অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕುರುಡುತನ ಮತ್ತು ದೃಷ್ಟಿ ದೋಷ

ಸಾಮಾನ್ಯ ಕಾರಣಗಳು

  • ಪೊರೆ (ಕ್ಯಾಟರಾಕ್ಟ)
  • ವಕ್ರೀಭವನ  ದೋಷ
  • ಹುಟ್ಟಿನಿಂದ(ಕಂಜೆನಿಟಲ್) ಕಣ್ಣಿನ ದೋಷ
  • ಆಪ್ಟಿಕ್ ಅಟ್ರೊಫಿ
  • ಕಾರ್ನಿಯಲ್ ವ್ಯಾಧಿ
  • ಗ್ಲುಕೊಮ
  • ರೆಟಿನದ ವ್ಯಾಧಿ
  • ಅಂಬ್ಲಿಯೊಪಿಕ್
  • ಇತರೆ  (ಸ್ವಗೋತ್ರ ಮದುವೆಗಳು, ಗಾಯ ಇತ್ಯಾದಿ)

ಕ್ಯಾಟರಾಕ್ಟ ಅಂಧತ್ವ ತರುವ ಕಾರಣಗಳಲ್ಲಿ ಅತಿ ಪ್ರಮುಖವಾದುದು. ವಕ್ರೀಭವನೋಷವು  ದೃಷ್ಡಿದೋಷ ಉಂಟು ಮಾಡುವ ಅತಿ ದೊಡ್ಡ ಕಾರಣ.ಇವಲ್ಲದೆ  ಸ್ವಗೋತ್ರ ವಿವಾಹದಿಂದಾದ ಕಣ್ಣಿನ ದೋಷ, ಆಪ್ಟಿಕ್ ಟ್ರೊಫಿ, ಕಾರ್ನಿಯಲ್ ವ್ಯಾಧಿ ಗ್ಲುಕೊಮಾ, ರೆಟಿನಲ್ ವ್ಯಾಧಿ  ಅಂಬ್ಲಿಯೊಪಿಕ್ಗಳು ಕುರುಡುತನಕ್ಕೆ ಮತ್ತು ದೃಷ್ಟಿದೋಷಕ್ಕೆ ಕಾರಣ ಎಂದು ತಿಳಿದು ಬಂದಿದೆ.  ಕ್ಯಾಟರಾಕ್ಟ ಮತ್ತು ವಕ್ರೀಭವನವುದೋಷವು ಕುರುಡುತನ ಮತ್ತು ದೃಷ್ಟಿದೋಷಗಳಿಗೆ ಅತಿ ದೊಡ್ಡ.  ಕಾರಣಗಳಾಗಿವೆ. ಈ ಸ್ಥಿತಿಯನ್ನು ತಡೆಯುವುದು ಆಗದು. ಆದರೂ ಸರಳ ಶಸ್ತ್ರಕ್ರಿಯಿಂದ ಕಣ್ಣಿನ ಪೊರೆಯನ್ನು ತೆಗೆಯಬಹುದು. ಕನ್ನಡಕ ಉಪಯೋಗಿಸಿ ವಕ್ರೀಭವನ ದೋಷವನ್ನು ನಿವಾರಿಸಬಹುದು.  ದೃಷ್ಟಿಹೀನತೆ ಮತ್ತು ದೃಷ್ಟಿ ದೋಷಗಳಗೆ ನೀಡುವ ಈ ಚಿಕಿತ್ಸೆಯು ಎಲ್ಲ ಆರೋಗ್ಯ ಚಿಕಿತ್ಸೆಗಳಲ್ಲಿ ಅತಿ ಯಶಸ್ವಿ ಹಾಗೂ ಬಹು ಅಗ್ಗದ್ದಾಗಿದೆ ಸಮಸ್ಯೆಗೆ ಮೂಲ ಕಾರಣವೆಂದರೆ ಕ್ರಮವಾದ ನೇತ್ರ ಆರೋಗ್ಯಸೇವೆ ಇಲ್ಲದೆ ಇರುವುದು. ಅಥವಾ ಸಾಕಷ್ಡು ತರಬೇತಿ ಪಡೆದ ಸೇವೆ ನೀಡುವವರ ಕೊರತೆ. ಕೆಲವು ಸಲ ಜನರಿಗೆ  ಹಣದ ಅಭಾವದಿಂದಾಗಿ ನೇತ್ರ ಆರೈಕೆ ಸೇವಾ ಸ್ಥಳಕ್ಕೆ ಹೋಗುವುದೆ ಆಗುವುದಿಲ್ಲ.ಅಥವ ನೇತ್ರ ಆರೈಕೆ ಸೇವಾ ಕೇಂದ್ರಗಳು ಅತಿ ದೂರದಲ್ಲಿ ಇರುವುದರಿಂದ ಅಲ್ಲಿಗೆ ಹೋಗುವ ಪ್ರಯಾಣದ ವೆಚ್ಚ ದುಬಾರಿಯಾಗಿ ಇರುವುದು. ಅನೇಕ ಸಲ ತಮಗಿರುವ ದೃಷ್ಟಿ ಕ್ಷೀಣತೆಯನ್ನು ಸ್ವೀಕರಿಸಿ ತಾವು ಹೇಗೋ ಇದ್ದಷ್ಟು ದೃಷ್ಟಿಯಲ್ಲಿಯೇ ನಿರ್ವಹಣೆ ಮಾಡಬಹುದು ಎಂದು  ಯೋಚಿಸುವರು..ಇದು ವಿಶೇಷವಾಗಿ ವಯಸ್ಸಾದವರ ವಿಷಯದಲ್ಲಿ ಸತ್ಯ.

ಸ್ವಗೋತ್ರ ಮದುವೆಗಳು

ಸ್ವಗೋತ್ರವೆಂದರೆ  ಪುರುಷ ಮತ್ತು ಮಹಿಳೆ ಇಬ್ಬರಿಗೂ ಪೂರ್ವಜರು ಒಬ್ಬರೆ ಆಗಿರುವರು. ಈ ಶಬ್ದವು ಲ್ಯಾಟಿನ್ ಮೂಲದ್ದು. ಇದರ ಅರ್ಥ ಸಾಮಾನ್ಯ ರಕ್ತ  ಎಂದು . ಸ್ವಗೋತ್ರ ಎಂದರೆ ಇಬ್ಬರು ವ್ಯಕ್ತಿಗಳು ಹತ್ತಿರದ ರಕ್ತ ಸಂಬಂಧಿಗಳು. ಕನಿಷ್ಟ ಒಬ್ಬ ಪೂರ್ವಜ ಸಾಮಾನ್ಯ ವಾಗಿರುವನು.ಅವರು ಚಿಕ್ಕ ದೊಡ್ಡಪ್ಪನ ಮಕ್ಕಳಾಗಿರುವರು.ಅವರಿಗೆ ಮಕ್ಕಳಾದರೆ ಜೀನುಗಳು ಜೊತೆಜೊತೆಯಾಗಿ ಬರುವವು.  ಅವು ನಮ್ಮ ತಾಯಿತಂದೆಯರಿಂದ ಪಡೆಯುವ ಅನುವಂಶಿಕವಾಗಿರುವ  ಮಾಹಿತಿಯ ಪ್ಯಾಕೆಜುಗಳು. ಹುಟ್ಟುವಾಗಲೆ ದೋಷವಿರುವ ಮಗುವು ಜನಿಸುವ ಅಪಾಯ ಸ್ವಗೋತ್ರ ವಿವಾಹವಾದ ದಂಪತಿಗಳಲ್ಲಿ ಹೆಚ್ಚು  .ಸಾಮಾನ್ಯವಾದ ದೋಷಪೂರಿತ ಜೀನುಗಳು ಮಗುವಿಗೆ ಎರಡು ಪಟ್ಟು ಜಾಸ್ತಿ   ಬರುತ್ತವೆ. ಆದರೂ ಸ್ವಗೋತ್ರದಲ್ಲಿ ಮದುವೆಯಾದವರು ಆರೋಗ್ಯವಂತ   ಮಕ್ಕಳನ್ನು ಪಡೆಯುವರು ಲಕ್ಷಣಗಳು ಸ್ವಗೋತ್ರ ವಿವಾಹದಿಂದ ಜನಿಸಿದ ಮಕ್ಕಳು ಗಣನೀಯ ಪ್ರಮಾಣದಲ್ಲಿ ಹೆಚ್ಚುಕಾಲ ಬದುಕುವುದಿಲ್ಲ. ಅಥವ ಆರು ತಿಂಗಳಲ್ಲಿಯೇ ಗಂಭೀರ ದೋಷದಿಂದ ಬಳಲುವರು.  ಇವು ಬಹಳವಾಗಿ. ಜ್ಞಾನೇಂದ್ರಿಯಗಳ ಮತ್ತು ನರಮಂಡಲದ ಮೇಲೆ  ಪರಿಣಾಮ ಬೀರುತ್ತವೆ  ಅನೇಕ ಸಲ ಮಗುವಿನ ಚರ್ಮವು ಗುಲಾಬಿ ಬಣ್ಣದ್ದಾಗಿರುವುದು  ಮತ್ತು ಕೂದಲು ಬಿಳಿಯಾಗಿರುವುದು ಮತ್ತು. ಅನೆಕ ಸಲ ಮಗುವಿನ ಕಣ್ಣುಗಳಲ್ಲಿ ಅಗತ್ಯವಾದ  ಪಿಗ್ಮೆಂಟುಗಳ ಕೊರತೆ ಯಾಗುವುದು.. ಈ ಸ್ಥಿತಿಯನ್ನು ಅಲ್ಬಿನಿಸಂ ಎನ್ನವರು. ಸ್ವಗಗೋತ್ರ ಮದುವೆಯ ಫಲವಾಗಿ ಕಣ್ಣಿನ ಸ್ಥಿತಿಯು ಬದಲಾವಣೆಯಾಗವುದು. ಮೆಳ್ಳ ಗಣ್ಣು,, ಇರುಳುಗಣ್ಣು, ರೆಟಿನಸ್ ಪಿಗ್ಮಂಟೊಸ, ಫೊಟೊಫೋಬಿಯಾ, ದೃಷ್ಟಿ  ಕಡಿಮೆಯಾದ ಅಕ್ಯುಟಿ ಆಗ್ಮಮಸ್  ಮತ್ತು ವಕ್ರೀಭವನ ದೋಷಗಳು ಬರುವವು. ವಂಶ ಪಾರ್ಯಂಪರೆಯ ದುರ್ಬಲತೆ ಮತ್ತು ರೆಟಿನ ಆಟ್ರೊಫಿ  ಹೆಚ್ಚುತ್ತಾ ಹೋಗಿ  ದೃಷ್ಟಿಯು ಕಡಿಮೆ ಯಾಗುವುದು.   ಟನಲ್ ದೃಷ್ಟಿ ಮತ್ತು  ಇರುಳು ಗಣ್ಣುಗಳಲ್ಲಿ  ಕೊನೆ ಗೊಳ್ಳುವುದು. ಇದು ಮಕ್ಕಳಲ್ಲಿ ಮತ್ತು ಎಳೆಯ ಯುವಕರಲ್ಲಿ ಸಾಮಾನ್ಯ.ಅಲ್ಬಿನಿಸಂ: ಇದು ವಂಶಪಾರಂಪರೆಯಾಗಿ ಬರುವುದು.ಕೂದಲಲ್ಲಿ, ಚರ್ಮದಲ್ಲಿ , ಕಣ್ಣಿನಲ್ಲಿ ಪಿಗಮೆಂಟುಗಳ ಕೊರತೆ ಇರುವುದು. ಅಕ್ಯುಲರ್ ಅಲ್ಬಿನಿಸಂನಲ್ಲಿ ಕಣ್ಣುಗಳು ಮಾತ್ರ ತೊಂದರೆಗೆ ಈಡಾಗುವವು.ಇದರ ಜತೆ ಫೊಟೊ ಫೋಬಿಯಾ, ಕಡಿಮೆಯಾದ  ದೃಷ್ಟಿ, ಅಕ್ಯುಟಿ ನಿಷ್ಟಾಗಮಸ್ ಮತ್ತು ವಕ್ರೀಭವನದ ದೋಷಗಳೂ ಇರುವವು. ಅನಿರಿಡಿಯಾ:  ಈ ಸ್ಥಿತಿಯಲ್ಲಿ  ಐರಿಸ್    ಇರುವುದಿಲ್ಲ.ಐರಿಸ್ ನ ಕೊಲೊಬೊಮ/ ಕೊರೈಡ್:  ಇದು ಎರಡರಲ್ಲಿ ಒಂದು ರಚನೆ ಇರುವುದಿಲ್ಲ.ಬೆಳವಣಿಗೆಯ ಅಸಹಜತೆಯಿಂದ ಇದು ಉಂಟಾಗುವುದು. ತಡೆ ಹತ್ತಿರದ ರಕ್ತ ಸಂಬಂಧಿಗಳನ್ನು ಮದುವೆಯಾಗುವುದು ಒಳ್ಳೆಯದಲ್ಲ.ಈ ರೀತಿ ಮದುವೆಯಾದ ದಂಪತಿಗಳು  ಮಗುವನ್ನು ಎದುರು ನೊಡುತ್ತಿದ್ದರೆ ಅಥವ ಮಗುವನ್ನು ಪಡೆಯಲು ಯೋಜಿಸಿದ್ದರೆ ಅವರು ಜೆನೆಟಿಕ್ ಆಪ್ತ ಸಲಹೆ ಪಡೆಯುವುದು ಅವಶ್ಯ. ಭ್ರೂಣಕ್ಕೆ ಇರುವ ಅಪಾಯದ ಅರಿವು ಮಾಡಿಕೊಂಡು ಪರೀಕ್ಷೆಗೆ ಇರುವ ಅವಕಾಶಗಳನ್ನು ಅರಿತಿರಬೇಕು.

ಕಣಿನ ಪೊರೆ

ಕಣ್ಣಿನ ಮಸೂರವು  ಬೇರೆ ಬೇರೆ ದೂರದಲ್ಲಿರುವ ವಸ್ತುಗಳ ಮೆಲೆ ದೃಷ್ಟಿ ಕೇಂದ್ರಿಕರಿಸಲು ಸಹಾಯ ಮಾಡುವುದು.ಕಾಲಾನುಕ್ರಮದಲ್ಲಿ ಅದರ ಪಾರದರ್ಶಕತೆಯು ಕಡಿಮೆಯಾಗಿ ಅಪಾರದರ್ಶಕವಾಗುವುದು.ಈ ರೀತಿ ಮಸೂರದ ಮೇಲೆ ಮಸುಕು ಕವಿಯುವುದನ್ನು (ಕ್ಯಾಟರಾಕ್ಟ) ಪೊರೆ ಬರುವುದು ಎನ್ನವರು. ಬೇಳಕು ರೆಟಿನಾವನ್ನು ತಲುಪುವುದಿಲ್ಲ.  ದೃಷ್ಟಿಯುಕ್ರಮೇಣ ಮಸುಕಾಗುವುದು.ಕೊನೆಗೆ ಕುರುಡುತನ ಬರಬಹುದು. ಬಹಳ ಜನರಿಗೆ ಮಬ್ಬಾದ ಪ್ರತಿ ಬಿಂಬ ಮತ್ತು ಓರೆಕೋರೆಯಾದ ದೃಷ್ಟಿ  ಇರುವುದು.

ಕ್ಯಾಟರಾಕ್ಟ ಸಧಾರಣವಾಗಿ 55 ವರ್ಷವಾದವರಿಗೆ ಬರುವುದು.ಆದರೆ ಚಿಕ್ಕವರೂ ಅದರಂದ ಹೊರತೇನೇಲ್ಲ. ಪ್ರಪಂಚದಲ್ಲೆಲ್ಲ ಇದು ಕುರುಡುತನದ ಪ್ರಮುಖ ಕಾರಣವಾಗಿದೆ. ಪ್ರತಿ 10 ಜನರಲ್ಲಿ 4 ಜನರಿಗೆ  60 ವರ್ಷವಾದ ಮೇಲೆ ಕ್ಯಾಟರಾಕ್ಟ ಬೆಳೆಯುತ್ತದೆ. ಇದಕ್ಕೆ ಇರುವ ಒಂದೆ ಚಿಕಿತ್ಸೆ ಎಂದರೆ ಶಸ್ತ್ರ ಚಿಕಿತ್ಸೆ.  ಅದು ಸರಳ ಮತ್ತು ಸುರಕ್ಷಿತ ಪ್ರಕ್ರಿಯೆಯಾಗಿದೆ. ಅದರ ಬರುವುದಕ್ಕೆ ಸರಿಯಾದ ಕಾರಣ ತಿಳಿದಿಲ್ಲ.  ಬೇರೆ ಬೇರೆ ವಿಧದ ಕ್ಯಾಟರಾಕ್ಟಗಳಿವೆ.  ಬಹಳ ಸಾಮಾನ್ಯವಾಗಿರುವುದು ಸೆನೈಲ್ ಕ್ಯಾಟರಾಕ್ಟ.   ಅದು 50 ವರ್ಷದ ಮೇಲಿನವರಿಗೆ ಬೆಳೆಯುವುದು.   ಇದಕ್ಕೆ ಕಾರಣಗಳು ರೋಗ,ವಂಶವಾಹಿನಿ,ವಯಸ್ಸಾಗುವುದುಅಥವ ಕಣ್ಣಿನ ಗಾಯ. ಸಿಗರೇಟಿನ ಹೊಗೆ,ಅಲ್ಟ್ರಾವೈಲೆಟ್ ವಿಕಿರಣಗಳು (ಸೂರ್ಯನ ಬೆಳಕೂ ಸೇರಿದಂತೆ) , ಕೆಲವು ಔಷಧಗಳು  ಕ್ಯಾಟರಾಕ್ಟ. ಬೆಳೆಯಲು ಪೂರಕವಾಗಿವೆ.ಮುಕ್ತ   ರಾಡಿಕಲ್ಲುಗಳು ಮತ್ತು ಆಕ್ಸಿಡೈಜಿಂಗ್ ಏಜೆಂಟುಗಳೂ  ವಯಸ್ಸಾದ ಮೆಲೆ ಬರುವ  ಬರುವ ಕ್ಯಾಟರಾಕ್ಟಗಳಿಗೆ  ಸಂಬಂಧಿಸಿವೆ ಎನ್ನಲಾಗಿದೆ

ಲಕ್ಷಣಗಳು

  • ಕಾಲಾನುಕ್ರಮದಲ್ಲಿ ಸಾವಕಾಶವಾಗಿ ದೃಷ್ಟಿಯು ಕುಂದುವುದು.
  • ವಸ್ತುಗಳು ಮಸಕು ಮಸಕಾಗಿ, ಓರೆ ಕೋರೆಗಳಾಗಿ ಹಳದಿ ಬಣ್ಣದವಾಗಿ, ಸೊಟ್ಟಪಟ್ಟ,  ಮಬ್ಬಾಗಿ ಕಾಣುವವು.  ರಾತ್ರಿಯಲ್ಲಿ ಕಡಿಮೆ ಬೆಳಕಿನಲ್ಲಿ  ಮಸುಕಾಗುವ ದೃಷ್ಟಿ. ಸೂರ್ಯನ ಬೆಳಕಿನಲ್ಲಿ ಅಥವ ಪ್ರಖರ ಬೆಳಕಿನಲ್ಲಿ  ಕಣ್ಣು ಕುಕ್ಕುತ್ತದೆ.  ಪ್ರಕಾಶ ಮಾನವಾದ ಬೆಳಕಿನ ಸುತ್ತ ಪ್ರಭಾವಳಿ ಕಾಣುವುದು. ಕ್ಯಾಟರಾಕ್ಟ  ಬಂದಾಗ ತುರಿಕೆ, ಕಣ್ಣೀರು, ಅಥವ ತಲೆ ನೋವು ಇರುವುದಿಲ್ಲ. ಚಿಕಿತ್ಸೆ ಮಸೂರವನ್ನು ಪುನಃ ಪಾರದರ್ಶಕವಾಗಿ ಮಾಡಲು ಯಾವುದೆ ಔಷಧಿ ಇಲ್ಲ.  ಕನ್ನಡಕವೂ ಸಹಾಯಕ ವಾಗುವುದಿಲ್ಲ. ಬೆಳಕಿನ ಕಿರಣಗಳು ಕಣ್ಣಿನಲ್ಲಿ ಹೋಗುವುದಿಲ್ಲ.. ಕ್ಯಾಟರಾಕ್ಟನ್ನು ಶಸ್ತ್ರ ಕ್ರಿಯೆಯಿಂದ ತೆಗೆದು ಹಾಕುವುದು  ಇರುವ ಒಂದೇ ಮಾರ್ಗ. ಕ್ಯಾಟರಾಕ್ಟನ್ನು ತೆಗೆದುಹಾಕಲು  ಅನೇಕ ವಿಧದ  ಶಸ್ತ್ರ ಕ್ರಿಯೆಗಳಿವೆ. ದೃಷ್ಟಿಯು ಸ್ವಲ್ಪವೆ ಮಂದವಾಗಿದ್ದರೆ ಕ್ಯಾಟರಾಕ್ಟ ಶಸ್ತ್ರ ಕ್ರಿಯೆ ಮಾಡಲು ಬರುವುದಿಲ್ಲ. ಪವರ್ ಬದಲಾಧ ಕನ್ನಡಕವನ್ನು ಬದಲಾಯಿಸುವುದರಿಂದ ಆ ಮಟ್ಟಿಗೆ ಸುಧಾರಣೆ ಕಂಡುಬರುವುದು.ರೋಗಿಯು ತನಗೆ ಪೂರ್ಣವಾಗಿ ನೋಡಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಬಂದಾಗ ಶಸ್ತ್ರಕ್ರಿಯೆ ಮಾಬಹುದು.

ಗ್ಲುಕೊಮಾ

ಗ್ಲುಕೋಮ ರೋಗವು ಸಾವಧಾನವಾಗಿ ಕುರುಡುತನವನ್ನು ತರುತ್ತದೆ ಆಪ್ಟಿಕ್ ನರವನ್ನು ತೀವ್ರವಾಗಿ ಮತ್ತು ಕ್ರಮವಾಗಿ ಹಾನಿಮಾಡುವ ಮೂಲಕ ದೃಷ್ಟಿಯನ್ನು ನಾಶ ಮಾಡುತ್ತದೆ.  ಯಾವುದೆ ವಸ್ತುವನ್ನು ನೋಡಿದಾಗಅದರ ಪ್ರತಿಬಿಂಬವು ರೆಟಿನಾದಿಂದ ಮೆದುಳಿಗೆ ಆಪ್ಟಿಕ್  ನರದ ಮೂಲಕ ಸಾಗುವುದು.  ಗ್ಲುಕೊಮಾದಲ್ಲಿ ಇಂಟ್ರಾಕ್ಯುಲರ್  ಒತ್ತಡವು ತೊಂದರಗೆ ಈಡಾದ ಕಣ್ಣು ತಡೆದು ಕೊಳ್ಳಲಾರದಷ್ಟು  ಆಗುವುದು. ಇದರಿಂದ ಆಪ್ಟಿಕ್ ನರವು ಹಾನಿಗೆ ಒಳಗಾಗುವುದು.ಮತ್ತು ಅದು ದೃಷ್ಟಿಹಾನಿ  ಉಂಟುಮಾಡುವುದು. ಗ್ಲುಕೊಮಾ ಆದ ವ್ಯಕ್ತಿಯು ಒಂದು ವಸ್ತುವನ್ನು ನೋಡಿದಾಗ ಅವನಿಗೆ ಮಧ್ಯಬಾಗವು ಮಾತ್ರ ಚೆನ್ನಾಗಿ ಕಾಣುವುದು. ಕಾಲಾನುಕ್ರಮದಲ್ಲಿ ಅದೂ ಕಾಣುದಿಲ್ಲ. ಹಾಗಾಗಿ ಜನರು ಇದನ್ನು ಗಮನಿಸುವುದು ವಿರಳ. ಸಾಕಷ್ಟು ಹಾನಿಯಾದ ಮೇಲೆಯೇ ಗೊತ್ತಾಗುವುದು. ಇದು ಯಾವದೆ ಲಕ್ಷಣಗಳನ್ನೂ ತೋರಿಸದೆ ಇರುವುದರಿಂದ ಇದನ್ನು” ನುಸುಳುವ ದೃಷ್ಟಿಚೋರ “ ಎನ್ನುವರು. ಜಗತ್ತಿನಾದ್ಯಂತ ಆರು ಕೋಟಿ ಜನರು ಇದರಿಂದ ಪೀಡಿತರಾಗಿದ್ದಾರೆ. ಇದು ಜಗತ್ತಿನಲ್ಲಿ  ಕುರುಡುತನಕ್ಕೆ  ಅತಿ ದೊಡ್ಡ ಎರಡನೆ ಕಾರಣ.  ಭಾರತದಲ್ಲಿ ಆರು ಕೋಟಿ ಜನರು ಗ್ಲುಕೊಮಾದಿಂದ ನರಳುತ್ತಿದ್ದಾರೆ ಅವರಲ್ಲಿ 1.5l   ಲಕ್ಷ ಜನ ಕುರುಡರಾಗಿದ್ದಾರೆ. ಗ್ಲುಕೊಮಾ  ಎರಡೂ  ಕಣ್ಣಗಳನ್ನು ಬಾಧಿಸುವುದು. ಇದು ನಲವತ್ತು ವರ್ಷ ಮೀರಿದ ವಯಸ್ಕರಿಗೆ ಹೆಚ್ಚಾಗಿ ಬಂದರೂ  ನವಜಾತ ಶಿಶುವಿನಲ್ಲೂ ಇರಬಹುದು.

ವಿಧಗಳು ಮುಖ್ಯವಾಗಿ ಎರಡು ವಿಧದ  ಗ್ಲುಕೊಮಾ ಇವೆ  :  ಪ್ರೈಮರಿ ತೆರೆದ ಕೋನದ  ಮತ್ತು  ಕೋನ ಮುಚ್ಚಿದ ಗ್ಲುಕೊಮ 1.ಪ್ರೈಮರಿ ತೆರೆದ ಕೋನದ  ಗ್ಲುಕೊಮಾ . ಪ್ರೈಮರಿ ತೆರೆದ ಕೋನದ  ಗ್ಲುಕೊಮಾದಲ್ಲಿ ಕಣ್ಣಿನ ಡ್ರೈನೇಜು ಕಾಲವೆಯು ಕ್ರಮವಾಗಿ ಮುಚ್ಚಿಕೊಳ್ಳುತ್ತಾ ಹೋಗುವುದು. ಡ್ರೈನೇಜು  ವ್ವಸ್ಥೆಯು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ  ಕಣ್ಣಿನ ಒಳ ಒತ್ತಡವು ಹೆಚ್ಚವುದು ( ಆದರೂ . ಡ್ರೈನೇಜು ಕಾಲುವೆಯ ಪ್ರವೇಶ ಭಾಗವು ಕೆಲಸಮಾಡುತ್ತದೆ ಮುಚ್ಚಿರುವುದಿಲ್ಲ. ಮುಚ್ಚುವಿಕೆಯ ಒಳಭಾಗದಲ್ಲಿ ಆಗುವುದು. ಅದರಿಂದ ಫ್ಲೂಯಿಡ್ ಹೊರ ಬರುವುದು ಸಾಧ್ಯವಾಗುವುದಿಲ್ಲ.ಹೀಗಾಗಿ ಒಳಭಾಗದ ಒತ್ತಡವು ಏರುತ್ತಾ ಹೋಗುವುದು.ಪ್ರೈಮರಿ ತೆರೆದ ಕೋನದ  ಗ್ಲುಕೊಮಾಕ್ಕೆ ಸಂಬಂಧಿಸಿದ ಯಾವುದೆ ನಿರ್ಧಿಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಸುವುದು ಗ್ಲುಕೊಮಾವನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಸಹಕಾರಿ. ಆಗ ಇದನ್ನು ಔಷಧಿಯಿಂದ ನಿಯಂತ್ರಣದಲ್ಲಿ ಇಡಬಹುದು.2 ಕೋನ ಮುಚ್ಚಿದ ಲುಕೊಮಾ ಕೋನ ಮುಚ್ಚಿದ ಗ್ಲುಕೊಮಾವು ಬಹು ತೀವ್ರವಾದ  ರೀತಿಯ ಗ್ಲುಕೊಮಾ ಆಗಿದೆ ಈ ಪರಿಸ್ಥಿತಿಯಲ್ಲಿ ಕಣ್ಣಿನ ಒತ್ತಡವು ತೀವ್ರವಾಗಿ ಏರುವುದು.  ಐರಿಸ್ ಮತ್ತು ಕಾರ್ನಿಯಾಗಳ ಅಗಲ ಕಡಿಮೆ ಆಗುವುದು.  ಪರಿಣಾಮವಾಗಿ ಡ್ರೈನೇಜು ಕಾಲುವೆಯು ಕಿರಿದಾಗುತ್ತಾ ಹೋಗುವುದು. ಲಕ್ಷಣಗಳು ವಯಸ್ಕರು ರೋಗಿಗಳು ಅಂಚಿನಲ್ಲಿನ ನೋಟ ಕಾಣುವುದಿಲ್ಲ ಎಂದು ದೂರುವರು. ರೋಗಿಗಳು ದೀಪದ ಸುತ್ತ  ಪ್ರಭಾವಳಿ  ಅಥವ ಕಾಮನ ಬಿಲ್ಲು  ಅಥವ ಪ್ರಖರ ಬೆಳಕು  ಕಾಣುವರು ದೃಷ್ಟಿಯು ಮಬ್ಬಾಗಿರುವುದು.ಕಣ್ಣು ಕೆಂಪಾಗುವುದು ಮತ್ತು ನೋವು . ನೋಟದ ಕ್ಷೇತ್ರವು ಕಿರಿದಾಗಿ ಅವರು ಸ್ವತಂತ್ರವಾಗಿ ಚಲಿಸಲು ಆಗುವುದಿಲ್ಲ ಕಣ್ಣಿಗೆ ಗಾಯವಾಗಿ ನೋವು ಮತ್ತು ದೃಷ್ಟಿ ನಾಶವಾದರೆ ಅನುಷಂಗಿಕಗ್ಲೂಕೊಮಾ  ಅಂದುಶಂಕಿಸಬಹುದ

  • ಡಯಾಬೆಟಿಸ್ ರೋಗಿಗಳು ಗ್ಲುಕೊಮಾದಿಂದ ನರಳುವರು

ಮಕ್ಕಳು ಶುಗಳಲ್ಲಿ ಮತ್ತು ಮಕ್ಕಳಲ್ಲಿನ ಲಕ್ಷಣಗಳು- ಕಣ್ಣು ಕೆಂಪಾಗುವುದು, ನೀರು ಬರುವುದು ಅಗಲವಾಗುವುದು, ಕಾರ್ನಿಯ ಮಸಕಾಗುವುದು ಮತ್ತು ಫೋಟೋ ಪೋಬಿಯಾ. ಮಕ್ಕಳ ಲಕ್ಷಣಗಳು,ಕಣ್ಣುಕೆಂಪಾಗುವುದು, ನೀರು ಬರುವುದು, ಕಣ್ಣು ಅಗಲವಾಗುವವು ಕಾರ್ನಿಯಲ್ ಮಸುಕಾಗುವುದು ಮತ್ತು ಫೋಟೋ  ಫೋಬಿಯಾ.

ಟ್ರೊಮಾ( ಗಾಯ)

ಕಣ್ಣಿನ ಗಾಯವು ಕುರುಡುತನಕ್ಕೆ ಪ್ರಮುಖವಾದ ಕಾರಣವಾಗಿದೆ. ಹೆಚ್ಚಿನ ಗಾಯದ ಪ್ರಕರಣಗಳಲ್ಲಿ ಜನರು ಸಾಕಷ್ಟು ವೈದ್ಯಕೀಯ ಸೌಲಭ್ಯ ಇಲ್ಲದೆ, ತರಬೇತಿ ಪಡೆದ ಚಿಕಿತ್ಸಕರಿಲ್ಲದೆ  ಕುರುಡರಾಗುವುರು.  ಕಣ್ಣಿನ ಗಾಯವನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ತಕ್ಷಣ ಚಿಕಿತ್ಸೆ ಪಡೆಯಬೇಕು. ತಕ್ಷಣದ ಪ್ರಥಮ ಚಿಕಿತ್ಸೆ ನೀಡಿ ಮತ್ತು ಪರಿಣಿತರಲ್ಲಿಗೆ ಕಳುಹಿಸುವುದು ದೃಷ್ಟಿಯನ್ನು ಪನಃ ಪಡೆಯಲು ಅತಿ ಅವಶ್ಯ. ಕಾರಣಗಳು ಮನೆಯಲ್ಲಾಗುವ ಗಾಯಗಳು

  • ಕೈಷಿಕೆಲಸ  ಮತ್ತು ಬೆಳೆ ಕಟಾವು ಮಾಡುವಾಗ.
  • ಕಟ್ಟಿಗೆ ಕಡಿಯುವಾಗ
  • ಉರಿಯುತ್ತಿರುವ ಕಟ್ಟಿಗೆಯಿಂದ ಕಿಡಿಸಿಡಿದು - ಅಡುಗೆ ಮಾಡುವಾಗ   ಜ್ವಾಲೆ ಮತ್ತು ಉಗಿಯಿಂದ
  • ಕೀಟಗಳ ಕಡಿತ.
  • ಧೂಳಿನ ಕಣಗಳು ( ಅನ್ಯ ಪದಾರ್ಥಗಳು).

ಕೈಗಾರಿಕೆ

  • ಲೋಹದ ಚೂರು ( ಅನ್ಯ ವಸ್ತು)
  • ಸುಡುತ್ತಿರುವ ವಸ್ತುಗಳು
  • ಜ್ವಾಲೆ ಅಥವ ಉಗಿ
  • ಮುಖದ ನಿರ್ಲಕ್ಷ್ಯೆ
  • ರಸಾಯನಿಕಗಳೀದ ಸುಟ್ಟಿರುವುದು

ಅಫಘಾತ

  • ವಾಹನದ ಒಡೆದ ಗಾಜಿನ ಚೂರುಗಳು.ಬೀಳುವುದರಿಂದ ಆಗುವ ಗಾಯ
  • ಚೂಪಾದ ಇಲ್ಲವೆ  ಮೊಂಡಾದ ವಸ್ತುಗಳು ತಗುಲಿದಾಗ.

ರಸಾಯನಿಕ ಸುಟ್ಟ ಗಾಯಗಳು

  • ರಸಾಯನಿಕ ಸುಟ್ಟ ಗಾಯಗಳಿಗೆತಕ್ಷಣದ ಪ್ರಥಮ ಚಿಕಿತ್ಸೆ ಅಗತ್ಯ.
  • ಸಾಧ್ಯ ವಾದಷ್ಟು ಬೇಗ , ಮುಖ , ಕಣ್ಣು , ರೆಪ್ಪೆಗಳನ್ನು ಐದು ನಿಮಿಷಗಳ  ಕಾಲ ನೀರಿನಲ್ಲಿ ತೊಳೆಯಿರಿ.
  • ಕಣ್ಣಿಗೆ ಒಳ ಮೂಲೆಯಿಂದ ನೀರು ಸುರಿಯಿರಿ.  ರಸಾಯನಿಕವು ಕಣ್ಣಿನೊಳಗೆ ಹೋಗದಿರುವುದನ್ನು ಖಚಿತ ಪಡಿಸಿಕೊಳ್ಳಿ. ಕಣ್ಣನ್ನು ಶುದ್ಧ ಒಣ ಬಟ್ಟೆಯಿಂದ ಹಗುರವಾಗಿ ಕಟ್ಟಿ.
  • ಕಣ್ಣು ಉಜ್ಜದಂತೆ ರೋಗಿಗೆ ಎಚ್ಚರ ಕೊಡಿ.
  • ತಕ್ಷಣ ವೈದ್ಯರ ಸಹಾಯ ಪಡೆಯಿರಿ.
  • ಮೃದುವಾದ ಪ್ಯಾಡು ಬಳಸಿ ಕಣ್ಣನ್ನು ಮುಚ್ಚಿ., ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ .

ಕಣ್ಣಿಗೆ ತೊಂದರೆ ನೀಡುವ ಅಭ್ಯಾಸಗಳು

  • ಸ್ವಯಂ ವೈದ್ಯ
  • ಪಾರಂಪರಿಕ ಕಣ್ಣಿನ ಔಷಧಿಗಳು – ಗಿಡ ಮೂಲಿಕೆ.ಎಲೆಯರಸ, ಮಾನವ ಮೂತ್ರ/ಪ್ರಾಣಿಜನ್ಯವಸ್ತುಗಳು ದೃಷ್ಟಿ ಪ್ರದೇಶಕ್ಕೆ ಶಾಶ್ವತಹಾನಿ ಮಾಡುವವು. ದೃಷ್ಟಿ ದೋಷ ಮತ್ತು ಕಣ್ಣಲ್ಲಿ ಅನ್ಯ ವಸ್ತು ಸೇರಬಹುದು.
  • ಅನ್ಯ ವಸ್ತುಗಳಿಂದಾದ ಗಾಯಗಳು , ಕೀಟಗಳ ರೆಕ್ಕೆಗಳೀಂದ,ಧೂಳು, ಬಿಸಿ ಕಲ್ಲಿದ್ದಲು ಲೋಹದ ಚೂರುಗಳಿಂದ
  • ಯಂತ್ರದ ಭಾಗಗಳು, ಸಡಿಲವಾದ ರೆಪ್ಪೆಗಳ  ಕೆಳಗೆ ಅನ್ಯವಸ್ತುಗಳು ಇರಬಹುದು.
  • ಇದರಿಂದ ಕಣ್ಣು ಕೆಂಪಾಗುವದು. ಅದನು ತಕ್ಷಣ ತೆಗೆಯಬೇಕು.

ಕಣ್ಣಿನ ಗಾಯದ ನಿರ್ವಹಣೆಯಲ್ಲಿ ನೆನಪಿಡಬೇಕಾದ ಮುಖ್ಯ ಅಂಶಗಳು

  • ಕಣ್ಣಿನ ತುರ್ತುಸ್ಥಿತಿಯು, ಗಾಯ, ತೆರಚುವುದು, ಕಣ್ಣಿನಲ್ಲಿ ಅನ್ಯ ವಸ್ತುಗಳು, ಸುಡುವುದು,ರಸಾಯನಿಕದ ಸಂಪರ್ಕ,ಮೊಂಡ ವಸ್ತುಗಳಿಂದ  ಪೆಟ್ಟು ಆದಾಗ  ಕಣ್ಣಿಗೆ  ಸುಲಭವಾಗಿ ಹಾನಿಯಾಗುವುದರಿಂದ. ಚಿಕಿತ್ಸೆ ನೀಡದಿದ್ದರೆ ಮೇಲಿನ ಯಾವುದೆ ಒಂದು ಕಾರಣವೂ ಕುರುಡುತನ ತರಬಹುದು.
  • ಕಣ್ನಿನ ಎಲ್ಲ ಗಾಯಗಳಿಗೆ ಮತ್ತು ಸಮಸ್ಯೆಗಳಿಗೆ  ವೈದ್ಯಕೀಯ ಚಿಕಿತ್ಸೆ  ಪಡೆಯುವುದು ಅಗತ್ಯ.  ಇತರ ಎಷ್ಟೊ ಸಮಸ್ಯೆಗಳಿಗೆ( ಕಣ್ಣು ಕೆಂಪಾಗುವುದು ಇತ್ಯಾದಿ)  ಕೂಡಾ ವೈದ್ಯಕೀಯ ನೆರವು ಬೇಕು.
  • ರಸಾಯನಿಕಗಳಿಂದ ಕಣ್ಣಿಗೆ ಗಾಯವು ಕೆಲಸದ ವೇಳೆಯ ಅಫಘಾತದಿಂದ, ಮನೆಯಲ್ಲಿನ ಸಾಮಗ್ರಿಗಳಿಂದ (ಶುಚಿ ಮಾಡುವ ದ್ರಾವವಣಗಳು ದ್ರಾವಕಗಳು ಕೀಟನಾಶಕಗಳು, ಅನಿಲಗಳು, ಏರೊಸೆಲ್ ಇತ್ಯಾದಿಗಳು ರಸಾಯನಿಕಗಳು ಸುಟ್ಟಗಾಯ ಮಾಡಬಹುದು
  • ಆಮ್ಲದಿಂದ  ಆದ ಸುಟ್ಟಗಾಯದಲ್ಲಿ  ಕಾರ್ನಿಯದ ಮೇಲಿನ ಮಸುಕು ಅನೇಕ ಸಲ  ತಾನೇ ಹೋಗಿ ಬಿಡುವುದು. ಗುಣವಾಗುವ ಅವಕಾಶ ಇದೆ. ಆದರೂ ಅಲ್ಕಲೈನ್ ಗಳಾದ ಸುಣ್ಣ, ಚರಂಡಿ ಶುಚಿ ಮಾಡುವ ವಾಣಿಜ್ಯ ದ್ರಾವಕಗಳು ಮತ್ತು ರೆಫ್ರಿಜೇಟರ್ ನಲ್ಲಿರುವ ಸೋಡಿಯಂ ಹೈಡ್ರಾಕ್ಸೈಡು -   ಕಾರ್ನಿಯಾಗೆ ಶಾಶ್ವ ತ ಹಾನಿ ಮಾಡುವ ಸಾಧ್ಯತೆ ಇದೆ.
  • ಕೆಲವು ಸಲ ಸಕ್ರಮ ಚಿಕೆತ್ಸೆಯಾದರೂ  ಆಗುತ್ತಿರುವ ಹಾನಿ ಮುಂದುವರಿಯಬಹುದು
  • ಧೂಳು , ಮರಳು, ಮತ್ತು ಇತರ ಕಸ ಕಣ್ಣನ್ನು ಯಾವಾಗಲಾದರೂ  ಸೇರಬಹುದು. ನಿರಂತರ ನೋವು ಮತ್ತು ಕೆಂಪಾದ ಕಣ್ಣು ಚಕಿತ್ಸೆಯ  ಅಗತ್ಯವನ್ನು ತೀಳಿಸುವುದು.ಅನ್ಯ ವಸ್ತುವು ದೃಷ್ಟಿಗೆ ಅಪಾಯ ತರಬಹುದು.ಅದು ಕಾರ್ನಿಯಾವನ್ನು ಹಾನಿ ಮಾಡುವುದು.ವೇಗವಾಗಿ ತಿರುಗುವ ಗ್ರೈಂಡಿಂಗ್ , ಚರ್ನಿಂಗ್,  ಹ್ಯಾಮರಿಂಗ್ ಯಂತ್ರಗಳಿಂದ ಸಿಡಿದ ಲೋಹದ ಚೂರುಗಳು ಅತ್ಯಂತ ಹೆಚ್ಚು ಅಪಾಯಕಾರಿ.
  • ಕಣ್ಣಿಗೆ ಇಲ್ಲವೆ ಮುಖಕ್ಕೆ ನೇರವಾಗಿ ಗಾಯವಾದರೆ ’ ಕಪ್ಪುಕಣ್ಣು’ ಆಗುವುದು.ಕೆಲವು ರೀತಿಯ ತಲೆ ಬುರುಡೆಸೀಳು  ಕಣ್ಣಿಗೆ ನೇರವಾಗಿ ಗಾಯ ಮಾಡದಿದ್ದರೂ ಅದರ ಸುತ್ತಲೂ  ಗಾಯ ಮಾಡಬಹುದು ಅನೇಕ ಸಲ ರೆಪ್ಪೆಯ ಬಾವು ಬರಬಹುದು.ಕಣ್ಣಿ ಸುತ್ತಲು ಇರುವ ಅಂಗಾಂಶಗಳು ಊದಿಕೊಳ್ಳಬಹುದು..
  • ಯಾವಾಗಲಾದರು ಒಮ್ಮೆ,  ಬಾವು ಬಂದ ಅಂಗಾಂಶಗಳಿಂದ ಕಣ್ಣಿಗೆ ತೀವ್ರ ಹಾನಿ ಆಗಬಹುದು. ಒಳಗೆ ರಕ್ತ ಸ್ರಾವವಾಗಿ ದೃಷ್ಟಿ ಕಡಿಮೆಯಾಗಿ ಕಾರ್ನಿಯಕ್ಕೆ ಹಾನಿಯಾಗಬಹುದು
  • ಕಣ್ಣಿನ ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿದಿದ್ದರೆ ಬೆಲೆ ಬಾಳುವ ಸಮಯದ ಉಳಿತಾಯವಾಗುವುದು.  ದೃಷ್ಟಿ  ನಷ್ಟವಾಗುವುದನ್ನು ತಡೆಯಬಹುದು.

ಈ ಕೆಳಗೆ ಕಣ್ಣಿನ ಗಾಯವಾದರೆ ಏನು ಮಾಡಬೇಕೆಂಬುದಕ್ಕೆ ಕೆಲವು ಸೂಚನೆಗಳಿವೆ

  • ಜನರಿಗೆ ಸ್ವಯಂ ವೈದ್ಯ  ಮತ್ತು ಸಂಪ್ರದಾಯಿಕ ಅಭ್ಯಾಸಗಳ ಬಗೆಗೆ  ಎಚ್ಚರ ನೀಡಿ.
  • ಅರ್ಹತೆ ಇಲ್ಲದೆ ಔಷಧಿ ಕೊಡುವವರಿಂದ ಚಿಕಿತ್ಸೆ ಬೇಡ. ತಕ್ಷಣ ಸೂಕ್ತ ವೈದ್ಯರನ್ನು ಭೇಟಿಮಾಡಿ.
  • ಮಕ್ಕಳ ಕೈಗೆ ಸಿಗದಂತೆ  ಔಷಧಿಗಳನ್ನು, ಆಮ್ಲಗಳು ರಸಾಯನಿಕಗಳು , ಬಿಸಿ ಆಹಾರಗಳು ಇರಲಿ.
  • ಮಕ್ಕಳು ಚೂಪಾದ ವಸ್ತು ಗಳ ಜತೆ  , ಬಿಲ್ಲು ಬಾಣ, ಗಿಲ್ಲಿ –ದಾಂಡು ಆಟ ಆಡುವುದಕ್ಕೆ ಉತ್ತೇಜನ ಕೊಡಬೇಡಿ.  .
  • ವಾಹನ ಚಾಲಿಸುವಾಗ ಕೈಗಾರಿಕಾ ಕೆಲಸ ಮಾಡುವಾಗ ರಕ್ಷಣಾ ಕನ್ನಡಕ ಧರಿಸಿ.
  • ಪ್ರಥಮ ಚಿಕಿತ್ಸೆ ನಮಾಡುವುದನ್ನು ಕಲಿತಿರಿ ಮತ್ತು ಹತ್ತಿರದ ವೈದ್ಯಕೀಯ ಸೌಲಭ್ಯಗಳ ಮಾಹಿತಿ ಇರಲಿ

ಚಿಕಿತ್ಸೆ

  • ಕಣ್ಣುನ್ನು ಉಜ್ಜ ಬಾರದು. ಮಕ್ಕಳು ಮಾತು ಕೇಳದಿದ್ದಲ್ಲಿ ಅವರ ಕೈಯನ್ನು ಬೆನ್ನ ಹಿಂದೆ ಕಟ್ಟಿ.
  • ಅನ್ಯ ವಸ್ತುಗಳನ್ನು ಒದ್ದೆಯಾದ ಹತ್ತಿಯಿಂದ ಅಥವ ತಿರುಚಿದ ಕರವಸ್ತ್ರದ  ತುದಿಯಿಂದ ಹೆಚ್ಚು ಬೇಳಕಿನಲ್ಲಿ ತೆಗೆಯಿರಿ .
  • ಅನ್ಯ ವಸ್ತುವು ಕಾಣಿಸದಂತಿದ್ದರೆ  ,ಶುದ್ಧವಾದ ನೀರನ್ನು ಕೈನಲ್ಲಿ ತೆಗೆದುಕೊಂಡು ಅದರಲ್ಲಿ ಕಣ್ಣು ಪಿಳುಕಿಸಿ
  • ಆಗಲೂ ಬರದಿದ್ದರೆ ಮೇಲಿನರೆಪ್ಪೆಯನ್ನುಮುಂದೆ ಎಳೆದು ,ಕೇಳಗಿನ ರೆಪ್ಪೆಯನ್ನು ಮೇಲೆತಳ್ಳಿರಿ.ಮತ್ತು ಎರಡನ್ನು ಒಟ್ಟಿಗೆ ಬಿಡಿ . ಕೆಳಗಿನ ರೆಪ್ಪೆಯು ಅನೇಕ ಸಲ ಅನ್ಯ ವಸ್ತುವನ್ನು ಹೊರಹಾಕುತ್ತದೆ.
  • ಅನ್ಯ ವಸ್ತುವು ಕಾರ್ನಿಯಾದಲ್ಲಿ ಇದ್ದರೆ, ಮೃದುವಾದ ಪ್ಯಾಡನಿಂದ ಕಣ್ಣನ್ನು ಮುಚ್ಚಿ ಆಸ್ಪತ್ರಗೆ ರೋಗಿಯನ್ನು ತಕ್ಷಣ ಕರೆದು ಕೊಂಡು ಹೋಗಬೇಕು.
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate