অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅತಿ ಸಮಸ್ಯಾತ್ಮಕ ಪ್ರದೇಶ

ಅತಿ ಸಮಸ್ಯಾತ್ಮಕ ಪ್ರದೇಶ

1994 ರಲ್ಲಿ ಮಲೇರಿಯ ವಿಶೇಷ ಸಮೀಕ್ಷೆ ನಡೆಸಲಾಗಿ ಅದರಲ್ಲಿ ಪಡೆದ ಮಾಹಿತಿಗೆ ಅನುಗುಣವಾಗಿ ಮಲೇರಿಯ ರೋಗ ನಿಯಂತ್ರಣದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಲಾದವು. ಈ ಬದಲಾವಣೆಗೆ ಅನುಗುಣವಾಗಿ ಮಲೇರಿಯ ಪ್ರದೇಶಗಳಲ್ಲಿ ಅತಿ ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ತೀವ್ರ ನಿಯಂತ್ರಣ ಕ್ರಮಗಳ ಬದಲಾವಣೆ ತರಲಾದವು. ಉಪಕೇಂದ್ರಗಳ ಮಲೇರಿಯ ರೋಗದ ಉಲ್ಬಣ ಸ್ಥಿತಿಯ ಕಾರಣಗಳನ್ನು ಆಧಾರವನ್ನಾಗಿಟ್ಟುಕೊಂಡು ಅತಿ ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಲಾಗುವುದು. ಅದಕ್ಕೆ ಬೇಕಾದ ಮಾಹಿತಿಗಳು ಹೀಗಿವೆ :

 

1.            ಕಳೆದ ಮೂರು ವರ್ಷಗಳಲ್ಲಿ ಅದೇ ಪ್ರದೇಶದಲ್ಲಿ ಕಾಯಿಲೆಯನ್ನು ಹೊಂದಿ ಫ್ಯಾಲ್ಸಿಪ್ಯಾರಂ ಮಲೇರಿಯ ಕಾಯಿಲೆಯಿಂದ ಮರಣ ಹೊಂದಿದ್ದು, ಖಚಿತವಾದಲ್ಲಿ.

2.            ಎಸ್.ಪಿ.ಆರ್ ಪ್ರಮಾಣ

•             ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಎಸ್.ಪಿ.ಆರ್ 5% ಅಥವಾ ಅದಕ್ಕೂ ಮೇಲ್ಪಟ್ಟಿದ್ದಲ್ಲಿ.

•             ಕಳೆದ ಮೂರು ವರ್ಷಗಳಲ್ಲಿ ಎಸ್.ಪಿ.ಆರ್ ದ್ವಿಗುಣ ಹೊಂದಿದ್ದು, ಎರಡು ಹಾಗೂ ಮೂರನೇ ಸಾಲಿನಲ್ಲಿ 4% ಅಥವಾ ಅದಕ್ಕೂ ಹೆಚ್ಚಿದ್ದಲ್ಲಿ.

•             ಕಳೆದ ಮೂರು ವರ್ಷಗಳಲ್ಲಿ ಎಸ್.ಪಿ.ಆರ್ 3% ಇದ್ದು, ಅದರಲ್ಲಿ ಫ್ಯಾಲ್ಸಿಪ್ಯಾರಂ ಪ್ರಕರಣಗಳು (ಪಿ.ಎಫ್.) 30% ಅಥವಾ ಅದಕ್ಕೂ ಹೆಚ್ಚಾಗಿದ್ದಲ್ಲಿ.

3.            ಆ ಪ್ರದೇಶದಲ್ಲಿ ಕ್ಲೋರೋಕ್ವಿನ್ ಮಾತ್ರೆಗಳು ರೋಗನಿರೋಧಕ ಶಕ್ತಿ ಕಳೆದುಕೊಂಡಿದ್ದಲ್ಲಿ.

 

ಉಪಕೇಂದ್ರದಲ್ಲಿ ಯಾವುದೇ ಒಂದು ಮೇಲ್ಕಂಡ ಕಾರಣ ಕಂಡುಬಂದಲ್ಲಿ, ಆ ಪ್ರದೇಶವನ್ನು ಅತಿ ಸಮಸ್ಯಾತ್ಮಕ ಪ್ರದೇಶ ಎಂದು ಗುರುತಿಸಬೇಕು.

ಕೊನೆಯ ಮಾರ್ಪಾಟು : 4/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate