অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಲ್ ಝೆಮಿರ್

ಅಲ್ ಝೆಮಿರ್ ರೋಗವು ಮೆದುಳಿನ ಅವ್ಯವಸ್ಥೆಯಿಂದ ಬರುವುದು. ಅದರ ಬಗ್ಗೆ ಮೊದಲು ವಿವರಣೆ ನೀಡಿದ ಅಲ್ ಝೆಮಿರ್ ನ ಹೆಸರನ್ನೆ ಅದಕ್ಕೆ ಇಡಲಾಗಿದೆ.

ಲಕ್ಷಣಗಳು

  • ಹೆಚ್ಚುತ್ತಾ.ಹೋಗುವ ಪ್ರಾಣಾಪಾಯಕಾರಿ ಮೆದುಳ ರೋಗ.ನೆನಪು, ಯೋಚನೆ, ವರ್ತನೆಗಳ ಸಮಸ್ಯೆಯನ್ನು ಉಂಟುಮಾಡಿ  ಸಾಮಾಜಿಕ ಜೀವನದ ಮೇಲೆ ಪರಿಣಾಮಬೀರುವುದು ಅಲ್ ಝೆಮಿರ್ಮೆದುಳಿನಜೀವ ಕೋಶಗಳನ್ನು ನಾಶ ಮಾಡುವುದು.
  • ಕಲಾನುಕ್ರಮದಲ್ಲಿ ರೋಗ ಹೆಚ್ಚುತ್ತಾಹೋಗುವುದು. ,ಮತ್ತು ಇದು ಪ್ರಾಣಾಂತಿಕ.
  • ಇದು ಬಹು ಸಾಮಾನ್ಯವಾದ ಡಿಮ್ನಿಷಿಯ (ನೆನಪು ಇಲ್ಲದಿರುವುದು) ಮತ್ತು ಇತರ ಬೌಧ್ಧಿಕ ಶಕ್ತಿಗಳು ಗಂಭೀರವಾಗಿದ್ದು  ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವವು.

ಅಲ್ ಝೆಮಿರ್ನ 10 ಎಚ್ಚರಿಕೆ ಯ ಲಕ್ಚಣಗಳು

  1. ನೆನಪಿನ ನಷ್ಟ . ಇತ್ತೀಚೆಗೆ ಕಲಿತ ಮಾಹಿಯನ್ನು ಮರೆತು ಬಿಡುವುದು ಡಿಮ್ನಿಷಿಯಾದ ಅತಿಸಾಮಾನ್ಯ  ಲಕ್ಷಣಗಳಲ್ಲಿ ಒಂದು. ವ್ಯಕ್ತಿಯು ಪದೇ ಪದೇ ಮರೆಯುತ್ತಾನೆ. ಆ ಮಾಹಿತಿಯನ್ನು  ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
  2. ಚಿಕ್ಕ ಕೆಲಸ ಮಾಡುವುದರಲ್ಲಿಯೂ ಕಷ್ಟಗುವುದು.  ಡಿಮ್ನಿಷಿಯ ಇರುವ ಜನರು ಯಾವುದೇ  ಕೆಲಸವನ್ನು ಯೋಜಿಸಲು ಮತ್ತು ಮುಗಿಸಲು ಕಷ್ಟವಾಗುವುದು. ವ್ಯಕ್ತಿಯು ಅಡುಗೆ ಮಾಡುವ ಕ್ರಮದ ವಿಧವನ್ನೆ ಮರೆಯುವನು, ಯಾರಿಂದ ದೂರವಾಣಿ ಕರೆ  ಬಂದಿದೆ  ಅಥವಾ ಆಟಾಡುವ ವಿಧಾನವೂ ನೆನಪಿಗೆ ಬರುವುದಿಲ್ಲ.
  3. ಭಾಷೆಯ ಸಮಸ್ಯುದಗುವುದು.ಅಲ್ ಝೆಮಿರ್  ರೋಗಿಗಳು ಚಿಕ್ಕ ಶಬ್ದಗಳನ್ನು ಅಥವಾ ಅವುಗಳ ಪರ್ಯಾಯ  ಪದಗಳನ್ನು ಮರೆಯುವರು.  ಭಾಷಣ ಮಾಡುವುದು, ಇಲ್ಲವೆ ಬರೆಯುವುದು ಅವರಿಗೆ ಕಷ್ಟವಾಗುವುದು. ಅವರು ಟೂತ್ ಬ್ರಷ್ ಎಂಬ ಪದವನ್ನೆ ಮರೆತು  ಬಾಯಲ್ಲಿ ಇಡುವರಲ್ಲ ಅದು ಎಂದು ಸನ್ನೆ ಮಾಡುವರು.
  4. ಕಾಲ ಮತ್ತು  ಸಮಯದ ಗಡಿಬಿಡಿ  ಈ ರೋಗವಿರುವವರು ತಮ್ಮ ನೆರೆ ಹೊರೆಯಲ್ಲಿಯೇ  ಹಾದಿ ತಪ್ಪುವರು. ತಾವು ಎಲ್ಲಿದ್ದೇವೆ  ಮತ್ತು ಹೇಗೆ ಬಂದೆವು ಎಂಬುದೂ ಅವರಿಗೆ ನೆನಪೂ ಇರುವುದಿಲ್ಲ. ಮನೆಗೆ ಹೇಗೆ ವಾಪಸ್ಸು ಹೋಗಬೇಂದು ಅವರಿಗೆ ಗೊತ್ತಿರುವುದಿಲ್ಲ.
  5. ಕಳಪೆಯಾದ ಅಥವಾ ತೀರ್ಪು ತೆಗೆದುಕೊಳ್ಳುವ ಸಾಮರ್ಥ್ಯ ಕುಂದುತ್ತದೆ.  ಅಲ್ ಝೆಮಿರ್ ರೋಗವಿರುವವರು ಸರಿಯಾಗಿ ಉಡುಪು ಧರಿಸುವುದಿಲ್ಲ., ಬೇಸಿಗೆಯಲ್ಲಿ ಅಂಗಿಯ ಮೇಲೆ ಅಂಗಿ ಹಾಕುವರು. ಚಳಿಗಾಲದಲ್ಲಿ ತೆಳು ಉಡುಪುಧರಿಸುವರು. ಎಷ್ಟೋ ಸಲ ಅಪರಿಚಿತರಿಗೆ ಅಪಾರ ಹಣ ನೀಡಬಹುದು. ಖಚಿತ ತೀರ್ಮಾನ ಅವರಿಂದ ಆಗದು
  6. ಅಮೂರ್ತವಾದ ಚಿಂತನೆ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಅಲ್ ಝೆಮಿರ್  ಇರುವವರು ಸಂಕೀರ್ಣವಾದ ಮಾನಸಿಕ ಕೆಲಸ ಮಾಡಲಾರರು. ಯಾವ ಸಂಖ್ಯೆಯ ನಂತರ ಯಾವುದು ಬರುವುದು. ಅವುಗಳನ್ನು ಹೇಗೆ ಬರೆಯಬೇಕು ಎನ್ನುವುದು ಅವರಿಗೆ ಬರುವುದಿಲ್ಲ.
  7. ವಸ್ತುಗಳನ್ನು ಎಲ್ಲೋ ಇಟ್ಟು ಮರೆತುಬಿಡುವುದು ಅಲ್‌ಜಮೈರ್‌ನ ಲಕ್ಷಣ. ಉದಾ: ಐರನ್ ಬಾಕ್ಸ ಅನ್ನು ಫ್ರೀಜರ್‌ನಲ್ಲಿಡಬಹುದು
  8. ಲಹರಿಯಲ್ಲಿ  ಮತ್ತು ವರ್ತನೆಯಲ್ಲಿ ಬದಲಾವಣೆ.  ಅಲ್ಜಮೈರ್‌ ರೋಗಿಗಳು ಅತಿ  ಹೆಚ್ಚಾದ  ಮಾನಸಿಕ ಬದಲಾವಣೆಗೆ ಒಳಗಾಗುವರು. ಯಾವುದೇ ಕಾರಣವಿಲ್ಲದೆ  ಕಣ್ಣೀರು ಹರಿಸಿದ ಮರುಗಳಿಗೆ ಕೋಪದಿದ ಉದ್ರಿಕ್ತ ರಾಗುವರು
  9. ವ್ಯಕ್ತಿತ್ವದ ಬದಲಾವಣೆ . ಡಿಮಿನಿಷಿಯಾ ಇರುವವರ ವ್ಯಕ್ತಿತ್ವ ನಾಟಕೀಯವಾಗಿ ಬದಲಾಗಬಹುದು. ಅವರು ಅತಿಯಾಗಿ ಗೊಂದಲಕ್ಕೆ ಅನುಮಾನ, ಭಯ  ಇನ್ನೊಬ್ಬರ ಮೇಲೆ ಅತಿಅವಲಂಬನ ತೋರಬಹುದು
  10. ಅಲ್ ಝೆಮಿರ್  ರೋಗ ಬಂದಿರುವ ವ್ಯಕ್ತಿಯು ಜಡನಾಗುವನು. ಟಿವಿಯ ಮುಂದೆ ಗಂಟೆಗಟ್ಟಲೆ ಕುಳಿತಿರುವನು. ನಿದ್ದೆ ಹೆಚ್ಚು. ದೈನಂದಿನ ಚಟುವಟಿಕೆ ಯಲ್ಲಿ ಆಸಕ್ತಿ ಇಲ್ಲದಾಗುವುದು. ನೀವು ಈ ಬಗೆಯ ಲಕ್ಷಣಗಳನ್ನು ನಿಮ್ಮಲ್ಲಿ ಗಮನಿಸಿದರೆ, ಇಲ್ಲವೆ ಪ್ರೀತಿಪಾತ್ರರಲ್ಲಿ ಕಂಡರೆ  ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಮುಂಚಿತವಾಗಿಯೇ ರೋಗದ ಪತ್ತೆಯಾದರೆ ಅಥವ ಟಿಮ್ನಿಷಿಯಾ ಕಂಡುಬಂದರೆ ಸೂಕ್ತ ಚಿಕಿತ್ಸೆ, ಆರೈಕೆ ಮತ್ತು ಸಹಾಯಕ ಸೇವೆ  ಪಡೆಯುವುದು ಬಹು ಮುಖ್ಯ ಮೂಲ: ಶೈಲೇಶ್ ಮಿಶ್ರ -  ಸ್ಥಾಪಕ ಅದ್ಯಕ್ಷ , ಸಿಲ್ವರ್ ಇನ್ನಿಂಗ್ಸ ಫೌಂಡೇಷನ್

ಅಲ್‌ಜಮೈರ್‌ ಮತ್ತು ಮೆದುಳು ನಮಗೆ ವಯಸ್ಸಾದಂತೆ ಯೋಚನೆ ಮಾಡುವ ಮತ್ತು ನೆನಪಿಡುವ ಶಕ್ತಿ ಕುಂದುತ್ತದೆ.. ಆದರೆ ತೀವ್ರವಾದ ನೆನಪಿನ ನಷ್ಟ, ಗೊಂದಲ ಮತ್ತು ಇತರ ಪ್ರಮುಖ ಬದಲಾವಣೆಗಳು ಸಾಧಾರನವಾಗಿ ವಯಸ್ಸಾಗುವ ಪ್ರಕ್ರಿಯೆಯ ಭಾಗವಾಗಿರುವುದಿಲ್ಲ. ಅವು ಮೆದುಳಿನ ಜೀವಕೋಶಗಳು ವಿಫಲವಗುತ್ತವೆ ಎಂಬುದರ ಸಂಕೇತವಾಗಿರುತ್ತವೆ. ಮೆದುಳು   100 ಮಿಲಿಯನ್ ನರ ಕೋಶಗಳನ್ನು( ನ್ಯುರಾನು) ಹೊಂದಿದೆ, ಪ್ರತಿ ನರಕೋಶದಲ್ಲಿನ ಇತರ ಅನೇಕ ಕೋಶಗಳೊಂದಿಗೆ ಸಂವಹನ ನಡೆಸಿ ಜಲವನ್ನು ಏರ್ಪಡಿಸಿಕೊಳ್ಳುವವು. ನರಕೋಶದ ಜಾಲಗಳಿಗೆ ವಿಶೇಷ ಕೆಲಸಗಳಿವವೆ. ಕೆಲವು ಯೋಚಿಸುವುದರಲ್ಲಿ ತೊಡಗಿದರೆ, ಹಲವು ಕಲಿಯುವುದರಲ್ಲ, ಮತ್ತು ನೆನಪಿಡುವುದರಲ್ಲಿ ಮಗ್ನವಾಗಿರುವವು. ಬೇರೆಯವು  ನೋಡಲು , ಕೇಳಲು, ವಾಸನೆ ಗ್ರಹಿಸಲು ಸಹಾಯಮಾಡುವವು. ಇನ್ನೂ ಕೆಲವು ನಮ್ಮ ಸ್ನಾಯುಗಳಿಗೆ ಯಾವಾಗ ಕೆಲಸ ಮಾಡಲು ಚಲಿಸಬೇಕು ಎಂದು ಸೂಚನೆ ಕೊಡುವವು. ಕೆಲಸಗಳನ್ನು ಮಾಡಲು ಮೆದುಳುಗಳು ಚಿಕ್ಕ ಚಿಕ್ಕ ಕಾರ್ಖಾನೆಯಂತೆ ಕೆಲಸಮಾಡುವವು. ಅವು ಸಾಮಗ್ರಿಗಳನ್ನು ಪಡೆದು ಶಕ್ತಿಯನ್ನು ಉತ್ಪಾದಿಸಿ ಮತ್ತು ತ್ಯಾಜ್ಯವಸ್ತುಗಳನ್ನು ಹೊರಹಾಕುವವು. ಕೋಶಗಳು ಮಾಹಿತಿಯನ್ನು ಸಂಗ್ರಹಿಸಲು ಪ್ರಕ್ರಿಯೆ ಪ್ರಾರಂಭಿಸುವವು. ಎಲ್ಲೆವನ್ನೂ ಸುಗಮವಾಗಿ ಸಾಗಿಸಲು ಸಮನ್ವಯ ಹಾಗೂ ಹೆಚ್ಚಿನ ಪ್ರಮಾದ ಉರುವಲು ಮತ್ತು ಆಮ್ಲಜನಕ ಬೇಕು. ಅಲ್‌ಜಮೈರ್‌ ರೋಗದಿಂದ  ಮೆದುಳಿನ ಕೆಲ ಭಾಗಗಳು ಕೆಲಸ ನಿಲ್ಲಿಸುತ್ತವೆ. ಅದು ಉಳಿದವುಗಳ ಕಾರ್ಯದ ಮೇಲೆ ಪರಿಣಾಮ ಬೀರುತ್ತವೆ. ಇದು ವ್ಯಾಪಕವಾಗಿ ಹೆಚ್ಚುತ್ತಾ ಹೋಗುತ್ತದೆ. ಕೋಶಗಳು ತಮ್ಮ ಕಾರ್ಯವನ್ನು ಚೆನ್ನಾಗಿ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅಂತಿಮವಾಗಿ ಸಾಯುತ್ತವೆ.ಫಲಕ ಮತ್ತು ಎರಡು  ಅಸಹಜ ರಚನೆಗಳು  ಪ್ಲಕ್ಯು ಮತ್ತು ಟ್ಯಂಗಲ್ಸ  ನರ  ಕೋಶಗಳ ಹಾನಿಗೆ ಮತ್ತು ನಾಶಕ್ಕೆ ಕಾರಣ ಎಂದು ಅನುಮಾನಿಸಲಾಗಿದೆ.

ನರಕೋಶಗಳ ಮತ್ತು ಸಾಯುತ್ತಿರುವ ಕೋಶಗಳ ನಡುವಿನ ತಿರುಚಿದ ನಾರುಗಳಂತಹ ಟ್ಯಾಂಗಲ್ಲುಗಳ ಮಧ್ಯ ಸಂಗ್ರಹವಾಗುವುದು. ಕೆಲವು ಜನರು ವಯಸ್ಸಾದಂತೆ ಪ್ಲಕ್ಯು ಮತ್ತು ಟ್ಯಾಂಗಲ್ ಗಳನ್ನು ಸ್ವಲ್ಪ ಹೋಂದುವರು. ಆದರೆ ಅಲ್ ಝೆಮಿರ್ ರೋಗ ಬಂದವರು ಹೆಚ್ಚು ಪ್ರಮಾಣದಲ್ಲಿ ಹೊಂದಿರುತ್ತಾರೆ. ಈ ಪ್ಲಕ್ಯು ಮತ್ತು ಟ್ಯಾಂಗಲ್ಗಳು ಕಲಿಕೆಗೆ ,ನೆನಪಿಗೆ ಸಂಬಂಧಿಸಿದ ಮುಖ್ಯವಾದ  ಪ್ರದೇಶದಲ್ಲಿ

ಮುಂಚಿನ ಹಂತ ಮತ್ತು ಮುಂಚೆಯೇ ಪ್ರಾರಂಭ ಮುಂಚಿನ ಹಂತದಲ್ಲಿ ಅಲ್ಜಮೈರ್‌ ರೋಗ ಶುರುವಾಗುವ ಮೊದಲುನೆನಪು,ಯೋಚನಾಶಕ್ತಿ ಏಕಾಗ್ರತೆಗಳು ಕಡಿಮೆಯಗುವವು. ಮೊದಲ ಹಂತ ಎಂದರೆ  ವಯಸ್ಸು 65  ಕ್ಕಿಂತ ಕಡಿಮೆ ಇರುವವರು ಚಿಕಿತ್ಸೆ ಸಧ್ಯಕ್ಕೆ ಅದಕ್ಕೆ ಗುಣ ಮಾಡುವ ಚಿಕಿತ್ಸೆ ಇಲ್ಲ.  ಲಕ್ಷನಗಲಿಗೆ ಔಷಧಿಕೊಡುವರು. ಜತೆಗೆ ಸೇವೆ , ಆರೈಕೆ ಮತ್ತು ಬೆಂಬಲದಿಂದ ಅವರ ಜೀವನ  ತುಸು ಉತ್ತಮೆ ಎನಿಸುವುದು.

ಹೆಚ್ಚಿನ ಮಾಹಿತಿಗೆ ಭೇಟಿಕೊಡಿ :

ಮೂಲ  : http://www.mykerala.net/alzheimer/

ಮೂಲ  : http://www.alz.org

ಕೊನೆಯ ಮಾರ್ಪಾಟು : 11/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate