অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾಸ್ತವಾಂಶಗಳು

  • ಈಗ ಪ್ರಪಂಚದಲ್ಲಿ 37 ಮಿಲಿಯನ್ ಜನರು ಕುರುಡರಾಗಿದ್ದಾರೆ. ಜತೆಗೆ  124 ಮಿಲಿಯನ್ ಜನರು ತೀವ್ರವಾದ  ದೃಷ್ಟಿಯ ದೋಷದಿಂದ ನರಳುತ್ತಿದ್ದಾರೆ.
  • ತಡೆಯುವುದು ಅಥವ ಮುಂಚಿತವಾಗಿ ಕುರಡುತನಕ್ಕೆ ಕಾರಣವಾಗುವ ಸ್ಥಿತಿಯ ಚಿಕಿತ್ಸೆಯು  80%  ನಷ್ಟು ಕುರುಡುತನವನ್ನು ತಡೆಗಟ್ಟುವುದು.
  • ವಿಶ್ವದಲ್ಲಿನ 90% ಕುರುಡರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದ್ದಾರೆ.
  • ವಿಶ್ವದಲ್ಲಿನ ಅಂಧರಲ್ಲಿ ಮೂರನೆ ಎರಡು  ಭಾಗಸಷ್ಟು ಕುರುಡರು ಮಹಿಳೆಯರಾಗಿದ್ದಾರೆ..
  • ವಿಶ್ವದಲ್ಲಿನ ಕುರುಡರ ಕಾಲು ಭಾಗ ಜನ ಭಾರತದಲ್ಲಿದ್ದಾರೆ; i.e., 9-12 ಮಿಲಿಯನ್ ಜನ.
  • ಭಾರತದಲ್ಲಿನ ಸುಮಾರು 70  ಕುರುಡರು ಯಾವುದೆ ಕಣ್ಣಿನ ಉತ್ತಮ ಆರೈಕೆ ದೊರೆಯದ   ಗ್ರಾಮಾಂತರ ಪ್ರದೇಶದಲ್ಲಿದ್ದಾರೆ
  • ತೀವ್ರ ದೋಷ ಇರುವವರ ಸಂಖ್ಯೆಯು 2020  ವರ್ಷದ ಹೊತ್ತಿಗೆ ಎರಡು ಪಟ್ಟು ಆಗಬಹುದು.

ದೃಷ್ಟಿಯ ವಿಧಗಳು

ವಿಶ್ವ ಆರೋಗ್ಯ ಸಂಸ್ಥೆಯು  ಅನೇಕ ಮಟ್ಟದ ದೃಷ್ಟಿಗೆ ಅನುಗುಣವಾಗಿ ವಿವಿಧ ವರ್ಗಗಳಾಗಿ  ವಿಂಗಡಿಸಿದೆ. ಅದನ್ನು  ವಿಷುಯಲ್ ಆಕ್ಯುಟಿ ಮೆಜರಮೆಂಟ್ ಮೂಲಕ ಮಾಡಿದೆ. ವಿಷುಯಲ್ ಆಕ್ಯುಟಿಯು ವಿವರಗಳನ್ನು ನೋಡುವ ಕಣ್ಣಿನ  ಶಕ್ತಿಯನ್ನು ಅಳೆಯುತ್ತದೆ. ವಿಷುಯಲ್ ಆಕ್ಯುಟಿಯು  ಸಾಧಾರಣವಾಗಿ 3 ಮೀಟರು, 6 ಮೀಟರು ಅಥವ 40ಸೆಂಟಿ ಮೀಟರು ದೂರದಲ್ಲಿರುವ ಪಟಗಳನ್ನುಬಳಸುವುದು. ಅದರಲ್ಲಿ  ಅಕ್ಷರಗಳು, ಸಂಖ್ಯೆಗಳು ಅಥವಾ ಆಕೃತಿಗಳು ವಿಭಿನ್ನ ಅಳತೆಯಲ್ಲಿರುವವು.  ಸ್ನೆಲ್ಲುನ್ ಚಾರ್ಟ ಉಪಯೋಗಿಸಿ ಕೆಳಗಿನ ಟೇಬಲ್ಲಿನಲ್ಲಿರುವ ವಿವಿಧ ಗುಂಪುಗಳನ್ನು ನೋಡಬಹುದು.

ಕಡಿಮೆ ದೃಷ್ಟಿಯ ನಿರೂಪಣೆ

ಕಡಿಮೆ ದೃಷ್ಟಿಯ ಸ್ಥಿತಿ ಎಂದರೆ ಅವರ ದೃಷ್ಟಿಯನ್ನು ಕನ್ನಡಕ ಧರಿಸಿ , ಕ್ರಮವಾಗಿ ಚಿಕಿತ್ಸೆ ಪಡೆದರೂ 6/ 18 ಗಿಂತ ಕಡಿಮೆ ಇರುವುದು. ಆದರೂ ಅ ವ್ಯಕ್ತಿಯ ಉಳಿದಿರುವ ದೃಷ್ಟಿಯನ್ನು ಗರಿಷ್ಟವಾಗ ಬಳಸಲು ಮ್ಯಾಗ್ನಿಫಯರ್ ಮತ್ತು ಟೆಲಿಸ್ಕೋಪುಗಳನ್ನು ಉಪಯೋಗಿಸಬೇಕು. ಒಬ್ಬ ವ್ಯಕ್ತಿಯು ಕಡಿಮೆ ಆದರೆ ಕಾಯ್ನವ್ಹಿಸಬಹುದಾದ ದೃಷ್ಟಿಯನ್ನು ಹೊಂದಿದ್ದರೆ, ಅವು /ಅವಳು ದೃಷ್ಟಿಯನ್ನುನಿಧಿಷ್ಟ ಉದ್ದೇಶಕ್ಕೆ ಬಳಸಬಹುದು. ಅತ ಕಡಿಮೆ ಪ್ರಮಾಣದ ದೃಷ್ಟಿಯು ಉಪಯುಕ್ತವಾಗುವುದು.ಉದಾ: ಹತ್ತಿರದಿಂದ ವ್ಯಕ್ತಿಗಳನ್ನು ಗುರುತಿಸುವುದು, ಅಥವ ಡಿಕ್ಕಿಹೊಡೆಯುವುದನ್ನು ತಪ್ಪಿಸಿಕೊಳ್ಳಬಹುದು. ದೃಷ್ಟಿಯು ಎಷ್ಟು ಉಪಯುಕ್ತ ಎಂಬುದು ಆವ್ಯಕ್ತಿಯ ವೈಯುಕ್ತಿಕ ಅನುಭವದ ಮೇಲೆ ಮತ್ತು ಅವನು ಅದನ್ನು ಪರಿಣಾಮಕಾರಿಯಾಗು ಬಳಸಲು ತರಬೇತಿ ಪಡೆದಿದ್ದಾನೆಯೆ ಎಂಬದನ್ನು ಆಧರಿಸಿದೆ.ಅಲ್ಲದೆ ಅದು ಹೊರಗಿನ ಅಂಶಗಳಾದ ಬೆಳಕು ಮತ್ತು ವಸ್ತುಗಳ ಬಣ್ಣವನ್ನೂ ಅವಲಂಬಿಸಿದೆ.


ವರ್ಗ

ಸರಿ ಇರುವ ಕಣ್ಣಿನಲ್ಲಿರುವ  ಇರುವ ದೃಷ್ಟಿ

ವಿಶ್ವ ಆರೋಗ್ಯ ಸಂಸ್ಥೆಯ ನಿರೂಪಣೆ

ಭಾರತೀಯ ನಿರೂಪಣೆ

0

1

2

3

4

5

6/6  -  6/18

; 6/18  - 6/60
; 6/60  -  6/120
3/60  - 1/60 ಅರ ಓ ಏನ್ ಜಿ  1-60 – ಪಿ ಎಲ್ 
ಬೆಳಕಿನ ಅನುಭವ ಆಗುವುದಿಲ್ಲ


ಬೆಳಕಿನ ಅನುಭವ ಆಗುವುದಿಲ್ಲ
(ಏನ್ ಪಿ ಎಲ್ )

ಸಾಮಾನ್ಯ
ದೃಷ್ಟಿದೋಷ

ತೀವ್ರ ದೃಷ್ಟಿದೋಷ
ಕುರುಡು
ಕುರುಡು
ಕುರುಡು

ಸಾಮಾನ್ಯ ದೃಷ್ಟಿದೋಷ

ಕುರುಡು
ಕುರುಡು

ಕುರುಡು

ಕುರುಡು

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/26/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate