অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯಾನ್ಸರ್

ಕ್ಯಾನ್ಸರ್ ಎಂದರೇನು ?

ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವ ಸಂಬಂಧಿಸಿದ ಅನೇಕ ರೋಗಗಳ ಗುಂಪು. ಜೀವ ಕೋಶವು ದೇಹವೆಂಬ ಕಟ್ಟಡದ ಇಟ್ಟಿಗೆ ಇದ್ದಹಾಗೆ. ಕ್ಯಾನ್ಸರ್ ಅರ್ಥ ಮಾಡಿಕೊಳ್ಳಲು, ಸಮಾನ್ಯ ಜೀವಕೋಶದಲ್ಲಿ ಕ್ಯಾನ್ಸರ್ ಆದಾಗ ಏನಾಗುತ್ತದೆ ಎಂಬುದನ್ನು ತಿಳಿಯುವುದು ಅಗತ್ಯ. ದೇಹವು ಅನೇಕ ವಿಧದದ ಜೀವಕೋಶಗಳಿಂದ ಮಾಡಿರುವುದಾಗಿದೆ. ಕೋಶಗಳು ವಿಭಜನೆ ಹೊಂದಿ ಹೆಚ್ಚು ಹೆಚ್ಚು ಜೀವ ಕೋಶಗಳನ್ನು ಉತ್ಪಾದಿಸುವವು. ಅದರಿಂದ ದೇಹವು ಆರೋಗ್ಯ ಪೂರ್ಣವಾಗಿರುವುದು. ಕೆಲವು ಸಲ ಈ ಕ್ರಮವಾದ ಪ್ರಕ್ರಿಯೆಯು ತಪ್ಪಾಗುವುದು. ದೇಹಕ್ಕೆ ಅಗತ್ಯವಿಲ್ಲದಿದ್ರೂ ಹೊಸ ಜೀವಕೋಶಗಳು ಹುಟ್ಟುತ್ತವೆ. .ಹಳೆಯ ಜೀವಕೋಶಗಳು ಅವುಗಳ ಜೀವಾವಧಿ ಮುಗಿದಾಗಲೂ ಸಾಯುವುದಿಲ್ಲ. ಈ ಹೆಚ್ಚುವರಿ ಜೀವಕೋಶಗಳು ಒಟ್ಟಾಗಿ ಅಂಗಾಂಶಗಳ ಗಡ್ಡೆ (ದುರ್ಮಾಂಸ ) ರಚನೆಯಾಗುತ್ತವೆ ಆದರೆ ಎಲ್ಲ ಗಡ್ಡೆಗಳು ಕ್ಯಾನ್ಸರ್ ಅಲ್ಲ. ಗಡ್ಡೆಯು ನಿರಪಾಯಕಾರಿ ಅಥವ ಅಪಾಯಕಾರಿಯಾಗಿರಬಹುದು.ನಿರಪಾಯಕಾರಿ ಗಡ್ಡೆಗಳಲ್ಲಿನ ಜೀವಕೋಶಗಳು.-.ನಿರಪಾಯಕಾರಿ ಗಡ್ಡೆಗಳು ಕ್ಯಾನ್ಸರ್ ಅಲ್ಲ.. ಅವುಗಳನ್ನು ಬಹುಮಟ್ಟಿಗೆ ತೆಗೆದುಹಾಕಬಹುದು. ಅವು ಬಹುತೇಕ ಮರುಕಳೀಸುವುದಿಲ್ಲ., ದೇಹದ ಇನ್ನೊಂದು ಭಾಗಕ್ಕೆ ಹರಡುವುದಿಲ್ಲ . ಎಲ್ಲಕ್ಕಿಂತ ಮುಖ್ಯವಾಗಿ ಅವುಗಳಿಂದ ಜೀವ ಭಯ ಇಲ್ಲ. ಕೆಡುಕು ಮಾಡುವ ಗಡ್ಡೆಗಳು ಕ್ಯಾನ್ಸರ ತರುತ್ತುವೆ. ಅವು ಅಸಹಜವಾಗಿದ್ದು ನಿಯಂತ್ರಣ ಅಥವ ಕ್ರಮವಿಲ್ಲದೆ ಬೆಳೆಯುತ್ತವೆ . ಕ್ಯಾನ್ಸರ್ ಕೋಶಗಳು ತಮ್ಮ ಸುತ್ತಲಿನ ಜೀವಕೋಶಗಳ ಮೇಲೆ ದಾಳಿಮಾಡಿ ಅವುಗಳನ್ನು ನಾಶಮಾಡುತ್ತವೆ. ಅವು ಅಪಾಯಕಾರಿ ಗೆಡ್ಡೆಯಿಂದ ಬೇರ್ಪಟ್ಟು ರಕ್ತ ಪ್ರವಾಹವನ್ನು ಅಥವ ಲಿಂಫಟಿಕ್ ವ್ಯವಸ್ಥೆಯನ್ನು ಪ್ರವೇಶಿಸುವವು. ರಕ್ತನಾಳಗಳು ಎಂದರೆ ರಕ್ತ ಹರಿಯುವ ಎಲ್ಲ ಅಪಧಮನಿ (ಆರ್ಟರಿ)ಗಳ, ಸಿರೆ (ವೇನ್) / ರಕ್ತನಾಳ ಗಳ ಮತ್ತು ಲೋಮನಾಳ (ಕ್ಯಾಪಿಲರಿ) ಗಳ ಜಾಲ,.ಲಿಂಫಟಿಕ್ ವ್ವಸ್ಥೆಯು ಲಿಂಫ್ ಅನ್ನು ಮತ್ತು ಬಿಳಿರಕ್ತಕಣಗಳನ್ನು ಲಿಂಫ್ ನಾಳಗಳ ( ತೆಳುವಾದ) ಮೂಲಕ ದೇಹದ ಎಲ್ಲ ಅಂಗಾಂಶಗಳಿಗೆ ಸರಬರಾಜು ಮಾಡುವುದು. ರಕ್ತಪ್ರವಾಹ ಮತ್ತು ಲಿಂಫ್ ಪ್ರವಾಹದಲ್ಲಿ ಸೇರಿ ಕ್ಯಾನ್ಸರ್ ಜೀವ ಕೋಶಗಳು ಮೂಲ ( ಪ್ರಾಥಮಿಕ) ಕ್ಯಾನ್ಸರ್ ಆದ ಸ್ಥಳದಿಂದ ಬೇರೆ ಕಡೆ ಹೋಗಿ ಹೊಸ ಗಡ್ಡೆಗಳನ್ನುಇತರ ಅಂಗಾಂಗಳಲ್ಲಿ ಉಂಟು ಮಾಡುವುದು.. ಈ ರೀತಿ ಹರಡುವ ಕ್ಯಾನ್ಸರನ್ನು ಮೆಟಾಸ್ಟಸಿಸ್ ಎನ್ನುವರು.

ಕ್ಯಾನ್ಸರ್ ಗೆ ಕಾರಣಗಳೇನು? ಕ್ಯಾನ್ಸರ್ ಹೇಗೆ ಬರುವುದದು?

ವಿಜ್ಞಾನಿಗಳು ಸಾಮಾನ್ಯವಾಗಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ಮತ್ತು ಸಾವನ್ನು ನಿಯಂತ್ರಿಸುವ ವಂಶವಾಹಿಳಗಲ್ಲಿ ಆಗುವ ಬದಲಾವಣೆಗಳಿಂದ ಉಂಟಾಗುವುದು ಎಂದು ಕಂಡುಕೊಂಡಿದ್ದಾರೆ. ಕೆಲವು ಬಗೆಯ ಜೀವನ ಶೈಲಿ ಮತ್ತು ಪರಿಸರದ ಪರಿಣಾಮಗಳೂ ಸಾಮಾನ್ಯ ವಂಶವಾಹಿನಿಗಳನ್ನು ಕ್ಯಾನ್ಸರ್ ಗೆ ತುತ್ತಾಗಬಹುದಾದ ವಂಶವಾಹಿನಿಗಳಾಗಿ ಬದಲಾಯಿಸುತ್ತವೆ. ಕ್ಯಾನ್ಸರ್ ತರುವ ವಂಶವಾಹಿನಿಗಳಲ್ಲಿನ ಹಲವು ಬದಲಾವಣೆಗಳು ತಂಬಾಕು, ಅಸಮರ್ಪಕ ಆಹಾರ, ದೇಹದ ಮೇಲೆ ಬೀಳುವ ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ ವಿಕಿರಣಗಳು ಹಾಗೂ, ಕೆಲಸ ಮಾಡುವ ಸ್ಥಳದಲ್ಲಿನ ಕ್ಯಾನ್ಸರ್ ಉಂಟುಮಾಡುವ ವಸ್ತುಗಳ ಸಂಪರ್ಕಕ್ಕೆ ಬರುವುದು ಕ್ಯಾನ್ಪರಿಗೆ ಕಾರಣ ಎಂದು ತಿಳಿಯಲಾಗಿದೆ. ಕೆಲವು ಸಲ ಈ ವಂಶ ವಾಹಿನಿಗಳ ಬದಲಾವಣೆಗಳ ಗುಣವು ತಾಯಿ , ತಂದೆಯರಲ್ಲಿ ಯಾರೊಬ್ಬರಿಂದಲೂ ಅನುವಂಶಿಕವಾಗಿ ಬಂದಿರಬಹುದಾಗಿದೆ. ಆದರೆ ಅನುವಂಶಿಕವಾಗಿದ್ದರೂ ಅವರಿಗೆ ಕ್ಯಾನ್ಸರ್ ಬಂದೇ ಬರುವುದು ಎಂದು ಹೇಳಲಾಗದು. ವಿಜ್ಞಾನಿಗಳು ಮಾನವನಲ್ಲಿ ಕ್ಯಾನ್ಸರ್ ಹೆಚ್ಚುಮಾಡುವ ಇಲ್ಲವೆ ಕಡಿಮೆಮಾಡುವ ಅಂಶಗಳ ಬಗ್ಗೆ ಅಧ್ಯಯನವನ್ನು ನಡೆಸಿದ್ದಾರೆ ಕೆಲವು ವಿಧದ ವೈರಾಣು (ವೈರಸ್ಸು) ಗಳಿಂದಲೂ, ಹ್ಯೂಮನ್ ಪ್ಯಾಪಿಲ್ಲೊಮ ವೈರಸ್(HPV) B ಮತ್ತು C (Hep B ಮತ್ತು C) ಹ್ಯುಮನ್ ಇಮ್ಯುನೊ ಡಿಫಿಷಿಯನ್ಸಿ(HIV) ಮೊದಲಾದವುಗಳು ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚು ಮಾಡುತ್ತವೆ. ಕ್ಯಾನ್ಸರ್ ಸಂಕ್ರಾಮಿಕ ರೋಗವಲ್ಲ. ರೋಗವಿರುವ ಒಬ್ಬರಿಂದ ಅದು ಇತರಿಗೆ ಹರಡುವುದಿಲ್ಲ. ವಿಜ್ಞಾನಿಗಳು ಗಾಯ ಅಥವ ಮೂಕ ಪೆಟ್ಟು ಕ್ಯಾನ್ಸರಿಗೆ ಕಾರಣವಾಗದು ಎಂದು ಕಂಡು ಹಿಡಿದಿದ್ದಾರೆ

ಕ್ಯಾನ್ಸರನ್ನು ತಡೆ ಗಟ್ಟು ಬಹುದೇ?

ಕ್ಯಾನ್ಸರನ್ನು ತಡೆಯಲು ಖಾತ್ರಿಯಾದ ಯಾವುದೆ ವಿಧಾನವಿಲ್ಲದಿದ್ದರೂ, ಜನರು ಅದರ ಸಂಭವನೀಯತೆಯ ಅಪಾಯವನ್ನು ಕೆಳಗೆ ತಿಳಿಸಿದ ಕ್ರಮಗಳಿಂದ ಕಡಿಮೆಮಾಡಿಕೊಳ್ಳಬಹುದು

  • ತಂಬಾಕು ಮತ್ತು ಅದರಿಂದ ತಯಾರಿಸಿದ ಪದಾರ್ಥಗಳನ್ನು ಬಳಸಬೇಡಿ.
  • ಕಡಿಮೆ ಕೊಬ್ಬಿರುವ ಆಹಾರ, ಹಣ್ಣು ತರಕಾರಿ, ಕಾಳುಗಳನ್ನು ಹೆಚ್ಚಾಗಿ ಸೇವಿಸಿ.
  • ನಿಯಮಿತವಾಗಿ ವ್ಯಾಯಾಮ ಮಾಡಿ
  • ಸೂರ್ಯನ ಅಪಾಯಕಾರಿ ವಿಕಿರಣಗಳಿಂದ ದೂರವಿರಬೇಕು. ಮತ್ತು ದೇಹದ ಚರ್ಮವನ್ನು ಪೂರ್ಣವಾಗಿ ಮುಚ್ಚುವಂತೆ ಬಟ್ಟೆ ಧರಿಸಿ.
  • ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಗುಣವಿರುವ ಕೆಲವು ಔಷಧಗಳನ್ನು ಕುರಿತು ನಿಮ್ಮ ವೈದ್ಯರೊಡನೆ ಚರ್ಚಿಸಿ.

ಕ್ಯಾನ್ಸರಿನ ಸಾಮಾನ್ಯನೆ ಚಿಹ್ನೆ ಮತ್ತು ಲಕ್ಷಣಗಳು ಯಾವು?

ಕ್ಯಾನ್ಸರ್ ವಿಭಿನ್ನವಾದ ಲಕ್ಷಣಗಳನ್ನು ಹೊಂದಿದೆ. ಕ್ಯಾನ್ಸರ್ ಹೊರ ಹಾಕಬಹುದಾದ ಚಹ್ನೆಗಳು ಈ ರೀತಿಇವೆ.

  • ಸ್ಥನದಲ್ಲಿ ಹೊಸದಾದ ಗಟ್ಟಿಯಾದ ಭಾಗ ಅಥವ ಗಂಟು, ದೇಹದ ಯಾವುದೆ ಭಾಗದಲ್ಲಿ ಗಂಟು
  • ಹೊಸ ನರಹುಲಿ ಅಥವ ಮಚ್ಚೆ , ಈಗಾಗಲೆ ಇರುವುದರ ಹೊರ ನೋಟದ ಬದಲಾವಣೆ.
  • ವಾಸಿಯಾಗದ ವ್ರಣ
  • ಕಡಿಮೆಯಾಗದ ಕೆಮ್ಮು ಅಥವ ಗೊಗ್ಗರು ದನಿ
  • ಮಲ ಅಥವ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ
  • ಸತತ ಅಜೀರ್ಣ ಮತ್ತು ನಗುವಾಗ ನೋವು
  • ವಿವರಣೆಗೆ ಹೊರತಾದ ತೂಕದಲ್ಲಿನ ಬದಲಾವಣೆ..
  • ಅಸಾಧಾರಣ ರಕ್ತ ಸ್ರಾವ ಅಥವ ಇತರ ಸ್ರಾವ

ಕ್ಯಾನ್ಸರ್ ನ ಚಿಕಿತ್ಸೆ ಮಾಡುವುದು ಹೇಗೆ?

ಕ್ಯಾನ್ಸರನ್ನು ಗುಣಮಾಡಲು ಶಸ್ತ್ರ ಕ್ರಿಯೆ, ವಿಕಿರಣ ಚಿಕಿತ್ಸೆ, ಔಷಧಿ ಚಿಕಿತ್ಸೆ, ಹಾರ್ಮೋನು ಚಿಕಿತ್ಸೆ, ಜೈವಿಕ ಚಿಕಿತ್ಸೆಗಳನ್ನು ಮಾಡಬಹುದು. ರೋಗದ ವಿಧ, ರೋಗವಿರುವ ತಾಣ, ಅದು ಹರಡಿರುವ ಪ್ರಮಾಣ , ರೋಗಿಯ ವಯಸ್ಸು, ಮತ್ತು ರೋಗಿಯ ಆರೋಗ್ಯ ಮತ್ತು ಇತರ ಅಂಶಗಳನ್ನು ಗಮನಿಸಿ ಒಂದು ಅಥವ ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಒಟ್ಟಿಗೆ ಸೇರಿಸಿ ಚಿಕಿತ್ಸೆ ಮಾಡಬಹುದು. ಏಕೆಂದರೆ ಕ್ಯಾನ್ಸರ್ ನ ಚಿಕಿತ್ಸೆಯು ಸಹಾ ಆರೋಗ್ಯವಂತ ಜೀವಕೋಶಗಳಿಗೆ ನಾಶ ಮಾಡುತದೆ. ಇದು ಪಾರ್ಶ್ವ ಪರಿಣಾಮಗಳನ್ನು ಉಂಟು ಮಾಡುವುದು .ಕೆಲವು ಜೀವಕೋಶಗಳನ್ನು ನಾಶ ಮಾಡುತ್ತವೆ.. ಕೆಲವು ರೋಗಿಗಳೂ ರೋಗಕ್ಕಿಂತ ಅಡ್ಡಪರಿಣಾಮವೆ ಹೆಚ್ಚು ಹಾನಿಕಾರಿ ಎಂದುಕೊಳ್ಳುವರು. ಹಾಗಿದ್ದರೂ ವೈದ್ಯರು ಮತ್ತು ರೋಗಿಯೂ ಪರ್ಯಾಯ ಚಿಕಿತ್ಸೆಯ ಅವಕಾಶಗಳ ಬಗ್ಗೆ ಸಮಾಲೋಚನೆ ಮಾಡುವರು.ಅವುಗಳ ಕ್ಯಾನ್ಸರ್ ಪೀಡಿತ ಜಿವಕೋಶಗಳನ್ನು ಕೊಲ್ಲುವ ಸಾಮಾರ್ಥ್ಯ ಅದರ ಅಡ್ಡ ಪರಿಣಾಮಗಳು ಮಾಡಬಹುದಾದ ಅಪಾಯವನ್ನು ಪರಿಶೀಲಿಸುವರು.ವೈದ್ಯರು ಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರ ಬರಬಹುದಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಇಲ್ಲವೆ ನಿವಾರಿಸಲು ಸಲಹೆ ನೀಡುವರು.ಶಸ್ತ್ರ ಚಿಕಿತ್ಸೆಯು ಕ್ಯಾನ್ಸರ್ ಅನ್ನು ತೆಗೆದು ಹಾಕಲು ಮಾಡುವ ಶಸ್ತ್ರಕ್ರಿಯೆ. ಇದರ ಅಡ್ಡ ಪರಿಣಾಮಗಳು ಅನೇಕ ಅಂಶಗಳನ್ನು ಅವಲಂಬಿಸಿವೆ ಗಡ್ಡೆಯ ಗಾತ್ರ, ಅದು ಇರುವ ಜಾಗ, ಮಾಡಿದ ಶಸ್ತ್ರಕ್ರಿಯೆಯ ವಿಧಾನ, ರೋಗಿಯ ಆರೋಗ್ಯ ಮುಖ್ಯವಾಗಿವೆ.ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಸ್ವಲ್ಪ ನೋವು ಇರುವುದು.ಅದನ್ನು ಔಷಧಿಗಳಿಂದ ಹತೋಟಿಗೆ ತರಬಹುದು. ಶಸ್ತ್ರಕ್ರಿಯೆಯ ನಂತರ ಕೆಲವು ರೋಗಿಗಳು ದುರ್ಬಲರಾಗುವರು, ಸುಸ್ತಾಗುವುದು ಸಾಮಾನ್ಯ. ರೋಗಿಗಳು ಬಯಾಪ್ಸಿ ಅಥವ ಇತರೆ ಯಾವುದೆ ರೀತಿಯ ಶಸ್ತ್ರ ಚಿಕಿತ್ಸೆಮಾಡಿಸಿದರೆ ಕ್ಯಾನ್ಸರ್ ಹರಡುವುದೆಂದು ಚಿಂತೆ ಮಾಡುವರು. ಇದು ಬಹಳ ವಿರಳವಾಗಿ ಆಗುವ ಘಟನೆ. ವೈದ್ಯರು ಚಿಕಿತ್ಸೆಯ ಸಮಯದಲ್ಲಿ ರೋಗ ಹರಡದಂತೆ ವೀಶೆಷ ರೀತಿಯ ಮುನ್ನೆಚ್ಚರಿಕೆ ತೆಗದು ಕೊಳ್ಳುವರು . ಅಲ್ಲದೆ ಕ್ಯಾನ್ಸರನ್ನು ಚಿಕಿತ್ಸೆಯ ಸಮಯದಲ್ಲಿ ಗಾಳಿಗೆ ಒಡ್ಡುವುದರಿಂದ ಅದು ಹರಡಲು ಅವಕಾಶವಿಲ್ಲ.ವಿಕಿರಣ ಚಿಕಿತ್ಸೆಯು( ರೇಡಿಯೋ ಥೆರಪಿ) ಹೆಚ್ಚು ಶಕ್ತಿಯ ಕಿರಣಗಳನ್ನು ಉಪಯೋಗಿಸಿ ನಿಗದಿತ ಗಡ್ಡೆಯಿರುವ ಸ್ಥಳದಲ್ಲಿ ಗುರಿಯಿಟ್ಟು ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವರು. ಹೊರಗಿನಿಂದ ಯಂತ್ರದ ಮೂಲಕ ನಿಗದಿತ ಸ್ಥಳಕ್ಕೆ ಗುರಿಯಿಟ್ಟು ಅವುಗಳನ್ನು ನೀಡಬಹುದು. ಇದನ್ನು ಅಂತರಿಕವಾಗಿಯೂ ಕೊಡಬಹುದು. ರೇಡಿಯೋ ಆ್ಯಕ್ಟಿವ್ ವಸ್ತುಗಳು ಲೇಪಿತವಾದ ಸೂಜಿಗಳು, ಬೀಜಗಳು, ತಂತಿಗಳನ್ನು ನೇರವಾಗಿ ಗಡ್ಡೆಯೊಳಗೆ ಅಥವ ಹತ್ತಿರವಿಡುವರು. ರೇಡಿಯೋ ಥೆರಪಿಯು ಬಹು ಮಟ್ಟಿಗೆ ನೋವು ರಹಿತ. ಅಡ್ಡ ಪರಿಣಮಗಳು ಸಾಧಾರಣವಾಗಿ ತಾತ್ಕಾಲಿಕ. ಬಹುಮಟ್ಟಿಗೆ ಅವುಗಳನ್ನು ಗುಣ ಪಡಿಸಬಹುದು ಇಲ್ಲವೆ ನಿಯಂತ್ರಿಸಬಹುದು. ರೋಗಿಗಳು ಚಿಕಿತ್ಸೆಯ ನಂತರ ಬಹಳ ಸುಸ್ತಾಗುವರು.ವಿಶೇಷವಾಗಿ ಚಿಕಿತ್ಸೆಯ ಕೊನೆಯ ಹಂತದ ವಾರಗಳಲ್ಲಿ ರೇಡಿಯೇಷನ್ ಥೆರಪಿಯು ದೇಹದ ಸೋಂಕನ್ನು ನಿವಾರಿಸಲು ಹೋರಾಡುವ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುವದು..ಬಾಹ್ಯ ರೇಡಿಯೇಷನ್ ನಿಂದ ಕೂದಲು ತಾತ್ಕಲಿಕವಾಗಿ ಸಾಮಾನ್ಯವಾಗಿ ನಷ್ಟವಾಗುತ್ತವೆ. ಚರ್ಮವು ಕೆಂಪಾಗುವುದು, ಒಣಗುವುದು, ತುರಿಕೆಯಾಗುವು, ಸಾಧ್ಯತೆಯಿದೆ ಬಾಹ್ಯ ರೇಡಿಯೇಷನ್ ಥೆರಪಿ ಪಡೆಯುತ್ತಿರುವ ರೋಗಿಯ ಸಂಪರ್ಕದಿಂದ. ಇತರರಿಗೆ ವಿಕಿರಣ ಹರಡಿ ಪರಿಣಾಮವಾಗುವ ಅಪಾಯವಿಲ್ಲ. ಬಾಹ್ಯ ರೇಡಿಯೇಷನ್ ಚಿಕಿತ್ಸೆಯಿಂದ ರೋಗಿಯ ದೇಹವು ರೇಡಿಯೋ ಆ್ಯಕ್ಟಿವ್ ಆಗುವುದಿಲ್ಲ. ಆಂತರಿಕ ರೇಡಿಯೇಷನ್ ಚಿಕೆತ್ಸೆಗಾಗಿ ರೋಗಿಯು ಆಸ್ಪತ್ರೆಯಲ್ಲಿಯೇ.( ಇಂಪ್ಲಾಂಟ್ ರೇಡಿಯೇಷನ್ ಎನ್ನುವರು) ತನ್ನವರಿಂದ ದೂರವಾಗಿ ಇರಬೇಕಾಗುವುದು. ಅದೂ ರೆಡಿಯೇಷನ್ ಮಟ್ಟವು ಆತನಲ್ಲಿ ಹೆಚ್ಚಾಗಿದ್ದಾಗ ಮಾತ್ರ. ಇಂಪ್ಲಾಂಟ್ ಶಾಶ್ವತ ಅಥವ ತಾತ್ಕಾಲಿಕವಾಗಿರಬಹುದು. ಶಾಶ್ವತ ಇಂಪ್ಲಾಂಟ್ ಆದವರ ದೇಹದ ರೇಡಿಯೇಷನ್ ಮಟ್ಟವು ಕ್ರಮೇಣ ಕಡಿಮೆಯಾಗಿ ಅವರು ಆಸ್ಪತ್ರೆ ಬಿಡುವ ವೇಳೆಗೆ ಸುರಕ್ಷಿತ ಹಂತಕ್ಕೆ ಬಂದಿರುವುದು. ತಾತ್ಕಾಲಿಕ ಇಂಪ್ಲಾಂಟಿನ ಪ್ರಕರಣದಲ್ಲಿ ಅವರ ದೇಹದಿಂದ ಅಳವಡಿಸಿದ ಇಂಪ್ಲಾಂಟನ್ನು ತೆಗೆದ ಮೇಲೆ ದೇಹವು ವಿಕಿರಣ ಶೀಲವಾಗಿರುವುದಿಲ್ಲ. ಕೆಮಿಯೋ ಥೆರಪಿ ಯು ದೇಹದಲ್ಲಿ ಎಲ್ಲ ಭಾಗಗಳಲ್ಲಿರುವ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಲು ಔಷಧಿಯನ್ನು ಉಪಯೋಗಿಸುವರು. ಇದರಿಂದ ಆರೋಗ್ಯವಂತ ಜೀವಕೋಶಗಳಿಗೂ ಹಾನಿಯಾಗಬಹುದು ವೀಶೇಷವಾಗಿ ತ್ವರಿತವಾಗಿ ವಿಭಜನೆಯಾಗುವ ಕೋಶಗಳು ನಾಶವಾಗುವವು. ವೈದ್ಯರು ಒಂದು ಔಷಧಿಯನ್ನು ಇಲ್ಲವೆ ಹಲವು ಔಷಧಿಗಳನ್ನು ಒಟ್ಟಿಗೆ ನೀಡಬಹುದು.ಅಡ್ಡ ಪರಿಣಾಮಗಳು ರೋಗಿಯು ತೆಗೆದು ಕೊಳ್ಳೂವ ಔಷಧಿ ಮತ್ತು ಅವುಗಳ ಪ್ರಮಾಣವನ್ನು ಅವಲಂಬಿಸಿದೆ. ಕೂದಲು ಉದುರುವುದು ಕೆಮಿಯೋ ಥೆರಪಿಯ ಸಾಮಾನ್ಯ ಅಡ್ಡ ಪರಿಣಾಮ. ಆದರೂ ಎಲ್ಲ ಕ್ಯಾನ್ಸರ್ ವಿರೋಧಿ ಔಷಧಿಗಳೂ ಕೂದಲು ಉದುರುವುದಕ್ಕೆ ಕಾರಣವಾಗುವುದಿಲ್ಲ. ಕ್ಯಾನ್ಸರ್ ವಿರೋಧಿ ಔಷಧಿಗಳು . ತಾತ್ಕಾಲಿಕ ಆಯಾಸ , ಹಸಿವು ತಗ್ಗಿಸುವುದು, ವಾಕರಿಕೆ, ವಾಂತಿ, ಅತಿಸಾರ ಭೇದಿ (ಡಯೆರಿಯಾ), ಬಾಯಿ ಮತ್ತು ತುಟಿ ಹುಣ್ಣುಗಳಿಗೆ ಕಾರಣವಾಗಬಹುದು. ವಾಕಿರಿಕೆ ಮತ್ತು ವಾಂತಿಯನ್ನು ತಗ್ಗಿಸುವ ಔಷಧಿಗಳು ತಕ್ಕಮಟ್ಟಿಗೆ ಕೆಲವು ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವವು. ಸಾಮಾನ್ಯ ಜೀವಕೋಶಗಳು ಕೆಮಿಯೋಥೆರಪಿಯು ಮುಗಿದ ಮೇಲೆ ಸಹಜ ಸ್ಥಿತಿಗೆ ಬರುವವು. ಆದ್ದರಿಂದ ಬಹುತೇಕ ಅಡ್ಡ ಪರಿಣಾಮಗಳು ಚಿಕಿತ್ಸೆ ಮುಗಿದ ನಂತರ ಸಾವಕಾಶವಾಗಿ ಕಡಿಮೆಯಾಗುವವು.ಹಾರ್ಮೋನ್ ಚಿಕಿತ್ಸೆ ಕೆಲವು ವಿಧದ ಕ್ಯಾನ್ಸರ್ ಗಳು ತಮ್ಮ ಬೆಳವಣಿಗೆಗೆ ಹರ್ಮೊನುಗಳ ಮೇಲೆ ಅವಲಂಬಿಸಿವೆ. ಅದನ್ನೆ ಕ್ಯಾನ್ಸರ್ ನ್ನು ಗುಣಮಾಡಲು ಬಳಸುವರು. ಅದು ಕ್ಯಾನ್ಸರ್ ಕೋಶಗಳು ತಾವು ಬೆಳೆಯಲು ಅಗತ್ಯವಾದ ಹಾರ್ಮೋನುಗಳನ್ನು ಪಡೆಯುವುದನ್ನು ತಡೆಯುವವು. ಸುಸ್ತಾಗವುದು. ದೇಹದಲ್ಲಿ ದ್ರವಗಳನ್ನು ಹೆಚ್ಚು ಉಳಿಸಿಕೊಳ್ಳಬಹುದು.ಈ ಔಷಧಿಯು ಕೆಲವು ಹರ್ಮೋನುಗಳ ಉತ್ಪಾದನೆಯನ್ನೆ ತಡೆಗಟ್ಟುತ್ತವೆ. ಇಲ್ಲವೆ ಅವು ಕೆಲಸ ಮಡುವ ವಿಧಾನವನ್ನೆ ಬದಲಿಸುತ್ತವೆ.ಇನ್ನೊಂದು ವಿಧಾನವೆಂದರೆ ಹಾರ್ಮೋನು ಉತ್ಪಾದಿಸುವ ಅಂಗವನ್ನೆ ಶಸ್ತ್ರಕ್ರಿಯೆಯ ಮೂಲಕ ತೆಗೆದು ಹಾಕುವುದು. ಉದಾಹರಣೆಗೆ- ಸ್ಥನ ಕ್ಯಾನ್ಸರನ್ನು ಗುಣ ಮಾಡಲು ಗರ್ಭಾಶಯವನ್ನೆ ತೆಗೆದು ಹಾಕುವರು. ಪ್ರೊಸ್ಟೇಟ್ ಕ್ಯಾನ್ಸರನ್ನು ಗುಣ ಪಡಿಸಲು ಟೆಸ್ಟಿಕಲ್ಸಅನ್ನು ತೆಗೆದು ಹಾಕುವರು. ಹಾರ್ಮೋನು ಥೆರಪಿಯು ಅನೇಕ ಅಡ್ಡ ಪರಿಣಾಮಗಳನ್ನು ತೋರಬಹುದು . ರೋಗಿಗೆ ಸುಸ್ತಾಗಬಹುದು ಅಥವ. ದೇಹದಲ್ಲಿ ದ್ರವಗಳನ್ನು ಹೆಚ್ಚು ಉಳಿಸಿಕೊಳ್ಳಬಹುದು. ಅದರಿಂದ ತೂಕ ಹೆಚ್ಚಾಗಬಹುದು.ಮೈ ಬಿಸಿಇರಬಹುದು.ವಾಕರಿಕೆ, ವಾಂತಿ, ಹಸಿವು ಆಗದಿರುವುದು, ಕೆಲವು ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಆಗುತ್ತದೆ. ಹಾರ್ಮೋನು ಥೆರಪಿಯು ಮುಟ್ಟು (ಮೆನೊ ಪಾಸ) ಪೂರ್ವದ ಅವಧಿಯ ಮಹಿಳೆಯರಲ್ಲಿ ಮೂಳೆ ನಷ್ಟಕ್ಕೂ ಕಾರಣವಾಗುವುದು. ಹಾರ್ಮೋನು ಥೆರಪಿಯ ವಿಧಾನವನ್ನು ಅನುಸರಿಸಿ ಅಡ್ಡಪರಿಣಾಮಗಳು ಉಂಟಾಗುವವು. ಅವುಗಳು ತಾತ್ಕಾಲಿಕ, ಹೆಚ್ಚು ಅವಧಿಯ ಅಥವ ಶಾಸ್ವತ ವಾದುದಾಗಿರಬಹುದು.ಜೈವಿಕ ಚಿಕಿತ್ಸೆಯು ದೇಹದ ನಿರೋಧ ವ್ಯವಸ್ಥೆಯನ್ನು ನೇರವಾಗಿಯೋ ಇಲ್ಲ ಪರ್ಯಾಯವಾಗಿಯೋ ಉಪಯೋಗಿಸುವುದು. ಮತ್ತು ಕ್ಯಾನ್ಸರಿನ ಅಡ್ಡ ಪರಿಣಾಮವನ್ನು ಕಡಿಮೆ ಗೊಳಿಸುವುದು.ಮನೊಕ್ಲೊನಲ್‌ ಆಂಟಿಬಾಡಿಗಳು,ಇಂಟರ್ ಫೆರಾನ್‌, ಇಂಟರ್ ಲ್ಯುಕಿನ್-2 ಮತ್ತು ಕಾಲೊನಿ ಪ್ರಚೋದಕ ಅಂಶಗಳು ಜೈವಿಕ ಚಿಕಿತ್ಸೆಯ ಕೆಲವು ವಿಧಗಳಾಗಿವೆ.ಜೈವಿಕ ಚಿಕಿತ್ಸೆಯ ಅಡ್ಡ ಪರಿಣಾಮಗಳು ನಿರ್ದಿಷ್ಟ ಚಿಕಿತ್ಸೆಗೆ ಅನುಗುಣವಾಗಿವೆ. ಚಿಕಿತ್ಸೆಯು ಸಾಮಾನ್ಯವಾಗಿ ಫ್ಲೂ ನಂತಹ ಚಿಹ್ನೆಗಳನ್ನು ತೋರುವುದು., ಚಳಿ, ಜ್ವರ, ಸ್ನಾಯು ನೋವು, ದುರ್ಬಲತೆ, ಹಸಿವು ಇಲ್ಲದಾಗುವುದು, ವಾಕರಿಕೆ , ವಾಂತಿ ಮತ್ತು ಅತಿಸಾರ ಭೇದಿ (ಡಯೇರಿಯಾ) ಆಗಬಹುದು. ರೋಗಿಗಳಿಗೆ ಸುಲಭವಾಗಿ ರಕ್ತಸ್ರಾವ , ಅಥವ ಗಾಯ ಅಗಬಹುದು. ಚರ್ಮದ ಮೇಲೆ ಗುಳ್ಳೆಗಳು ಅಥವ ಬಾವು ಇರಬಹುದು. ಈ ಸಮಸ್ಯೆಗಳು ತೀವ್ರವಾಗಿರತ್ತವೆ . ಆದರೆ ಚಿಕಿತ್ಸೆ ನಿಂತ ನಂತರ ತಾವೆ ಹೋಗುತ್ತವೆ..

ಕ್ಯಾನ್ಸರ್ ಯಾವಗಲೂ ನೋವಿನಿಂದ ಕೂಡಿರುವುದೇ?

ಕ್ಯಾನ್ಸರ್‌ ಇದೆ ಎಂದ ಮಾತ್ರಕ್ಕೆ ನೋವು ಇರಲೇಬೇಕೆಂದೇನೂ ಇಲ್ಲ. ರೋಗಿಗೆ ಯಾವ ಬಗೆಯ ಕ್ಯಾನ್ಸರ್‌ ಇದೆ ಎಂಬುದರ ಮೇಲೆ ನೋವು ಇದೆಯೇ ಇಲ್ಲವೇ, ರೋಗದ ತೀವ್ರತೆ ಮತ್ತು ರೋಗಿಯ ನೋವು ತಾಳಿಕೊಳ್ಳುವ ಗುಣದ ಮೇಲೆ ನಿರ್ಧರಿತವಾಗುತ್ತದೆ. ಕ್ಯಾನ್ಸರ್‌ ಬೆಳೆದು, ಮೂಳೆ, ಅಂಗ ಮತ್ತು ನರಗಳ ಮೇಲೆ ಒತ್ತಡ ಹೇರುವುದರಿಂದ ನೋವು ಉಂಟಾಗುತ್ತದೆ. ಅಲ್ಲದೆ ನೋವು ಚಿಕಿತ್ಸೆಯ ಅಡ್ಡಪರಿಣಾಮವೂ ಹೌದು. ವೈದ್ಯರು ಸಲಹೆ ನೀಡಿದ ಔಷಧೋಪಚಾರದಿಂದ ನೋವು ಶಮನವಾಗವಾಗಬಹುದು. ರಿಲ್ಯಾಕ್ಸೇಶನ್‌ ವ್ಯಾಯಾಮಗಳೂ ಕೂಡ ನೋವು ಶಮನ ಮಾಡಲು ನೆರವು ನೀಡಬಹುದು. ನೋವು ಕ್ಯಾನ್ಸರಿನ ಅವಿಭಾಜ್ಯ ಅಂಗ ಎಂದು ಒಪ್ಪಿಕೊಳ್ಳಬಾರದು. ನೊವಿನಬಗ್ಗೆ ರೋಗಿಗಳು ವೈದ್ಯರಲ್ಲಿ ಚರ್ಚಿಸುವುದರಿಂದ ನೋವು ನಿವಾರಿಸಲು ಕ್ರಮ ಕೈಗೊಳ್ಳಬಹುದು. ನೋವು ನಿವಾರಕಗಳ ಬಳಕೆ ಚಟವಾಗುವುದೆಂದು ಅಥವಾ ನಿಯಂತ್ರಣ ಕಳೆದುಕೊಳ್ಳುವ ಭಯದಿಂದ ನೋವು ನಿವಾರಕಗಳನ್ನು ತೆಗೆದುಕೊಳ್ಳುವುದನ್ನು ಬಿಡಬಾರದು. ವೈದ್ಯರ ಸಲಹೆಯ ಮೇರೆಗೆ ಕ್ಯಾನ್ಸರಿಗೆ ನೋವು ನಿವಾರಕಗಳನ್ನು ತೆಗೆದುಕೊಳ್ಳುವವರಿಗೆ ಔಷಧ ಅಡಿಕ್ಷನ್‌ ಆಗುವ ಸಾಧ್ಯತೆ ಕಡಿಮೆ. ಅಡ್ಡಪರಿಣಾಮಗಳಿಂದ ರೋಗಿ ತೊಂದರೆ ಅನುಭವಿಸುತ್ತಿದ್ದರೆ ಡೋಸೇಜ್‌ ಬದಲಿಸುವುದರಿಂದ ಸ್ವಲ್ಪ ಕಡಿಮೆಯಾಗಬಹುದು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate