অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾರ್ಯಕರ್ತರ ಮತ್ತು ಹಳ್ಳಿಯ ಮುಖಂಡರ ಪಾತ್ರ

ಕಾರ್ಯಕರ್ತರ ಮತ್ತು ಹಳ್ಳಿಯ ಮುಖಂಡರ ಪಾತ್ರ

ಸಿಂಪಡಣಾ ಕಾರ್ಯಾಚರಣೆಯಲ್ಲಿ ಪುರುಷ ಆರೋಗ್ಯ ಕಾರ್ಯಕರ್ತರ ಪಾತ್ರ :

ಪ್ರತಿ ಕಾರ್ಯಕರ್ತನೂ 2 ರಿಂದ 4 ಸಿಂಪಡಣಾ ತಂಡಗಳ ಕೆಲಸವನ್ನು ಮೇಲ್ವಿಚಾರಿಸಬಹುದು. ಪಂಪುಗಳನ್ನು ಒಟ್ಟಿಗೆ ಗುಂಪುಗಳಲ್ಲಿ ಕೆಲಸ ಮಾಡಿಸಿದರೆ ಈ ಕಾರ್ಯಾಚರಣೆ ಸುಲಭವಾಗಿ, ಹೆಚ್ಚಿನ ಗುಣಮಟ್ಟದ ಸಿಂಪಡಣೆ ಮಾಡಲು ಸಾಧ್ಯವಾಗುತ್ತದೆ.

•             ಕಾರ್ಯಕರ್ತರು ದಿನನಿತ್ಯದ ಕಾರ್ಯಾಚರಣೆಯ ವರದಿಯನ್ನು ನಿಗಧಿತ ನಮೂನೆಯಲ್ಲಿ (ಠಿಡಿoಜಿoಡಿmಚಿ) ನೀಡಬೇಕು. ಈ ವರದಿಯಲ್ಲಿ ಸ್ಟ್ರೇ ಮಾಡಿದ ದಿನಾಂಕ, ಹಳ್ಳಿಯ ಹೆಸರು, ಮನೆಗಳ ಹಾಗೂ ಕೊಠಡಿಗಳ ಸಂಖ್ಯೆ, ಬಿಟ್ಟು ಹೋದ ಹಾಗೂ ಬೀಗ ಹಾಕಿದ ಮನೆಗಳ ಸಂಖ್ಯೆ, ತಿರಸ್ಕರಿಸಿದ ಕೊಠಡಿಗಳ ಸಂಖ್ಯೆ, ಖರ್ಚಾದ ಕೀಟನಾಶಕದ ಪ್ರಮಾಣದ ಮಾಹಿತಿ ಇರಬೇಕು.

•             ಜನಗಳಿಗೆ ತಿಳುವಳಿಕೆ ಹೇಳಿ ತಮ್ಮ ಮನೆಗಳನ್ನು ಕೀಟನಾಶಕ ಸಿಂಪಡಣೆ ಮಾಡಿಸಿಕೊಳ್ಳಲು ಒಪ್ಪಿಗೆ ಪಡೆಯಬೇಕು.

•             ಸ್ಟ್ರೇಗೆ ಮೊದಲು ಸಾಮಾನುಗಳನ್ನು ತೆಗೆದು ಹೊರಗಿಡುವಲ್ಲಿ ಹಾಗೂ ಆಹಾರ ಪದಾರ್ಥ ಮತ್ತು ಮೇವನ್ನು ಪ್ಲ್ಯಾಸ್ಟಿಕ್ ಹಾಳೆಗಳಿಂದ ಮುಚ್ಚಿಡಲು ಮನೆಯವರಿಗೆ ಸಹಾಯ ಮಾಡಬೇಕು.

•             ಮನೆ ಒಳಗೆ ನಿಂತು ಎಲ್ಲಾ ಕೋಣೆಗಳಲ್ಲಿ ಗೋಡೆ, ಅಟ್ಟ ಚಾವಣಿಯ ಕೆಳಗೆ, ಮಂಚ ಹಾಗೂ ಮೇಜಿನ ಅಡಿ, ಬಾಗಿಲು ಹಿಂದೆ, ಕಂಬದ ಸುತ್ತಾ, ಫೋಟೋಗಳ ಹಿಂದೆ ಸ್ಟ್ರೇ ಮಾಡಿಸಬೇಕು. ಒಳ್ಳೆ ಗುಣಮಟ್ಟದ ಸಿಂಪಡಣೆಯ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ನೀಡಿ ಅವರನ್ನು ಹುರಿದುಂಬಿಸಬೇಕು. ಅವರ ತಪ್ಪುಗಳನ್ನು ತಿದ್ದಬೇಕು.

•             ಆಗಿಂದಾಗ್ಗೆ ಹೊರಬಂದು ಕೀಟನಾಶಕ ಮಿಶ್ರಣ ಮಾಡುವಾಗ ಕಾರ್ಯಕರ್ತ ಸರಿಯಾದ ಪ್ರಮಾಣದಲ್ಲಿ ಪುಡಿ ಹಾಗೂ ನೀರನ್ನು ಬೆರೆಸುತ್ತಿರುವನೇ ಎಂದು ನೋಡಿಕೊಳ್ಳಬೇಕು.

•             ನುರಿತ ಕಾರ್ಯಕರ್ತ ಸರಿಯಾಗಿ ಕೆಲಸ ಮಾಡುತ್ತಿರುವನೇ ಎಂದು ಸಮೀಕ್ಷಿಸಬೇಕು. ಈ ಕಾರ್ಯಕರ್ತ ಸ್ಟೆನ್ಸಿಲ್ ಸರಿಯಾದ ರೀತಿಯಲ್ಲಿ ಮನೆಗಳ ಗೋಡೆ ಅಥವಾ ಬಾಗಿಲಿನ ಮೇಲೆ ಬರಿಯುತ್ತಿರುವನೇ ಎಂದು ನೋಡಿಕೊಳ್ಳಬೇಕು. ಅವನು ಸ್ಟ್ರೇ ಮಾಡಿದ ಹಾಗೂ ಮನೆಯಲ್ಲಿರುವ ಒಟ್ಟು ಕೊಠಡಿಗಳ ಸಂಖ್ಯೆ ಸರಿಯೇ ಎಂದು ಖಚಿತ ಪಡಿಸಿಕೊಳ್ಳಬೇಕು.

 

•             ಕೆಲಸಗಾರರು ರಕ್ಷಣಾ ಉಡುಪುಗಳನ್ನು ತೊಡುವುದನ್ನು ಹಾಗೂ ದಿನದ ಕೆಲಸ ಮುಗಿದ ನಂತರ ಎಲ್ಲಾ ಉಪಕರಣಗಳನ್ನೂ ತೊಳೆದಿರುವರೇ ಎಂದು ಖಚಿತಪಡಿಸಿಕೊಳ್ಳಬೇಕು.

•             ದಿನದ ಕೆಲಸದ ನಂತರ ಎಲ್ಲರೂ ಮೈ ಕೈಯನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು.

•             ಸ್ಟ್ರೇ ಪದಾರ್ಥಗಳು ಹಾಗೂ ತೊಳೆಯಲು ಉಪಯೋಗಿಸುವ ನೀರು ಬೇರೆ ಆಹಾರ ವಸ್ತುಗಳು ಹಾಗೂ ಕುಡಿಯಲು ಉಪಯೋಗಿಸುವ ನೀರಿನ ಜೊತೆ ಸೇರದಂತೆ ನಿಗಾವಹಿಸಬೇಕು.

ಸಿಂಪಡಣಾ ಕಾರ್ಯಕ್ರಮದಲ್ಲಿ ಎಫ್.ಟಿ.ಡಿ, ಡಿ.ಡಿ.ಸಿ ಮತ್ತು ಹಳ್ಳಿಯ ಮುಖಂಡರ ಪಾತ್ರ :

1.            ಜನಗಳಲ್ಲಿ ಈ ಕಾರ್ಯಾಚರಣೆಯ ಬಗ್ಗೆ, ತಿಳುವಳಿಕೆ ನೀಡಿ ತಮ್ಮ ಮನೆಗಳಿಗೆ ಕೀಟನಾಶಕ ತಪ್ಪದೇ ಸಿಂಪಡಿಸಿಕೊಳ್ಳುವಲ್ಲಿ ಮನ ಒಲಿಸಬೇಕು.

2.            ಸೂಚನೆ ಬಂದ ಒಡನೆಯೇ, ಮುಂಚಿತವಾಗಿ ಈ ಕಾರ್ಯಾಚರಣೆ ತಮ್ಮ ಹಳ್ಳಿಯಲ್ಲಿ ಯಾವಾಗ ಹಮ್ಮಿಕೊಳ್ಳಲಾಗುವುದು ಎಂದು ಜನಗಳಿಗೆ ತಿಳಿಸಬೇಕು.

3.            ಜನಗಳ ಜೊತೆ ಗುಂಪು ಚರ್ಚೆಯ ಮೂಲಕ ಸ್ಟ್ರೇ ಉಪಯೋಗದ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳುವಳಿಕೆ ನೀಡಬೇಕು.

ಮಲೇರಿಯ ನಿಯಂತ್ರಣದಲ್ಲಿ ಉಪಯೋಗಿಸುವ ಬೇರೆ ವಿಧಾನಗಳು

ಕೊನೆಯ ಮಾರ್ಪಾಟು : 11/26/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate