অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೆಲ್ವಿಕ್ ಉರಿಯೂತ

ಪೆಲ್ವಿಕ್ ಉರಿಯೂತ

ಪೆಲ್ವಿವಿಕ್ ಉರಿಯೂತ ಎದರೇನು? ಪೆಲ್ವಿಕ್ ಉರಿಯೂತ ರೋಗ  ಎನ್ನುವುದು ಗರ್ಭಾಶಯ, ಫೆಲೋಪಿಯನ್ ನಾಳಗಳು ಮತ್ತು ಇತರೆ ಸಂತಾನೋತ್ಪತ್ತಿ ಅಂಗಗಳನ್ನು ಸೂಚಿಸುವ ಸಾಮಾನ್ಯ ಪದ.

ಪೆಲ್ವಿವಿಕ್ ಉರಿಯೂತ ಮಹಿಳೆಯರಿಗೆ ಹೇಗೆ ಬರುವುದು

ಪೆಲ್ವಿವಿಕ್ ಉರಿಯೂತವು ,ಬ್ಯಾಕ್ಟೀರಿಯಾವು ಗರ್ಭಾಶಯಕ್ಕೆ, ಸಂತಾನೋತ್ಪತ್ತಿ ಅಂಗಗಳಿಗೆ ಯೋನಿಯಿಂದ ಅಥವ ಸೆರವಿಕ್ಸನಿಂದ ಬಂದರೆ ಸೋಂಕಿತವಾಗುವುದು. ಗನೋರಿಯಾ, ಕ್ಲಮಿಡಿಯಾ ರೋಗಾಣುಗಳು ಸೇರಿದಂತೆ ಅನೇಕ ಲೈಂಗಿಕವಾಗಿ ಹರಡುವ ಖಾಯಿಲೆSTD ಯ ರೋಗಾಣುಗಳು ಇದಕ್ಕೆ ಕಾರಣ. ಲೈಂಗಿಕವಾಗಿ ಕ್ರಿಯಾಶೀಲವಾಗಿರುವ 25 ವರ್ಷದೊಳಗಿನ ಮಹಿಳೆಗೆ ಪೆಲ್ವಿಕ್ ಉರಿಯೂತ ದ ಅಪಾಯ ಹೆಚ್ಚು, ಕಾರಣ ಹದಿಹರೆಯದ ಹುಡುಗಿಯರ ಸೆರ್ವಿಕ್ಸ ಇನ್ನೂ ಬಲಿತಿರುವುದಿಲ್ಲ. ಅದರಿಂದ ಅವರು ಬೇಗ ಪೆಲ್ವಿಕ್ ಉರಿಯೂತಕ್ಕೆ ಗುರಿಯಾಗುವರು

ಪೆಲ್ವಿವಕ್ ಉರಿಯೂತ ದ ಲಕ್ಷಣಗಳೇನು?

ಪೆಲ್ವಿವಕ್ ಉರಿಯೂತ ಲಕ್ಷಣಗಳು ತೀವ್ವಾಗಿರಬಹುದ ಇಲ್ಲವೆ ಏನೂ ಇಲ್ಲದೆ ಇರಬಹುದು .ಪೆಲ್ವಿವಕ್ ಉರಿಯೂತವು ಕ್ಲಮಿಡಿಯಾದ ಸೋಂಕಿನಿಂದ ಆಗುವುದು. ಮಹಿಳೆಗೆ ಬಹು ಕಡಿಮೆ ಲಕ್ಷಣಗಳು ಕಾಣಬಹುದು. ಇಲ್ಲವೆ ಏನೂ ಕಾಣ ಲಿಕ್ಕಿಲ್ಲ. ಆದರೆ ಸಂತಾನೋತ್ಪತ್ತಿ ಅಂಗಗಳಿಗೆ ತೀವ್ರ ಹಾನಿ ಯಾಗಬಹುದು. ಪೆಲ್ವಿವಕ್ ಉರಿಯೂತ ದ ಲಕ್ಷಣಗಳೆಂದರೆ ಕೇಳ ಹೊಟ್ಟೆಯನೋವು, ಜ್ವರ, ಯೋನಿ ಯಿಂದ ದುರ್ವಾಸನೆ ಯಿಂದ ಕೂಡಿದ ಸ್ರಾವ, ಸಂಭೋಗದ ಸಮಯದಲ್ಲಿ ನೋವು, ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಅನಿಯಮಿತ ಋತು ಸಮಯದ ರಕ್ತಸ್ರಾವ.

ಪೆಲ್ವಿಕ್ ಉರಿಯೂತ ವನ್ನು ತಡೆಯುವುದು ಹೇಗೆ? ಖಚಿತವಾಗಿ ಲೈಂಗಿಕವಾಗಿ ಹರಡುವ ರೋಗವನ್ನು ಪೆಲ್ವಿಕ್ ಉರಿಯೂತ ಸೇರಿದಂತೆ, ತಡೆಯುವ ವಿಧಾನ ವೆಂದೆರ ಲೈಂಗಿಕ ಸಂಪರ್ಕದಿಂದ ದೂರವಿರುವುದು .ಅಥವ ಬಹು ಕಾಲ ಸೋಂಕಿತರಲ್ಲದ ಹಾಗೂ ರಕ್ತ ಪರೀಕ್ಷೆಗೊಳಗಾಗಿರುವ ಏಕ ವ್ಯಕ್ತಿಯೊಂದಿಗೆ ಸಂಬಂಧವಿರಿಸಿಕೊಳ್ಳುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate