অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಲೇರಿಯ ಸಮೀಕ್ಷಣಾ ಕಾರ್ಯಾಚರಣೆ

ಮಲೇರಿಯ ಸಮೀಕ್ಷಣಾ ಕಾರ್ಯಾಚರಣೆ

ಮಲೇರಿಯ ರೋಗವನ್ನು ನಿಯಂತ್ರಿಸಲು ರೋಗಿಯ “ಶೀಘ್ರ ಪತ್ತೆ” ಹಾಗೂ “ತ್ವರಿತ ಚಿಕಿತ್ಸೆ” ಅತಿ ಮುಖ್ಯ. ಈ ಕಾರ್ಯಾಚರಣೆಯಿಂದ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಈ ಗುರಿ ಸಾಧನೆಯ ದಿಶೆಯಲ್ಲಿ, ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ, “ಯಾವ ಜ್ವರವೇ ಇರಲಿ ಅದು ಮಲೇರಿಯ ಇರಬಹುದು” ಎಂಬ ಸಂಶಯವನ್ನೊಳಗೊಡಿಸಿ ಎಲ್ಲಾ ಜ್ವರದ ಪ್ರಕರಣಗಳನ್ನು ರಕ್ತ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ರಕ್ತಲೇಪನ ಸಂಗ್ರಹಣೆ ಹಾಗೂ ಅದರ ತಪಾಸಣೆಯ ಚಟುವಟಿಕೆಯೇ ಮಲೇರಿಯ ಸಮೀಕ್ಷಣಾ ಕಾರ್ಯಾಚರಣೆ.

ರಕ್ತ ಲೇಪನ ಪಡೆಯುವ ವಿಧಾನ.

 

(1)          ರೋಗಿಯ ಉಂಗುರದ ಬೆರಳು ಕಿರು ಬೆರಳು ರಕ್ತಲೇಪನ ಪಡೆಯಲು ಸೂಕ್ತವಾದದ್ದು, ಹಸುಕೂಸುಗಳಲ್ಲಿ, ರಕ್ತವನ್ನು ಪಡೆಯಲು ಕಾಲಿನ ಹೆಬ್ಬೆರಳು ಸೂಕ್ತವಾದ ಸ್ಥಳ.

(2)          ರಕ್ತವನ್ನು ಪಡೆಯಲು ಹೆಗಡ್ನಾರ್ ಸೂಜಿಗಳನ್ನು ಮಾತ್ರ ಉಪಯೋಗಿಸಬೇಕು. ಯಾವುದೇ ಕಾರಣಕ್ಕಾಗಲಿ ಇಂಜೆಕ್ಷನ್ ಸೂಜಿಗಳನ್ನು ಉಪಯೋಗಿಸಬಾರದು.

(3)          ರಕ್ತವನ್ನು ಪಡೆಯುವುದಕ್ಕೆ ಮೊದಲು ಕೈ ಬೆರಳನ್ನು ಡೆಟ್ಟಾಲ್/ಸ್ಯಾವಲಾನ್/ಸ್ಪಿರಿಟ್ ನಿಂದ ಶುದ್ದ ಪಡಿಸಿ ಗಾಳಿಯಲ್ಲಿ ಒಣಗಿಸಬೇಕು.

(4)          ಕೈ ಬೆರಳಿನ ತುದಿಯ ಪಕ್ಕದಲ್ಲಿ ಸೂಜಿಯಿಂದ ಚುಚ್ಚಿದಾಗ ಹರಿದು ಬರುವ ರಕ್ತವನ್ನು ಶುದ್ದಗೊಳಿಸಿದ ಗಾಜಿನ ಸ್ಲೈಡಿನ ಮೇಲೆ ಮೂರದಿಂದ ನಾಲ್ಕು ಹನಿಗಳನ್ನು ಒಂದು ತುದಿಯಲ್ಲೂ ಹಾಗೂ ಮತ್ತೊಂದು ಹನಿಯನ್ನು ಗಾಜಿನ ಮಧ್ಯದಲ್ಲೂ ತೆಗೆದುಕೊಳ್ಳಬೇಕು.

(5)          ಹರಿದು ಬರುತ್ತಿರುವ ರಕ್ತವನ್ನು ಹತ್ತಿಯಿಂದ ಒತ್ತಿ ಹಿಡಿದು ನಿಲ್ಲಿಸಬೇಕು.

(6)          ಮತ್ತೊಂದು ಶುದ್ದ ಗಾಜಿನ ಸ್ಲೈಡ್‍ನಿಂದ ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ರಕ್ತದ ಹನಿಗಳನ್ನು ಹರಡಿ ತೆಳು ಹಾಗೂ ದಪ್ಪ ರಕ್ತ ಲೇಪನಗಳನ್ನು ತಯಾರಿಸಿ ಅವುಗಳನ್ನು ಗಾಳಿಯಲ್ಲಿ ಒಣಗಿಸಬೇಕು. ಹಾಗೆ ತಯಾರಿಸಿದ ರಕ್ತ ಲೇಪನಗಳಿಗೆ ಬಿಸಿಲು ಅಥವ ಸ್ಪಿರಿಟ್ ತಾಕದಂತೆ ನೋಡಿಕೊಳ್ಳಬೇಕು.

(7)          ತೆಳು ರಕ್ತ ಲೇಪನದ ಮೇಲೆ ರೋಗಿಯ ಸಂಖ್ಯೆಯನ್ನು ಪೆನ್ಸಿಲ್‍ನಿಂದ ಬರೆಯಬೇಕು.

(8)          ರೋಗಿಯ ಹೆಸರು, ವಿಳಾಸ, ವಯಸ್ಸು, ಲಿಂಗ, ರೋಗಿಯ ಸಂಖ್ಯೆ, ಇತ್ಯಾದಿ ವಿವರಗಳನ್ನು ನಿಗದಿಪಡಿಸಿದ ಎಂ.ಎಫ್ 2 ಫಾರಂನಲ್ಲಿ ಭರ್ತಿ ಮಾಡಿ ರಕ್ತ ಲೇಪನದ ಜೊತೆ ವಾರದಲ್ಲಿ ಎರಡು ಬಾರಿಯಾದರೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಬೇಕು.

ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಸಮೀಕ್ಷಣಾ ಕಾರ್ಯಾಚರಣೆಯನ್ನು ಎರಡು ಹಂತಗಳಲ್ಲಿ ಅಳವಡಿಸಲಾಗಿದೆ. ಅವು (1) ಸಕ್ರಿಯ ಜ್ವರ ಸಮೀಕ್ಷಣೆ (ಆಕ್ಟೀವ್ ಸರ್ವೀಲೆನ್ಸ್) ಹಾಗೂ (2) ಸ್ಥಿತ ಜ್ವರ ಸಮೀಕ್ಷಣೆ (ಪ್ಯಾಸೀವ್ ಸರ್ವೀಲೆನ್ಸ್).

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate