অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿಮ್ಮಡಿ ಬಿರುಕು

ಹಿಮ್ಮಡಿ ಬಿರುಕು ಅಥವಾ ಒಡೆದ ಹಿಮ್ಮಡಿ ದೇಹ ಸೌಂದರ್ಯಕ್ಕೆ ಅಡ್ಡಿಯಾಗುವ ಸಣ್ಣ ಸಮಸ್ಯೆ. ಅಲ್ಲದೇ ಕಿರಿಕಿರಿ ತರುವ ವಿಚಾರ. ಆದರೆ, ಇದು ದೊಡ್ಡ ಆರೋಗ್ಯ ಸಮಸ್ಯಗಳಿಗೆ ದಾರಿ ಮಾಡಿಕೊಡಬಹುದು. ಹಿಮ್ಮಡಿಯ ಬುಡ ಹಾಗೂ ಹೊರತುದಿಯ ಚರ್ಮ ಗಟ್ಟಿಯಾದಾಗ, ಶುಷ್ಕವಾದಾಗ ಮತ್ತು ಹಲ್ಲೆ ಹಲ್ಲೆಯಾದಾಗ ಹಿಮ್ಮಡಿ ಬಿರುಕು ಬಿಡುತ್ತದೆ. ಬಿರುಕು ಆಳವಾದಲ್ಲಿ ಕೆಲವೊಮ್ಮೆ ನೋವು ಉಂಟು ಮಾಡಬಹುದು ಅಥವಾ ರಕ್ತ ಸುರಿಯಬಹುದು.

ಸಾಮಾನ್ಯವಾಗಿ ಶುಷ್ಕ ಚರ್ಮದಿಂದ (ಕ್ಸೆರಾಸಿಸ್) ಹಿಮ್ಮಡಿ ಒಡೆಯುತ್ತದೆ. ಹಿಮ್ಮಡಿಯ ಅಂಚು ದಪ್ಪವಾಗಿದ್ದಾಗ (ಕಾಲಸ್) ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ.

ಹಿಮ್ಮಡಿ ಬಿರುಕು (ಒಡೆದ ಹಿಮ್ಮಡಿ)

ಕಾರಣ

ಹಿಮ್ಮಡಿ ಬಿರುಕು ಯಾರಲ್ಲಾದರೂ ಕಾಣಿಸಿಕೊಳ್ಳಬಹುದು.

  • ಶುಷ್ಕ ಹವಾಮಾನದಲ್ಲಿ ವಾಸಿಸುತ್ತಿದ್ದಾಗ
  • ಬೊಜ್ಜು ಇದ್ದಾಗ
  • ಸದಾ ಬರಿಗಾಲಲ್ಲಿ ನಡೆಯುತ್ತಿದ್ದಲ್ಲಿ ಅಥವಾ ಹಿಮ್ಮಡಿ ಬಳಿ ತೆರೆದಿರುವ ಚಪ್ಪಲಿ (ಸ್ಯಾಂಡಲ್‌) ಗಳನ್ನು ಮತ್ತು ಬೂಟು (ಶೂ) ಹಾಕಿಕೊಂಡಾಗ
  • ಬೆವರಿನ ಗ್ರಂಥಿಗಳು ನಿಷ್ಕ್ರಿಯವಾದಾಗ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ ನೀಡದೇ ಇದ್ದಾಗ, ಬಿರುಕುಗಳು ಆಳವಾದಾಗ ಅಥವಾ ಸೋಂಕು ತಗಲಿದಾಗ ಹಿಮ್ಮಡಿ ಬಿರುಕು ಅಪಾಯ ತರುತ್ತದೆ. ಮಧುಮೇಹ ಅಥವ ಸಕ್ಕರೆ ಖಾಯಿಲೆ (ಡಯಾಬಿಟಿಸ್) ಹಾಗೂ ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿದವರಲ್ಲಿ ಇದು ಮತ್ತಷ್ಟು ಅಪಾಯಕಾರಿ.

ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ

ತೇವಾಂಶವುಳ್ಳ ಕ್ರೀಮ್‌ಗಳು, ಎಣ್ಣೆ ಇತ್ಯಾದಿ ಲೇಪಿಸುವುದರಿಂದ ಹಿಮ್ಮಡಿ ಒಡೆಯುವುದನ್ನು ತಡೆಯಬಹುದು. ಈಗಾಗಲೇ ಹಿಮ್ಮಡಿ ಒಡೆದಿದ್ದಲ್ಲಿ ಫ್ಯುಮಿಕ್ ಕಲ್ಲಿನಿಂದ ದಿನನಿತ್ಯ ಉಜ್ಜುತ್ತಿದ್ದಲ್ಲಿ ದಪ್ಪ ಚರ್ಮ, ಪರೆ, ಪರೆಯಾದ ಚರ್ಮ ಸಹಜ ಸ್ಥಿತಿಗೆ ಮರಳುತ್ತದೆ. ಬರಿಗಾಲಿನಲ್ಲಿ ನಡೆಯುವುದನ್ನು, ಹಿಮ್ಮಡಿ ತೆರೆದಿರುವ ಶೂ ಹಾಕಿಕೊಳ್ಳುವುದನ್ನು, ತೆಳುವಾದ ಚಪ್ಪಲಿ (ಸ್ಯಾಂಡಲ್) ಹಾಗೂ ಶೂ ಬಳಸುವುದನ್ನು ನಿಲ್ಲಿಸಬೇಕು. ಒತ್ತಡವನ್ನು ತಡೆದುಕೊಳ್ಳುವಂತಹ ಶೂ ಹಾಕಿಕೊಳ್ಳಬೇಕು. ದಿನಕ್ಕೆ ಎರಡು ಸಲ ತೇವಾಂಶಭರಿತ ಕ್ರೀಮ್ ಲೇಪಿಸಿಕೊಳ್ಳಬೇಕು. ಮಲಗುವ ಮುನ್ನ ತೇವಾಂಶಭರಿತ ಕ್ರೀಮ್ ಹಚ್ಚಿಕೊಂಡು, ಸಾಕ್ಸ್ ಹಾಕಿಕೊಳ್ಳಬೇಕು.

ಮನೆಯಲ್ಲಿ ಚಿಕಿತ್ಸೆ

ಹಿಮ್ಮಡಿ ಬಿರುಕಿಗೆ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳಬೇಕು ಅಂದರೆ ಮಲಗುವ ಮುನ್ನ ತೇವಾಂಶಭರಿತ ಕ್ರೀಮ್ ಲೇಪಿಸಿ ಅದು ಆವಿಯಾಗದಂತೆ ವಿಶೇಷ ಸಾಕ್ಸ್ ಹಾಕಿಕೊಳ್ಳಬೇಕು. ಸುಧಾರಣೆ ಕಾಣದಿದ್ದಲ್ಲಿ ಚರ್ಮ ತಜ್ಞರನ್ನು ಭೇಟಿಯಾಗಿ.

ಮೂಲ : ಫುಟ್ ಅನ್ಕ್ಲೆ ಸ್ಟೋರ್ (www.FootAnkleStore.com)

ಕೊನೆಯ ಮಾರ್ಪಾಟು : 7/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate