অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚರ್ಮದ ಕಲೆಗಳು

ಚರ್ಮದ ಬಿಳಿಚಿಕೊಳ್ಳುವುದರ ವಿಧಗಳೇನು?

ಮೂರು ತರಹದ ನ್ಯೂನತೆಯಿಂದ ಚರ್ಮ ಬಿಳಿಚಿಕೊಳ್ಳಬಹುದು ಅಥವಾ ಬಣ್ಣ ಕಳೆದುಕೊಳ್ಳಬಹುದು. ತೊನ್ನು (ವಿಟಿಲಿಗೊ), ಚರ್ಮಕ್ಕಾದ ಗಾಯ ಮಾಯುವಾಗ ಬಣ್ಣ ಕಳೆದುಕೊಳ್ಳುವುದು ಹಾಗೂ ಬಿಳಿಚುವಿಕೆ (ಅಲ್ಬಿನಿಸಂ).

ತೊನ್ನು (ವಿಟಿಲಿಗೊ)

ತೊನ್ನಿನ ಕಲೆಗಳು ಬಿಳಿಯದಾಗಿ ಬಣ್ಣ ರಹಿತವಾಗಿದ್ದು, ಬಹುತೇಕ ಸಮರೂಪದ್ದಾಗಿರುತ್ತವೆ. ಚರ್ಮಕ್ಕೆ ಬಣ್ಣ ನೀಡುವ ಮೆಲೆನೊಸೈಟ್‌ಗಳ ಕೊರತೆಯಿಂದ ಇದು ಆಗುತ್ತದೆ. ಈ ಕಲೆಗಳು ದೇಹದ ಒಂದೆರಡು ಕಡೆ ಆಗಬಹುದು ಅಥವಾ ಹಿಡೀ ದೇಹವನ್ನು ವ್ಯಾಪಿಸಬಹುದು. ತೊನ್ನು ವ್ಯಾಪಿಸಿರುವ ಪ್ರದೇಶದಲ್ಲಿರುವ ಕೂದಲು ಸಹ ವರ್ಣರಹಿತವಾಗಿರುತ್ತದೆ.

ಗಾಯ ಮಾಯುವಾಗ ಚರ್ಮ ಬಿಳಿಚಿಕೊಳ್ಳುವುದು

ಸುಟ್ಟ ಗಾಯ, ಚರ್ಮದ ಸೋಂಕು ಅಥವಾ ಕೆಲ ಊತಗಳು ಗುಣವಾಗುವ ಹಂತದಲ್ಲಿ ಚರ್ಮ ಬಿಳಿಯಾಗುತ್ತದೆ. ಆದರೆ, ತೊನ್ನಿನಲ್ಲಿ ಇದ್ದಷ್ಟು ಚರ್ಮ ಬಿಳಿಚಿಕೊಳ್ಳುವುದಿಲ್ಲ. ಕೆಲ ಸಂದರ್ಭಗಳಲ್ಲಿ ಚರ್ಮ ಮತ್ತೆ ಮೊದಲಿನ ಬಣ್ಣಕ್ಕೆ ತಿರುಗಬಹುದು.

ಬಿಳಿಚುವಿಕೆ (ಅಲ್ಬಿನಿಸಂ)

ಇದು ಅನುವಂಶೀಯವಾಗಿ ಬರುವ ದೋಷ. ಬಿಳಿಚುವಿಕೆ (ಅಲ್ಬಿನಿಸಂ) ಇರುವ ವ್ಯಕ್ತಿಗಳಲ್ಲಿ ಮೆಲನೊಸೈಟ್‌ಗಳು ಇರುತ್ತವೆ. ಆದರೆ ಅವು ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲನಿನ್ ಉತ್ಪತ್ತಿ ಮಾಡುವುದಿಲ್ಲ. ಅಲ್ಬಿನಿಸಂನಲ್ಲಿ ಹಲವು ಬಗೆಗಳು ಇವೆ. ಟೈರೊಸಿನಾಸ್ ನೆಗೆಟಿವ್ ಅಲ್ಬಿನಿಸಂನಲ್ಲಿ ಕೂದಲು ಬಿಳಿಯಾಗಿರುತ್ತದೆ. ಚರ್ಮ ಬಿಳಿಚಿಕೊಂಡಿರುತ್ತದೆ. ಕಣ್ಣುಗಳು ಗುಲಾಬಿ ಬಣ್ಣದಲ್ಲಿ ಇರುತ್ತವೆ. ಇದರಿಂದ ದೃಷ್ಟಿದೋಷ ಇರುತ್ತದೆ. ಈ ದೋಷ ಇರುವವರು ಸೂರ್ಯನ ಬೆಳಕಿಗೆ ಮೈಒಡ್ಡಬಾರದು. ತಂಪು ಕನ್ನಡಕ ಧರಿಸಬೇಕು. ಹಗಲು ಹೊತ್ತಿನಲ್ಲಿ ಎಸ್‌ಪಿಎಫ್ ಇರುವ ಸನ್‌ಸ್ಕ್ರೀನ್ ಕ್ರೀಮ್ ಹಚ್ಚಿಕೊಳ್ಳಬೇಕು. ಇವುಗಳಲ್ಲದೆ ಪಿಟಿರಿಯಾಸಿಸ್ ಎಂಬ ಮತ್ತೊಂದು ಬಗೆಯ ದೋಷ ಇರುವವರಲ್ಲೂ ಚರ್ಮ ಬಿಳಿಚಿಕೊಳ್ಳುತ್ತದೆ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate