অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೆಪಟೈಟಿಸ್ ಬಿ

ವ್ಯಾಖ್ಯೆ

ಯಕೃತ್ತಿನಲ್ಲಿ ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ.   ಬಗೆಯ ಉರಿಯೂತ ಸತತ ಮದ್ಯಪಾನ ಸೇವನೆಯಿಂದಲೂ ಉಂಟಾಗಿರಬಹುದು ಅಥವಾ ವೈರಸ್ಸುಗಳೂ ಕಾರಣವಾಗಿರಬಹುದು.  ಹೈಪಟೈಟಿಸನ್ನು ಹೈಪಟೈಟಿಸ್ ಎ, ಬಿ. ಸಿ, ಇ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್ಸುಗಳಿಂದಲೂ ಹರಡಬಹುದು.  ಪ್ರತಿ ವೈರಸ್ಸೂ ವಿಶಿಷ್ಟವಾದ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ ಹಾಗೂ ಕೆಲ ರೋಗ ಲಕ್ಷಣಗಳಲ್ಲಿ ಸಾಮ್ಯತೆಯಿದ್ದರೂ, ಹಲವಾರು ಪ್ರಮುಖ ಲಕ್ಷಣಗಳು ಬೇರೆಯಾಗಿರುತ್ತವೆ. ಹೆಪಟೈಟಿಸ್ ಬಿ ಸೋಂಕು ತಗುಲಿದ ಆರು ತಿಂಗಳಲ್ಲಿ ಆ ವೈರಸ್ಸಿನ ಪ್ರಭಾವದಿಂದ ಹೊರ ಬರುತ್ತಾರೆ.  ಅಲ್ಪಾವಧಿ ಸೋಂಕನ್ನು ಹೆಪಟೈಟಿಸ್ ಬಿ ತೀವ್ರ ಪ್ರಕರಣ ಎಂದು ಗುರುತಿಸಲಾಗುತ್ತದೆ.

ಕಾರಣಗಳು

ಹೆಪಟೈಟಿಸ್ ಬಿ ಸೋಂಕು ರಕ್ತ ಮತ್ತಿತ್ತರ ಜೀವದ್ರವಗಳ ಮುಖಾಂತರ ಹರಡುತ್ತದೆ.  ಸೋಂಕು ಈ ಕೆಳಕಂಡ ಸಂದರ್ಭಗಳಲ್ಲಿ ಹರಡಬಹುದು:

  • ಆಸ್ಪತ್ರೆಗಳಲ್ಲಿ ರೋಗಿಯ  ರಕ್ತದೊಂದಿಗೆ ಸಂಪರ್ಕ ಬಂದಾಗ –ಇದರಿಂದ ವೈದ್ಯರು, ದಾದಿಯರು, ದಂತವೈದ್ಯರು, ಮತ್ತಿತ್ತರ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲುವ ಅವಕಾಶ ಹೆಚ್ಚು.
  • ಸೋಂಕುಪೀಡಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕತೆ
  • ರಕ್ತಪೂರಣ ಪ್ರಕ್ರಿಯೆ
  • ಮಾದಕ ವ್ಯಸನದಲ್ಲಿ, --ಒಬ್ಬರ ಸೂಜಿಯನ್ನು ಮತ್ತೊಬ್ಬರು ಬಳಸಿದಾಗ
  • ಕಲುಷಿತ ಸಾಧನಗಳನ್ನು ಬಳಸಿ, ಹಚ್ಚೆ ಅಥವಾ ಆಕ್ಯುಪೆಂಚರ್ ಚಿಕಿತ್ಸೆ ಪಡೆದಾಗ
  • ಜನನದಲ್ಲಿ –ಸೋಂಕು ಪೀಡಿತ ತಾಯಿಯಿಂದ ಮಗುವಿಗೆ ಸೋಂಕು ಹರಡಬಹುದು.

ಆರೋಗ್ಯ ಕಾರ್ಯಕರ್ತರಿಗೆ ಹಾಗೂ ರೋಗಿಯೊಂದಿಗೆ ವಾಸ ಮಾಡುವವರಿಗೆ ಹೆಪಟೈಟಿಸ್ ಬಿ ಹರಡುವ ಸಾಧ್ಯತೆ ಜಾಸ್ತಿ.  ಆದ್ದರಿಂದ ಇವರು ಹೆಪಟೈಟಿಸ್ ಬಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.ತೀವ್ರದ ಸ್ವರೂಪದ ಹೆಪಟೈಟಿಸ್ ಸಂದರ್ಭದಲ್ಲಿ ಸೋಂಕು ತಗುಲಿದ 1-6 ತಿಂಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು.  ಆರಂಭಿಕ ಹಂತದಲ್ಲಿ ವಾಂತಿ, ತಲೆಸುತ್ತುವಿಕೆ, ಹಸಿವಾಗದಿರುವಿಕೆ, ಸುಸ್ತು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಗಾಢವರ್ಣದ ಮೂತ್ರ ಮತ್ತು ತಿಳಿ ವರ್ಣದ ಮಲ ವಿಸರ್ಜನೆ ಕಾಮಾಲೆಯೊಂದಿಗೆ ಕಾಣಿಸಿಕೊಳ್ಳುತ್ತವೆ.  ಯಕೃತ್ತು ಸಂಪೂರ್ಣವಾಗಿ ಹಾಳಾಗಿರುವುದರಿಂದ, ಶೇ. 1 ರಷ್ಟು ರೋಗಿಗಳು ಹೆಪಟೈಟಿಸ್ ಬಿ ರೋಗದ ಆರಂಭಿಕ ಹಂತದಲ್ಲಿಯೇ ಸಾವನ್ನುಪ್ಪುತ್ತಾರೆ. ಸೋಂಕಿನ ಸಂದರ್ಭದಲ್ಲಿ ರೋಗಿಯ ವಯಸ್ಸು ರೋಗದ ತೀವ್ರತೆಯನ್ನು ಅವಲಂಬಿಸಿರುತ್ತದೆ.  ಹೆಪಟೈಟಿಸ್ ಬಿ ಸೋಂಕು ಪೀಡಿತ ಶೇ. 90 ನವಜಾತ ಶಿಶುಗಳು, ಶೇ. 50ರಷ್ಟು ಮಕ್ಕಳು, ಹಾಗೂ ಶೇ.5ಕ್ಕಿಂತಲೂ ಕಡಿಮೆ ಪ್ರೌಢರು, ತೀವ್ರತೆರನಾದ ಸ್ಥಿತಿಯನ್ನು ತಲುಪುತ್ತಾರೆ. ಹೆಪಟೈಟಿಸ್ ಬಿ ವೈರಸ್ಸಿನಿಂದ ಉಂಟಾಗುವ ಸೋಂಕಿಗೆ ದೇಹ ನೀಡುವ ಪತ್ರಿಕ್ರಿಯೆಯೇ ಅತಿ ಹೆಚ್ಚಿನ ಹಾನಿಯುಂಟು ಮಾಡುತ್ತದೆ.  ಸೋಂಕ ಪೀಡಿತ ಯಕೃತ್ತಿನ ಜೀವಕೋಶ (ಹೆಪಟೋಸೈಟ್) ವಿರುದ್ದ ದೇಹದ ರೋಗ ನಿರೋಧಕ ವ್ಯವಸ್ಥೆ ನಡೆಸುವ ದಾಳಿಯಿಂದ ಯಕೃತ್ತಿನ ಉರಿಯೂತ ಹೆಚ್ಚಾಗುತ್ತದೆ.  ಇದರ ಪರಿಣಾಮವಾಗಿ, ಯಕೃತ್ತಿನಿಂದ ಒಸರುವ ಪಿತ್ತ ರಸವು, ರಕ್ತ ವನ್ನು ಸೇರುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ಪ್ರೋಥ್ರೋಂಬಿನ್ ರಸಾಯನಿಕದ ಉತ್ಪಾದಿಸುವ ಶಕ್ತಿ ಕುಂಠಿತವಾಗುತ್ತದೆ.  ಇದರಿಂದ ರಕ್ತ ಹೆಪ್ಪುಗಟ್ಟಲು ಹೆಚ್ಚು ಸಮಯ ಬೇಕಾಗುತ್ತದೆ. ಯಕೃತ್ತಿಗುಂಟಾದ ಹಾನಿಯಿಂದ ರಕ್ತದಲ್ಲಿ ಬಿಲಿರುಬಿನ್ ಪ್ರಮಾಣ ಹೆಚ್ಚಾಗಿ, ಕಾಮಾಲೆಗೆ ಕಾರಣವಾಗುತ್ತದೆ.

ರೋಗ ಲಕ್ಷಣಗಳು

  • ಆಯಾಸ, ಕೀಲು ನೋವು, ಸಣ್ಣಗೆ ಜ್ವರ ,
  • ತಲೆಸುತ್ತುವಿಕೆ, ವಾಂತಿ, ಹಸಿವಾಗದಿರುವಿಕೆ ಮತ್ತು ಹೊಟ್ಟೆ ನೋವು
  • ಕಾಮಾಲೆ ಹಾಗೂ ಗಾಢ ವರ್ಣದ ಮೂತ್ರ

ಪರೀಕ್ಷೆಗಳು ಮತ್ತು ತಪಾಸಣೆಗಳು

  • ಹೆಪಟೈಟಿಸ್ ಬಿ ಸರ್ಫೇಸ್ ಆಂಟಿಜೆನ್ (ಹೆಚ್ ಬಿ ಎಸ್ ಏ  ಗಿ ) --  ಸೋಂಕು ತಗುಲಿದ ನಂತರ ರೋಗಿಗೆ ನಡೆಸುವ ಈ ರಕ್ತ ಪರೀಕ್ಷೆಯ ಮೂಲಕ ವೈರಸ್ಸನ್ನು ಪತ್ತೆ ಹಚ್ಚಬಹುದು.  ಇಂದು ಸುಮಾರು 1-2 ತಿಂಗಳಲ್ಲಿ ಈ ವೈರಸ್ಸು, ರಕ್ತದಿಂದ ನಾಪತ್ತೆಯಾಗುತ್ತದೆ.
  • ಹೆಪಟೈಟಿಸ್ ಬಿ ಕೋರ್ ಅಂಟಿಬಾಡಿ (ಅಂಟಿ -ಹೆಚ್ ಬಿ ಸಿ ) –ಈ ಪರೀಕ್ಷೆಯನ್ನು ಹೆಪಟೈಟಿಸ್ ಬಿ ಆಂಟಿಜೆನ್ ಪತ್ತೆಯಾದ ಒಂದೆರಡು ವಾರಗಳಲ್ಲಿ ನಡೆಸಲಾಗುತ್ತದೆ.
  • ಹೆಪಟೈಟಿಸ್ ಬಿ ಸರ್ಫೇಸ್ ಆಂಡಿಬಾಡಿ (ಅಂಟಿ-ಹೆಚ್ ಬಿ ಎಸ್ ) –ಲಸಿಕೆ ಹಾಕಿಸಿಕೊಂಡವರಲ್ಲಿ ಹಾಗೂ ರೋಗದಿಂದ ಈಚೆಗಷ್ಟೇ ಗುಣಮುಖರಾದವರಲ್ಲಿ ಕಂಡು ಬರುತ್ತವೆ.
  • ಹೆಪಟೈಟಿಸ್ ಬಿ ಸರ್ಫೇಸ್ ಆಂಟಿಬಾಡಿ ಹಾಗೂ ಕೋರ್ ಆಂಟಿಬಾಡಿಗಳೆರಡೂ, ಹೆಪಟೈಟಿಸ್ ಬಿ ರೋಗದಿಂದ ಗುಣಮುಖರಾದವರಲ್ಲೂ ಕಂಡು ಬರುತ್ತದೆ.
  • ಯಕೃತ್ತಿಗೆ ತೀವ್ರ ಹಾನಿಯಾಗಿರುವುದರಿಂದ, ರಕ್ತದಲ್ಲಿ ಯಕೃತ್ತಿನ ಎಂಜೈಮುಗಳ ಮಟ್ಟ ಹೆಚ್ಚಾಗಿ ಕಂಡು ಬರುತ್ತವೆ.
  • ಅಲ್ಬುಮಿನ್ ಮಟ್ಟ ಕಡಿಮೆಯಾಗುತ್ತವೆ ಮತ್ತು ಪ್ರೋತ್ರೋಂಬಿನ್ ಕಾಲವು ಕೊಂಚ ಹೆಚ್ಚಾಗಿಯೇ ಇರುತ್ತದೆ.

ಚಿತ್ರಗಳು

ಹೆಪಿಟೈಟಿಸ್ ಬಿ ವೈರಸ್

ಜೀರ್ಣಾಂಗ ವ್ಯವಸ್ಥೆ

ಮೂಲ:ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate