অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೊಡವೆ

ಅಕ್ನೆ ವಲ್ಗಾರೀಸ್ ಅಥವಾ ಮೊಡವೆ ಸಹ ಚರ್ಮದ ದೋಷ

ಲಕ್ಷಣಗಳು

  • ಹದಿಹರೆಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಬೊಕ್ಕೆಗಳ ಸಂಖ್ಯೆ ಕಡಿಮೆಯಾದರೂ ೪೦ ವರ್ಷದವರೆಗೂ ಮೊಡವೆ ಕಾಣಿಸಿಕೊಳ್ಳಬಹುದು.
  • ಚರ್ಮ ಉಬ್ಬಿದ್ದು ಕೆಂಪಗಾಗಿರುತ್ತದೆ. ಕೀವು ತುಂಬಿರುತ್ತದೆ. ಹೆಚ್ಚಾಗಿ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ. ಬೆನ್ನು ಹಾಗೂ ಎದೆಯ ಮೇಲೂ ಮೊಡವೆ ಏಳುತ್ತದೆ.
  • ಕ್ರಮೇಣ ಚರ್ಮದ ಮೇಲೆ ಕಲೆ ಉಂಟಾಗಬಹುದು.
  • ನೋವು, ಎಳೆತ ಹಾಗೂ ತುರಿಸುವಿಕೆ ಕಾಣಿಸಿಕೊಳ್ಳಬಹುದು.
  • ಹೆಣ್ಣು ಮಕ್ಕಳಲ್ಲಿ ಋತುಸ್ರಾವಕ್ಕೆ ಮುನ್ನ ಸಮಸ್ಯೆ ಹೆಚ್ಚಬಹುದು.

ಕಾರಣಗಳು

  • ಮೊಡವೆಗೆ ನಿಜವಾದ ಕಾರಣ ಪತ್ತೆ ಹಚ್ಚಲು ಸಾಧ್ಯವಿಲ್ಲ. ಆಂಡ್ರೊಜನ್ ಹಾರ್ಮೋನ್‌ನಿಂದಾಗಿ ಕೆಲವರಲ್ಲಿ ಮೊಡವೆ ಏಳುತ್ತದೆ.
  • ಕೆರಾಟಿನ್ ಎಂಬ ಪ್ರೋಟಿನ್ ರೋಮದ್ವಾರಗಳನ್ನು ಒತ್ತುವುದರಿಂದ ವೈಟ್‌ಹೆಡ್ ಹಾಗೂ ಬ್ಲಾಕ್ ಹೆಡ್‌ಗಳು ಕಾಣಿಸಿಕೊಳ್ಳುತ್ತವೆ. ಒತ್ತರಿಸಿದ ಭಾಗದಲ್ಲಿರುವ ಗ್ರಂಥಿಗಳು ಜಿಗುಟಾದ ದ್ರವ್ಯ ಸ್ರವಿಸುತ್ತವೆ. ಈ ದ್ರವ್ಯ ಹಾಗೂ ಚರ್ಮದ ಕೋಶಗಳು ಒಟ್ಟಾಗಿ ಇರಲಾರದೇ ಸತ್ತುಹೋಗುತ್ತವೆ. ಈ ಸತ್ತ ಕಣಗಳು ರೋಮದ್ರವ್ಯದ ಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತವೆ. ಆ ಭಾಗ ಉಬ್ಬುತ್ತದೆ. ಉಬ್ಬುವಿಕೆ ಹೆಚ್ಚಾದಲ್ಲಿ ಒಡೆದು ಚರ್ಮದ ಬ್ಯಾಕ್ಟೀರಿಯಾಗಳು ಸೋಂಕು ಉಂಟು ಮಾಡುತ್ತವೆ. ಅದೇ ಮೊಡವೆ. ಅದು ಮತ್ತಷ್ಟು ಹಿಗ್ಗಿ ಸಿಸ್ಟ್ ರಚನೆಯಾಗುತ್ತದೆ.
  • ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಕ್ರೀಮ್ ಹಾಗೂ ಎಣ್ಣೆಗಳಿಂದಲೂ ಮೊಡವೆ ಏಳುತ್ತದೆ.
  • ಕೆಲ ಔಷಧಗಳು ಮೊಡವೆಗೆ ಕಾರಣವಾಗುತ್ತವೆ.
  • ಹೆಲ್ಮೆಟ್, ಮೊಬೈಲ್ ದೂರವಾಣಿ ಇತ್ಯಾದಿ ಪದೇಪದೇ ಮುಖದ ಚರ್ಮಕ್ಕೆ ಉಜ್ಜುತ್ತಿದ್ದಲ್ಲಿ ಮೊಡವೆ ಉಂಟಾಗಬಹುದು.

ಸರಳ ಪರಿಹಾರಗಳು

  • ಮೊಡವೆಗಳನ್ನು ಕೈಯಿಂದ ಮುಟ್ಟಿ, ಸೋಂಕುಂಟು ಮಾಡಬೇಡಿ.
  • ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
  • ಸೌಂದರ್ಯವರ್ಧಕಗಳನ್ನು ಹುಷಾರಾಗಿ ಬಳಸಿ
  • ಕೆಲವೊಮ್ಮೆ ನಿರ್ದಿಷ್ಟ ಆಹಾರ ಪದಾರ್ಥಗಳು ಸಹ ಮೊಡವೆ ಹೆಚ್ಚಲು ಕಾರಣವಾಗುತ್ತವೆ
  • ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate