অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾರ್ಯಾಚರಣೆಯ ಎರಡು ಹಂತ

ಕಾರ್ಯಾಚರಣೆಯ ಎರಡು ಹಂತ

1) ಸಕ್ರಿಯ ಜ್ವರ ಮಲೇರಿಯ ಸಮೀಕ್ಷಣೆ  :

ಮಲೇರಿಯ ರೋಗವನ್ನು ಹರಡಬಲ್ಲ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಪ್ಲಾಸ್ಮೋಡಿಯ ಪರಾವಲಂಬಿ ಜೀವಾಣುಗಳು ಪಿತ್ತಜನಕಾಂಗದ ಅಣುಕೋಶಗಳನ್ನು ಹೊಕ್ಕಿ ಮರೋತ್ಪತ್ತಿಹೊಂದಿ ಹೊರಬಂದ ಕೆಂಪು ರಕ್ತ ಕಣಗಳನ್ನು ಹೊಕ್ಕಿ ಮರೋತ್ಪತ್ತಿ ಹೊಂದಿ ರೋಗ ಉಂಟು ಮಾಡಲು ಸುಮಾರು 15 ರಿಂದ 20 ದಿನಗಳು ಬೇಕಾಗುವುದು. ಈ ಕಾರಣದಿಂದ ಸಕ್ರಿಯ ರಕ್ತಲೇಪನ ಸಂಗ್ರಹ ಕಾರ್ಯಾಚರಣೆಯನ್ನು 15 ದಿನಗಳಿಗೊಮ್ಮೆ ಆರೋಗ್ಯ ಕಾರ್ಯಕರ್ತರಿಂದ ಕಾರ್ಯಗೊಳಿಸಲಾಗುವುದು. ಈ ಕಾರ್ಯ ಚಟುವಟಿಕೆಗೆ ಅನುಗುಣವಾಗಿ ಆರೋಗ್ಯ ಕಾರ್ಯಕರ್ತರು ತಮ್ಮ ಕಾರ್ಯಾಚರಣೆಗೆ ಒಳಪಟ್ಟಿರುವ ಎಲ್ಲಾ ಹಳ್ಳಿಗಳಿಗೆ 15 ದಿನಗಳಿಗೊಮ್ಮೆಯಾದರೂ ಹೋಗಿ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಜ್ವರ ಬಂದ ವ್ಯಕ್ತಿಗಳಿಂದ ರಕ್ತ ಲೇಪನ ಸಂಗ್ರಹಣೆ ಮಾಡುತ್ತಾರೆ. ಜನಸಂಖ್ಯೆ ಹೆಚ್ಚಾಗಿರುವ ಪಟ್ಟಣ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ಕಷ್ಟಕರವಾಗಿರುವುದರಿಂದ, ಅಂಥಹ ಪ್ರದೇಶಗಳಲ್ಲಿ ರಕ್ತ ಸಂಗ್ರಹಣೆಯನ್ನು ಸ್ವಯಂಪ್ರೇರಿತ ಕಾರ್ಯಾಚರಣೆಯ (ಪ್ಯಾಸಿವ್ ಸರ್ವಿಲೆನ್ಸ್) ಮೂಲಕ ಪಡೆಯಲಾಗುವುದು.

ಮನೆಗಳಿಗೆ ಭೇಟಿ ನೀಡುವ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ಕೇಳಬೇಕಾದ ಪ್ರಶ್ನೆಗಳು :

1.            ಸದ್ಯದಲ್ಲಿ ಯಾರಿಗಾದರೂ ಜ್ವರ ಬಂದಿದೆಯೇ?

2.            ಈ 15 ದಿನಗಳಿಂದ ಈ ವರೆಗೆ ಯಾರಿಗಾದರೂ ಜ್ವರ ಬಂದಿತ್ತೇ?

3.            ಜ್ವರ ಬಂದ ವ್ಯಕ್ತಿ ಕಳೆದ 2 ವಾರಗಳಲ್ಲಿ ಬೇರೆ ಊರಿಗೆ ಹೋಗಿದ್ದನೇ ಮತ್ತು ಎಷ್ಟು ದಿನಗಳ ಕಾಲ ಆ ಊರಿನಲ್ಲಿ ಉಳಿದುಕೊಂಡಿದ್ದನು?

4.            ಕಳೆದ 2 ವಾರಗಳಲ್ಲಿ ಬೇರೆ ಊರಿನಿಂದ ಸಂಬಂಧಿಗಳಾಗಲಿ, ಸ್ನೇಹಿತರಾಗಲಿ ನಿಮ್ಮ ಮನೆಗೆ ಬಂದು ವಾಸವಾಗಿರುವರೇ? ಅವರಲ್ಲಿ ಯಾರಿಗಾದರೂ ಜ್ವರ ಇದೆಯೇ?

ಈವರೆಗೆ ನಡೆಸಿದ ಆರೋಗ್ಯ ಸಮೀಕ್ಷೆಗಳ ಪ್ರಕಾರ ಯಾವುದೇ ಪ್ರದೇಶದಲ್ಲಿ ಒಂದು ತಿಂಗಳಿನಲ್ಲಿ ಸುಮಾರು 1% ಜನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಈ ವರದಿಗಳ ಮಾಹಿತಿಯನ್ನು ಮುಂದಿಟ್ಟುಕೊಂಡು ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನ ಸಕ್ರಿಯ ರಕ್ತ ಲೇಪನ ಸಂಗ್ರಹಣೆ ತಿಂಗಳಲ್ಲಿ ಕನಿಷ್ಟ 1% ಇರಬೇಕೆಂದು ನಿಗದಿಸಲಾಗಿದೆ. ಹೀಗಾಗಿ ಪ್ರತಿ ಆರೋಗ್ಯ ಕಾರ್ಯಕರ್ತನೂ ವರ್ಷದಲ್ಲಿ ಕನಿಷ್ಟ ಪಕ್ಷ 12% ರಕ್ತ ಲೇಪನಗಳ ಸಂಗ್ರಹಣೆಯ ಗುರಿ ಸಾಧಿಸಬೇಕು.

(2) ಸ್ಥಿತ ಜ್ವರ ಮಲೇರಿಯ ಸಮೀಕ್ಷಣೆ  :

ಜ್ವರ ಬಂದ ರೋಗಿ ತಾನಾಗಿ ಆರೋಗ್ಯ ಕೇಂದ್ರ, ಆಸ್ಪತ್ರೆ ಅಥವಾ ಜ್ವರ ಚಿಕಿತ್ಸಾ ಕೇಂದ್ರಕ್ಕೆ (ಎಫ್.ಟಿ.ಡಿ) ಭೇಟಿ ನೀಡಿದಾಗ ಅವನಿಂದ ಪಡೆಯುವ ರಕ್ತ ಲೇಪನ ಸಂಗ್ರಹಣೆಗೆ ಸ್ಥಿತ ಜ್ವರ ಸಮೀಕ್ಷೆ ಎಂದು ಕರೆಯಲಾಗುವುದು. ಈ ಕೇಂದ್ರಗಳಿಗೆ ರೋಗಿ ಸ್ವತಃ ಭೇಟಿ ನೀಡಬೇಕಾದರೆ ಅವನಿಗೆ ರೋಗ ಸಾಕಷ್ಟು ತೊಂದರೆ ನೀಡುತ್ತಿರಬೇಕು. ಹೀಗಾಗಿ ಈ ರೋಗಿಯ ರಕ್ತ ಲೇಪನದಲ್ಲಿ ಮಲೇರಿಯ ರೋಗಾಣುಗಳು ಕಂಡು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ರಕ್ತ ಲೇಪನಗಳಿಗೆ ಪ್ರಾಮುಖ್ಯತೆ ನೀಡಿ, ಸಕ್ರಿಯ ಲೇಪನಕ್ಕಿಂತಲೂ ಮೊದಲು ಪರೀಕ್ಷೆ ಮಾಡಬೇಕು. ದೊಡ್ಡ ಪಟ್ಟಣಗಳಲ್ಲಿ ಈ ಸಮೀಕ್ಷೆ ಮಾತ್ರ ಸಾಧ್ಯ.

ಆರೋಗ್ಯ ಸಮೀಕ್ಷೆಗಳ ಮಾಹಿತಿಯ ಪ್ರಕಾರ ಆಸ್ಪತ್ರೆಗೆ ಭೇಟಿ ನೀಡುವ ಹೊಸ ರೋಗಿಗಳಲ್ಲಿ ಜ್ವರದ ಪ್ರಕರಣಗಳು ಸುಮಾರು 15% ಎಂದು ತಿಳಿದು ಬಂದಿದೆ. ಈ ಮಾಹಿತಿಗಳನ್ನು ಮುಂದಿಟ್ಟುಕೊಂಡು ಸ್ಥಿತ ರಕ್ತ ಲೇಪನ ಸಂಗ್ರಹಣೆಯ ಗುರಿಯನ್ನು ಹೊಸ ರೋಗಿಗಳ 15% ಎಂದು ನಿಗದಿಪಡಿಸಲಾಗಿದೆ.

ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಸಮೀಕ್ಷಣಾ ಕಾರ್ಯಾಚರಣೆಯ ಜೊತೆಯಲ್ಲಿ ರೋಗಿಯ ಸಾವು ನೋವನ್ನು ತಪ್ಪಿಸುವ ಹಿತದೃಷ್ಠಿಯಿಂದ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೊನೆಯ ಮಾರ್ಪಾಟು : 4/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate