অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಣ್ಣಿನ ಸಮಸ್ಯೆ

ಕೆಂಗಣ್ಣು ಬೇನೆ

ಕೆಂಗಣ್ಣು ಬೇನೆಯ ಸ್ಥೆಇತಿಯಲ್ಲಿ ಕಣ್ಣಿನ ಪೊರೆಯು ಉರಿಯೂತಕ್ಕೆ ಒಳಗಾಗಿ, ಕೆಂಪಾಗುತ್ತದೆ ಹಾಗೂ ಕೆರಳಿಕೆಗೊಳಗಾಗುತ್ತದೆ.

ಲಕ್ಷಣಗಳು

  • ಕಣ್ಣಿನ ಬಿಳಿಯ ಭಾಗ ಕೆಂಪಾಗುತ್ತದೆ.
  • ಕಣ್ಣು ತುರಿಕೆಯುಂಟಾಗುತ್ತದೆ
  • ಕಣ್ಣಿನಿಂದ ನೀರು ಸೋರುತ್ತಿರುತ್ತದೆ

ಕಾರಣಗಳು

ಕಣ್ಣಿಗೆ ತೊಂದರೆ ಕೊಡುವ ಯಾವುದೇ ವಸ್ತು ಅಥವಾ ಸೋಂಕಿನಿಂದ ಕಂಜೆಕ್ಟಿವೈಟಿಸ್‌ ಆಗಬಹುದು. ಉದಾ: ವೈರಸ್‌ ಬ್ಯಾಕ್ಟೀರಿಯಾ ಅಲರ್ಜಿ, ಒಣಕಣ್ಣು.

ಕಣ್ಣಿನ ಪೊರೆ (ಮೋತಿ ಬಿಂದು)- ಕಾಲ್ಪನಿಕ ನಂಬಿಕೆ ಮತ್ತು ಸತ್ಯಾಂಶ

ಕಾಲ್ಪನಿಕ ನಂಬಿಕೆ-೧:- ಕಣ್ಣಿನ ಪೊರೆ ಕಣ್ಣಿನ ಮೇಲೆ ಬೆಳೆಯುತ್ತದೆ.

ಸತ್ಯಾಂಶ : ಕಣ್ಣಿನ ಪೊರೆ ಎಂದರೆ ಕಣ್ಣಿನ ಮಸೂರು ಮಂಜಾಗುವುದು. ಮಸೂರವು ಕಣ್ಣಿನ ಒಳಗೆ ಇರುತ್ತದೆ, ಮೇಲಲ್ಲ. ಕಣ್ಣಿನ ನೈಸಗಿ೯ಕ ಮಸೂರವು ನೀರು, ಸಸಾರಜನಕದ ನಾರುಗಳ ವ್ಯವಸ್ಥಿತ ಜೋಡಣೆಯಿಂದ ಆಗಿರುತ್ತದೆ. ಅದು ಮಸೂರವನ್ನು ಸ್ವಚ್ಛವಾಗಿರಿಸಿ ಬೆಳಕನ್ನು ಅದರ ಮುಖಾಂತರ ಒಳಹೋಗಲು ಬಿಡುತ್ತದೆ. ವಯಸ್ಸಾದಂತೆ ಸಸಾರಜನಕದ ನಾರಿನಾಂಶಗಳು ಸಣ್ಣ ಗುಂಪುಗಳಾಗಿ ಮಸೂರದ ಚಿಕ್ಕ ಭಾಗಗಳಲ್ಲಿ ಮಂಜಾಗಿ ಉಳಿಯುತ್ತವೆ. ಸಮಯ ಕಳೆದಂತೆ ಈ ಗುಂಪುಗಳು ದೊಡ್ಡದಾಗಿ ಕಣ್ಣಿನಿಂದ ನೋಡಲು ಸಾಧ್ಯವಾಗದಂತೆ ಮಾಡುತ್ತವೆ.

ಕಾಲ್ಪನಿಕ ನಂಬಿಕೆ-೨ :- ಕಣ್ಣಿನ ಪೊರೆಯನ್ನು ಲೇಸರ ಬಳಸಿ ತೆಗೆಯಬಹುದು:-

ಸತ್ಯಾಂಶ:- ಕಣ್ಣಿನ ಪೊರೆಯು ಕಣ್ಣಿನ ಮೇಲೆ ಬೆಳೆಯುತ್ತದೆ ಎನ್ನುವ ತಪ್ಪು ಅಭಿಪ್ರಾಯದ ಜೊತೆಗೆ ಎಷ್ಟೋ ಜನ ಕಣ್ಣಿನ ಪೊರೆಯನ್ನು ಲೇಸರ ಬಳಸಿ ತೆಗೆಯಬಹುದೆಂದು ತಿಳಿಸಿರುತ್ತಾರೆ. ಇದು ತಪ್ಪು , ಯಾಕೆಂದರೆ ಮಸೂರದ ಗುಣಧಮ೯ದ ಬದಲಾವಣೆಗಳಿಂದ ಕಣ್ಣಿನ ಮಂಜು ಬೆಳೆಯುತ್ತದೆ. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯಲ್ಲಿ ನಿಮ್ಮ ನೈಸಗಿ೯ಕ ಮಸೂರನ್ನು ಒಡೆದು ಫ್ಯಾಕೋ ಪ್ರೋಬ ಎನ್ನುವ ಒಂದು ಉಪಕರಣದಿಂದ ಹೊರತೆಗೆಯುತ್ತಾರೆ. ತದನಂತರ ನೈಸಗಿ೯ಕ ಮಸೂರನ್ನು ಕೃತ್ರಿಮ ಮಸೂರದಿಂದ ಬದಲಾಯಿಸಲಾಗುತ್ತದೆ ಇದನ್ನು ಐ.ಓ.ಎಲ್. ಎಂದು ಕರೆಯುತ್ತಾರೆ.

ಕಾಲ್ಪನಿಕ ನಂಬಿಕೆ:- ೩ - ಕಣ್ಣಿನ ಪೊರೆ ಮರು ಬೆಳವಣಿಗೆ ಹೊಂದುತ್ತದೆ.

ಸತ್ಯಾಂಶ:ಹಾಗಲ್ಲ , ಆದಾಗ್ಯೂ ಕೆಲವು ಸಲ ಕಣ್ಣಿನ ಪೊರೆಯು ರೋಗಿಯ ಶಸ್ತ್ರ ಚಿಕಿತ್ಸೆಯ ನಂತರ ಕೆಲ ವಷ೯ ಅಥವಾ ತಿಂಗಳುಗಳ ನಂತರ ಅದೇ ಕಣ್ಣಿನಲ್ಲಿ ಬೇರೆ ತರದ, ಎರಡನೆಯ ಕಣ್ಣಿನ ಪೊರೆ ಬೆಳೆಯಬಹುದಾಗಿದೆ. ಈ ತರದ ಸಂಭವವು ಹೊಸ ಮಸೂರವನ್ನು ಹಿಡಿದಿರಿಸಿದ ಸೂಕ್ಷ್ಮ ತ್ವಚೆಯು ಮಂಜಾದಾಗ, ಹೆಚ್ಚು ಬೆಳಕಿನಿಂದ ತೊಂದರೆಯಾದಾಗ ಮತ್ತು ನೋಡಲು ತೊಂದರೆಯೆನಿಸಿದಾಗ ಇರುತ್ತದೆ. ಇದನ್ನು ಲೇಸರ ತಂತ್ರಜ್ನಾನದಿಂದ ಶಸ್ತ್ರ ಚಿಕಿತ್ಸೆಯ ಮುಖಾಂತರ ಚಿಕಿತ್ಸೆ ಮಾಡಬಹುದು. ಇದೊಂದು ಅತಿ ಸರಳ ಕಾರ್ಯ ವಿಧಾನವಾಗಿದೆ. ಇದರಲ್ಲಿ ವೈದ್ಯರು ಕಣ್ಣಿನ ಸೂಕ್ಷ್ಮ ತ್ವಚೆಯಲ್ಲಿ ಒಂದು ಸಣ್ಣ ರಂದ್ರವನ್ನು ತೆಗೆಯುವ ಬೆಳಕನ್ನು ಮಸೂರಿಗೆ ತಲುಪುವಂತೆ ಮಾಡುತ್ತದೆ. ಈ ವಿಧಾನವು ಅತಿ ಸೀಷ್ರು ಮತ್ತು ನೋವು ರಹಿತವಾಗಿದ್ದು , ಇದು ೧೫ ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ನಿಮ್ಮ ವೈದ್ಯರ ಕೊಠಡಿಯಲ್ಲಿ ಮಾಡಲಾಗುತ್ತದೆ.

ಕಾಲ್ಪನಿಕ ನಂಬಿಕೆ- ೪- ಕಣ್ಣಿನ ಪೊರೆಯನ್ನು ತೆಗೆಯುವ ಮೊದಲು ಅದು ‘ಪಕ್ವ’ ವಾಗಬೇಕು.

ಸತ್ಯಾಂಶ ಹಿಂದಿನ ದಿನಗಳಲ್ಲಿ ಇದು ಸತ್ಯವಾಗಿತ್ತು. ಕಣ್ಣಿನ ಪೊರೆಯನ್ನು ತೆಗೆಯುವ ಮೊದಲು ಅದು ಪಕ್ವವಾದ ಆವಸ್ಥೆಯಲ್ಲಿರಬೇಕಿತ್ತು. ಆದರೆ ಆಧುನಿಕ ಶಸ್ತ್ರ ಚಿಕಿತ್ಸೆಯಲ್ಲಿ ಕಣ್ಣಿನ ಪೊರೆಯು ತೆಗೆಯುವ ಮುನ್ನ ಪಕ್ವವಾಗಬೇಕಾಗಿಲ್ಲ. ನೀವು ನಿಮ್ಮ ದೃಷ್ಟಿ ತೊಂದರೆಯಾದಾಗ ಮತ್ತು ನಿಮ್ಮ ಜೀವನ ಶೈಲಿಯ ಗುಣ ಮಟ್ಟಕ್ಕೆ ತೊಂದರೆಯಾದಾಗ ನಿಮ್ಮ ಕಣ್ಣಿನ ಪೊರೆಯನ್ನು ತೆಗೆಯಿಸಿಬಿಡಬಹುದಾಗಿದೆ.

ಕಾಲ್ಪನಿಕ ನಂಬಿಕೆ- ೫- ವಯಸ್ಸಾದವರಲ್ಲಿ ಮಾತ್ರ ಕಣ್ಣಿನ ಪೊರೆ ಬೆಳೆಯುತ್ತದೆ.

ಸತ್ಯಾಂಶ : ೬೫ ವಷ೯ ಮೇಲ್ಪಟ್ಟ ಜನರಲ್ಲಿ ಕಣ್ಣಿನ ಪೊರೆಯು ಸವೇ೯ ಸಾಮಾನ್ಯ . ಏನೇ ಆದರೂ ಯುವಜನರಲ್ಲಿ ಕೂಡ ಕಣ್ಣಿನ ಪೊರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣಗಳೆಂದರೆ ಮಧುಮೇಹ, ಕೆಲವು ತರದ ಔಷಧಿ ಮತ್ತು ಕಣ್ಣಿನ ತೊಂದರೆಗಳಾಗಿವೆ ಇನ್ನು ಕೆಲವು ಸಲ ಹುಟ್ಟಿದ ಸಮಯದಲ್ಲೇ ಕಣ್ಣಿನ ಪೊರೆ ಇರಬಹುದು. ಇವುಗಳನ್ನು ಹುಟ್ಟಿನಿಂದ ಬಂದ ಕಣ್ಣಿನ ಪೊರೆ ಎಂದು ಕರೆಯುತ್ತಾರೆ. ಬೇರೆ ಬೇರೆ ತರದ ಕಣ್ಣಿನ ಪೊರೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಣ್ಣಿನ ಪೊರೆ ೧೦೧ ವಿಧಗಳು ಮತ್ತು ಕಾರಣಗಳನ್ನು ನೋಡಿ .

ಕಾಲ್ಪನಿಕ ನಂಬಿಕೆ- ೬- ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಅಪಾಯಕಾರಿಯಾಗಿರುತ್ತದೆ.

ಸತ್ಯಾಂಶ :ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯು ವೈದ್ಯಕೀಯದಲ್ಲಿ ೯೫% ಯಶಸ್ವಿಯ ಒಂದು ಸುರಕ್ಷಿತ ಮತ್ತು ಅತೀ ಸಮಗ್ರ ಶಸ್ತ್ರ ಚಿಕಿತ್ಸಾ ವಿಧಾನವಾಗಿದೆ. ಏನೇ ಆದರೂ ಅಪಾಯ ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ. ಅದನ್ನು ನಿಮ್ಮ ವೈದ್ಯರ ಜೊತೆಗೆ ಶಸ್ತ್ರ ಚಿಕಿತ್ಸೆಯ ಮುಂಚೆಯೇ ಚಚಿ೯ಸಬೇಕು.

ಕಾಲ್ಪನಿಕ ನಂಬಿಕೆ- ೭- ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾಗಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ.

ಸತ್ಯಾಂಶ : ಅತೀ ಹೆಚ್ಚಿನ ಪ್ರಕರಣಗಳಲ್ಲಿ ಕಣ್ಣಿನ ಪೊರೆಯ ರೋಗಿಯು ತಮ್ಮ ದೃಷ್ಟಿಯಲ್ಲಿಯ ಬದಲಾವಣೆಯನ್ನು ಶಸ್ತ್ರಚಿಕಿತ್ಸೆಯ ತಕ್ಷಣ ಕಾಣುತ್ತಾರೆ. ಏನೇ ಆದರೂ ಕೆಲಜನರು ಶಸ್ತ್ರ ಚಿಕಿತ್ಸೆಯ ಕೆಲ ತಿಂಗಳುಗಳವರೆಗೆ ತಮ್ಮ ದೃಷ್ಟಿಯಲ್ಲಿ ಬದಲಾವಣೆಯನ್ನು ಪಡೆಯುತ್ತಿರುತ್ತಾರೆ. ನೀವು ಶಸ್ತ್ರ ಚಿಕಿತ್ಸೆಯ ನಂತರ ಮೂರು ವಾರದವರೆಗೆ ಬಗ್ಗಬಾರದು ಮತ್ತು ಅತೀ ಭಾರವಾದದ್ದನ್ನು ಎತ್ತಬಾರದು. ಮತ್ತು ಕಣ್ಣನ್ನು ತಿಕ್ಕುವುದು, ಒತ್ತುವುದು ಮಾಡಬಾರದು. ಇದನ್ನು ಹೊರತುಪಡಿಸಿ ನಿಮ್ಮ ಕಣ್ಣಿನ ಮೇಲಿನ ಪಟ್ಟಿಯನ್ನು ತೆಗೆದ ಮೇಲೆ ನೀವು ಎಲ್ಲ ದೈನಂದಿನ ಕಾಯ೯ಗಳನ್ನು ಮಾಡಬಹುದು. ( ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಬಗ್ಗೆ ಹೆಚ್ಚಿಗೆ ಕಲಿಯಲು ಆಲಿವೆಟ್ವಶಾ ಅವರ ಕತೆಯನ್ನು ಓದಿರಿ.)

ಕಾಲ್ಪನಿಕ ನಂಬಿಕೆ- ೮- ಶಸ್ತ್ರ ಚಿಕಿತ್ಸೆಯ ಬಳಿಕ ಕನ್ನಡಕ ಧರಿಸಬೇಕಾಗುತ್ತದೆ.

ಸತ್ಯಾಂಶ :ನಿಮಗೆ ಶಸ್ತ್ರ ಚಿಕಿತ್ಸೆಯ ನಂತರ ಕನ್ನಡಕ ಬೇಕೋ ಬೇಡವೋ ಎಂಬುದನ್ನು ನಿಮ್ಮ ಕಣ್ಣಿನಲ್ಲಿ ಹಾಕಿದ ಕೃತ್ರಿಮ ಮಸೂರದ ವಿಧದ ಮೇಲೆ ಆಧರಿಸಿರುತ್ತದೆ. ಏಕಕೇಂದ್ರೀಯ ಮಸೂರನ್ನು ಬಳಸಿ ಶಸ್ತ್ರ ಚಿಕಿತ್ಸೆ ಮಾಡಿದ ರೋಗಿಗೆ ಸಮೀಪದ ಮತ್ತು ಮಧ್ಯಮ ದೂರದ ದೃಷ್ಟಿಗೆ ಅಂದರೆ ಓದಲು ಅಥವಾ ಕಂಪ್ಯೂಟರನಲ್ಲಿ ಕೆಲಸ ಮಾಡಲು ಕನ್ನಡಕದ ಬಳಕೆ ಸಾಧಾರಣವಾಗಿ ಬೇಕಾಗುತ್ತದೆ. ಅತೀ ಹೆಚ್ಚು ಜನರು ಹೆಚ್ಚು ಕೇಂದ್ರದ ಮಸೂರಗಳನ್ನು ಅಳವಡಿಸುವಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಅದರಲ್ಲಿ ಎಲ್ಲ ದೂರಗಳನ್ನು ಸರಿಪಡಿಸಲಾಗಿರುತ್ತದೆ ಮತ್ತು ಕನ್ನಡಕದ ಅವಶ್ಯಕತೆ ಇರುವುದಿಲ್ಲ. ನೀವು ಯಾವರೀತಿಯ ಮಸೂರ ಒಳ್ಳೆಯದು ಎನ್ನುವುದನ್ನು ನಿಮ್ಮ ವೈದ್ಯರ ಬಳಿ ಚಚಿ೯ಸಿ ನಿರ್ಧರಿಸಬಹುದು. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಮಸೂರದ ಆಯ್ಕೆಗೆ ಹೆಚ್ಚಿನ ಮಾಹಿತಿಗಾಗಿ ಓದಿರಿ.

ಕಾಲ್ಪನಿಕ ನಂಬಿಕೆ- ೯- ಕಣ್ಣಿನ ಪೊರೆಯು ಒಂದು ಕಣ್ಣಿನಿಂದ ಮತ್ತೊಂದು ಕಣ್ಣಿಗೆ ಹರಡುತ್ತದೆ.

ಸತ್ಯಾಂಶ : ಕಣ್ಣಿನ ಪೊರೆಯು ಒಂದೇ ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಬೆಳೆಯಬಹುದು. ಆದರೆ ಅವು ಹರಡುವುದಿಲ್ಲ.

ಕಾಲ್ಪನಿಕ ನಂಬಿಕೆ-೧೦- ಕಣ್ಣಿನ ಪೊರೆಯು ಅತೀ ಸಾಮಿಪ್ಯದ ಕೆಲಸಗಳಾದ ಓದುವುದು ಮತ್ತು ಹೊಲಿಗೆ ಹಾಕುವುದರ ಮುಖಾಂತರ ಹೆಚ್ಚು ಪ್ರಭಾವಗೊಳ್ಳುತ್ತವೆ.

ಸತ್ಯಾಂಶ : ಈ ತರದ ಕೆಲಸಗಳಿಂದ ನೀವು ಕಣ್ಣಿನ ಪೊರೆಯನ್ನು ಪಡೆಯಲಾಗುವುದಿಲ್ಲ ಮತ್ತು ಇದ್ದಂತಹ ಕಣ್ಣಿನ ಪೊರೆಯ ಮೇಲೆ ಪ್ರಭಾವ ಬೀರುವುದಿಲ್ಲ. ಕಣ್ಣಿನ ಪೊರೆಯ ಕಾರಣಗಳು. ನೀವು ಕಣ್ಣನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿಸಿಲ್ಲ. ಏನೇ ಆದರೂ ಈ ತರದ ಅತೀ ಸಾಮೀಪ್ಯದ ಕೆಲಸಗಳಿಂದ ಕಣ್ಣಿನ ಪೊರೆ ಬರಬಹುದು . ಯಾಕೆಂದರೆ ಕಣ್ಣಿನ ಪೊರೆಯ ಒಂದು ಗುರುತು ಏನೆಂದರೆ ಈ ತರದ ಕೆಲಸಗಳನ್ನು ಮಾಡಲು ಅತೀ ಹೆಚ್ಚು ಬೆಳಕು ಬೇಕಾಗುವುದಾಗಿದೆ.

ಕಾಲ್ಪನಿಕ ನಂಬಿಕೆ-೧೧- ಕಣ್ಣಿನ ಪೊರೆ ಬಂದ ನಂತರ ಅದನ್ನು ಹೋಗಲಾಡಿಸಲು ದಾರಿಗಳಿವೆ.

ಸತ್ಯಾಂಶ ಮಸೂರ ಮಂಜಾಗುವುದು ವಯಸ್ಸಿನ ಜೊತೆಗೆ ಬರುವ ಒಂದು ಸ್ವಾಭಾವಿಕ ಕ್ರಿಯೆಯಾಗಿದೆ. ಇದನ್ನು ನಿರಾಕರಿಸಲಾಗುವುದಿಲ್ಲ. ಏನೇ ಆದರೂ ನೀವು ಕಣ್ಣಿನ ಪೊರೆ ಆಗದಂತೆ ಮಾಡಲು ಅಥವಾ ನಿಧಾನವಾಗಿಸಲು ನಿಮ್ಮ ಜೀವನಶೈಲಿಯಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು.

  • ನೀವು ಧೂಮ್ರಪಾನ ಮಾಡುತ್ತಿದ್ದರೆ- ಬಿಡಲು ಪ್ರಯತ್ನಿಸಿ
  • ಹಣ್ಣು, ತರಕಾರಿಗಳನ್ನೊಳಗೊಂಡ ಸಮತೋಲನವಾದ ಆಹಾರವನ್ನು ಸೇವಿಸಿ.
  • ೧೦೦% ಅತಿನೇರಳೆಯ ಅ ಮತ್ತು ಬಿ ಸಂರಕ್ಷಣೆಯನ್ನು ಹೊಂದಿದ ಕಪ್ಪು ಗಾಜಿನ ಕನ್ನಡಕಗಳನ್ನು ಪ್ರಖರವಾದ ಬೆಳಕು ಕಣ್ಣಿಗೆ ತಾಗದಂತೆ ನೋಡಲು ಧರಿಸಿರಿ.

ಮೂಲ : www.cataractsurgeryindia.in/

ಮೂಲ : rushabheye.blogspot.com/

ಕೊನೆಯ ಮಾರ್ಪಾಟು : 4/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate