অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಏಡ್ಸ್

ಹೆಚ್ ಐವಿ ಎಂದರೇನು ?

  • ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ. (HIV)
  • ಹೆಚ್ ಐವಿ ವೈರಸ್ ಏಡ್ಸ್ ಗೆ ಕಾರಣವಾಗುವುದು.
  • ಹೆಚ್ ಐವಿ ರೋಗವಲ್ಲ ಮತ್ತು ತಕ್ಷಣ ಏಡ್ಸ್ ಗೆ ಕಾರಣವಾಗುವುದಿಲ್ಲ
  • ಹೆಚ್ ಐವಿ ಸೋಂಕಿತನು ಹಲವು ವರ್ಷಗಳ ತನಕ ಏಡ್ಸ್ ಬರುವವರೆಗೆ ಆರೋಗ್ಯಪೂರ್ಣ ಜೀವನ ನೆಡೆಸಬಹುದು.
  • ಹೆಚ್ ಐವಿ ಮಾನವ ಜೀವಿಗಳಲ್ಲಿ ಮಾತ್ರ ಕಂಡುಬರುವುದು. ಇನ್ನಾವ ಪ್ರಾಣಿಗಳಲ್ಲೂ ಇಲ್ಲ
  • ಹೆಚ್ ಐವಿ ಸೋಂಕಿತರನ್ನು ‘HIV+’ ಅಥವ ‘HIV ಪಾಜಿಟಿವ್ ಎನ್ನುವರು

ಏಡ್ಸ್ ಎಂದರೇನು?

ಏಡ್ಸ್- ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ. ಏ-ಪಡೆದ (A-ಅಂದರೆ ACQUIRED) ಅಂದರೆ.; ವಂಶ ಪರಂಪರೆಯದಲ್ಲ.ಐ-(I-ಅಂದರೆ IMMUNE) ಅಂದರೆ.,ರೋಗನಿರೋಧ ಶಕ್ತಿಡಿ -(D- ಅಂದರೆ DEFICIENCY ) ಅಂದರೆ ಕೊರತೆ ಎಸ್-( S-ಅಂದರೆ SYNDROME,) ಅಂದರೆ., ನಿರ್ದಿಷ್ಟ ರೋಗದ ಲಕ್ಷಣಗಳು. ಹೆಚ್ ಐವಿ ಯು ಮಾನವದೇಹದ ರೋಗಗಳೊಡನೆ ಹೋರಾಡುವ ನಿರೋಧ ವ್ಯವಸ್ಥೆಯನ್ನು ನಾಶಮಾಡುವುದು. ಕ್ರಮೇಣ ದೇಹದ ನಿರೋಧ ವ್ಯವಸ್ಥೆಯು ಶಿಥಿಲವಾಗಿ ರೋಗಗಳನ್ನು ಎದುರಿಸುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಈ ಹಂತದಲ್ಲಿ ಆ ವ್ಯಕ್ತಿಗೆ ಅನೇಕ ರೋಗಗಳು ಬರುವವು.

ಹೆಚ್ ಐವಿ ಯ ವಿಧಗಳು

ಎರಡು ರೀತಿಯ ಹೆಚ್ ಐವಿ ಇವೆ. ಹೆಚ್ ಐವಿ – 1 ಮತ್ತು ಹೆಚ್ ಐವಿ -2. ವಿಶ್ವದಲ್ಲಿ ಅತಿ ಹೆಚ್ಚು ಇರುವುದು ಹೆಚ್ ಐವಿ -1, ಮತ್ತು ಸಾಧಾರಣವಾಗಿ ಜನರು ಯಾವುದು ಎಂದು ನಿರ್ದಿಷ್ಟವಾಗಿ ಹೇಳದಿದ್ದರೆ ಅದು ಹೆಚ್ ಐವಿ -1 ಎಂದೆ ತೀಳಿದುಕೊಳ್ಳ ಬಹುದು. ಹೆಚ್ ಐವಿ -1 ಮತ್ತು ಹೆಚ್ ಐವಿ -2, ಎರಡೂ ದೇಹದಲ್ಲಿ 3 ರಿಂದ 6 ತಿಂಗಳಲ್ಲಿ ಆಂಟಿಬಾಡಿಗಳನ್ನು ಉತ್ಪಾದಿಸುವುದು..

ಹೆಚ್ ಐವಿ ಹರಡುವ ವಿಧಾನ

ಒಬ್ಬ ವ್ಯಕ್ತಿಯು ಹೆಚ್ ಐವಿ ಯ ಸೋಂಕನ್ನು ಕೆಳಗಿನ ಮಾರ್ಗದಲ್ಲಿ ಪಡೆಯುವನು.

  • ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಒಬ್ಬ ವ್ಯಕ್ತಿಯು ಇನ್ನೊಬ್ಬ ಹೆಚ್ ಐವಿ ಸೋಂಕಿತವ್ಯಕ್ತಿ ಯೊಂದಿಗೆ ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ತಗಲುವುದು.
  • ಸಕ್ರಮವಾಗಿ ಕ್ರಿಮಿ ಶುದ್ಧ ವಾಗದ ಸೂಜಿ ಮತ್ತು ಇತರೆ ಆಸ್ಪತ್ರೆಯ ಉಪಕರಣಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಶಸ್ತ್ರ ಕ್ರಿಯೆಯ ಉಪಕರಣಗಳಾದ ಸ್ಕ್ಯಾಪಲ್, ಸೀರಂಜು ಅಥವ ಇನ್ನಿತರ ಕೆಲ ಉಪಕರಣಗಳನ್ನು ಸೋಂಕಿತನಿಗೆ ಬಳಸಿದ ಮೇಲೆಕ್ರಿಮಿ ಶುದ್ಧ ಮಾಡದೆ ಬೆರೊಬ್ಬರ ಮೇಲೆ ಉಪಯೋಗಿಸಿದರೆ ಅವು ಸೋಂಕನ್ನು ಹರಡಬಹುದು. .
  • ಸುರಕ್ಷಿತವಲ್ಲದ ರಕ್ತ ಪೂರ್ಣಮಾಡುವುದರಿಂದ ಒಬ್ಬ ವ್ಯಕ್ತಿಗೆ ಹೆಚ್ ಐವಿ ಸೋಂಕಿರುವವರ ರಕ್ತವನ್ನು ಮರಪೂರಣ ಮಾಡಿದರೆ ಸೋಂಕು ಹರಡುವುದು.
  • ಸೋಂಕಿತ ತಾಯಿ ತಂದೆಯರಿಂದ ಮಗುವಿಗೆ: ಒಬ್ಬ ಹೆಚ್ ಐವಿ ಸೊಂಕಿತ ತಾಯಿಯು ಗರ್ಭಿಣಿಯಿದ್ದಾಗಲೆ ಅಥವ ಜನನ ಸಮಯದಲ್ಲಿ ಸೋಂಕು ಹರಡಬಹುದು. ಎದೆ ಹಾಲು ಕೂಡಾ ಸೋಂಕು ಹರಡುವ ಮಾಧ್ಯಮವಾಗಬಹುದು.

ಹೆಚ್ ಐವಿ ಹೀಗೆ ಹರಡುವುದಿಲ್ಲ

  • ಕೈಕುಲುಕುವುದರಿಂದ
  • ಸೋಂಕಿತರೊಂದಿಗೆ ಊಟಮಾಡುವುದರಿಂದ.
  • ಲಘುವಾಗಿ ಮುದ್ದಿಸುವುದರಿಂದ
  • ಗಾಳಿಯಿಂದ, ಅಥವ ಕೆಮ್ಮಿನಿಂದ, ಮತ್ತು ಸೀನುವುದರಿಂದ
  • ನೀರು ಮತ್ತು ಆಹಾರದಿಂದ
  • ಬೆವರು ಮತ್ತು ಕಣ್ಣೀರಿನಿಂದ
  • ತಟ್ಟೆ, ಲೋಟ ಮತ್ತು ಪಾತ್ರೆಗಳನ್ನು ಸೋಂಕಿತರೊಂದಿಗೆ ಹಂಚಿಕೊಳ್ಳುವುದರಿಂದ
  • ಸೋಂಕಿತರನ್ನು ಮುಟ್ಟುವುದರಿಂದ, ಅಪ್ಪಿಕೊಳ್ಳುವುದರಿಂದ
  • ಸೋಂಕಿತರು ಬಳಸಿದ ಸ್ನಾನದ ಮನೆ ಮತ್ತು ಕಕ್ಕಸನ್ನು ಉಪಯೋಗಿಸುವುದರಿಂದ
  • ಸೋಂಕಿತರ ಉಡುಪನ್ನು ತೊಡುವುದರಿಂದ
  • ಸೋಂಕಿತರ ಜೊತೆ ಇರುವುದರಿಂದ
  • ಸೊಳ್ಳೆ ನೊಣ ಮತ್ತು ಇತರ ಕೀಟಗಳಿಂದ

ಹೆಚ್ ಐವಿ ಮತ್ತು ಇತರೆ ಲೈಂಗಿಕ ರೋಗಗಳ (ಲೈಂಗಿಕವಾಗಿ ಹರಡುವ ರೋಗಗಳು) ನಡುವೆ ಸಂಬಂಧ ವಿದೆಯಾ ?

ಹೆಚ್ ಐವಿ ಮತ್ತು ಇತರೆ ಲೈಂಗಿಕ ರೋಗಗಳು ಪರಸ್ಪರ ಪರಿಣಾಮ ಬೀರುವವು. ಹೆಚ್ ಐವಿ ಇರುವ ವ್ಯಕ್ತಿಗೆ ಲೈಂಗಿಕ ರೋಗಗಳಿದ್ದರೆ ಹೆಚ್ ಐವಿ ಹರಡುವ ಅಪಾಯ ಹೆಚ್ಚಾಗುವುದು.

ಸಿನೆಮಾ ಥೇಟರಿನ ಸೀಟಿನಲ್ಲಿಂದ ಚುಚ್ಚಬಹುದಾದ ಸೂಜಿಗಳು ಹೆಚ್ ಐವಿ ಹರಡುತ್ತವೆಯೇ.?

ಹೆಚ್ ಐವಿ ಸೋಂಕು ಈ ರೀತಿಯಲ್ಲಿ ಹರಡಲು, ಸೂಜಿಯು ಹೆಚ್ಚಿನ ಮಟ್ಟದಲ್ಲಿ ವೈರಸ್ಸಿನಿಂದ ಸೋಂಕಿತವಾದ ರಕ್ತದಿಂದ ಕೂಡಿರಬೇಕು.

ಹೆಚ್ ಐವಿ ಸೋಂಕು ಹಚ್ಚೆ ಹಾಕಿಸಿಕೊಳ್ಳುವುದರಿಂದ, ದೇಹವನ್ನು ಚುಚ್ಚಿಸಿಕೊಳ್ಳುವುದರಿಂದ, ಅಥವ ಕ್ಷೌರಿಕರಿಂದ ಬರವುದು ಸಾಧ್ಯವೇ ?

ಉಪಕರಣವು ರಕ್ತದಿಂದ ಮಲಿನವಾಗಿದ್ದರೆ ಅದನ್ನು ಕ್ರಿಮಿಶುದ್ಧ ಮಾಡದಿದ್ದರೆ ಇನ್ನೊಬ್ಬರಿಗೆ ಬಳಸಿದಾಗ ಹೆಚ್ ಐವಿ ಹರಡುವ ಸಾಧ್ಯತೆ ಇದೆ. ಆದರೂ ಹಚ್ಚೆಹಾಕುವವರು ಅಥವ ದೇಹದ ಭಾಗವನ್ನು ಚುಚ್ಚುವವರು “ ಸಾರ್ವತ್ರಿಕ ಎಚ್ಚರಿಕೆ” ಯಿಂದ ಪ್ರಕ್ರಿಯೆಯನ್ನು ಅನುಸರಿಸಬೇಕು. ಅದು ರಕ್ತದಿಂದ ಹರಡುವ ಸೋಂಕುಗಳಾದ ಹೆಚ್ ಐವಿ ಮತ್ತು ಹೆಪಿಟೈತೆಸ್. ಬಿ ಗಳನ್ನು ತಡೆಯುವುದು.

ಆರೋಗ್ಯ ಸೇವೆ ನೀಡುವವರು ಹೆಚ್ ಐವಿ ಪಾಜಿಟಿವ್ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಅಪಾಯ ವಿದೆಯಾ?

ಆರೋಗ್ಯ ಸೇವೆ ನೀಡುವವರು ಹೆಚ್ ಐವಿ ಪಾಜಿಟಿವ್ ರವರ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಅಪಾಯವಾಗುವ ಸಂಭವ ತೀರಾ ಕಡಿಮೆ. ವಿಶೇಷವಾಗಿ ಅವರು ಸಾರ್ವತ್ರಿಕ ಆರೋಗ್ಯ ರಕ್ಷಣಾ ಪ್ರಕ್ರಿಯೆಗಳನ್ನು ಪಾಲಿಸಿದರೆ. ಅವರಿಗೆ ಆಗಬಹುದಾದ ಮುಖ್ಯ ಅಪಾಯವೆಂದರೆ ಅಕಸ್ಮಾತ್ತಾಗಿ ಮಲಿನವಾದ ಸೋಂಕಿತ ಸೂಜಿ ಮತ್ತು ಉಪಕರಣಗಳಿಂದ ಗಾಯವಾದರೆ ಮಾತ್ರ ಕಷ್ಟ.

ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಇದೆಯಾ ?

ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಬಹಳ ಕಡಿಮೆ. ವೃತ್ತಿಪರರಾದ ಅವರು ಸೋಂಕನ್ನು ನಿಯಂತ್ರಿಸುವ ಎಲ್ಲ ಎಚ್ಚರಿಕೆ ತೆಗೆದುಕೊಂಡಿರುವರು.

ಕಣ್ಣಿಗೆ ರಕ್ತದ ಹನಿಗಳು ಚಿಮ್ಮಿದರೆ ಹೆಚ್ ಐವಿ ಸೋಂಕು ತಗಲುವುದೆ ?

ಈ ರೀತಿಯಾಗಿ ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಹರಡುವ ಸಂಭವ ಬಹು ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ. ಬಹಳ ಕಡಿಮೆ ಸಂಖ್ಯೆಯ ಜನ ಈ ರಿತಿಯ ಸೋಂಕಿಗೆ ಒಳಗಾಗಿದ್ದಾರೆ

ಯಾರಾದರೂ ಕಚ್ಚಿದಾಗ ಹೆಚ್ ಐವಿ ಬರುವ ಸಾಧ್ಯತೆ ಇದೆಯಾ ?

ಯಾರಾದರೂ ಕಚ್ಚಿದಾಗ ಹೆಚ್ ಐವಿ ಬರುವ ಸಾಧ್ಯತೆ ಬಹು ಅಸಹಜ. ಇಂಥಹ ಪ್ರಕರಣಗಳು ಎಲ್ಲೋ ಒಂದೆರಡು ವರದಿಯಾಗಿವೆ. ತೀವ್ರವಾಗಿ ಅಂಗಾಂಶಗಳು ಮತ್ತು ಮಾಂಸ ಖಂಡಗಳು ಹರಿದು ಜೊತೆಗೆ ರಕ್ತವೂ ಬಂದಿದ್ದರೆ ಮಾತ್ರ ಇದು ಸಾಧ್ಯ.

ಮಾದಕ ವಸ್ತುವನ್ನು ಚುಚ್ಚಿಕೊಳ್ಳುವಾಗ ಇತರರ ಜೊತೆ ಅದೇ ಸೂಜಿಯನ್ನು ಕ್ರಿಮಿಶುದ್ಧ ಮಾಡದೆ ಹಂಚಿ ಕೊಂಡರೆ ಹೆಚ್ ಸೋಂಕು ಬರುವುದೆ ?

ಮಾದಕ ವಸ್ತುವನ್ನು ಚುಚ್ಚಿಕೊಳ್ಳುವಾಗ ಇತರರ ಜತೆ ಅದೇ ಸೂಜಿಯನ್ನು ಕ್ರಿಮಿಶುದ್ಧ ಮಾಡದೆ ಹಂಚಿಕೊಂಡರೆ ಹೆಚ್ ಸೋಂಕು ಬರುವ ಸಾಧ್ಯತೆ ಇದೆ. ಸೂಜಿಯಲ್ಲಿ ಸೋಂಕಿತ ರಕ್ತವಿದ್ದು ಅದು ರಕ್ತಪ್ರವಾಹವನ್ನು ಸೇರುವುದು. ಆದ್ದರಿಂದ ಸೋಂಕಿತರು ಬಳಸಿದ ಸೂಜಿಯನ್ನು ಉಪಯೋಗಿಸಿದರೆ ವೈರಸ್ ಹರಡುವುದು.

ನಾನು ಗಭಿಣಿಯಾದಾಗಲೇ ಮತ್ತು ನಂತರ ಎದೆ ಹಾಲು ನೀಡಿದರೆ ಮಗುವಿಗೆ ಸೋಂಕು ನ್ನು ಹರಡುವೆನೆ

ಸೋಂಕಿತ ಗರ್ಭಿಣಿಯು ಇನ್ನೂ ಜನಿಸದ ಮಗುವಿಗೆ ಅಥವ ಹುಟ್ಟಿದ ಕೂಡಲೆ ಹೆಚ್‌ಐವಿ ಸೋಂಕನ್ನು ಹರಡಬಹುದು. ಅಲ್ಲದೆ ಎದೆಹಾಲು ಕುಡಿಸುವುದರಿಂದಲೂ ಸೋಂಕು ಹರಡುವುದು. ಮಹೀಳೆಗೆ ಸೋಂಕು ಇದೆ ಎಂದು ಗೊತ್ತಾದಾಗ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುವುದು. ಅಲ್ಲದೆ ಹೆರಿಗೆಯನ್ನೂ ಸಹಾ ಸಿಸೆರಿಯನ್ ವಿಧಾನದಲ್ಲಿ ಮಾಡಿಸಿ ಕೊಂಡು ಮತ್ತು ಎದೆ ಹಾಲನ್ನು ಕುಡಿಸದಿದ್ದರೆ ಸೋಂಕು ತಗುಲುವುದುನ್ನು ತಡೆಯಬಹುದು.

ರಕ್ತವನ್ನು ಪಡೆಯುವುದು ಇಲ್ಲವೆ ದಾನ ಮಾಡುವುದರಿಂದ ಹೆಚ್ ಐವಿ ಬರುವ ಅಪಾಯವಿದೆಯಾ

ಕೆಲವು ಜನ ರಕ್ತ ಮರುಪೂರಣ ದಿಂದ ಹೆಚ್ ಐವಿ ಸೋಂಕಿತರಾಗಿದ್ದಾರೆ. ಆದರೆ ಈಗ ರಕ್ತ ಮರುಪೂರಣ ಮಾಡುವಾಗ ಎಲ್ಲ ರಕ್ತದ ಮಾದರಿಗಳನ್ನು ಸಂಪೂರ್ಣ ತಪಾಸಣೆ ಮಾಡುತ್ತಾರೆ ಆದ್ದರಿಂದ ರಕ್ತದಾನ ಮಾಡುವಾಗ ಇಲ್ಲವೆ ಪಡೆಯುವಾಗ ಸೋಂಕು ತಗುಲುವುವ ಸಾದ್ಯತೆ ಇಲ್ಲ.

ಹೆಚ್ ಐವಿ ಯು ದೇಹದ ಹೊರಗಿನ ಮೂಲದಿಂದ ಹರಡಬಹುದೇ?

ಹೆಚ್ ಐವಿ ಯು ದೇಹದ ಹೊರಗಿನ ಮೂಲದಲ್ಲೂ ಕೆಲಕಾಲಮಾತ್ರ ಜೀವಿಸಬಲ್ಲುದು. ಹೆಚ್ ಐವಿ ಯ ಸೋಂಕು ಚೆಲ್ಲಿದ ರಕ್ತ,, ವೀರ್ಯ ಮತ್ತು ಇತರೆ ದೇಹದ ಜೀವ ದ್ರವಗಳ ಸಂಪರ್ಕದಿಂದ ಹರಡಿದ ವರದಿಗಳು ಇಲ್ಲ. ಯಾರಾದರೂ ಸ್ವಲ್ಪ ಪ್ರಮಾಣದ ಒಣಗಿದ ರಕ್ತದ ಸಂಪರ್ಕಕ್ಕೆ ಬಂದ ಮಾತ್ರಕ್ಕೆ ಸೋಂಕು ತಗುಲುವುದಿಲ್ಲ. ವಿಜ್ಙಾನಿಗಳು ಹೆಚ್ ಐವಿ ಯು ವೈರಸ್ಸುಹೊರಗಿನ ವಾತಾವರಣದಲ್ಲಿ ಬದುಕಿ ಬೆಳೆಯದು ಎಂದು ಒಮ್ಮತದಿಂದ ಹೇಳಿದ್ದಾರೆ. ಸೋಂಕಿತ ರಕ್ತ ಅಥವ ಇತರ ದೇಹದ ಜೀವ ದ್ರವಗಳು ಒಣಗಿದಾಗ ವಾತಾವರಣದಲ್ಲೆ ಹರಡುವ ಸಾಧ್ಯತೆ ಬಹಳ ಕಡಿಮೆಯಾಗಿದೆ.

ಸುನ್ನತಿ ಮಾಡಿಸಿಕೊಳ್ಳುವುದರಿಂದ ಹೆಚ್ ಐವಿ ವಿರುದ್ಧ ರಕ್ಷಣೆ ಸಿಗುವುದೆ?

ಸಂಶೋಧನೆಗಳ ಪ್ರಕಾರ ಸುನ್ನತಿ ಮಾಡಿಸಿಕೊಂಡವರಿಗೆ 70% ವರೆಗೆ ಹೆಚ್ ಐವಿ ಸೋಂಕು ಲೈಂಗಿಕವಾಗಿ ಹರಡುವ ಸಂಭವ ಕಡಿಮೆ ಎಂದು ತಿಳಿದಿದೆ. ಇದಕ್ಕೆ ಕಾರಣ ಮುಂದೊಗಳಿನ ಒಳಪದರು ವಿಶೇಷವಾಗಿ ಹೆಚ್ ಐವಿ ಸೋಂಕಿಗೆ ಗುರಿಯಾಗುವುದು. ಆದರೂ ಸುನ್ನತಿ ಮಾಡಿಸಿಕೊಂಡರೆ ಹೆಚ್ ಐವಿ ಸೋಂಕು ತಗುಲುವುದೆ ಇಲ್ಲ ಎಂದು ಕೊಳ್ಳಬಾರದು. ಬರುವ ಪ್ರಮಾಣ ಮಾತ್ರ ಕಡಿಮೆ. ಅವರೂ ಸಹಾ ಇತರರಂತೆ ಸೋಂಕನ್ನು ಹರಡುವರು.

ಆಂಟಿ ರೆಟ್ರೊವೈರಲ್ ಔಷಧಿ ಸೇವಿಸುತ್ತಿದ್ದು ನನ್ನ ದೇಹದ ವೈರಲ್ ಲೋಡು ಪತ್ತೆಹಚ್ಚಲಾರದಷ್ಟು ಕಡಿಮೆ ಆದಾಗಲೂ ನಾನು ಸೋಂಕಿತನೆ ?

ನೀವು ಚಿಕಿತ್ಸೆ ಪಡೆಯುತ್ತಿದ್ದರೂ ಮತ್ತು ನಿಮ್ಮ ರಕ್ತದಲ್ಲಿನ ಹೆಚ್ ಐವಿ ಮಟ್ಟ ಅತಿ ಕಡಿಮೆ ಇದ್ದರೂ, ವೈರಸ್ಸು ಸಂಪೂರ್ಣವಾಗಿ ನಾಶವಾಗುವುದಿಲ್ಲ. ಮತ್ತು ನೀವು ಸೋಂಕನ್ನು ಇತರರಿಗೆ ಹರಡಲು ಸಾಧ್ಯ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate