অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಲೇರಿಯ ಚಿಕಿತ್ಸಾ ಕೇಂದ್ರ

ಮಲೇರಿಯ ಚಿಕಿತ್ಸಾ ಕೇಂದ್ರ

ಮಲೇರಿಯ ಸಾವನ್ನು ತಡೆಗಟ್ಟುವಲ್ಲಿ ಈ ಮಲೇರಿಯ ಚಿಕಿತ್ಸಾ ಪಾತ್ರ ಅತಿ ಮುಖ್ಯ. ಮಲೇರಿಯ ಹೆಚ್ಚಾಗಿರುವ, ಅದರಲ್ಲೂ ಫ್ಯಾಲ್ಯಿಪ್ಯಾರಂ ಹೆಚ್ಚಾಗಿ ವರದಿಯಾಗುತ್ತಿರುವ ಸ್ಥಳಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಈ ಮಲೇರಿಯ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು ಅತ್ಯಗತ್ಯ. ಈ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತ ರಕ್ತ ಲೇಪನ ಸಂಗ್ರಹಣೆಯ ಜೊತೆಯಲ್ಲಿ ಆ ಆರೋಗ್ಯ ಕೇಂದ್ರದ ಪ್ರಯೋಗಶಾಲೆಯಲ್ಲಿ ಸೂಕ್ಷ್ಮದರ್ಶಕದ ವ್ಯವಸ್ಥೆ ಇದ್ದು, ಆ ರಕ್ತಲೇಪನದ ತಪಾಸಣೆಯನ್ನು ಕೂಡಲೇ ನಡೆಸುವ ಸೌಲಭ್ಯವೂ ಇದ್ದು, ರೋಗಿ ಮಲೇರಿಯ ಜ್ವರದಿಂದ ನರಳುತ್ತಿರುವನೆಂದು ಕಂಡು ಬಂದಲ್ಲಿ ಅವನ ಔಷದೋಪಚಾರವನ್ನು ಕೂಡಲೆ ಮಾಡುವ ವ್ಯವಸ್ಥೆ ಕೂಡ ಇರುವುದು. ಈ ಕಾರ್ಯಾಚರಣೆಯಿಂದ ಮಲೇರಿಯ ಹರಡುವುದನ್ನು ಹಾಗೂ ಸಾವನ್ನು ತಡೆಗಟ್ಟಲು ಸಾಧ್ಯವಾಗುವುದು.

ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಸಾವುನೋವನ್ನು ತಡೆಗಟ್ಟಲು ಅದೇ ಹಳ್ಳಿಗಳಲ್ಲಿ ವಾಸವಾಗಿರುವ ಒಬ್ಬ ಅಕ್ಷರಸ್ಥ ಸೇವಾ ಮನೋಭಾವವುಳ್ಳ ವ್ಯಕ್ತಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ಮಲೇರಿಯ ಜ್ವರದ ಚಿಕಿತ್ಸೆಯನ್ನು ಈ ರೀತಿ ತರಭೇತಿ ನೀಡಿದ ವ್ಯಕ್ತಿಯಿಂದ ನೀಡಲು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಈ ಕಾರ್ಯ ಚಟುವಟಿಕೆಯನ್ನು ಎರಡು ರೀತಿಯ ಕೇಂದ್ರಗಳ ಸ್ಥಾಪನೆಯ ಮೂಲಕ ಮಾಡಲಾಗುವುದು.

(1)          ಔಷಧ ವಿತರಣಾ ಕೇಂದ್ರ  : ಈ ಕೇಂದ್ರಗಳಲ್ಲಿ ರೋಗಿಯ ಮಾಹಿತಿ ಪಡೆದ ನಂತರ ವಯಸ್ಸಿಗನುಗುಣವಾಗಿ ಪೂರ್ವಭಾವಿ ಮಲೇರಿಯ ಗುಳಿಗೆ (ಕ್ಲೋರೋಕ್ವಿನ್) ಉಚಿತವಾಗಿ ನೀಡುವ ವ್ಯವಸ್ಥೆ ಇರುವುದು.

(2)          ಜ್ವರ ಚಿಕಿತ್ಸಾ ಕೇಂದ  : ಈ ಕೇಂದ್ರಗಳಲ್ಲಿ ಮಲೇರಿಯ ಪೂರ್ವಭಾವಿ ಚಿಕಿತ್ಸೆ (ಕ್ಲೋರೋಕ್ವಿನ್) ವಿತರಣೆಯ ಜೊತೆಗೆ ರಕ್ತ ಲೇಪನ ಸಂಗ್ರಹಣೆಯ (ಸ್ವಯಂ ಪ್ರೇರಿತ ರಕ್ತ ಲೇಪನ) ಸೌಲಭ್ಯ ಕೂಡ ಉಚಿತವಾಗಿ ವ್ಯವಸ್ಥೆ ಇರುವುದು.

ಆರೋಗ್ಯ ಕಾರ್ಯಕರ್ತರು ತಮ್ಮ ಕಾರ್ಯಾಚರಣೆಗೆ ಒಳಪಟ್ಟಿರುವ ಹಳ್ಳಿಗಳಿಗೆ ಹೋದಾಗ ಈ ಕೇಂದ್ರಗಳಿಗೆ ತಪ್ಪದೇ ಭೇಟಿ ನೀಡಬೇಕು. ಈ ಕೇಂದ್ರಗಳ ಕಾರ್ಯಕರ್ತರನ್ನು ತಪ್ಪದೇ ಸಂಪರ್ಕಿಸಬೇಕು. ಆ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ಈ ಕೆಳಕಂಡ ಕೆಲಸಗಳನ್ನು ಮಾಡಬೇಕು.

(1)          ಆ ಕೇಂದ್ರಗಳಲ್ಲಿ ಮಾಹಿತಿಯಾದ ಜ್ವರದ ಪ್ರಸಂಗಗಳ ಪಟ್ಟಿಯನ್ನು ಪಡೆಯಬೇಕು.

(2)          ಜ್ವರ ಚಿಕಿತ್ಸಾ ಕೇಂದ್ರದಲ್ಲಿ ಸಂಗ್ರಹಿಸಿದ ರಕ್ತ ಲೇಪನಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲೆಗೆ ವಾರಕ್ಕೊಮ್ಮೆಯಾದರೂ ತಲುಪಿಸಿ, ದೃಡಪಟ್ಟ ಪ್ರಕರಣಗಳಿಗೆ ತೀವ್ರ ಚಿಕಿತ್ಸೆ ನೀಡಬೇಕು.

(3)          ಈ ಕೇಂದ್ರಗಳಿಗೆ ಆಗಿಂದಾಗ್ಗೆ ಬೇಕಾದ ಪ್ರಮಾಣದಲ್ಲಿ ಸ್ಲೈಡ್ ಹಾಗೂ ಮಲೇರಿಯ ನಿರೋಧಕ ಗುಳಿಗೆಯನ್ನು ನೀಡಬೇಕು.

(4)          ಈ ಕೇಂದ್ರಗಳ ಮಲೇರಿಯ ಲೆಕ್ಕ ಪತ್ರಗಳನ್ನು ಸಮೀಕ್ಷಣೆ ಮಾಡಬೇಕು. ಆ ಸಮಯದಲ್ಲಿ ತಪ್ಪುಗಳೇನಾದರೂ ಕಂಡು ಬಂದಲ್ಲಿ ಅವುಗಳನ್ನು ಸರಿಪಡಿಸಬೇಕು.

(5)          ಮಲೇರಿಯ ಕಾರ್ಯಕ್ರಮದ ಬಗ್ಗೆ ಈ ಕೇಂದ್ರದ ಕಾರ್ಯಕರ್ತರಿಗೆ ಆಗಾಗ್ಗೆ ತಿಳುವಳಿಕೆ ನೀಡಬೇಕು.

ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಕೆಲವೊಂದು ಪ್ರಸಂಗಗಳಲ್ಲಿ ರಕ್ತ ಲೇಪನ ಸಂಗ್ರಹಣೆಯನ್ನು ಬೇರೆ ರೀತಿಯ ಕಾರ್ಯಾಚರಣೆಯ ಮೂಲಕ ಪಡೆಯಲಾಗುವುದು. ಈ ಕಾರ್ಯಾಚರಣೆಗಳಲ್ಲೂ ಆರೋಗ್ಯ ಕಾರ್ಯಕರ್ತರೇ ರಕ್ತ ಲೇಪನ ಸಂಗ್ರಹಣೆ ಮಾಡುತ್ತಾರೆ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate