অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಲಮಿಡಿಯಾ

ಕ್ಲಮಿಡಿಯಾ ಎಂದರೇನು?

ಕ್ಲಮಿಡಿಯಾ ವು ಲೈಂಗಿಕವಾಗಿಹರಡುವ ರೋಗ. (STD) ಕ್ಲಮಿಡಿಯಾ ಬ್ಯಾಕ್ಟೀರಿಯಮ್ ಟ್ರಕೊಮ್ಯಾಟಿಸ್ ನಿಂದ ಬರುವುದು. ಇದು ಮಹಿಳೆಯ ಸಂತಾನೋತ್ಪತ್ತಿ ಅಂಗಗಳಿಗೆ ಹಾನಿ ಮಾಡುವುದು.

ಕ್ಲಮಿಡಿಯಾ ಜನರಿಗೆ ಹೇಗೆ ಬರುವುದು? ಕ್ಲಮಿಡಿಯಾವು ಯೋನಿ, ಗುಧ ಮತ್ತು ಮೌಖಿಕ ಲೈಂಗಿಕ ಕ್ರಿಯೆಯಿಂದ ಬರುವುದು. ಸೋಂಕಿತ ತಾಯಿಯಿಂದ ಮಗುವಿಗೆ ಜನನಕಾಲದಲ್ಲಿ ಬರುವುದು. ಲೈಂಗಿಕವಾಗಿ ಕ್ರಿಯಾಶೀಲನಾದ ಯಾರಿಗೆ ಆದರೂ ಕ್ಲಮಿಡಿಯಾ ಸೋಂಕು ತಗುಲಬಹುದು.

ಕ್ಲಮಿಡಿಯಾದ ಲಕ್ಷಣಗಳೇನು? ಮಹಿಳೆಯರಲ್ಲಿ , ಬ್ಯಾಕ್ಟೀರಿಯಾವು ಮೊದಲು ಗರ್ಭಾಶಯಸ ಬಾಯಿಯ ಮತ್ತು ಮೂತ್ರ ನಾಳದ ಮೇಲೆ ಪರಿಣಾಮ ಬೀರುವುದು. ಸೋಂಕು ತಗುಲಿದ ಮಹಿಳೆಗೆ ಹೆಚ್ಚಾದ ಯೋನಿ ಸ್ರಾವ ಅಗುವುದು. ಅಥವ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಕಾಣಿಸಿಕೊಳ್ಳುವುದು ಸೋಂಕು ಸೆರ್ವಿಕ್ಸನಿಂದ ಫೆಲೋಪಿಯನ್ ನಾಳಗಳಿಗೆ ಹರಡಿದಾಗ (ಅಂಡಾಣುಗಳನ್ನು ಗರ್ಭಾಶಯಕ್ಕೆ ಸಾಗಿಸುವ ನಾಳಗಳು). ಕೆಲವು ಮಹಿಳೆಯರಿಗೆ ಆಗಲು ಯಾವುದೆ ಲಕ್ಷಣ ಗಳು ಕಾಣುವುದಿಲ್ಲ.. ಕೆಲವರಿಗೆ ಕಿಬ್ಬೊಟ್ಟೆಯ ನೋವು, ಸೊಂಟನೋವು, ಬೆನ್ನು ನೋವು ವಾಕರಿಕೆ ಜ್ವರ, ಸಂಭೋಗದ ಸಮಯದಲ್ಲಿ ನೋವು ಅಥವ ಋತು ಚಕ್ರ ದ ನಡುವಿನ ಅವಧಿಯಲ್ಲಿ ರಕ್ತ ಸ್ರಾವ ಆಗುವುದು.

ಪುರುಷರಿಗೆ ಅವರ ಶಿಶ್ನ ದಿಂದ ಕೀವು ಅಥವ ಮೂತ್ರ ಮಡುವಾಗ ಉರಿ ಬರುವುದು. ಅವರಿಗೆ ಶಿಶ್ನದ ತುದಿಯಸುತ್ತಲೂ ಉರಿತ ಮತ್ತು ಕೆರೆತ ಆಗಬಹುದು.

ಚಕಿತ್ಸೆ ಯಾಗದ ಕ್ಲಮಿಡಿಯಾ ದಿಂದ ಯಾವ ಸಮಸ್ಯೆಬರಬಹುದು?ಕ್ಲಮಿಡಿಯಾ ಚಿಕಿತ್ಸೆ ಪಡೆಯದಿದ್ದರೆ ಸೋಂಕು ಹೆಚ್ಚಾಗಿ ಸಂತಾನೋತ್ಪತ್ತಿ ಮತ್ತು ಇತರ ಆರೋಗ್ಯದ ತಕ್ಷಣದ ಅಥವ ದೀರ್ಘಾವಧಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಹಿಳೆಯರಲ್ಲಿ ಅದು ಗರ್ಭಾಶಯ, ಫೆಲೋಪಿಯನ್ ನಾಳಗಳಳಿಗೆ ಹರಡಿ ಪೆಲ್ವಿಕ್ ಉರಿಯೂತ ರೋಗ ಬರುವುದು. (PID). ಕ್ಲಮಿಡಿಯಾ ಸೋಂಕಿತ ಮಹಿಳೆಗೆ ಹೆಚ್ ಐವಿ ಸೋಂಕು ಬರುವ ಸಾಧ್ಯತೆ ಐದು ಪಟ್ಟು ಹೆಚ್ಚಾಗಿದೆ. ಗಂಡಸರಲ್ಲಿ ಸಮಸ್ಯೆಯ ತೀವ್ರತೆ ಬಹು ಕಡಿಮೆ..

ಕ್ಲಮಿಡಿಯಾ ವನ್ನು ಹೇಗೆ ತಡೆಯಬಹುದು ?

ಖಚಿತ ವಾಗಿ ಹರಡುವುದನ್ನು ತಡೆಯುವ ವಿಧಾನ ವೆಂದೆರ ಲೈಂಗಿಕ ಸಂಪರ್ಕದಿಂದ ದೂರವಿರುವುದು .ಅಥವ ಬಹು ಕಾಲ ಸೋಂಕಿತರಲ್ಲದ ಮತ್ತು ರಕ್ತ ಪರೀಕ್ಷೆಗೊಳಗಾಗಿರುವ ಏಕ ವ್ಯಕ್ತಿಯೊಂದಿಗೆ ಸಂಬಂಧವಿರಿಸಿಕೊಳ್ಳುವುದು .

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate