ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಮೂಳೆ / ಆರ್ಥ್ರೈಟಿಸ್‌
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರ್ಥ್ರೈಟಿಸ್‌

ಕೀಲುಗಳ ಉರಿಯೂತಕ್ಕೆ ಆರ್ಥ್ರೈಟಿಸ್‌ ಎನ್ನುತ್ತಾರೆ. ಇದು ೧೭೦ ಕೀಲುಗಳ ಗುಂಪಿನಲ್ಲಿ ಉಂಟಾಗುವ ನೋವು, ಪೆಡಸುತನ ಮತ್ತು ಬಾವು (ಇರಬಹುದು ಅಥವ ಇಲ್ಲದಿರಬಹುದು)ವಿಗೆ ಆರ್ಥ್ರೈಟಿಸ್‌ ಎನ್ನುತ್ತಾರೆ. ಮೂರು ಅತಿ ಸಾಮಾನ್ಯ ಆರ್ಥ್ರೈಟಿಸ್‌ಳೆಂದರೆ

ಕೀಲುನೋವು(ಆರ್ಥ್ರೈಟಿಸ್‌) ಎಂದರೇನು?

ಕೀಲುಗಳ ಉರಿಯೂತಕ್ಕೆ ಆರ್ಥ್ರೈಟಿಸ್‌ ಎನ್ನುತ್ತಾರೆ. ಇದು ೧೭೦ ಕೀಲುಗಳ ಗುಂಪಿನಲ್ಲಿ ಉಂಟಾಗುವ ನೋವು, ಪೆಡಸುತನ ಮತ್ತು ಬಾವು (ಇರಬಹುದು ಅಥವ ಇಲ್ಲದಿರಬಹುದು)ವಿಗೆ ಆರ್ಥ್ರೈಟಿಸ್‌ ಎನ್ನುತ್ತಾರೆ. ಮೂರು ಅತಿ ಸಾಮಾನ್ಯ ಆರ್ಥ್ರೈಟಿಸ್‌ಳೆಂದರೆ::

 1. ರೆಮುಟಾಯ್ಡ್‌ ಆರ್ಥ್ರೈಟಿಸ್‌
 2. ಒಸ್ಟಿಯೋ ಆರ್ಥ್ರೈಟಿಸ್‌
 3. ಗೌಟ್‌

ಆರ್ಥ್ರೈಟಿಸ್‌ನ ಲಕ್ಷಣಗಳು

 • ಯಾವುದೇ ಚಲನೆ ಅಂದರೆ ನಡೆಯುವುದು, ಕುರ್ಚಿಯಿಂದ ಏಳುವುದು, ಬರೆಯುವುದು, ಟೈಪಿಂಗ್‌, ಒಂದು ವಸ್ತುವನ್ನು ಹಿಡಿಯುವುದು, ತರಕಾರಿ ಹೆಚ್ಚುವುದು ಮುಂತಾದ ಕೆಲಸಗಳನ್ನು ಮಾಡುವಾಗ ನೋವು ಅಥವಾ ಮೃದುತ್ವ ( ನೋವಿನ ಮೇಲೆ ಒತ್ತಡ) ಬೀಳುತ್ತದೆ.
 • ಕೀಲುಗಳ ಊತ, ಪಡೆಸುತನ, ಕೆಂಪಾಗುವುದು, ಮತ್ತು ಬಿಸಿಯಾದ ಅನುಭವವು ಉರಿಯೂತದ ಲಕ್ಷಣ
 • ವಿಶೇಷವಾಗಿ ಬೆಳಗಿನ ಹೊತ್ತು ಪಡೆಸುತನದ ಅನುಭವ
 • ಕೀಲುಗಳ ಸ್ಥಿತಿ ಸ್ಥಾಪಕ ಗುಣವನ್ನು ಕಳೆದು ಕೊಳ್ಳುವುದು
 • ಕೀಲುಗಳ ಪರಿಮಿತ ಚಲನೆ
 • ಕೀಲುಗಳ ವಿರೂಪ
 • ತೂಕದ ಕಳೆದುಕೊಳ್ಳುವಿಕೆ ಮತ್ತು ಸುಸ್ತು
 • ಕಾರಣ ತಿಳಿಯದ ಜ್ವರ
 • ಕ್ರೆಪಿಟಸ್‌ ( ಚಲಿಸಿದಾಗಲೆಲ್ಲ ಅದೊಂದು ಬಗೆಯ ಶಬ್ದವಾಗುವಿಕೆ)

ಆರ್ಥ್ರೈಟಿಸ್‌ ಅನ್ನು ನಿಭಾಯಿಸುವುದು ಹೇಗೆ

ಸಮರ್ಥ ನಿರ್ವಹಣೆ ಮತ್ತು ಸೂಕ್ತ ಚಿಕಿತ್ಸೆಯಿಂದ ಆರ್ಥ್ರೈಟಿಸ್‌ ಇದ್ದಾಗ್ಯೂ ಉತ್ತಮ ಬದುಕು ನಮ್ಮದಾಗಬಹುದು.

 • ಆರ್ಥ್ರೈಟಿಸ್‌ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು: ಆರ್ಥ್ರೈಟಿಸ್‌ಅನ್ನು ಸರಿಯಾಗಿ ನಿಭಾಯಿಸುವುದರಿಂದ ವೈಕಲ್ಯಗಳು ಮತ್ತು ಇತರೆ ಸಮಸ್ಯೆಗಳನ್ನು ತಡೆಯಬಹುದು.
 • ಕ್ಷ-ಕಿರಣ ಮತ್ತು ರಕ್ತ ಪರೀಕ್ಷೆಯ ಮೂಲಕ ಆರ್ಥ್ರೈಟಿಸ್‌ ಮಟ್ಟವನ್ನು ಕಂಡುಕೊಳ್ಳಬಹುದು.
 • ವೈದ್ಯರು ಸಲಹೆ ನೀಡಿದಂತೆ ನಿಯಮಿತವಾಗಿ ಔಷಧೋಪಚಾರ ಮಾಡಿಕೊಳ್ಳಬೇಕು.
 • ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು.
 • ಉತ್ತಮ ಆಹಾರ ಸೇವನೆ ಮಾಡಬೇಕು
 • ವೈದ್ಯರು ಸಲಹೆ ನೀಡಿದಂತೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು.
 • ವಿಶ್ರಾಂತಿ (ರಿಲ್ಯಾಕ್ಸೇಷನ್‌) ತಂತ್ರಗಳನ್ನು ಬಳಸಿ ಒತ್ತಡ ಮತ್ತು ಸುಸ್ತುಗಳನ್ನು ದೂರವಿಡಿ, ಸೂಕ್ತ ವಿಶ್ರಾಂತಿ, ನಿಯಮಿತ ವ್ಯಾಯಾಮ, ನಿಮ್ಮ ಕೆಲಸ ಕಾರ್ಯಗಳ ಯೋಜನೆ.
 • ಔಷಧಗಳ ಜೊತೆಗೆ ಯೋಗ ಮತ್ತು ಪರ್ಯಾಯ ಥೆರಪಿಗಳನ್ನ ಬಳಸಿರುವುದು ವೈಜ್ಞಾನಿಕವಾಗಿ ದಾಖಲಿಸಲಾಗಿದೆ.
ಮೂಲ:ಪೋರ್ಟಲ್ ತಂಡ
3.03092783505
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top