অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿನ್ನಲೆ

ಆಂಗ್ಲ ಭಾಷೆಯಲ್ಲಿ ಹ್ಯೂಮನ್ ಇಮ್ಯೂನೊ ಡೆಫಿಶಿಯನ್ಸಿ ವೈರೆಸ್ ಎಂಬುದವುದರ ಸಂಕ್ಷಿಪ್ತ ರೂಪವೇ “ಹೆಚ್.ಐ.ವಿ” ಅಂದರೆ ಮನುಷ್ಯನ ದೇಹದಲ್ಲಿರುವ ಸಹಜವಾದ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ಅಥವಾ ಕೊರತೆಯನ್ನುಂಟು ಮಾಡುವ ಒಂದು ವೈರಾಣು ಎಂದರ್ಥ.

ಏಡ್ಸ್ ಎಂದರೆ ಆಂಗ್ಲ ಭಾಷೆಯಲ್ಲಿ ಅಕ್ವೈರ್ಡ್ ಇಮ್ಯೂನೊ ಡೆಫಿಶಿಯನ್ಸಿ ಸಿಂಡ್ರೋಮ್,ಅಂದರೆ ಅರ್ಜಿತ ರೋಗನಿರೋಧಕ ಶಕ್ತಿಯ ಲಕ್ಷಣಗಳ ಕೂಟ. ಅರ್ಜಿತ ಎಂದರೆ ಸಂಪಾದಿಸಿದ್ದು ಅಥವಾ ಪಡೆದುಕೊಂಡಿದ್ದು ಎಂದು ಅರ್ಥ. ಅಂದರೆ ಹೆಚ್.ಐ.ವಿ.ಯು ಅನುವಂಶೀಯವಾಗಿ ಅಥವಾ ಗಾಳಿಯಿಂದ, ಆಹಾರದಿಂದ ಆಕಸ್ಮಿಕವಾಗಿ ಬಂದ ಸೋಕಲ್ಲ. ತನ್ನ ನಡವಳಿಕೆಯಿಂದಾಗಿ ಅರ್ಜಿಸಿದ ಸೋಕು.

ಹೆಚ್.ಐ.ವಿ ಮತ್ತು ಏಡ್ಸ್ ಅಂದರೆ

H - ಹೆಚ್ = ಹ್ಯೂಮನ್ (ಮಾನವ)

I – ಐ = ಇಮ್ಯೂನೊ ದೆಫಿಶಿಯನ್ಸಿ(ರೋಗನಿರೋಧಕ ಶಕ್ತಿಯ ಕೊರತೆ)

V – ವಿ = ವೈರಸ್ (ವೈರಾಣು)

A – ಏ = ಅಕ್ವೈರ್ಡ್ (ಅರ್ಜಿತ) ಆಹ್ವಾನಿಸಿಕೊಂಡ)

I – ಐ = ಇಮ್ಯೂನೊ (ರೋಗನಿರೋಧಕ ಶಕ್ತಿ)

D – ಡಿ = ಡೆಫಿಶಿಯನ್ಸಿ (ಕೊರತೆ, ಸರಿಯಾಗಿ ಕಾರ್ಯ ನಿರ್ವಹಿಸಿದ)

S – ಎಸ್ = ಸಿಂಡ್ರೋಮ್ (ಬಿನ್ಹೆ ಮತ್ತು ಲಕ್ಷಣಗಳ ಕೂಟ)

ಹೆಚ್ ಐ ವಿ / ಏಡ್ಸ್ ಹೇಗೆ ಹರಡುತ್ತದೆ ?

  1. ಅಸುರಕ್ಷಿತವಾದ ಲೈಂಗಿಕ ಸಂಭೋಗದಿಂದ.
  2. ಪರೀಕ್ಷೆಗೊಳಪಡದ ರಕ್ತವನ್ನು ತೆಗೆದುಕೊಳ್ಳುವುದರಿಂದ.
  3. ಸಂಸ್ಕರಿಸಿದ ಸಿರೆಂಜ್ ಗಳು/ಸೂಜಿಗಳು/ಹರಿತವಾದ ಸಲಕರಣೆಗಳು, ಆಯುಧಗಳನ್ನು ಹಂಚಿಕೊಂಡು ಬಳಸುವುದರಿಂದ.
  4. ಹೆಚ್ ಐ ವಿ ಸೋಕಿತ ತಾಯಿಯಿಂದ ಮಗುವಿಗೆ.(ಗರ್ಭಧಾರಣೆ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನಾ ಮೂಲಕ.

ಯಾವ ಸಂದರ್ಭದಲ್ಲಿ ಹೆಚ್ ಐ ವಿ ಹರಡುವುದಿಲ್ಲ. ?

ಹಸ್ತಲಾಘವ ಮಾಡುವುದರಿಂದ, ಜೊತೆಯಾಗಿ ಈಜುವುದರಿಂದ, ಜೊತೆಯಾಗಿ ಆಟವಾಡುವುದರಿಂದ, ಅಪ್ಪಿಕೊಳ್ಳುವುದರಿಂದ, ಎಲ್ಲರ ಜೊತೆಯಲ್ಲಿ ಹಂಚಿಕೊಂಡು ಊಟ ಮಾಡುವುದರಿಂದ, ಸಾರ್ವಜನಿಕ ಶೌಚಾಲಯ ಬಳಸುವುದರಿಂದ, ಸೊಳ್ಳೆ ಅಥವಾ ಇತರೆ ಕೀಟಗಳು ಕಚ್ಚುವುದರಿಂದ ನತ್ತು ಕೆಮ್ಮುವುದರಿಂದ, ಸೀನುವುದರಿಂದ ಹೆಚ್ ಐ ವಿ ಹರಡುವುದಿಲ್ಲ.

ಹೆಚ್ ಐ ವಿ ಸೋಂಕಿತ ತಡೆಗಟ್ಟುವಿಕೆ

  1. ಸುರಕ್ಷಿತ ಲೈಂಗಿಕತೆ
    • ವಿವಾಹದವರೆಗೆ ಬ್ರಹ್ಮಚರ್ಯ.
    • ಸಂಭೋಗ ರಹಿತ ಲೈಂಗಿಕತೆ.
    • ಪರಸ್ವರ ವಿಶ್ವಾಸಾರ್ಹ ಒಬ್ಬ ಸಂಗಾತಿಯೊಡನೆ ಲೈಂಗಿಕತೆ.
    • ಅನಿವಾರ್ಯವಾದಲ್ಲಿ ಸಂಭೋಗ ಕಾಲದಲ್ಲಿ ನಿರೋಧ್ ನ ಸರಿಯಾದ ಬಳಕೆ.
  2. ರಕ್ತವನ್ನು ಪಡೆಯುವಾಗ ತೆಗೆದು ಕೊಳ್ಳಬೇಕಾದ ಮುಂಜಾಗ್ರತ ಕ್ರಮ
    • ಪರವಾನಿಗೆ ಪಡೆದ ರಕ್ತನಿದಿಯಿಂದ ಮಾತ್ರ ರಕ್ತ ಪಡೆಯುವುದು.
    • ರಕ್ತದ ಬಾಟಲಿ ಮೇಲೆ ಹೆಚ್ ಐ ವಿ ಮುಕ್ತ ಎನ್ನುವ ಮೊಹರು ಇದೆ ಎಂದು ಖಚಿತ ಪಡಿಸಿಕೊಳ್ಳುವಿಕೆ.
  3. ಸೂಚಿ ಸಿರೆಂಜುಗಳ ಮೂಲಕ ಹರಡುವ ಸೋಂಕಿನಿಂದ ರಕ್ಷಣೆ
    • ಸೂಚಿಗಳ ವಿನಿಮಯ ತಪ್ಪಿಸುವಿಕೆ
    • ಸಂಸ್ಕರಿಸಿದ ಅಥವಾ ಬಳಸಿ ಬಿಸಾಡುವ(Disposable) ಸಿರೆಂಜು ಸೂಚಿ ಬಳಸುವಿಕೆ
    • ಹಲವ ಗಡ್ಡ ಕ್ಷೌರ, ಕಿವಿ ಚುಚ್ಚುವಿಕೆ, ಹಚ್ಚೆಹಾಕುವಿಕೆ ಮುಂತಾದ ಕ್ರಿಯೆಯಲ್ಲಿ ಒಂದೇ ಸೂಚಿ ಅಥವಾ ಹರಿತವಾದ ಸಲಕರಣೆ ಬಳಸದೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.
  4. ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ತಡೆಗಟ್ಟುವುದು:
  5. ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಪಿ.ಪಿ.ಟಿ.ಸಿ.ಟಿ. ಸೇವೆಯನ್ನು ಪಡೆಯುವುದು.

ನೆನಪಿಡಿ:

  • ಹೆಚ್ ಐ ವಿ ಒಂದು ಬಗೆಯ ವೈರಾಣು.
  • ಇದು ಮಾನವನ ದೇಹದಲ್ಲಿ ಮಾತ್ರ ಬದುಕುಳಿಯಬಲ್ಲದು.
  • ಹೆಚ್ ಐ ವಿ ಸೋಂಕುಳ್ಳ ವ್ಯಕ್ತಿಯಿಂದ ಇನ್ನೊಬ್ಬರಿಗೆ ನಾಲ್ಕು ವಿಧಾನಗಳಿಂದ ಮಾತ್ರ ಸೋಂಕು ಹರಡುತ್ತದೆ.
  • ಇವುಗಳಲ್ಲಿ ಅಸುರಕ್ಷಿತ ಲೈಂಗಿಕತೆಯೇ ಪ್ರಮುಖ ಮಾರ್ಗ.
  • ಹೆಚ್ ಐ ವಿ ಸೋಂಕು ಮುಂದೆ ಏಡ್ಸ್ ಆಗಿ ತೋರ್ಪಡಿಸುವುದು.
  • ಹೆಚ್ ಐ ವಿ ತಡೆಗಟ್ಟುವ ಲಸಿಕೆಯಾಗಲಿ, ಹೆಚ್ ಐ ವಿ/ಏಡ್ಸ್ ಬಂದನಂತರ ಸಂಪೂರ್ಣ ಗುಣಪಡಿಸುವಂತಹ ಔಷಧಿಯಾಗಲಿ ಲಭ್ಯವಿಲ್ಲ.
  • ಹೆಚ್ ಐ ವಿ ಸೋಂಕನ್ನು ರಕ್ತದ ಪರೀಕ್ಷೆಯಿಂದ ಮಾತ್ರ ಖಚಿತಪಡಿಸಹುದು.
  • ಹೆಚ್ ಐ ವಿ ಮತ್ತು ಏಡ್ಸ್ ನ್ನು ಬರದಂತೆ ತಡೆಗಟ್ಟಬಹುದು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 3/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate