ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಲೈಂಗಿಕ ರೋಗಗಳು / ಆರ್ಟಿಐಗಳು/ಎಸ್ಪಿಐಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರ್ಟಿಐಗಳು/ಎಸ್ಪಿಐಗಳು

ಆರ್ಟಿಐಗಳು/ಎಸ್ಪಿಐಗಳು ಎಂದರೇನು ? ಅವು ಹೇಗೆ ಹರಡುತ್ತವೆ

ಅನೇಕ ಮಹಿಳೆಯರು ಲೈಂಗಿಕ ಸೋಂಕಿನಿಂದ ನರಳುತ್ತಾರೆ. ಇದರಲ್ಲಿ  ಯೋನಿಯ ಮೂಲಕ ಅಸಹಜ ಸ್ರಾವಗಳು ಜನನೇಂದ್ರಿಯದ ಪ್ರದೇಶದಲ್ಲಿ ಹುಣ್ಣುಗಳು ಮತ್ತು ವ್ರಣಗಳು ಮತ್ತು ಶ್ರೋಣಿಯ (ಪೆಲ್ವಿಕ್) ಸೋಂಕುಗಳು ಸೇರುತ್ತವೆ. ಪುರುಷರಿಗೂ ಸಾಮಾನ್ಯವಾಗಿ ಸೋಂಕುಗಳು ಇರುತ್ತವೆ.

ಜನನೇಂದ್ರಿಯ ದ್ವಾರದ ಸೋಂಕುಗಳು (ಆರ್‍ಟಿಐಗಳು) ಎಂದರೆ ವಿವಿಧ ರೋಗಾಣುಗಳಿಂದ ಸಂಭವಿಸುವ ಜನನೇಂದ್ರಿಯಗಳ ಸೋಂಕುಗಳು. ಆರ್‍ಟಿಐಗಳು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಂಭವಿಸಬಹುದಾದರೂ, ಅವು ಮಹಿಳೆಯರಲ್ಲೇ ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಏಕೆಂದರೆ ಅವರ ದೇಹದ ರಚನೆ ಮತ್ತು ಕಾರ್ಯವಿಧಾನಗಳು ರೋಗಾಣುಗಳು ಸುಲಭವಾಗಿ ಒಳ ಪ್ರವೇಶಿಸುವಂತಿದೆ.

ಲೈಂಗಿಕ ಸಂಪರ್ಕದಿಂದ ಪಸರಿಸುವ ಆರ್‍ಟಿಐಗಳನ್ನು ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್ಟಿಐಗಳೂ) ಎಂದು ಕರೆಯುತ್ತಾರೆ. ಹೆರಿತೆಯ ಸಮಯದಲ್ಲಿ ಆಗುವ ಘಾಸಿ, ಹೆರಿಗೆ ಮತ್ತು ಗರ್ಭಪಾತದ ಸಮಯದಲ್ಲಿ  ಅನಾರೋಗ್ಯಕರವಾದ ಆಚರಣೆಗಳು, ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಯೋನಿಯಲ್ಲಿರುವ ರೋಗಾಣುಗಳು ಮಿತಿಮೀರಿ ಬೆಳೆಯುವುದು ಈ ಕಾರಣಗಳಿಂದಲೂ ಜನನೇಂದ್ರಿಯಗಳು ಸೋಂಕಿಗೆ ಗುರಿಯಾಗಬಹುದು. ಸಾಧಾರಣ ದೇಹಾರೋಗ್ಯ, ಜನನೇಂದ್ರಿಯಗಳ ನಿಕೃಷ್ಟ ಆರೋಗ್ಯ ಮತ್ತು ಚಿಕ್ಕವಯಸ್ಸಿನಲ್ಲಿಯೇ ಲೈಂಗಿಕ ಚಟುವಟಿಕೆಗಳ ಆರಂಭ-ಇವೆಲ್ಲ ಮಹಿಳೆಯರು ಈ ಸೋಂಕುಗಳಿಗೆ ಬಲಿಯಾಗುವಂತೆ ಮಾಡುವ ಅಂಶಗಳಾಗಿವೆ.

ಅನೇಕ ಮಹಿಳೆಯರು ಸಂತಾನೋತ್ಪತಿಯ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುತ್ತಾರೆ. ಜೈವಿಕ ಕಾರಣಗಳಿಂದೀ ಸೋಂಕುಗಳಿಗೆ ಮಹಿಳೆಯರ ಹೆಚ್ಚಾಗಿ ತುತ್ತಾಗುತ್ತಾರೆ. ಕಮಕ್ಕೆ ಸಂಬಂಧಿಸಿದಂತೆ ಅಸಮಾನವಾದ ಶಕ್ತಿ ಸಂಬಂಧಗಳು ಅಂದರೆ, ಲೈಂಗಿಕ ಹಿಂಸಾಚಾರ, ಪುರುಷರು ಕೆಂಡೋಮ್‍ಗಳನ್ನು ಉಪಯೋಗಿಸದೇ ಇರುವುದು ಇವುಗಳೂ ಕೂಡ ಮಹಿಳೆಯರನ್ನು ಅಪಾಯಕ್ಕೆ ಒಡ್ಡುತ್ತವೆ.

ಈ ರೋಗಗಳನ್ನು ಏಕೆ ಎದುರಿಸಿಲ್ಲ?

ಮಹಿಳೆಯರು ಸಾಮಾನ್ಯವಾಗಿ ಬಹಳ ನಾಚಿಕೆ ಸ್ವಭಾವದವರು ಅಸಹಜವಾದ ಯೋನಿಸ್ರಾವ ಮತ್ತು ಜನನೇಂದ್ರಿಯದ ಹುಣ್ಣುಗಳನ್ನು ಕುರಿತು ಚಾಲನಾಡಲು ಅವರು ಸಿದ್ಧರಿರುವುದಿಲ್ಲ. ಲೈಂಗಿಕತೆಗೆ ಸಂಬಂಧೀಸಿದ ಸಮಸ್ಯೆಗಳನ್ನು ಮೌನವಾಗಿ ಸಹಿಸಿಕೊಂಡು ಯಾತನೆಯನ್ನು ಅನುಭವಿಸುವಂತೆ ಅವರಿಗೆ ಹೇಳಿಕೊಡಲಾಗಿದೆ. ಒಬ್ಬಳು ಹೆಣ್ಣಿನಲ್ಲಿ ಆರ್‍ಟಿಐಗಳು ಇವೆಯೆಂದು ತಿಳಿದು ಬಂದರೆ, ವಿಶೇಷವಾಗಿ ಎಸ್‍ಟಿಡಿಗಳು ಇದ್ದರೆ, ಅವಳಿಗೆ 'ನಡತೆಗೆಟ್ಟ ಹೆಣ್ಣು' ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ ಎಂಬ ಹೆದರಿಕೆಯೂ ಇರುತ್ತದೆ. ವೈದ್ಯಕೀಯ ಚಿಕಿತ್ಸೆಯನ್ನು ಕೋರಲು ಹಿಂಜರಿಕೆ ಇರುತ್ತದೆ. ಏಕೆಂದರೆ ಲೈಂಗಿಕ ಶಿಕ್ಷಣದ ಕೊರತೆ ಮತ್ತು ವೈದ್ಯಕೀಯ ಪಾಲನೆ ಎಟುಕದಿರುವುದು ಅತ್ತೆಯಂತಹ 'ನಿರ್ಧಾರ ತೆಗೆದುಕೊಳ್ಳುವವರು' ಮನೆಯಲ್ಲಿರುತ್ತ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯನ್ನು ಆರೋಗ್ಯ ಕಾರ್ಯಕರ್ತರ ಬಳಿಗೆ ಕರೆದೊಯ್ಯಲು ಒಪ್ಪಿಗೆ ಕೊಡುತ್ತಾರೆ. ಆದರೆ ಯೋನಿಯ ಅಧಿಕ ಸ್ರಾವದಂತಹ  'ಕ್ಷುಲ್ಲಕ' ಲಕ್ಷಣಗಳಂತೆ  ತೋರುವುದಕ್ಕೆ ಕಳುಹಿಸಿಕೊಡುವುದಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಗಳು ಕೂಡ ಈ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿರುವಂತೆ ತೋರುತ್ತಿಲ್ಲ.

ಆರ್‍ಟಿಐಗಳನ್ನು ತೀರ ನಿಕೃಷ್ಟವೆಂದು ನಿರ್ಲಕ್ಷಿಸಲಾಗಿದೆ, ಏಕೆಂದರೆ ಅವು ಒಬ್ಬ ವ್ಯಕ್ತಿಯನ್ನು ನೇರವಾಗಿ ಬಲಿತೆಗೆದುಕೊಳ್ಳುವುದಿಲ್ಲ. ಅವು ಸಾಮಾನ್ಯವಾಗಿ ಒಬ್ಬಳು ಮಹಿಳೆಯ ದೇಹದೊಳಗೆ ಉಳಿದುಬಿಡುತ್ತದೆ. ಅವು ಅವಳಿಗೆ ನಿರಂತರವಾದ ಕಿಬ್ಬೊಟ್ಟೆಯ ಅಥವಾ ಬೆನ್ನಿನ ನೋವನ್ನು ಉಂಟುಮಾಡುತ್ತದೆ ಅಥವಾ ಅವಳನ್ನು ಬಂಜೆಯನ್ನಾಗಿ ಮಾಡುತ್ತವೆ. ಅನೇಕ ಮಹಿಳೆಯರು ಈ ಯಾತನೆಯನ್ನು ಅನುವಿಸುತ್ತಾ ಮೌನವಾಗಿ ಉಳಿದುಬಿಡುತ್ತಾರೆ.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

3.06024096386
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top