ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಚರ್ಮ ರೋಗಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚರ್ಮ ರೋಗಗಳು

ವಿವಿಧ ಚರ್ಮ ರೋಗಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಹಿಮ್ಮಡಿ ಬಿರುಕು
ಹಿಮ್ಮಡಿ ಬಿರುಕು ಅಥವಾ ಒಡೆದ ಹಿಮ್ಮಡಿ ದೇಹ ಸೌಂದರ್ಯಕ್ಕೆ ಅಡ್ಡಿಯಾಗುವ ಸಣ್ಣ ಸಮಸ್ಯೆ. ಅಲ್ಲದೇ ಕಿರಿಕಿರಿ ತರುವ ವಿಚಾರ. ಆದರೆ, ಇದು ದೊಡ್ಡ ಆರೋಗ್ಯ ಸಮಸ್ಯಗಳಿಗೆ ದಾರಿ ಮಾಡಿಕೊಡಬಹುದು. ಹಿಮ್ಮಡಿಯ ಬುಡ ಹಾಗೂ ಹೊರತುದಿಯ ಚರ್ಮ ಗಟ್ಟಿಯಾದಾಗ, ಶುಷ್ಕವಾದಾಗ ಮತ್ತು ಹಲ್ಲೆ ಹಲ್ಲೆಯಾದಾಗ ಹಿಮ್ಮಡಿ ಬಿರುಕು ಬಿಡುತ್ತದೆ. ಬಿರುಕು ಆಳವಾದಲ್ಲಿ ಕೆಲವೊಮ್ಮೆ ನೋವು ಉಂಟು ಮಾಡಬಹುದು ಅಥವಾ ರಕ್ತ ಸುರಿಯಬಹುದು.
ಎಕ್ಸಿಮಾ- ರುತ್ತಿ
ಶುಷ್ಕ ಮತ್ತು ಪರೆ, ಪರೆಯಾದ ಹಾಗೂ ತುರಿಕೆಯುಂಟು ಮಾಡುವ ಚರ್ಮದ ಸ್ಥಿತಿಗೆ ಎಕ್ಸಿಮಾ ಎನ್ನುತ್ತಾರೆ.
ಚರ್ಮದ ಕಲೆಗಳು
ಮೂರು ತರಹದ ನ್ಯೂನತೆಯಿಂದ ಚರ್ಮ ಬಿಳಿಚಿಕೊಳ್ಳಬಹುದು ಅಥವಾ ಬಣ್ಣ ಕಳೆದುಕೊಳ್ಳಬಹುದು. ತೊನ್ನು (ವಿಟಿಲಿಗೊ), ಚರ್ಮಕ್ಕಾದ ಗಾಯ ಮಾಯುವಾಗ ಬಣ್ಣ ಕಳೆದುಕೊಳ್ಳುವುದು ಹಾಗೂ ಬಿಳಿಚುವಿಕೆ (ಅಲ್ಬಿನಿಸಂ).
ತೊನ್ನು
ತೊನ್ನಿನ ಕಲೆಗಳು ಚರ್ಮದ ಇತರ ಭಾಗಗಳಿಂದ ಎದ್ದು ಕಾಣುವಂತಿದ್ದು, ಹಾಲು ಬಿಳುಪಿನ ಬಣ್ಣದಲ್ಲಿ ಇರುತ್ತವೆ. ಚರ್ಮದ ಸಂವೇದನೆ ಹಾಗೂ ಮೇಲ್ಮೈ ಒಂದೇ ಸಹಜವಾಗಿ ಇರುತ್ತದೆ. ಚರ್ಮ ಪರೆ ಪರೆಯಾಗುವುದಿಲ್ಲ.
ಮೊಡವೆ
ಅಕ್ನೆ ವಲ್ಗಾರೀಸ್ ಅಥವಾ ಮೊಡವೆ ಸಹ ಚರ್ಮದ ದೋಷ
ತುರಿಗಜ್ಜಿ
ಸ್ಕೇಬಿಸ್ ಅಥವಾ ತುರಿಕಜ್ಜಿ ಎನ್ನುವ ಚರ್ಮದ ವ್ಯಾಧಿಯು ಸಾರ್ಕೋಪ್ಟಿಸ್ ಸ್ಕೇಬಿಯೈ ಎಂದು ಕರೆಯಲ್ಪಡುವ ಪರಾವಲಂಬಿ ಜೀವಿಯಿಂದ ಬರುತ್ತದೆ. ಇದು ಅತ್ಯಂತ ಸಣ್ಣದಾದ, ಸುಮಾರು 0.3 ಮಿ.ಮೀ. ಉದ್ದನೆಯ, ಕಜ್ಜಿ ಹುಳು ಎಂದು ಕರೆಯಲ್ಪಡುವ ಕೀಟವಾಗಿದೆ.
ಬೆರಳ ಸಿಪ್ಪೆ
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ ಚರ್ಮದಲ್ಲಿ ಕೂದಲಿಲ್ಲ ಅಲ್ಲದೇ ಈ ಭಾಗದ ಚರ್ಮ ತುಂಬಾ ತೆಳುವಾಗಿದೆ ಹಾಗೂ ಸೂಕ್ಷ್ಮಸಂವೇದಿಯಾಗಿದೆ.
ಪ್ರಖರ ಸೂರ್ಯನ ಪ್ರಭಾವ
ಈ ವಾರ ಸೂರ್ಯನ ಪ್ರಖರ ಕಿರಣಗಳು ಚರ್ಮದ ಮೇಲೆ ಮಾಡುವ ಪರಿಣಾಮಗಳನ್ನು ತಿಳಿದುಕೊಳ್ಳುವ. ಈ ಅರಿವು ಇದ್ದರೆ ಚರ್ಮವನ್ನು ಆರೈಕೆ ಮಾಡುವುದು ಸುಲಭವಾಗುತ್ತದೆ.
ತುರಿಕೆ
ಚರ್ಮದ ಸತ್ತ ಜೀವಕೋಶಗಳು ಉದುರಿದಂತೆ ಎನಿಸುತ್ತದೆ. ಕೈ ಆಡಿಸುತ್ತಲೇ ಇದ್ದಾಗ ಹಿತಾನುಭವ. ಬಿಟ್ಟರೆ ಚಡಪಡಿಕೆ. ಆದರೆ ಕೆರೆತ ಹೆಚ್ಚಿದಷ್ಟೂ ಚರ್ಮ ಕೆಂಪಾಗುತ್ತದೆ. ಗಾಯವಾಗುತ್ತದೆ. ಇದು ಸನ್‌ ಅಲರ್ಜಿ ಎಂದು ಕರೆಸಿಕೊಳ್ಳುತ್ತದೆ.
ನೇವಿಗೇಶನ್‌
Back to top