অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸರ್ವಿಕಲ್ ಸ್ಪಾಂಡಿಲೈಟಿಸ್

ಸರ್ವಿಕಲ್ ಸ್ಪಾಂಡಿಲೈಟಿಸ್

ಪೀಠಿಕೆ

ಸರ್ವಿಕಲ್ ಸ್ಪಾಂಡಿಲೈಟಿಸ್ ನ ವಿಶೇಷ ಲಕ್ಷಣ ಕತ್ತಿನ ಭಾಗದಲ್ಲಿ ಬೆನ್ನುಮೂಳೆಯ ಅಸಹಜ ಬೆಳವಣಿಗೆ. ಸವಕಳಿ ಉಬ್ಬುವುದು ಮತ್ತು ಆ ಜಾಗದಲ್ಲಿ ಇನ್ ವರ್ಟಿಬಲ್ ಡಿಸ್ಕಗಳ ಮತ್ತು ಸರ್ವಿಕಲ್ ವರ್ಟಬ್ರೆ ನಡುವೆ ಕ್ಯಾಲ್ಷಿಯಂ ಶೇಖರಣೆ. ಮಧ್ಯ ವಯಸ್ಕರು ಮತ್ತು ವಯಸ್ಸಾದವರಲ್ಲಿ ಸರ್ವಿಕಲ್ ಬೆನ್ನುಹುರಿಯ ತುಸು ಮಟ್ಟಿಗೆ ಸಾಮಾನ್ಯವಾಗಿ ಯಾವುದೆ ಲಕ್ಷಣಗಳನ್ನು ತೋರುವುದಿಲ್ಲ. ಕುಷನ್ ಮತ್ತು ವರ್ಟಬ್ರೆಯ ನಡುವಣ ಸವಕಳಿಯು ನರಗಳ ಮೇಲೆ ಒತ್ತಡ ಬೀಳುವಂತೆ ಮಾಡಬಹುದು. ಅದುಸ್ಪಾಂಡಿಲೈಟಿಸ್ ಲಕ್ಷಣಗಳಿಗೆ ಕಾರಣವಾಗಬಹುದು. ಸಾಧಾರಣವಾಗಿ ಐದನೆ ಮತ್ತು ಆರನೆಯ ಡಿಸ್ಕು( (C5/ C6), ಆರನೆ ಮತ್ತು ಏಳನೆ(C6/ C7) ಅಥವ ನಾಲ್ಕನೆ ಮತ್ತು ಐದನೆ (C4/ C5) ಸರ್ವಿಕಲ್ ವರ್ಟಬ್ರೆಗಳು ತೊಂದರೆಗೆ ಒಳಗಾಗುತ್ತವೆ.

ಲಕ್ಷಣಗಳು

ಸರ್ವಿಕಲ್ ಭಾಗದಲ್ಲಿ ಹೆಚ್ಚುತ್ತಿರುವ ಸವಕಳಿಯಿರುವ ವ್ಯಕ್ತಿಗಳು ಯಾವುದೆ ಲಕ್ಷಣ ಅಥವ ತೊಂದರೆಯನ್ನು ಅನುಭವಿಸರು.. ಸರ್ವಿಕಲ್ ನರಗಳು ಅಥವ ಬೆನ್ನು ಹುರಿಯು ಎಳೆದಂತಾದಾಗ ಇಲ್ಲವೆ ಒತ್ತಿದಂತಾದಾಗ ಮಾತ್ರ ಅವು ಗೋಚರವಾಗುವವು.

  • ಕತ್ತು ನೋವು ಕಾಣುವುದು. ಅದು ಕೈಗಳಲ್ಲಿ ಮತ್ತು ಭುಜದಲ್ಲೂ ಹರಿಯುವುದು
  • ಬಿಗಿದ ಕತ್ತು . ಅದು ತಲೆಯ ಚಲನೆಯನ್ನು ಮಿತಿಗೊಳಿಸುವುದು
  • ತಲೆನೋವು , ತಲೆಯ ಹಿಂಭಾಗದಲ್ಲಿ( ತಲೆನೋವು)
  • ಕಚಗುಳಿ, ಉರಿಯುವ ಅನುಭವ ಅಥವ ಭುಜದಲ್ಲಿ ತೋಳಿನಲ್ಲಿ ಮುಂಗೈನಲ್ಲಿ ಸ್ಪರ್ಶಜ್ಞಾನ ಇಲ್ಲದಿರುವುದು.
  • ವಾಕರಿಕೆ, ವಾಂತಿ, ಅಥವ ತಲೆಸುತ್ತಬರುವುದು
  • ಸ್ನಾಯು ದುರ್ಬಲತೆ ಅಥವ ಭುಜ, ತೋಳು ಮತ್ತು ಕೈಗಳ ಸ್ನಾಯುಗಳು ಕೆಲಸ ಮಾಡದಿರುವುದು
  • ದೇಹದ ಕೆಳ ಭಾಗದಲ್ಲಿ ದೌರ್ಬಲ್ಯ ಮತ್ತು ಮಲ, ಮೂತ್ರ ವಿಸರ್ಜನೆಯ ನಿಯಂತ್ರಣ ಕಳೆದು ಕೊಳ್ಳುವುದು ( ಬೆನ್ನು ಹುರಿಯು ಒತ್ಡಕ್ಕೆ ಒಳಗಾದರೆ).

ನಿರ್ವಹಣೆ

ಚಿಕಿತ್ಸೆಯ ಗುರಿಯು :

  • ನರಗಳ ಮೇಲಿನ ಒತ್ತಡದಿಂದ ಉಂಟಾದ ನೋವನ್ನು ಇತರ ಲಕ್ಷಣಗಳನ್ನು ನಿವಾರಿಸುವುದು
  • ಬೆನ್ನು ಹುರಿ ಅಥವ ನರಗಳ ಬೇರಿನ ಶಾಸ್ವತ ಹಾನಿಯನ್ನು ತಡೆಗಟ್ಟುವುದು.
  • ಇನ್ನೂ ಅಗಬಹದಾದ ಸವಕಳಿ ತಪ್ಪಿಸುವುದು.

ಈ ಗುರಿಗಳನ್ನು ಕೆಳಗಿನ ಕ್ರಮಗಳಿಂದ ಸಾಧಿಸಬಹುದು :

  • ಕತ್ತಿನ ಸ್ನಾಯುಗಳನ್ನು ಬಲಪಡಿಸಲು ವ್ಯಾಯಾಮವು ಲಾಭ ದಾಯಕ. ಆದರೆ ಅದನ್ನು ಸೂಕ್ತ ಸಲಹೆ ಪಡೆದು ಮಾಡಬೇಕು. ಫಿಸಿಯೋ ಥೆರಪಿಸ್ಟ್ ರ ಹತ್ತಿರ ಕಲಿತು ನಂತರ ಮನೆಯಲ್ಲಿ ನಿರಂತರ ಅಭ್ಯಾಸ ಮಾಡಬೇಕು
  • ಸರ್ವಿಕಲ್ ಕಾಲರ್ ಕತ್ತಿನ ಚಲನೆಯನ್ನು ಮಿತಿಯಲ್ಲಿಡಲು ಸರ್ವಿಕಲ್ ಕಾಲರ್ ಬಳಸಿದರೆ ನೋವು ಕಡಿಮೆ ಆಗುವುದು.
  • ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate