অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅವ್ಯವಸ್ಥೆಗಳು

ಎ ಅನ್ನಾಂಗ ದ (ವಿಟಮಿನ್ A) ಕೊರತೆಯಿಂದಾಗುವ ಅಂಧತ್ವ

ಎ ಅನ್ನಾಂಗ (ವಿಟಮಿನ್ A) ವು ಒಳ್ಳೆಯ ದೃಷ್ಟಿ ಶಕ್ತಿಗೆ ಅಗತ್ಯ. ಮಕ್ಕಳಲ್ಲಿ ವಿಟಮಿನ್ A ಕೊರತೆಯಿಂದಾಗಿ ಕುರುಡತನ ಬರಬಹುದು. ಈ ಕೊರತೆಯು ತೀವ್ರವಾಗಿದ್ದರೆ ಅದು ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದು. ನಮ್ಮ ದೇಶದಲ್ಲಿ ಪ್ರತಿವರ್ಷ 30,000 ಮಕ್ಕಳು ವಿಟಮಿನ್ A ಕೊರತೆಯಿಂದ ದೃಷ್ಟಿ ಕಳೆದು ಕೊಳ್ಳುತ್ತಾರೆ. ವಿಟಮಿನ್ A ಕೊರತೆಯ ಲಕ್ಷಣಗಳು ಸಾಮಾಸ್ಯವಾಗಿ 1 ರಿಂದ 5 ವರ್ಷದ ಮಕ್ಕಳಲ್ಲಿ ಕಾಣುವಂತಿದೆ.

ವಿಟಮಿನ್ A ಕೊರತೆಯ ಲಕ್ಷಣಗಳು.

ಮಕ್ಕಳು ವಿಟಮಿನ್ A ಕೊರತೆಯಿಂದ ದೃಷ್ಟಿ ಕಳೆದುಕೊಳ್ಳುವುದು ಹಠಾತ್ತನೆ ಆಗುವುದಿಲ್ಲ. ಎ ಅನ್ನಾಂಗದ (ವಿಟಮಿನ್) ಕೊರತೆಯನ್ನು ಚಿಕ್ಕವಯಸ್ಸಿನಲ್ಲೆ ಮುಂಚಿತವಾಗಿ ಗುರುತಿಸಿದರೆ ವಿಟಮಿನ್ A ಸಮೃದ್ಧವಾದ ಪೌಷ್ಟಿಕ ಆಹಾರದ ಮೂಲಕ ಅದನ್ನು ಸರಿ ಪಡಿಸಬಹುದು.

ತೀವ್ರ ಕೊರತೆಯ ಲಕ್ಷಣಗಳು

ಇರುಳು ಕುರುಡುತನ ಮೊದಲ ಚಿಹ್ನೆ. ಇರುಳು ಕುರುಡುತನ ಇರುವ ಮಕ್ಕಳಿಗೆ ಕಡಿಮೆ ಬೆಳಕಿನಲ್ಲಿ / ಕತ್ತಲಲ್ಲಿ ಸರಿಯಾಗಿ ನೋಡಲಾಗುವುದಿಲ್ಲ. ಕಣ್ಣಿನ ಬಿಳಿಯ ಭಾಗವು ತನ್ನ ಹೊಳಪಿನ ಗುಣವನ್ನು ಕಳೆದು ಕೊಳ್ಳುತ್ತದೆ. ಮೇಲಿನ ಚಿಹ್ನೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಚಿಕಿತ್ಸೆ ಪಡೆಯದಿದ್ದರೆ ಶಾಶ್ವತ ಕುರುಡುತನ ಬರಬಹುದು. ವಿಟಮಿನ್ A ಕೊರತೆಯ ತಡೆಗಟ್ಟುವಿಕೆ

ವಿಟಮಿನ್ A ಕೊರತೆಯ ತಡೆಗಟ್ಟುವಿಕೆ

  • ವಿಟಮಿನ್ A ಸಮೃದ್ಧವಾಗಿರುವ ಆಹಾರಸೇವಿಸಿ.
  • ಹಾಲು, ಮೊಟ್ಟೆ, ಮೀನೆಣ್ಣೆ ಗಳು ವಿಟಮಿನ್ A ಯಿಂದ ಸಮೃದ್ಧವಾಗಿವೆ. ಹಸಿರು ಎಲೆ ಪಲ್ಯಗಳು, ಕ್ಯಾರೆಟ್, ಪರಂಗಿ (ಪಪ್ಪಾಯಿ) ಹಣ್ಣು, ಮಾವಿನ ಹಣ್ಣುಗಳು ಎ ಅನ್ನಾಂಗದ ಉತ್ತಮ ಮೂಲಗಳಾಗಿವೆ.
  • ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆ ಹೈದರಾಬಾದ್, ಇವರ ಸಂಶೋಧನೆಯಂತೆ ಒಂದು ಚಮಚ ವಿಟಮಿನ್ A ಸಿರಪ್ ಅನ್ನು 1-5 ವರ್ಷದ ವಯೋಮಾನದ ಮಕ್ಕಳಿಗೆ 6 ತಿಂಗಳಿಗೆ ಒಂದು ಸಾರಿ ಕೊಟ್ಟರೆ ವಿಟಮಿನ್ A ಕೊರತೆಯನ್ನು ತಕ್ಕಮಟ್ಟಿಗೆ ತಡೆಗಟ್ಟಬಹುದು.
  • ಒಂದು ಚಮಚ ಸಿರಪ್ ಅನ್ನು ಮಕ್ಕಳಿಗೆ 6 ತಿಂಗಳಿಗೆ ಒಂದು ಸಾರಿ ಐದು ವರ್ಷದವರೆಗೆ ಕೊಟ್ಟರೆ, ವಿಟಮಿನ್ Aಯು ಲೀವರಿನಲ್ಲಿ ಉಳಿಯುವುದು ಮತ್ತು ಮುಂದಿನ ಡೋಜು ಕೊಡುವವರೆಗೆ ಸಾಕಷ್ಟು ಪ್ರಮಾಣದಲ್ಲಿ ದೊರಕುವುದು. ಈ ಪದ್ಧತಿಯನ್ನು ಈಗ ದೇಶದಲ್ಲೆಲ್ಲ ಅನುಸರಿಸಲಾಗುತ್ತಿದೆ. ವಿಟಮಿನ್ A ಕೊರತೆಯಿಂದ ಆಗುವ ಕುರುಡುತನ ಈಗ ಇಲ್ಲದಾಗಿದೆ.
  • ಗರ್ಭಿಣಿ ಮಹಿಳೆಯರು ವಿಟಮಿನ್ A ಇರುವ ಪೌಷ್ಟಿಕ ಆಹಾರವನ್ನು ಸೇವಿಸ ಬೇಕು.ಇದು ಗರ್ಭದಲ್ಲಿರುವ ಮಗುವಿಗೆ ವಿಟಮಿನ್ A ವನ್ನು ತಾಯಿಯಿಂದ ಪಡೆಯಲು ಸಹಕಾರಿಯಾಗುವುದು.

ಬೆಳೆಯುವ ಮಕ್ಕಳಿಗೆ ಪೌಷ್ಟಿಕ ಅಹಾರ

ಬೆಳೆಯುವ ಮಕ್ಕಳಿಗೆ ಸಾಕಷ್ಟು ಪೌಷ್ಟಿಕ ಆಹಾರ ಬೇಕು. ಅವರ ದೇಹದಲ್ಲಿ ಪ್ರೋಟೀನ್ ಮತ್ತು ಕ್ಯಾಲರಿಗಳ ಕೊರತೆ ಯಾದರೆ( ಅಪೌಷ್ಟಿಕತೆ) ಮರಸ್ಮಾಸ ಮತ್ತು ಕ್ವಾಷ್ಯೋಕರ್ ರೋಗಗಳು ಬರುವವು.

ಯಾರಿಗೆ ಮರಸ್ಮಾಸ ಮತ್ತು ಕ್ವಾಷ್ಯೋಕರ್ ಬರುವುದು?

ಅಪೌಷ್ಟಿಕ ಆಹಾರ ಸೇವಿಸುವ 1-5 ವಯೋಮಾನದ ಮಕ್ಕಳಿಗೆ ಮರಸ್ಮಾಸ ಬರುವುದು.

ಮರಸ್ಮಾಸ ಲಕ್ಷಣ ಗಳು

ಈ ರೋಗವು ಕಾಲುಗಳ ಬಾವಿನಿಂದ ಪ್ರಾರಂಭವಾಗುವುದು. ನಂತರ ಕೈಗಳು ಮತ್ತು ದೇಹ ಊದಿ ಕೊಳ್ಳುವವು. ಒರಟಾದ ಚರ್ಮ, ವಿರಳ ಕೂದಲು, ಕಂದು ಬಣ್ಣಕ್ಕೆ ತಿರುಗಿದ ಕೂದಲು ಇದರ ಪ್ರಮುಖ ಲಕ್ಷಣಗಳು. ಇದರಿಂದ ಪೀಡತರಾದ ಮಕ್ಕಳು ಬಿಳಿಚಿಕೊಂಡು ಜಡವಾಗಿರುವರು.

ಕ್ವಾಷ್ಯೋಕರ್ ಲಕ್ಷಣಗಳು .

ಈ ರೋಗ ಪೀಡಿತರು ತುಂಬ ತೆಳ್ಳಗೆ , ದುರ್ಬಲವಾಗಿರುವರು. ಮೊದಲ ಹಂತದಲ್ಲಿ ಅತಿಸಾರ ಆಗಬಹದು. ಚರ್ಮವು ಒಣಗಿರುವುದು.

ಮೇಲಿನ ರೋಗ ಪೀಡಿತರಿಗೆ ಚಿಕಿತ್ಸೆಗಾಗಿ ಸಲಹೆಗಳು ಮಕ್ಕಳಿಗೆ ಸಾಕಾಗುವಷ್ಟು ಪ್ರಮಾಣದ ಪ್ರೋಟಿನ್ ಮತ್ತು ಕ್ಯಾಲರಿಗಳನ್ನು ಹೊಂದಿರುವ ಪೌಷ್ಟಿಕ ಆಹಾರವನ್ನು ಅಗಾಗ ಕೊಡಬೇಕು. ತೀವ್ರವಾದ ಕೊರತೆಯ ಲಕ್ಷಣವಿದ್ದರೆ ಅವರನ್ನು ವೈದ್ಯರಲ್ಲಿಗೆ ಕರೆದೊಯ್ಯಬೇಕು.

ಮರಸ್ಮಸ ಮತ್ತು ಕ್ವಾಷ್ಯೋಕರ್ ನಿಂದ ಬಳಲುವ ಮಕ್ಕಳಿಗೆ ಪಥ್ಯ.

ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆ ಹೈದರಾಬಾದ್ ಎಲ್ಲ ಪೌಷ್ಟಿಕ ವಸ್ತುಗಳ ಮಿಶ್ರಣದಿಂದ ಮಿಕ್ಸ್ (MIX) ಎಂಬ ಪೌಷ್ಟಿಕ ಆಹಾರವನ್ನು ಅಭಿವೃದ್ಧಿ ಪಡಿಸಿದೆ. ಈ ಮಿಶ್ರಣವನ್ನು ಮನೆಯಲ್ಲಿಯೇ ತಯಾರಿಸಬಹುದು

ಪೌಷ್ಟಿಕ ಮಿಶ್ರಣದಲ್ಲಿ ಇರುವ ಸಾಮಗ್ರಿಗಳು

ಹುರಿದ ಗೋಧಿ           -   40ಗ್ರಾಂ ದ್ವಿದಳ ಧಾನ್ಯ          -   16 ಗ್ರಾಂ ಹುರಿದ ಕಡಲೆಕಾಯಿ (ಶೇಂಗಾ) ಬೀಜ   -  10 ಗ್ರಾಂ ಬೆಲ್ಲ                 - 20 ಗ್ರಾಂ ಈ ಸಾಮಗ್ರಿಗಳನ್ನು ಪುಡಿಮಾಡಿ ತರುವಾಯ ಮಿಶ್ರಣ ಮಾಡಿ. ಈ ಮಿಶ್ರಣವೂ330 ಗ್ರಾಂ ಕ್ಯಾಲರಿ 11.3 ಗ್ರಾಂ ಪ್ರೊಟೀನ್ ಹೊಂದಿರುವುದು.

ಈ ಮಿಶ್ರಣವನ್ನು ಹಾಲು ಅಥವ ನೀರಿನಲ್ಲಿ ಸೇರಿಸಿ ಸೇವಿಸಬಹುದು. ಇದನ್ನು ಮರಸ್ಮಸ್ ಮತ್ತು ಕ್ವಾಷ್ಯೋಕರ್ ಇರುವ ಮಕ್ಕಳ ಮೇಲೆ ಪ್ರಯೋಗ ಮಾಡಿ ನೋಡಿದೆ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate