অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಂಬಾಕು ತ್ಯಜಿಸಿ

ತಂಬಾಕು ತ್ಯಜಿಸಿ

ಬೆಂಬಲಿಸುವ ಸತ್ಯಾಂಶಗಳು

  • ಭಾರತದಲ್ಲಿ ಪ್ರತಿವರ್ಷ ೮- ೯ ಲಕ್ಷ ಮಂದಿ ತಂಬಾಂಕಿನ ಬಳಕೆಯಿಂದ ಉಂಟಾದ ಕಾಯಿಲೆಗಳಿಂದ ಸಾವಿಗೀಡಾಗುತ್ತಾರೆ.
  • ಒಬ್ಬ ಹದಿಹರೆಯದ ಹುಡುಗ ತಂಬಾಕನ್ನು ತ್ಯಜಿಸುವುದರಿಂದ ಆತನಿಗೆ ೨೦ ವರ್ಷ ಆಯಸ್ಸು ಹೆಚ್ಚುತ್ತದೆ.
  • ತಂಬಾಕು ಸೇವನೆ ಮಾಡುವವರಲ್ಲಿ ಅರ್ಧದಷ್ಟು ಹದಿಹರೆಯದವರು ಅದರಿಂದ ಸಾವಿಗೀಡಾಗುತ್ತಾರೆ (ಅದರಲ್ಲೂ ಕಾಲು ಭಾಗದಷ್ಟು ಜನರು ಮಧ್ಯವಯಸ್ಸಿನಲ್ಲಿ, ಇನ್ನೊಂದು ಕಾಲು ಭಾಗದಷ್ಟು ಜನರು ಇಳಿವಯಸ್ಸಿನಲ್ಲಿ ಸಾವಿಗೀಡಾಗುತ್ತಾರೆ.)
  • ಬೇರೆ ದೇಶಗಳಿಗೆ ಹೋಲಿಸಿದಾಗ ಪ್ರತಿವರ್ಷವೂ ತಂಬಾಕು ಸೇವನೆಯಿಂದ ಸಾವಿಗೆ ಈಡಾಗುವವರ ಸಂಖ್ಯೆ ಭಾರತದಲ್ಲಿ ತೀವ್ರ ಗತಿಯಲ್ಲಿ ಏರುತ್ತಿದೆ.

 

*ಧೂಮಪಾನ/ ತಂಬಾಕು ಪುರುಷರ ಮತ್ತು ಮಹಿಳೆಯರ ಮೇಲೆ ಮ ಬೀರುವವು.

ಬೆಂಬಲಿಸುವ ಸತ್ಯಾಂಶಗಳು

  • ತಂಬಾಕು ಸೇವನೆ ಪುರುಷರಲ್ಲಿ ನಂಪುಸತ್ವಕ್ಕೆ ಕಾರಣವಾಗುತ್ತದೆ.
  • ತಂಬಾಕು ಧೂಮಪಾನ ಸೇವನೆಯಿಂದ ಮಹಿಳೆಯರಲ್ಲಿ ಈಸ್ಟ್ರೊಜನ್‌ ಪ್ರಮಾಣ ಕಡಿಮೆಯಾಗುತ್ತದೆ. ಮೆನೊಪಾಸ್‌ (ಋತುಬಂಧ) ಬೇಗ ಬರುತ್ತದೆ
  • ಧೂಮಪಾನ / ತಂಬಾಕು ಸೇವನೆಯು ದೈಹಿಕ ಚಟುವಟಿಕೆಯ ಸಾಮರ್ಥ್ಯವನ್ನು ಮತ್ತು ದೈಹಿಕ ಸಹನಾ ಶಕ್ತಿಯನ್ನು ಕಡಿಮೆ ಮಾಡುವುದು.
  • ಮಹಿಳೆಯರು ಧೂಮಪಾನ ಮಾಡಿ ಮತ್ತು ಸಂತಾನ ನಿಯಂತ್ರಣ ಮಾತ್ರೆ ತೆಗೆದುಕೊಂಡರೆ ಲಕ್ವ ಹೊಡೆಯುವ ಗಂಡಾಂತರ ಹೆಚ್ಚು.
  • ಮಗುವನ್ನು ಕಳೆದುಕೊಳ್ಳುವ ಅಥವ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುವ ಅಥವಾ ಬೆಳವಣಿಗೆಯ ಸಮಸ್ಯೆ ಇರುವ ಅಥವಾ  ಹಠಾತ್ತನೆ ಮಗು ಸಾಯುವ ಸಂಭವ ಹೆಚ್ಚು.

 

ತಂಬಾಕು ತ್ಯಜಿಸುವುದರ ಲಾಭಗಳು

ತಂಬಾಕು ತ್ಯಜಿಸುವುದರ ದೈಹಿಕ ಲಾಭಗಳು:

  1. ಕ್ಯಾನ್ಸರ್ ಮತ್ತು ಹೃದಯರೋಗದ ಗಂಡಾಂತರ ಕಡಿಮೆಯಾಗುವುದು.
  2. ಹೃದಯದ ಮೆಲಿನ ಒತ್ತಡವು  ಕಡಿಮೆಯಾಗುವುದು..
  3. ನಿಮ್ಮ ಪ್ರೀತಿ ಪಾತ್ರರು ನಿನ್ನ ಧೂಮಪಾನದಿಂದ ಅಪಾಯಕ್ಕೆ ಒಳಗಾಗುವುದಿಲ್ಲ.
  4. ನಿಮ್ಮ ಧೂಮಪಾನಿಗಳ ಕೆಮ್ಮು ( ನಿಲ್ಲದ ಕೆಮ್ಮು ಮತ್ತು ಕಫ)  ಮಾಯವಾಗಬಹುದು.
  5. ನಿಮ್ಮ ಹ ಲ್ಲುಗಳು ಬಿಳಿಯಾಗಿ ಮತ್ತು ಶುಚಿಯಾಗಿ ಇರುವವು

ತಂಬಾಕು ತ್ಯಜಿಸುವುದರ ಸಾಮಾಜಿಕ ಲಾಭಗಳು:

  1. ನೀವು ಸಿಗರೇಟನ್ನು ನಿಯಂತ್ರಿಸುವಿರಿ. ಸಿಗರೇಟು ನಿಮ್ಮ ಮೇಲಿನ ನಿಯಂತ್ರಣ ಕಳೆದು ಕೊಳ್ಳುವುದು
  2. ನಿಮ್ಮ ಸ್ವಂತಿಕೆ ಮತ್ತು  ಆತ್ಮ ವಿಶ್ವಾಸ ಹೆಚ್ಚುವುದು
  3. ನಿಮ್ಮ ಮಕ್ಕಳಿಗೆ   ಈಗಲೂ ಮತ್ತು ಮುಂದೆಯೂ   ಆರೋಗ್ಯವಂತ ತಂದೆಯಾಗುವಿರಿ
  4. ನಿಮಗೆ ಬೇರೆ ವಿಷಯಗಳಿಗೆ ಖರ್ಚು ಮಾಡಲು ಹೆಚ್ಚು ಹಣ ಉಳಿಯುತ್ತದೆ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate