অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲಕ್ವ

ಬಹಳಷ್ಟು ಸಂಖ್ಯೆಯ ಲಕ್ವ ಹೊಡೆಯುವುದು ಮೆದುಳಿಗೆ ರಕ್ತ ಸಾಗಿಸುವ. ಶುದ್ಧ ರಕ್ತ ನಾಳವು ಕಟ್ಟಿಕೊಂಟಾಗ. ಇದು ಮೆದುಳಿನ ಕೆಲ ಬಾಗಕ್ಕೆ ಹಾನಿ ಉಂಟುಮಾಡುವುದು. ಆ ಭಾಗವು ನಿಯಂತ್ರಿಸುವ ಕಾರ್ಯಗಳ ಮೇಲಿನ ಹತೋಟಿ ತಪ್ಪುವುದು. ಕೈಯ ಬಳಕೆ ಅಥವಾ ಮಾತನಾಡುವ ಶಕ್ತಿ ಇಲ್ಲದಾಗಬಹುದು. ಈ ಹಾನಿಯು ತಾತ್ಕಾಲಿಕ ಅಥವಾ ಶಾಶ್ವತವಾಗಿರಬಹುದು, ಭಾಗಶಃ ಅಥವಾ ಸಂಪೂರ್ಣವಾಗಿರಬಹುದು. ವೈದ್ಯರು ಗಮನಿಸಿದಂತೆ ಶುರುವಾಗುವ ಮೊದಲ ಹಂತದಲ್ಲೆ ಚಿಕಿತ್ಸೆ ದೊರೆತರೆ, ರಕ್ತವು ಮೆದುಳಿಗೆ ಪುನಶ್ಚೇತನ ಹೊಂದುವ ಅವಕಾಶವಿದೆ ಮತ್ತು ಮೆದುಳು ಹಾನಿಯಾಗುವ ಅವಕಾಶ ಕಡಿಮೆ.

ಲಕ್ವವನ್ನು ಗುರಿತಿಸುವುದ ಹೇಗೆ ?

ಕೆಳಗಿನ  ಲಕ್ಷಣಗಳು ಗೋಚರವಾದರೆ ತುರ್ತಾಗಿ ವೈದ್ಯಕೀಯ ಸಹಾಯ ಪಡೆಯಬೇಕು., ಎಷ್ಟು ಬೇಗ ವೈದ್ಯರಲ್ಲಿಗೆ ಹೋದರೆ ಅಷ್ಟು ಒಳ್ಳೆಯದು. ಅವರು ಇನ್ನೂ ಹೆಚ್ಚಿನ ಹಾನಿಯಾಗದಂತೆ  ಎಚ್ಚರ ವಹಿಸುವರು. ಹಠಾತ್ತಾಗಿ ಮುಖ, ಕೈ ಕಾಲು ಅಥವ ದೇಹದ ಒಂದು ಭಾಗ ದುರ್ಬಲವಾಗುವುದು ಇಲ್ಲವೆ ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು

  • ಹಠಾತ್ತನೆ ಒಂದೇ ಕಣ್ಣು ಮಂಜಾಗುವುದು.
  • ಮಾತು ನಿಲ್ಲುವುದು, ಮಾತನಾಡಲು ತೊಂದರೆಯಾಗುವುದು.
  • ಇತರರು ಹೇಳಿದ್ದು ಅರ್ಥವಾಗದಿರುವುದು
  • ಹಠಾತ್ತಾದ ತೀವ್ರ ತಲೆ ನೋವು.
  • ಕಾರಣ ತಿಳಿಯದ ತಲೆ ಸುತ್ತುವಿಕೆ , ಅಸ್ಥಿರವಾದ ನಡಿಗೆ ಅಥವಾ ಬೀಳುವುದು ಇನ್ನೂ ಮುಂತಾದ ಲಕ್ಷಣಗಳೂ ಗೋಚರವಾಗಬಹುದು.

ಲಕ್ವದ ಇನ್ನೊಂದು ಮುನ್ಸೂಚನೆ ಎಂದರೆ ಟಿ  ಐ ಏ ಟ್ರಾನ್ಸಿಯಂಟ್ ಇಸಕೆಮಿಕ್ ಅಟ್ಯಾಕ್  ಶುದ್ಧ ರಕ್ತ ನಾಳ ಕಟ್ಟಿ ಕೊಂಡಾಗ . ಬರಬಹುದಾದ ಲಕ್ವದ ಮುನ್ನೆಚ್ಚರಿಕೆ. ಅವನ್ನು ನಿರ್ಲಕ್ಷಿಸಬಾರದು. ಮುಂದೆ  ಇನ್ನೊಂದು ಸಲ ಲಕ್ವ ಹೊಡೆವ ಸಂಭವ ಹೆಚ್ಚು. ನಿಮಗೆ ಟಿ  ಐ ಏ ಆಗಿದೆ ಎಂಬ ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಕರೆಯಿರಿ.

ಲಕ್ವ ಬರ ಬಹುದಾದ ಗಂಡಾಂತರಕಾರಿ ಅಂಶಗಳು

  • ಶುದ್ಧ ರಕ್ತನಾಳಗಳು ಪೆಡಸಾಗುವುದು.
  • ಅನಿಯಂತ್ರಿತ ಮಧುಮೇಹ
  • ರಕ್ತದ ಏರು ಒತ್ತಡ
  • ಏರಿದ ಕೊಲೆಸ್ಟ್ರಲ್ ಮಟ್ಟ
  • ಧೂಮಪಾನ
  • ಈ ಮೊದಲು ಲಕ್ವ ಹೊಡೆದಿರುವುದು  (ಟಿ  ಐ ಏ )
  • ಹೃದಯ ಬೇನೆ
  • ಕಾರ್ಟಾಯಿಸೆ ರೋಗ . (  ಮೆದುಳಿಗೆ ಶುದ್ಧ ರಕ್ತ ಒದಗಿಸುವ ಅಪಧಮನಿ).

ಲಕ್ವವನ್ನು ನಿವಾರಿಸುವುದು ಹೇಗೆ?

ನಿಮಗೆ ಪಕ್ಷಪಾತ ಅಥವಾ ಲಕ್ವ ಹೊಡೆಯುವ ಸಾಧ್ಯತೆಯ ಬಗ್ಗೆ ನಿಮ್ಮ ಕುಟುಂಬ ವೈದ್ಯರೊಡನೆ ಚರ್ಚಿಸಿ ( ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ) ಲಕ್ವ ಹೊಡೆಯುವ ಅಪಾಯವನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಿ. ಲಕ್ವ ಹೊಡೆಯುವುದನ್ನು ತಡೆಯಲು ಇರುವ ಕೆಲವು ಉಪಾಯಗಳನ್ನು ಇಲ್ಲಿ ಕೊಡಲಾಗಿದೆ: ರಕ್ತದ ಒತ್ತಡವು ಜಾಸ್ತಿ ಇದ್ದರೆ ನಿಯಂತ್ರಣದಲ್ಲಿಡಲು ವೈದ್ಯರ ಸಲಹೆ ಪಡೆಯಿರಿ.

  • ಕೊಬ್ಬು, ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಸೇವಿಸಬೇಡಿ. ಉಪ್ಪನ್ನು ತಿನ್ನಬೇಡಿ ಕೊಲೆಸ್ಟ್ರಾಲ್  ಮತ್ತು ರಕ್ತದ ಒತ್ತಡ ನಿಯಂಯತ್ರಣದಲ್ಲಿರಲಿ.
  • ಮಧುಮೇಹವಿದ್ದರೆ  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡಿ.
  • ಮದ್ಯಪಾನ ಮಿತಿಯಲ್ಲಿರಲಿ.
  • ಧೂಮಪಾನ ಬಿಡಿ, ಮಾಡದಿದ್ರೆ ಶುರುಮಾಡಬೇಡಿ

ನಿಯಮಿತವಾದ ಪರೀಕ್ಷೆಗಳು ಲಕ್ವ ಬರಬಹುದಾದ ಗಂಡಾಂತರವನ್ನು ಅರಿಯಲು ಅವಶ್ಯಕ. ಯಾವಾಗಲೂ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate