು ವಾಕಿಂಗ್ ಮಾಡುವಾಗ ಅಥವಾ ಕುಳಿತುಕೊಂಡಿರುವಾಗ ನಿಮ್ಮ ಸುತ್ತಮುತ್ತಲಿನ ದೂರದ ವಸ್ತುಗಳನ್ನು ನೋಡುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ.
6. ಸನ್ಶೈನ್ / ಸೂರ್ಯನ ಕಿರಣಗಳು ಸನ್ಶೈನ್ ನಿಮ್ಮ ಕಣ್ಣುಗಳು ಅತ್ಯುತ್ತಮ ಉಚಿತ ಚಿಕಿತ್ಸೆಯಾಗಿದೆ. ಬೆಳಿಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಕಣ್ಣಿನ ಮೇಲೆ ಬೀಳುವುದರಿಂದ ಬಿಗಿಯಾದ ನರ ಸ್ನಾಯುಗಳ ಬಿಡಿಬಿಡಿಯಾಗಿ ಕಣ್ಣುಗಳು ಉತ್ತಮ ದೃಷ್ಟಿಯನ್ನು ಪಡೆಯಲು ಸಹಾಯವಾಗುತ್ತದೆ.
7. ನೀರು ನೀರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿಂದ ದೃಷ್ಟಿಯು ಸುಧಾರಿಸುತ್ತದೆ.

8. ಒಣ ಗಾಳಿಯಿಂದ ದೂರವಿರಿ ನಿಮ್ಮ ಕಾರು ಅಥವಾ ನಿಮ್ಮ ಕಛೇರಿಯಿಂದ ಹವಾನಿಯಂತ್ರಿತ ಗಾಳಿ ನಿಮ್ಮ ಕಣ್ಣುಗಳಲ್ಲಿ ಎಲ್ಲಾ ತೇವಾಂಶ ಎಳೆದುಕೊಳ್ಳಲು ಯಾವತ್ತಿಗೂ ಬಿಡಬೇಡಿ. ನಿಮ್ಮ ಮುಖ ಆದಷ್ಟು ಹವಾನಿಯಂತ್ರಿತ ಫಲಕದ ಕೆಳಕ್ಕೆ ಅಥವಾ ದೂರವಿರಲಿ. ಏರ್ ಕಂಡಿಷನರ್ ನ ಗಾಳಿ ಮತ್ತಷ್ಟು ಕುರುಡು ಅಥವಾ ಯಾವುದೇ ಇತರ ಕಾರ್ನಿಯಾ ಅಸ್ವಸ್ಥತೆ ಉಂಟುಮಾಡಬಲ್ಲ ಗಂಭೀರ ಶುಷ್ಕತೆಗೆ ಕಾರಣವಾಗಬಹುದು.

9. ಸುರಕ್ಷತೆಯ ಕನ್ನಡಕ ಧರಿಸಿ ಕಣ್ಣಿನ ಗಾಯಗಳು ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಆದ್ದರಿಂದ ಯಾವಾಗಲೂ, ರಾಸಾಯನಿಕ ಕೆಲಸ ಮಾಡುವಾಗ, ಆಟವಾಡುವಾಗ, ಪಟಾಕಿ ಸಿಡಿಸುವಾಗ, ಅಥವಾ ಈಜುವಾಗ ಸುರಕ್ಷತೆಯ ಕನ್ನಡಕಗಳನ್ನು ಧರಿಸಲು ಮರೆಯದಿರಿ.

10. ಬ್ರೈಟ್ ನೆಸ್ (ಕಾಂತಿ)ನ ಮಟ್ಟ ಕಡಿಮೆ ಇರಲಿ ನೀವು ಮುಂದೆ ಇರುವ ಕಂಪ್ಯೂಟರ್ ಅನ್ನು ಹೆಚ್ಚು ಬಳಸುವುದದರೆ ನಿಮ್ಮ ಕಣ್ಣುಗಳು ವಿಶ್ರಾಂತಿಯ ಸಲುವಾಗಿ ಕಂಪ್ಯೂಟರ್ ಪರದೆಯ ಬ್ರೈಟ್ನೆಸ್ ನ್ನು ಕಡಿಮೆ ಮಾಡಿ. ಆದರೆ ತುಂಬಾ ಕಡಿಮೆ ಮಾಡದೆ ಮಧ್ಯಮ ಪ್ರಮಾಣದಲ್ಲಿಡಿ.

11. ಮೊಟ್ಟೆ ಸೇವಿಸಿ ಮೊಟ್ಟೆಗಳು ನಿಮ್ಮ ಸರಿಯಾದ ದೃಷ್ಟಿಗೆ ಮತ್ತು ಕುರುಡು ಮಾಡಬಲ್ಲ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲ್ಯೂಟೀನ್ ಮತ್ತು ಝಿಯಾಕ್ಸಾಂತಿನ್ ನಿಮ್ಮ ದೇಹಕ್ಕೆ ಉತ್ತಮ ಅಂಶಗಳನ್ನು ಒದಗಿಸುತ್ತದೆ.
12. ನಿಮ್ಮ ಕಣ್ಣುಗಳನ್ನು ಆಗಾಗ ತೊಳೆಯಿರಿ ನಿಮ್ಮ ಕಣ್ಣುಗಳು ಬಿಗಿಯಾದಂತೆ ಅನುಭವವಾದರೆ ಸಂಪೂರ್ಣವಾಗಿ ನಿಮ್ಮ ಕಣ್ಣುಗಳು ತೊಳೆಯಿರಿ. ಇದು ದಿನದ ಅಭ್ಯಾಸವಾಗಿರಲಿ. ನೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆದಾಗ ವಿಪರೀತ ಒತ್ತಡವಿದ್ದಾಗ ನಿಮ್ಮ ಕಣ್ಣುಗಳ ಸುಸ್ತನ್ನು ನಿವಾರಿಸಲು ಮತ್ತು ಕಣ್ಣುಗಳನ್ನು ಫ್ರೆಶ್ ಆಗಿಡಲು ಸಹಾಯ ಮಾಡುತ್ತದೆ.

13. ಧೂಮಪಾನವನ್ನು ಬಿಡಿ ಅತಿಯಾದ ಧೂಮಪಾನ ಕಣ್ಣಿನ, ಆಪ್ಟಿಕ್ ನರಕ್ಕೆ ಹಾನಿ ಮಾಡುತ್ತದೆ ಮತ್ತು ಅಕ್ಷಿಪಟಲದ ಅವನತಿಯಂತಹ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಣ್ಣಿನ ಸಮಸ್ಯೆಗಳನ್ನು ತಪ್ಪಿಸುವ ದೃಷ್ಟಿಯಿಂದ ಮತ್ತು ಉತ್ತಮ ಕಣ್ಣಿನ ಆರೋಗ್ಯಕ್ಕೆ ಧೂಮಪಾನವನ್ನು ತ್ಯಜಿಸುವುದು ಒಳಿತು.
14. ಸನ್ ಗ್ಲಾಸಸ್ ಧರಿಸಿ ನೀವು ಹೊರಾಂಗಣದಲ್ಲಿದ್ದಾಗ ಸನ್ ಗ್ಲಾಸ್ ಧರಿಸಿ ಸೂರ್ಯನ ಹಾನಿಯಿಂದ ನಿಮ್ಮ ಕಣ್ಣುಗಳು ರಕ್ಷಿಸುವುದು ಉತ್ತಮ. ನಿಮ್ಮ ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಕಣ್ಣಿನ ದೃಷ್ಟಿ ಮತ್ತು ಇತರ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ನೀವು ಸನ್ ಗ್ಲಾನ್ ಗಳನ್ನು ಕೊಂಡುಕೊಳ್ಳುವಾಗ ಅದು 100% ಸೂರ್ಯನ ನೇರಳಾತೀತ ಕಿರಣಗಳನ್ನು ತಪ್ಪಿಸುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಿ.

15. ಕಣ್ಣಿನ ಮೇಕಪ್ ತೆಗೆಯಿರಿ ಹಾಸಿಗೆ ಹೋಗುವ ಮೊದಲು, ನೀವು, ನಿಮ್ಮ ಕಣ್ಣಿನ ಮೇಕಪ್ ತೆಗೆಯಲು/ತೊಳೆಯಲು ಮರೆಯದಿರಿ. ರಾತ್ರಿಯಲ್ಲಿ ಕಣ್ಣಿನ ಮೇಕಪ್ ತೆಗೆಯುವುದರಿಂದ ಮೇಕಪ್ ನಿಮ್ಮ ಕಣ್ಣುಗಳ ಒಳಹೋಗದಂತೆ, ಕಣ್ಣೀನಲ್ಲಿ ತುರಿಕೆ ಕಾಣಿಸಿಕೊಳ್ಳದಂತೆ ತಡೆಯಬಹುದು.

16. ಪಾಲಾಕ್ ತಿನ್ನಿ ಕುದಿಸಿ ಇದು ಅಥವಾ ಸ್ವಲ್ಪವೇ ಎಣ್ಣೆ ಹಾಕಿ ಬೇಗನೆ ಹುರಿದ ಪಾಲಾಕನ್ನು ನಿಮ್ಮ ಆಹಾರಕ್ಕೆ ಸೇರಿಸಿ ತಿನ್ನಿ. ಪಾಲಕ ಕಣ್ಣಿನ ಮತ್ತು ತೆಳುವಾದ ದೃಷ್ಟಿತ್ವ ಹಾಗೂ ಇನ್ನಿತರ ಅನೇಕ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡಬಹುದು. ಇದು ಲ್ಯೂಟೀನ್ ಮತ್ತು ವಿವಿಧ ಇತರ ಪೋಷಕಾಂಶಗಳಿಂದ ತುಂಬಿದೆ.

17. ವಿರಾಮ ಪಡೆದುಕೊಳ್ಳಿ ನೀವು ಬಹಳ ಹೊತ್ತಿನವರೆಗೆ ಕೆಲವು ಪುಸ್ತಕ ಓದುವುದು ಅಥವಾ ಕೆಲಸ ಮಾಡುತ್ತಿದ್ದರೆ ಆಗಾಗ ವಿರಾಮವನ್ನು ತೆಗೆದುಕೊಳ್ಳಿ. ಸ್ವಲ್ಪ ವಾಕಿಂಗ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಆಯಾಸ ತಡೆಯಲು ಸಾಧ್ಯ.
18. ಹೆಡ್ ಮಸಾಜ್ ವಾರಕ್ಕೊಮ್ಮೆ ಮಲ್ಲಿಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ನಿಮ್ಮ ತಲೆಯನ್ನು ಮಸಾಜ್ ಮಾಡಿ. ಇದು ಜಾಗರೂಕತೆಯನ್ನು ಹೆಚ್ಚಿಸುವ ಮತ್ತು ಗಮನವನ್ನು ಸಕ್ರಿಯಗೊಳಿಸುವನಿಮ್ಮ ಮೆದುಳಿನ ಬೀಟಾ ಅಲೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
19. ಚೆನ್ನಾಗಿ ನಿದ್ದೆ ಮಾಡಿ ಅಸಮರ್ಪಕ ನಿದ್ರೆ ನಿಮ್ಮ ಆಯಾಸಕ್ಕೆ, ತಲೆನೋವಿಗೆ ಕಾರಣವಾಗಬಹುದು. ಇದು ನಿಮ್ಮಲ್ಲಿ ಕಣ್ಣಿನ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಚೆನ್ನಾಗಿ ನಿದ್ದೆ ಮಾಡಿ. ಇದು ಉತ್ತಮ ದೃಷ್ಟಿಗೆ ಸಹಾಯ ಮಾಡಬಹುದು ಮತ್ತು ನಿಮ್ಮ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
20. ಕಣ್ಣಿಗೆ ಸಂಬಂಧಿಸಿದ ಆಹಾರ ಸೇವಿಸಿ ಕ್ಯಾರೆಟ್, ಏಪ್ರಿಕಾಟ್ ಮತ್ತು ಬೆರಿಹಣ್ಣುಗಳು ಇಂತಹ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರಗಳು ನಿಮ್ಮ ಕಣ್ಣುಗಳಿಗೆ ಪುಷ್ಟಿ ನೀಡುತ್ತವೆ. ಈ ಎಲ್ಲಾ ಆಹಾರಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಕಣ್ಣುಗಳು ಒಳ್ಳೆಯದು. ಹೀಗೆ ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ಉತ್ತಮ ರೀತಿಯಲ್ಲಿ ಕಣ್ಣಿನ ಆರೈಕೆಯನ್ನು ಮಾಡುವುದೂ ಬಹಳ ಅಗತ್ಯ. ಈಗಿಂದಲೇ ಕಣ್ಣಿಗೆ ಸಾಕಷ್ಟು ಆರೈಕೆ ಮಾಡಿದರೆ ವರ್ಷ ನಲವತ್ತು ದಾಟುತ್ತಿದ್ದಂತೆ 'ಚಸ್ಮಿಸ್' ಎನ್ನಿಸಿಕೊಳ್ಳುವುದು ತಪ್ಪುತ್ತದೆ!

ಸಾಮಾನ್ಯವಾಗಿ ರಾತ್ರಿ ಮಲಗಿ ಬೆಳಿಗ್ಗೆದ್ದ ಬಳಿಕ ಈ ಶ್ರಮ ಸರಿಸುಮಾರಾಗಿ ಕಡಿಮೆಯಾಗಿರುತ್ತದೆ. ಆದರೆ ಕೊಂಚ ವೇಳೆಯಲ್ಲಿಯೇ ಯಾವುದಾದರೂ ವಸ್ತುವನ್ನು ಕೊಂಚ ಗಮನವಿಟ್ಟು ನೋಡಬೇಕಾಗಿ ಬಂದರೆ ಮೇಲೆ ವಿವರಿಸಿದ ತೊಂದರೆಗಳು ನಿಧಾನವಾಗಿ ತಮ್ಮ ಪ್ರಸ್ತುತಿಯನ್ನು ಪ್ರಕಟಿಸುತ್ತವೆ. ಈಗ ಶ್ರಮಗೊಂಡ ಕಣ್ಣುಗಳಿಗೆ ನಿಜವಾಗಿಯೂ ಆರೈಕೆ ಬೇಕಾಗಿದೆ. ಇದಕ್ಕಾಗಿ ಹಲವು ಔಷಧಿಗಳನ್ನು ನೇತ್ರವೈದ್ಯರು ಸಲಹೆ ಮಾಡಿದರೂ ಪರ್ಯಾಯವಾಗಿ ಕೆಲವು ಸುಲಭವಾದ ಮತ್ತು ಸ್ಥಳದಲ್ಲಿಯೇ ನಿರ್ವಹಿಸಬಹುದಾದ ವ್ಯಾಯಾಮಗಳಿಂದಲೂ ಈ ಶ್ರಮವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಹೇಗೆ ಎಂಬುದನ್ನು ನೋಡೋಣ

ಕಣ್ಣುಗಳಿಗೆ ನಯವಾದ ಮಸಾಜ್

ಕಣ್ಣುರೆಪ್ಪೆಗಳಿಗೆ ಪ್ರತಿದಿನ ನಯವಾದ ಮಸಾಜ್ ಮಾಡುವುದು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಕಣ್ಣುರೆಪ್ಪೆ ಮತ್ತು ಕಣ್ಣಿನ ಒಳಗಣ ಸೂಕ್ಷ್ಮನರಗಳಲ್ಲಿ ರಕ್ತಸಂಚಾರ ಚುರುಕಾಗಿ ಕಣ್ಣಿನ ಸುತ್ತಲ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಜೊತೆಗೇ ಕಣ್ಣೀರಿನ ಗ್ರಂಥಿಗಳನ್ನೂ ಪ್ರಚೋದಿಸಿ ಕಣ್ಣುಗಳು ಸದಾ ತೇವವಾಗಿರುವಂತೆ ನೋಡಿಕೊಳ್ಳುತ್ತದೆ. ಈ ಮಸಾಜ್ ಮಾಡುವ ಬಗೆ ಹೀಗಿದೆ:
1) ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಉಪಯೋಗಿಸಿ ಬಲ ಮತ್ತು ಎಡಕಣ್ಣುಗಳ ಮೇಲಿನ ರೆಪ್ಪೆ ಮತ್ತು ಹುಬ್ಬುಗಳ ಸ್ನಾಯುಗಳಿಗೆ ನಯವಾಗಿ ಮಸಾಜ್ ಮಾಡಿ. ಎರಡೂ ಮಸಾಜ್ ಏಕಕಾಲದಲ್ಲಿ ಸಮನಾಗಿರಬೇಕು. ಸುಮಾರು ಹತ್ತರಿಂದ ಇಪ್ಪತ್ತು ಸೆಕೆಂಡ್ ಇದಕ್ಕೆ ಸಾಕು.
2)ಈಗ ಕೆಳಗಿನ ರೆಪ್ಪೆಯನ್ನೂ ಕಣ್ಣಿನ ಕೆಳಗಣ ಭಾಗದ ಮೂಳೆಯನ್ನೂ ಹತ್ತರಿಂದ ಇಪ್ಪತ್ತು ಸೆಕೆಂಡ್ ಕಾಲ ನಯವಾಗಿ ಮಸಾಜ್ ಮಾಡಿ.

3) ಕಣ್ಣಿನ ಪಕ್ಕದ ಹಣೆಯ ಭಾಗ (temple), ಕೆನ್ನೆಯ ಮೇಲ್ಭಾಗದ ಮೂಳೆ ಎದ್ದುನಿಂತಿರುವಲ್ಲಿ ಇನ್ನೂ ಇಪ್ಪತ್ತು ಸೆಕೆಂಡ್ ನಯವಾಗಿ ಮಸಾಜ್ ಮಾಡಿ. ಇದರಿಂದ ಕೆಲಸಮಯದಲ್ಲಿಯೇ ಕಣ್ಣಿನ ಶ್ರಮ ಮಾಯವಾಗುತ್ತದೆ.

ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು

ಇಂದಿನ ದಿನಗಳಲ್ಲಿ ಕನ್ನಡಕ ಧರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನುವುದನ್ನು ನೀವು ಗಮನಿಸಿದ್ದೀರಾ? ನೀವು ಸದಾ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಟಾಬ್ಲೆಟ್ ಗಳನ್ನು ಬಳಸುತ್ತಿದ್ದೀರಾ? ಹಾಗಾದರೆ ಇದರ ಪರಿಣಾಮ ಈಗ ನಿಮ್ಮ ಕಣ್ಣುಗಳಲ್ಲಿ ಕಾಣಿಸುತ್ತದೆ. ಇದರಿಂದಾಗಿ ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ತುಂಬಾ ಮುಖ್ಯ. ಇಂದಿನ ದಿನಗಳಲ್ಲಿ ಯುವ ಜನರನ್ನು ಹೊಸ ರೀತಿಯ ಕಾಯಿಲೆ ಕಾಡುತ್ತಿದೆ. ಇದನ್ನು ಕಂಪ್ಯೂಟರ್ ಕಣ್ಣಿನ ದಣಿವು ಎನ್ನಲಾಗುತ್ತಿದೆ. ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನೀವು ಕೂಡ ಇದೇ ರೀತಿಯ ಸಮಸ್ಯೆಗೆ ಒಳಗಾಗಲಿದ್ದೀರಿ.

ಸ್ಕ್ರೀನ್ ನ ಬ್ರೈಟ್ ನೆಸ್ ನಿಮ್ಮ ಕಣ್ಣುಗಳ ಮೇಲೆ ಒತ್ತಡ ಬೀರಬಹುದು. ಸತತವಾಗಿ ಸ್ಕ್ರೀನ್ ನ್ನು ನೋಡುವುದರಿಂದ ನಿಮ್ಮ ರೆಟಿನಾದ ಗಾತ್ರದ ಮೇಲೆ ಪರಿಣಾಮವಾಗಬಹುದು. ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಹೇಗೆ ರಕ್ಷಿಸಿಕೊಳ್ಳಬಹುದೆಂಬುವುದನ್ನು ನೀವು ಕಲಿಯಬೇಕು. ನಿಮ್ಮ ಕಣ್ಣುಗಳು ಸುರಕ್ಷಿತವಾಗಿರಲು ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಕಂಪ್ಯೂಟರ್ ನಲ್ಲಿ ಮಾಡಬೇಕು. ನಿಮ್ಮ ಕಣ್ಣುಗಳು ಮತ್ತು ಸ್ಕ್ರೀನ್ ಮಧ್ಯೆ ಪ್ರತಿಬಂಧಕವನ್ನು ಹಾಕಿದರೆ ಕಂಪ್ಯೂಟರ್ ಕಣ್ಣಿನ ದಣಿವನ್ನು ನಿವಾರಿಸಬಹುದು. ಕಣ್ಣನ್ನು ರಕ್ಷಿಸುವ ಕೆಲವೊಂದು ಟಿಪ್ಸ್ ಗಳು ತುಂಬಾ ಆಸಕ್ತಿದಾಯಕವಾಗಿದೆ. ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಕೆಲವೊಂದು ಟಿಪ್ಸ್ ಗಳನ್ನು ಪ್ರಯತ್ನಿಸಿ.

1.ಸ್ಕ್ರೀನ್ ನ (ಕಂಪ್ಯೂಟರ್ ಪರದೆಯ) ಬ್ರೈಟ್ ನೆಸ್ ಕಡಿಮೆ ಮಾಡಿ ನಿಮ್ಮ ಕೆಲಸಕ್ಕೆ ಅನುಗುಣವಾಗಿ ಇಡೀ ದಿನ ನೀವು ಕಂಪ್ಯೂಟರ್ ಸ್ಕ್ರೀನ್ ನ್ನು ನೋಡುವುದಾದರೆ ಸ್ಕ್ರೀನ್ ನ ಬ್ರೈಟ್ ನೆಸ್ ಕಡಿಮೆ ಮಾಡಿ. ಸ್ಕ್ರೀನ್ ನ ಪ್ರಕಾಶದಿಂದಾಗಿ ಕಣ್ಣುಗಳಿಂದ ನೀರು ಬರಬಹುದು.

2.ಲೆನ್ಸ್ ಬದಲು ಗ್ಲಾಸ್ ಬಳಸಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ ನೀವು ಲೆನ್ಸ್ ಧರಿಸಿದರೆ ಅದು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಲೆನ್ಸ್ ನಿಮ್ಮ ಕಣ್ಣುಗಳನ್ನು ಒಣಗಿಸುತ್ತದೆ ಮತ್ತು ಕಣ್ಣು ಹಾಗೂ ಸ್ಕ್ರೀನ್ ಮಧ್ಯೆ ದೈಹಿಕ ಪ್ರತಿಬಂಧಕವಾಗಿ ಕೆಲಸ ಮಾಡುವುದಿಲ್ಲ.

3.ಆ್ಯಂಟಿ ಗ್ಲೇರ್ ಧರಿಸಿ. ನೀವು ಗ್ಲಾಸ್ ಧರಿಸಬೇಕೆಂದರೆ ಅದಕ್ಕೆ ಆ್ಯಂಟಿ ಗ್ಲೇರ್ ಅಳವಡಿಸಿ. ಎಲ್ಲಾ ಕನ್ನಡಕದ ಅಂಗಡಿಗಳಲ್ಲಿ ಇಂದಿನ ದಿನಗಳಲ್ಲಿ ಆ್ಯಂಟಿ ಗ್ಲೇರ್ ಲಭ್ಯವಿದೆ.
4. ಸಾಧ್ಯವೋ ಅಷ್ಟು ಕಣ್ಣು ಮಿಟುಕಿಸಿ ನಮ್ಮ ಕೆಲಸದಲ್ಲಿ ಎಷ್ಟು ವ್ಯಸ್ತರಾಗಿರುತ್ತೇವೆ ಎಂದರೆ ಕೆಲವೊಮ್ಮೆ ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಮರೆಯುತ್ತೇವೆ. ಇದರಿಂದ ಕಣ್ಣುಗಳು ಒಣಗುತ್ತದೆ. ನೀವು ಸಾಧ್ಯವಿದ್ದಷ್ಟು ಸಲ ಕಣ್ಣುಗಳನ್ನು ಮಿಟುಕಿಸಲು ಪ್ರಯತ್ನಿಸಿ, ಇದರಿಂದ ಕಣ್ಣುಗಳಲ್ಲಿ ತೇವಾಂಶವಿರುತ್ತದೆ.

5.ಸ್ಕ್ರೀನ್‌ನಿಂದ ಸೂಕ್ತ ಅಂತರ ಕಾಯ್ದುಕೊಳ್ಳಿ ಕೆಲಸ ಮಾಡುತ್ತಿರುವಾಗ ಸ್ಕ್ರೀನ್ ನಿಂದ ಒಂದು ಸೂಕ್ತ ಅಂತರವನ್ನು ಕಾಯ್ದುಕೊಳ್ಳಿ. ಲ್ಯಾಪ್ ಟಾಪ್ ಮತ್ತು ಟಾಬ್ಲೆಟ್ ಗಳನ್ನು ಬಳಸುವ ಬದಲು ಡೆಸ್ಕ್ ಟಾಪ್ ಗಳನ್ನು ಬಳಸಿ.

6.ಅಕ್ಷರಗಳು ದೊಡ್ಡದಾಗಿರಲಿ ನೀವು ಏನನ್ನಾದರೂ ಓದಲು ಅಥವಾ ಬೇಗನೆ ಬರೆಯಲು ಪ್ರಯತ್ನಿಸುತ್ತಿದ್ದರೆ ಆಗ ದೊಡ್ಡ ಅಕ್ಷರಗಳನ್ನು ಬಳಸಿ. ಇದು ಕಂಪ್ಯೂಟರ್ ನ್ನು ಬಳಸುವಾಗ ನಿಮ್ಮ ಕಣ್ಣುಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ.


7'.ರೆಮುಚ್ಚಬೇಡಿ ಸ್ಕ್ರೀನ್ ನಲ್ಲಿ ಏನಾದರೂ ಓದುತ್ತಿದ್ದರೆ ಅರೆಮುಚ್ಚಬೇಡಿ. ನಿಮ್ಮ ಟಾಬ್ಲೆಟ್ ಅಥವಾ ಫೋನ್ ನಲ್ಲಿ ಮ್ಯಾಕ್ಸಿಮೈಸ್ ಅವಕಾಶವಿರುತ್ತದೆ. ಇದನ್ನು ಬಳಸಿ. ಅರೆಮುಚ್ಚುವುದರಿಂದ ಅದು ನಿಮ್ಮ ಕಣ್ಣುಗಳ ಮೇಲೆ ಒತ್ತಡ ಬೀರುತ್ತದೆ.

8.ಸ್ಕ್ರೀನ್ ಆಪ್ಟಿಕಲ್ ಗಾರ್ಡ್ ಸೇರಿಸಿ ಕೆಲವರು ತಮ್ಮ ಕಣ್ಣುಗಳ ರಕ್ಷಣೆಗಾಗಿ ಸ್ಕ್ರೀನ್ ಆಪ್ಟಿಕಲ್ ಗಾರ್ಡ್ ನ್ನು ಬಳಸುತ್ತಾರೆ. ಇದು ಕಣ್ಣುಗಳ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲು ಅತ್ಯುತ್ತಮ ವಿಧಾನ.

9.ಕಣ್ಣುಗಳನ್ನು ತಿರುಗಿಸಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಯಾವಾಗಲೂ ಕಣ್ಣುಗಳನ್ನು ನೆಟ್ಟಿರುವುದರಿಂದ ಕಣ್ಣುಗಳು ತುಂಬಾ ಜಡವಾಗುತ್ತದೆ. ಕೆಲವೊಮ್ಮೆ ಕಣ್ಣುಗಳನ್ನು ತಿರುಗಿಸಿ, ಇದರಿಂದ ನಿಜವಾದ ವ್ಯಾಯಾಮ ಸಿಗುತ್ತದೆ.

10.ಝಿರೋ ಪವರ್ ಗ್ಲಾಸ್‌ಗಳು ನೀವು 6x6 ದೃಷ್ಟಿಯನ್ನು ಹೊಂದಿದ್ದರೆ ಆಗ ನೀವು ಝಿರೋ ಪವರ್ ಗ್ಲಾಸ್ ಗಳನ್ನು ಧರಿಸುವುದು ತುಂಬಾ ಒಳ್ಳೆಯದು. ಇದು ಕಂಪ್ಯೂಟರ್ ಸ್ಕ್ರೀನ್ ನ ನೇರ ಪ್ರಕಾಶದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.


ಕೊನೆಯ ಮಾರ್ಪಾಟು : 5/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate