অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಲ್ಲುಗಳು

ವ್ಯಾಖ್ಯೆ

ಮೂತ್ರಪಿಂಡದಲ್ಲಿರುವ ಕಲ್ಲುಗಳೆಂದರೆ ಪುಟಾಣಿ ಹರಳುಗಳನ್ನು ಹೊಂದಿರುವ ಘನೀಕೃತ ಮೊತ್ತ. ಮೂತ್ರಪಿಂಡದಲ್ಲಿ ಏಕಕಾಲಕ್ಕೆ ಒಂದು ಅದಕ್ಕಿಂತ ಹೆಚ್ಚು ಕಲ್ಲುಗಳಿರಬಹುದು.

ಇತರೆ ಹೆಸರುಗಳು

ರೀನಲ್ ಕ್ಯಾಕ್ಯಲಿ, ನೆಫ್ರೋಲಿಟೈಸಿಸ್, ಮೂತ್ರಪಿಂಡದಲ್ಲಿ ಕಲ್ಲುಗಳು

ಕಾರಣಗಳು

  • ಕ್ಯಾಲ್ಸಿಯಂ ಕಲ್ಲುಗಳು ಬಹು ಸಾಮಾನ್ಯ.  ಮಹಿಳೆಯರಿಗಿಂತ ಪುರುಷರಲ್ಲಿ, ಅದೂ 20-30 ವಯೋಮಾನದವರಲ್ಲಿ ಇದು ಎರಡು ಅಥವಾ ಮೂರು ಪಟ್ಟು ಹೆಚ್ಚು ಸಾಮಾನ್ಯ.  ಪುನರಾವೃತ್ತಿಯ ಸಾಧ್ಯತೆ ಹೆಚ್ಚು.  ಕ್ಯಾಲ್ಸಿಯಂ ಇದರ ಅಂಶಗಳು ಅಂದರೆ, ಆಕ್ಸಲೇಟ್, ಫಾಸ್ಫೇಟ್, ಕಾರ್ಬೋನೇಟುಗಳಾಗಿ ರೂಪುಗೊಂಡು ಹರಳುಗಳಾಗುತ್ತವೆ.  ಹಲವು ಆಹಾರ ಪದಾರ್ಥಗಳಲ್ಲಿ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.  ಸಣ್ಣ ಕರುಳಿಗೆ ಸಂಬಂಧಿಸಿದ ರೋಗಗಳಿದ್ದಲ್ಲಿ, ಅದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳು ರೂಪುಗೊಳ್ಳುವ ಸಾಧ್ಯತೆ ಜಾಸ್ತಿ.
  • ಪುರುಷರಲ್ಲಿ ಯೂರಿಕ್ ಆಸಿಡ್ ಕಲ್ಲುಗಳೂ ಸಾಮಾನ್ಯ.  ಕೆಮೋಥೆರಪಿಯೊಂದಿಗೆ ಅವು ತಳಕು ಹಾಕಿಕೊಂಡಿವೆ.  ಯೂರಿಕ್ ಆಸಿಡ್ ಕಲ್ಲುಗಳೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತವೆ.
  • ಸಿಸ್ನ್ಯೂರಿಯಾ ಸಮಸ್ಯೆಯಿಂದ ನರಳುವವರಲ್ಲಿ ಸಿಸ್ಟೈನ್ ಕಲ್ಲುಗಳು ಸಾಮಾನ್ಯ.    ಪುರುಷ ಹಾಗೂ ಮಹಿಳೆಯರಿಬ್ಬರಲ್ಲಿ ಕಾಣಸಿಗುವ ಈ ಸಮಸ್ಯೆ ಮೂಲತಃ ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ.
  • ಮೂತ್ರಕೋಶ ಅಂಗವ್ಯೂಹದಲ್ಲಿನ ಸೋಂಕಿನ ಪರಿಣಾಮವಾಗಿ ಕಾಣಿಸಿಕೊಳ್ಳುವುದು ಸ್ಟ್ರುವೈಟ್ ಕಲ್ಲುಗಳು ಮಹಿಳೆಯರಿಗೆ ಮಾತ್ರ.   ಮೂತ್ರ ಪಿಂಡ, ಮೂತ್ರ ಕೋಶ ಹಾಗೂ ಮೂತ್ರನಾಳಕ್ಕೆ ಅಡ್ಡಿಯುಂಟು ಮಾಡುವಷ್ಟು ದೊಡ್ಡದಾಗಬಹುದು.
  • ಇತರ ಪದಾರ್ಥಗಳು ಹರಳುಗಟ್ಟಿ, ಘನರೂಪ ತಾಳಿ, ಕಲ್ಲುಗಳಾಗಿ ರೂಪಗೊಳ್ಳಬಹುದು.

ಲಕ್ಷಣಗಳು

  • ಕಿಬ್ಬೊಟ್ಟೆಯಲ್ಲಿ ಅಳ್ಳೆಯಲ್ಲಿ ನೋವು ಅಥವಾ ಬೆನ್ನು ನೋವು
  • ಒಂದು ಅಥವಾ ಎರಡೂ ನೋವು
  • ಕ್ರಮೇಣ ಹೆಚ್ಚುತ್ತದೆ
  • ಹೆಚ್ಚು ತೀವ್ರ
  • ಹೊಟ್ಟೆ ನೋವು
  • ಕಿಬ್ಬೊಟ್ಟೆಗೆ, ಸೊಂಟದಲ್ಲಿ, ಗುಪ್ತಾಂಗಗಳಿಂದ ಹೊರ ಸೂಸುವ ನೋವು
  • ತಲೆ ಸುತ್ತುವಿಕೆ, ವಾಂತಿ
  • ಪದೇ ಪದೇ ಮೂತ್ರ ವಿಸರ್ಜನೆ, ತುರ್ತು ವಿಸರ್ಜನೆ ಅಥವಾ ವಿಸರ್ಜಿಸುವ ಒತ್ತಡ
  • ಮೂತ್ರದಲ್ಲಿ ರಕ್ತ
  • ಹೊಟ್ಟೆ ನೋವು
  • ಮೂತ್ರ ವಿಸರ್ಜಿಸುವಾಗ ನೋವು
  • ರಾತ್ರಿ ಸಮಯದಲ್ಲಿ ಹೆಚ್ಚಿದ ಮೂತ್ರ ವಿಸರ್ಜನೆ
  • ಮೂತ್ರ ಮಾಡಲು ಹಿಂಜರಿಕೆ
  • ವೃಷಣಗಳಲ್ಲಿ ನೋವು
  • ಗೆಜ್ಜೆಯಲ್ಲಿ ನೋವು
  • ಜ್ವರ
  • ನಡುಕ
  • ಅಸಹಜವಾದ ಮೂತ್ರದ ಬಣ್ಣ.
  • ತಪಾಸಣೆಗಳು ಹಾಗೂ ಪರೀಕ್ಷೆಗಳು

    ಮಾದಕ ವಸ್ತುಗಳನ್ನು ಬಳಸುವಷ್ಟು ತೀವ್ರ ನೋವು.  ಹೊಟ್ಟೆ ಅಥವಾ ಬೆನ್ನು ಸ್ಪರ್ಶಿಸಿದಾಗ ತೀರಾ ಮೃದು.  ಕಲ್ಲುಗಳು ದೊಡ್ಡದಾಗಿದ್ದಷ್ಟು, ಪದೇ ಪದೇ ಕಾಣಿಸಿಕೊಂಡರೆ ಅದು ಮೂತ್ರಪಿಂಡ ವೈಫಲ್ಯದ ಸಂಕೇತ.

    • ಒತ್ತಡ ಪೂರ್ವಕವಾಗಿ ವಿಸರ್ಜಿಸಿದಾಗ, ಮೂತ್ರ ನಾಳದಲ್ಲಿ ಕಲ್ಲುಗಳು ಬರಬಹುದು.
    • ಈ ಕಲ್ಲುಗಳನ್ನು ಅವಲೋಕಿಸಿದಾಗ, ಕಲ್ಲಿನ ವಿಧ ಪತ್ತೆಯಾಗುತ್ತದೆ.
    • ಮೂತ್ರದ ತಪಾಸಣೆಯಿಂದ ಕಲ್ಲುಗಳು ಹಾಗೂ ಕೆಂಪು ರಕ್ತದ ಕಣಗಳನ್ನು ಪತ್ತೆ ಹಚ್ಚಬಹುದು.
    • ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ.

    ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಈ ಕೆಳಕಂಡ ವಿಧಾನದಿಂದ ಪತ್ತೆ ಹಚ್ಚಬಹುದು:

    • ಮೂತ್ರಪಿಂಡದ ಅಲ್ಪ್ಟಾ ಸೌಂಡ್
    • ಐವಿಪಿ (ಇಂಟ್ರಾವೀನಸ್ ಪೈಲೋಗ್ರಾಮ್)
    • ಹೊಟ್ಟೆಯ ಕ್ಷ-ಕಿರಣಗಳು
    • ಸಂಪ್ರದಾಯಿಕ ಪೈಲೋಗ್ರಾಮ್
    • ಹೊಟ್ಟೆಯ ಸಿಟಿ ಸ್ಕ್ಯಾನ್
    • ಹೊಟ್ಟೆಯ/ ಮೂತ್ರಪಿಂಡದ MRI

    ಈ ತಪಾಸಣೆಗಳು ರಕ್ತ ಅಥವಾ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರಬಹುದು.

    • ಮೂತ್ರನಾಳದ ಸೋಂಕು
    • ಮೂತ್ರನಾಳದಲ್ಲಿ ಅಡಚಣೆ,
    • ಮೂತ್ರಪಿಂಡಗಳಿಗೆ ಹಾನಿ,
    • ಹಾನಿಗೊಂಡ ಮೂತ್ರದ ಕಾರ್ಯ ಕ್ಷಮತೆ ತಗ್ಗಬಹುದು ಅಥವಾ ಸಂಪೂರ್ಣ ನಿಲ್ಲಬಹುದು.

    ತಡೆಯುವುದು

    ಮೂತ್ರಪಿಂಡ ಕಲ್ಲುಗಳಿದ್ದವರು, ಹೆಚ್ಚೆಚ್ಚು ನೀರು ಕುಡಿಯಬೇಕು. ಇದರಿಂದ, ಮೂತ್ರದ ಸಾರ ಕಡಿಮೆಯಾಗುತ್ತದೆ. ದಿನಕ್ಕೆ 6-8 ಗ್ಲಾಸು ನೀರನ್ನು ಕುಡಿಯಬೇಕು. ಮೂತ್ರದಲ್ಲಿರುವ ಕಲ್ಲಿನ ವಿಧವನ್ನು ಗುರುತಿಸಿ, ಚಿಕಿತ್ಸಾ ಕ್ರಮವನ್ನು ರೂಪಿಸಬೇಕು.

    ಸಚಿತ್ರ ವಿವರಣೆಗಳು

     

    ಮೂಲ:ಪೋರ್ಟಲ್ ತಂಡ

    ಕೊನೆಯ ಮಾರ್ಪಾಟು : 5/7/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate