অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾರ್ಯಕರ್ತರು ತಿಳಿಯಬೇಕಾದ್ದು

ಕಾರ್ಯಕರ್ತರು ತಿಳಿಯಬೇಕಾದ್ದು

1.            ಎ.ಪಿ.ಐ. = ವರ್ಷದಲ್ಲಿ ಕಂಡು ಹಿಡಿದ ಮಲೇರಿಯ ಪ್ರಕರಣಗಳು x 1000

ಜನಸಂಖ್ಯೆ

ಈ ಸೂಚ್ಯಾಂಕದಿಂದ ವರ್ಷದಲ್ಲಿ ಪ್ರತಿ 1000 ಜನಸಂಖ್ಯೆಯಲ್ಲಿ ಎಷ್ಟು ಮಲೇರಿಯ ಪ್ರಕರಣಗಳು ಪತ್ತೆಯಾದವು ಎಂಬ ಮಾಹಿತಿಯನ್ನು ತಿಳಿಯಬಹುದು. ಈ ಮಾಹಿತಿಯಿಂದ ಯಾವ ಪ್ರದೇಶದಲ್ಲಿ ಮಲೇರಿಯ ನಿಯಂತ್ರಣಕ್ಕೆ ಕೀಟನಾಶಕದ ಅವಶ್ಯಕತೆ ಇರುವುದೆಂದು ಪರಿಗಣಿಸಲು ಅನುಕೂಲವಾಗುವುದು. ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ಎ.ಪಿ.ಐ 2 ಹಾಗೂ ಹೆಚ್ಚಿರುವ ಪ್ರದೇಶಗಳಲ್ಲಿ ಕೀಟನಾಶಕ ಸಿಂಪಡಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗಿದೆ. ಅದೇ ರೀತಿ ಸಮಸ್ಯಾತ್ಮಕ ಮಲೇರಿಯ ಪ್ರದೇಶಗಳನ್ನು ಪತ್ತೆ ಹಚ್ಚುವಲ್ಲಿ ಈ ಸೂಚ್ಯಾಂಕ ಸಹಾಯಕವಾಗುವುದು. ಈ ಸೂಚ್ಯಾಂಕವನ್ನು ಲೆಕ್ಕ ಮಾಡುವಾಗ ಒಬ್ಬ ರೋಗಿಗೆ ವರ್ಷದಲ್ಲಿ ಒಂದು ಜಾತಿಯ ಮಲೇರಿಯದ ಪ್ರಕರಣಗಳು ಎಷ್ಟೇ ಇದ್ದರೂ ರೋಗಿ ಒಬ್ಬನೆಂದು ಪರಿಗಣಿಸಲಾಗುವುದು. ಹೀಗಾಗಿ ರೋಗ ಹೆಚ್ಚಿರುವ ಸ್ಥಳಗಳಲ್ಲಿ ಒಬ್ಬ ರೋಗಿ ವರ್ಷದಲ್ಲಿ ಎಷ್ಟು ಮಲೇರಿಯ ಪ್ರಕರಣಗಳಿಂದ ನರಳುವನೆಂಬ ಮಾಹಿತಿ ದೊರೆಯುವುದಿಲ್ಲ. ರಕ್ತ ಲೇಪನದ ಸಂಗ್ರಹಣೆಯ ಪರಿಣಾಮ ಈ ಸೂಚ್ಯಾಂಕದ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಬೀರುತ್ತದೆ.

2.            ಎಸ್.ಪಿ.ಆರ್. (S.P.ಖ) :

ಎಸ್.ಪಿ.ಆರ್. = ಪತ್ತೆ ಹಚ್ಚಿದ ಮಲೇರಿಯ ಪ್ರಕರಣಗಳು       x 100

ಪರೀಕ್ಷಿಸಿದ ರಕ್ತ ಲೇಪನಗಳ ಸಂಖ್ಯೆ

ಈ ಸೂಚ್ಯಾಂಕ ಎ.ಪಿ.ಐ ಗಿಂತಲೂ ಸೂಕ್ಷ್ಮವಾದದ್ದು, ರಕ್ತ ಲೇಪನದ ಸಂಗ್ರಹಣೆಯಲ್ಲಿ ಕುಂದು ಕೊರತೆಗಳಿದ್ದಾಗ್ಯೂ ಈ ಸೂಚ್ಯಾಂಕ ಮಲೇರಿಯ ರೋಗದ ನಿಜ ಸ್ಥಿತಿಯನ್ನು ತೋರಿಸುತ್ತದೆ. ಈ ಸೂಚ್ಯಾಂಕದ ಅನುಕೂಲವನ್ನು ತೀವ್ರ ಮಲೇರಿಯ ಪ್ರದೇಶಗಳನ್ನು ಕಂಡುಕೊಳ್ಳುವ ಕಾರ್ಯಕ್ರಮದಲ್ಲಿ ಉಪಯೋಗಿಸಲಾಗುವುದು.

3.            ಪಿ.ಎಫ್. % (P.ಈ. %) :

ಪಿ.ಎಫ್. % =   ಪತ್ತೆಯಾದ ಫ್ಯಾಲ್ಯಿಪ್ಯಾರಂ ಪ್ರಕರಣಗಳು                    x 100

ಪತ್ತೆಯಾದ ಒಟ್ಟು ಮಲೇರಿಯ ಪ್ರಕರಣಗಳು

4.            ಎಸ್.ಎಫ್.ಆರ್. (S.ಈ.ಖ.) :

ಎಸ್.ಎಫ್.ಆರ್ = ಪತ್ತೆಯಾದ ಫ್ಯಾಲ್ಯಿಪ್ಯಾರಂ ಪ್ರಕರಣಗಳು                              x 100

ಪರೀಕ್ಷಿಸಿದ ರಕ್ತಲೇಪನಗಳ ಸಂಖ್ಯೆ

ಫ್ಯಾಲ್ಯಿಪ್ಯಾರಂನಿಂದ ತೀವ್ರ ಮಲೇರಿಯ ರೋಗ ಬರಬಹುದಾದ್ದರಿಂದ, ಈ ಸೂಚ್ಯಾಂಕದ ಅವಶ್ಯಕತೆ ಹೆಚ್ಚು, ಇದರ ಜೊತೆ ಪಿ.ಎಫ್. % ಸೂಚ್ಯಾಂಕ ಯಾವ ಪ್ರದೇಶಗಳಲ್ಲಿ ತೀವ್ರ ಮಲೇರಿಯ ರೋಗ ಹಾಗೂ ಮಲೇರಿಯ ಸಾವು ಬರಬಹುದೆಂಬ ಮಾಹಿತಿಯನ್ನು ಒದಗಿಸುತ್ತವೆ.

ಕೊನೆಯ ಮಾರ್ಪಾಟು : 6/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate