অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯ ಶಿಕ್ಷಣ

ಆರೋಗ್ಯ ಶಿಕ್ಷಣ

ಆರೋಗ್ಯ ಕಾರ್ಯಕ್ರಮ ಯಶ್ವಸಿಯಾಗಬೇಕಾದರೆ ಶಿಕ್ಷಣ ಅತಿಮುಖ್ಯ. ರೋಗದ ಬಗ್ಗೆ ಮಾಹಿತಿ, ಶಿಕ್ಷಣ ಹಾಗೂ ಸಮುದಾಯದ ಸಂಪರ್ಕ  ಹೊಂದುವುದರಿಂದ, ರೋಗದ ನಿಯಂತ್ರಣ ಸುಲಭವಾಗುವುದು. ಮಾಹಿತಿ ಸಂಗ್ರಹಿಸುವಾಗ ಸಮುದಾಯದಲ್ಲಿರುವ ಭಾವನೆ, ಭ್ರಮೆಗಳ ಬಗ್ಗೆಯೂ ತಿಳಿದುಕೊಳ್ಳುವುದರಿಂದ, ರೋಗದ ಬಗ್ಗೆ ಬೇಕಾದ ವಿಷಯಗಳನ್ನೊಳಗೂಡಿಸಿ ಅವರಲ್ಲಿರುವ ತಪ್ಪು ಭಾವನೆಗಳನ್ನು ತೆಗೆಯಲು ಪರಿಣಾಮಕಾರಿ ಶಿಕ್ಷಣವನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ತಯಾರಿಸಲು ಅನುಕೂಲವಾಗುವುದು. ಇದರಿಂದ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳುವ ನಿಯಂತ್ರಣ ಕಾರ್ಯಾಚರಣೆಗಳಲ್ಲಿ ಸಮುದಾಯದ ಸಹಭಾಗಿತ್ವ ಹೆಚ್ಚಿಸಲು ಸಾಧ್ಯವಾಗುವುದು. ನಂತರ ತಿಳಿಸಬೇಕಾದ ವಿಷಯಗಳನ್ನು ಸಮುದಾಯಕ್ಕೆ ಅರಿವು ಮೂಡಿಸುವ ರೀತಿಯಲ್ಲಿ ತಿಳಿಸಬಹುದು.

ವಿಷಯವನ್ನು ತಿಳಿಸಲು ಬೇರೆ ಬೇರೆ ಮಾಧ್ಯಮಗಳನ್ನು (ಪ್ರಿಂಟ್, ವಿಷುಯಲ್, ಆಡಿಯೋ ವಿಷುಯಲ್ ಇತ್ಯಾದಿ) ಉಪಯೋಗಿಸಬಹುದು (ಕರಪತ್ರ, ಕಿರುಪುಸ್ತಕ, ಭಿತ್ತಿಪತ್ರ, ಕಿರು ಭಾಷಣ, ಛಾಯಾಚಿತ್ರ, ಸ್ಲೈಡ್, ಸ್ಟಿಕ್ಕರ್ – ಮೂಲಕ).

ಆಕಾಶವಾಣಿ, ದೂರದರ್ಶನ, ಕೇಬಲ್, ಪತ್ರಿಕೆಗಳು, ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕ ಸಂಸ್ಥೆಗಳು, ರಾಜಕಾರಣಿಗಳು, ನಾಯಕರು, ಚಿತ್ರ ನಟ ನಟಿಯರ ಸಹಾಯ ಪಡೆದು ಮಾಡುವುದರಿಂದ, ವಿಷಯಗಳನ್ನು ಜನತೆಯ ಮನ ತಟ್ಟುವಂತೆ ತಿಳಿಸಿ ಈ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಬಹುದು. ಪ್ರದರ್ಶನ, ವಿಚಾರ ಸಂಕಿರಣ, ಭಾಷಣ ಹಾಗೂ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ರೋಗದ ಬಗ್ಗೆ ಆಸಕ್ತಿ ಮೂಡಿಸಬಹುದು.

ಪ್ರತಿ ತಿಂಗಳ ಮೊದಲನೆಯ ವಾರದಲ್ಲಿ ಮಲೇರಿಯ ಆರೋಗ್ಯ ಶಿಕ್ಷಣದ ಬಗ್ಗೆ ನಿಗಧಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು.

. ಇತ್ತೀಚಿನ ಆರೋಗ್ಯ ಶಿಕ್ಷಣ ಪದ್ದತಿಯಲ್ಲಿನ ಮಾರ್ಪಡುಗಳೆಂದರೆ, ಸಂಪರ್ಕದಿಂದ ಮನುಷ್ಯನ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿರುತ್ತದೆ. ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ತಿಳಿಸಿ, ಅವರ ದೈನಂದಿನ ವರ್ತನೆಯಲ್ಲಿ ಬದಲಾವಣೆ ತರವುದೇ ಆಗಿರುತ್ತದೆ.ಇಲ್ಲಿಯವರೆವಿಗೂ ಐ.ಇ.ಸಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕದ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿತ್ತು. ಈಗ ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರುವಂತೆ ಮಾಡುವುದೇ ಬಿಸಿಸಿ ಗುರಿಯಾಗಿದೆ.

ಸ್ವಯಂ ರಕ್ಷಣಾ ವಿಧಾನಗಳು :

•             ಹಗಲಿನಲ್ಲಿ ವಿಶ್ರಾಂತಿ ಪಡೆಯುವ ಗರ್ಭಿಣಿಯರು, ವಯೋವೃದ್ದರು ಮತ್ತು ಮಕ್ಕಳು ತಪ್ಪದೆ ಸೊಳ್ಳೆ ಪರದೆ ಉಪಯೋಗಿಸುವುದು.

•             ಮನೆಯ ಕಿಟಕಿ ಬಾಗಿಲುಗಳಿಗೆ ಕೀಟ ತಡೆಗಟ್ಟುವ ಜಾಲರಿ ಅಳವಾಡಿಸುವುದು.

•             ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ನಿರೋಧಕ ಬತ್ತಿಗಳನ್ನು ಊರಿಸುವುದು, ಬೇವಿನ ಸೊಪ್ಪಿನ ಹೊಗೆ ಹಾಕುವುದು.

ಸ್ವಯಂ ರಕ್ಷಣಾ ವಿಧಾನದಲ್ಲಿ ಸೊಳ್ಳೆ ಪರದೆಯ ಉಪಯೋಗ

ಮಲೇರಿಯ ಮತ್ತು ಇತರೆ ಸೊಳ್ಳೆಗಳಿಂದ ಹರಡುವ ರೋಗಗಳಿಂದ ರಕ್ಷಣೆ ಪಡೆಯಲು ಸ್ವಯಂ ರಕ್ಷಣಾ ವಿಧಾನದಡಿಯಲ್ಲಿ ಸೊಳ್ಳೆ ಪರದೆ ಬಳಕೆಯು ಅತಿ ಮುಖ್ಯವಾದುದು.

ಸೊಳ್ಳೆಗಳು ಸಾಮಾನ್ಯವಾಗಿ ಸಂಜೆಯಿಂದ ಮಂಜಾನೆಯವರೆಗೂ ಕಚ್ಚುವುದರಿಂದ ಮಲಗುವಾಗ ಎಲ್ಲರೂ ಸೊಳ್ಳೆ ಪರದೆಯನ್ನು ಬಳಸುವುದು ಸೂಕ್ತ. ಸೊಳ್ಳೆ ಪರದೆ ಬಳಕೆ ಬಹು ಹಿಂದಿನಿಂದಲೂ ಬಳಸುತ್ತಾ, ಬಂದಿರುವ ಒಂದು ಸರಳ ವಿಧಾನ, ಹಲವಾರು ಸೊಳ್ಳೆ ನಿಯಂತ್ರಣ ವಿಧಾನಗಳಲ್ಲಿ ಸೊಳ್ಳೆ ಪರದೆ ಬಳಕೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಲೇರಿಯಾ ಕಾಯಿಲೆಯು ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ತಗುಲಿದರೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುವುದರಿಂದ, ಸೊಳ್ಳೆ ಕಡಿತದಿಂದ ಪಾರಾಗಲು ಪ್ರತಿನಿತ್ಯ ಸೊಳ್ಳೆ ಪರದೆಯನ್ನು ಬಳಸುವುದು ಅತ್ಯಾವಶ್ಯಕ.

ಇತ್ತೀಚೆಗೆ ಕೀಟನಾಶಕದಿಂದ ಲೇಪಿಸಿದ ಸೊಳ್ಳೆ ಪರದೆಗಳು ಬಳಕೆಗೆ ಬಂದಿರುವುದರಿಂದ, ಅವುಗಳ ಉಪಯೋಗದಿಂದ ಹೆಚ್ಚಿನ ರಕ್ಷಣೆಯನ್ನು ಪಡೆಯಬಹುದು. ಇಂತಹ ಸೊಳ್ಳೆ ಪರದೆಗಳನ್ನು Iಟಿseಛಿಣiಛಿiಜe ಖಿಡಿeಚಿಣeಜ ಒosquiಣo ಓeಣs (I ಖಿ ಒ ಓ) ಎಂದು ಕರೆಯಲಾಗುತ್ತಿದೆ.

ಸಾಮಾನ್ಯವಾಗಿ ಎಲ್ಲರೂ ಬಳಸುವ ಸೊಳ್ಳೆ ಪರದೆಗಳನ್ನು ಸಿಂಥೆಟಿಕ್ ಫೈರಿಥ್ರಾಯಿಡ್ ಎಂಬ ಗುಂಪಿನ ಕೀಟನಾಶಕ ದ್ರಾವಣದ ಮಿಶ್ರಣದಲ್ಲಿ ನೆನೆಸಿ, ಒಣಗಿಸಿ ಬಳಸುವುದರಿಂದ, ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಣೆ ಪಡೆಯುವುದಲ್ಲದೆ, ಸೊಳ್ಳೆಗಳು ಪರದೆಯ ಮೇಲೆ ವಿಶ್ರಮಿಸಿದಾಗ ಕೀಟನಾಶಕ ಸಂಪರ್ಕದಿಂದ ನಾಶ ಹೊಂದಿ ಅವುಗಳಿಂದ ಹರಡುವ ರೋಗಗಳಿಂದ ಸಂಪೂರ್ಣ ರಕ್ಷಣೆಯನ್ನು ಪಡೆಯಬಹುದು. ಈ ಕೀಟನಾಶಕ ಲೇಪನವು 6 ತಿಂಗಳವರೆಗೆ ಪರಿಣಾಮವಿರುವುದರಿಂದ, ಪ್ರತಿ 6 ತಿಂಗಳಿಗೊಮ್ಮೆ ಉಪಯೋಗಿಸಿದ ಸೊಳ್ಳೆ ಪರದೆಗಳನ್ನು ಕೀಟನಾಶಕ ಮಿಶ್ರಣದಲ್ಲಿ ನೆನೆಸಿ, ಒಣಗಿಸಿ, ನಂತರ ಉಪಯೋಗಿಸುವುದು ಸೂಕ್ತ.

ಕೀಟನಾಶಕದಿಂದ ಉಪಚರಿಸಿದ ಸೊಳ್ಳೆ ಪರದೆಗಳನ್ನು ಬಳಸುವುದರಿಂದ, ಮುಖ್ಯವಾಗಿ ಗರ್ಭಿಣಿ ಸ್ತ್ರೀಯರು, ಮಕ್ಕಳು ಮಲೇರಿಯಾ ಮತ್ತು ಇತರೆ ಸೊಳ್ಳೆಯಿಂದ ಹರಡುವ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು. ಪ್ರವಾಸಿಗರು, ಕೂಲಿ ಕಾರ್ಮಿಕರು ಮುಂತಾದವರು ಸೊಳ್ಳೆ ಕಡಿತಕ್ಕೊಳಗಾಗುವುದರಿಂದ, ಇವುಗಳನ್ನು ಬಳಸುವುದು ಅತಿ ಸೂಕ್ತ. ಇವುಗಳನ್ನು ಸ್ಥಳೀಯ ಅನುಕೂಲತೆಗಳಿಗೆ ಅನುಗುಣವಾಗಿ ಒಳಗೂ, ಹೊರಗೂ ಸರಿಯಾದ ರೀತಿಯಲ್ಲಿ ಕಟ್ಟಿಕೊಂಡು ಸೊಳ್ಳೆಗಳು ಪರದೆಯಲ್ಲಿ ನುಸುಳದಂತೆ ಎಚ್ಚರ ವಹಿಸಬೇಕು. ಇದನ್ನು ಹಗಲು ಹೊತ್ತಿನಲ್ಲಿ ಮಲಗಿರುವ ವಯೋವೃದ್ದರು, ಮಕ್ಕಳು, ನಿಶ್ಯಕ್ತರು, ರೋಗಿಗಳು ತಪ್ಪದೇ ಬಳಸಬೇಕು. ಜ್ವರದಿಂದ ನರಳುವವರು ಬಳಸಿದಲ್ಲಿ ಇತರರಿಗೆ ರೋಗ ಹರಡುವುದನ್ನು ತಪ್ಪಿಸಬಹುದು. ಒಟ್ಟಿನಲ್ಲಿ ಸೊಳ್ಳೆ ಪರದೆಗಳನ್ನು ತಪ್ಪದೇ ಬಳಸುವುದರಿಂದ, ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗಿ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳಿಗೆ ಜನರು ತುತ್ತಾಗುವುದನ್ನು ತಪ್ಪಿಸಿ ಗಣನೀಯವಾಗಿ ನಿಯಂತ್ರಿಸಬಹುದು.

ಜನರು ಸೊಳ್ಳೆ ಪರದೆ ಬಳಕೆಯನ್ನು ತಮ್ಮ ಪ್ರತಿ ದಿನನಿತ್ಯದ ಕಾರ್ಯಗಳಲ್ಲಿ ಒಂದು ಅವಿಭಾಜ್ಯ ಕರ್ತವ್ಯವೆಂದು ಪರಿಗಣಿಸಿದಲ್ಲಿ, ಖಂಡಿತಾ ತಮ್ಮ ಆರೋಗ್ಯವನ್ನು ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳಿಂದ ಕಾಪಾಡಿ ಕೊಳ್ಳಬಹುದು.

 

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate