অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭಧಾರಣೆ

ಗರ್ಭಧಾರಣೆ

ಗರ್ಭಿಣಿ ಯರಿಗೆ STD ಸೋಂಕು ತಗುಲುವ ಸಾಧ್ಯತೆ ಇದೆಯಾ ?

ಹೌದು. ಗರ್ಭಿಣಿ ಯರಿಗೆ ಲೈಂಗಿಕವಾಗಿ ಹರಡುವ ಖಾಯಿಲೆಗಳ (STD) ಸೋಂಕು ಇತರೆ ಮಹಿಳೆಯರಂತೆ ತಗುಲುವ ಸಾಧ್ಯತೆ ಇದೆ.

ಗರ್ಭಿಣಿ ಯರಿಗೆ ಮತ್ತು ಮಗುವಿನ ಮೇಲೆ ಲೈಂಗಿಕವಾಗಿ ಹರಡುವ ಖಾಯಿಲೆಗಳ STD ಸೋಂಕಿನ ಪರಿಣಾಮವೇನು ?

ಲೈಂಗಿಕವಾಗಿ ಹರಡುವ ಖಾಯಿಲೆಗಳು STDs ಇತರ ಮಹಿಳೆಯರ ಮೇಲೆ ಮಾಡಿದ ಪರಿಣಾಮವನ್ನೆ ಗರ್ಭಿಣಿ ಮಹಿಳೆಯ ಮೇಲೂ ಮಾಡುವುದು. ಅವರಿಗೆ ಗರ್ಭಕೋಶದ (ಸರ್ವಿಕಲ್) ಕ್ಯಾನ್ಸರ್, ಮತ್ತು ಇತರ ಕ್ಯಾನ್ಸರ್ , ಸುದೀರ್ಘ ಹೆಪಿಟೈಟಿಸ್, ಪೆಲ್ವಿಕ್ ಉರಿಯೂತ,, ಬಂಜೆತನ, ಮತ್ತು ಇತರೆ ಸಮಸ್ಯೆಗಳನ್ನು ಉಂಟುಮಾಡುವುದು.,ಅನೇಕ ಲೈಂಗಿಕವಾಗಿ ಹರಡುವ ಖಾಯಿಲೆಗಳು STDs ಮಹಿಳೆಯರಲ್ಲಿ ಯಾವುದೇ ಲಕ್ಷಣ ತೋರುವುದಿಲ್ಲ. ಗರ್ಭಿಣಿಗೆ ಲೈಂಗಿಕವಾಗಿ ಹರಡುವ ಖಾಯಿಲೆಗಳು STDs ಇದ್ದರೆ, ಹೆರಿಗೆ ನೋವು ಬೇಗ ಕಾಣಿಸಿಕೊಳ್ಳುವುದು. ಗರ್ಭಾಶಯದ ಪೊರೆ, ಮಗುವನ್ನು ಆವರಿಸದ ಪೊರೆ ಅಕಾಲದಲ್ಲಿ ಹರಿಯಬಹುದು. ಹೆರಿಗೆಯ ನಂತರ ಗರ್ಭಾಶಯದ ಸೋಂಕು ಆಗಬಹುದು.ಗರ್ಭಿಣಿ ಮಹಿಳೆಯಿಂದ ಮಗುವಿಗೆ ಲೈಂಗಿಕವಾಗಿ ಹರಡುವ ಖಾಯಿಲೆಗಳು STDs ಗರ್ಭದಲ್ಲಿದ್ದಾಗ, ಹೆರಿಗೆ ಸಮಯದಲ್ಲಿ ಹರಡಬಹುದು. ಹೆಚ್ ಐವಿ ಯು ಇತರರಂತಲ್ಲದೆ ಹೆರಿಗೆ ಯ ನಂತರವೂ ಎದೆಹಾಲು ಕುಡಿಸುವಾಗ ಮಗುವಿಗೆ ಬರುವುದು. ಮಗುವು ಲೈಂಗಿಕವಾಗಿ ಹರಡುವ ಖಾಯಿಲೆಗಳ STDs ದುಷ್ಪರಿಣಾಮದಿಂದ ಹುಟ್ಟುವಾಗಲೆ ಸಾಯಬಹುದು., ಕಡಿಮೆ ತೂಕದ್ದಾಗಿರಬಹುದು ( ಐದು ಪೌಂಡಿಗಿಂತ ಕಡಿಮೆ ತೂಕ). ಕಣ್ಣಿನ ಸೋಂಕು, ನ್ಯುಮೊನಿಯಾ,ಮಗುವಿನ ರಕ್ತನಾಳಗಳಲ್ಲಿ ಸೋಂಕು, ನರವ್ಯೂಹಕ್ಕೆ ಹಾನಿ, ಕುರುಡುತನ, ಕಿವುಡುತನ, ತೀವ್ರ ಹೆಪಿಟೈಟಿಸ್, ಮೆನಂಜೈಟಿಸ್ ಮತ್ತು ಸಿರೋಸಿಸ್ ಆಗಬಹುದು.,

ಗರ್ಭಿಣಿ ಮಹಿಳೆಗೆ ಲೈಂಗಿಕವಾಗಿ ಹರಡುವ ರೋಗದ ಪರೀಕ್ಷೆ ಅಗತ್ಯವೇ ?

ಗರ್ಭಿಣಿಯರಿಗೆ ಅವರು ಮೊದಲು ವೈದ್ಯರ ಹತ್ತಿರ ಬಂದಾಗಲೆ ಲೈಂಗಿಕವಾಗಿ ಹರಡುವ ರೋಗ ಪರೀಕ್ಷೆ ಮಾಡುವಾಗ ಅದರಲ್ಲಿ ಕೆಳ ಕಂಡ ಪರೀಕ್ಷೆಗಳು ಸೇರಿರಬೇಕು.:

  • ಕ್ಲಮಿಡಿಯಾ
  • ಗನೋರಿಯಾ
  • ಹೆಪಿಟೈಟಿಸ್ B
  • ಹೆಪಿಟೈಟಿಸ್ C
  • ಹೆಚ್ ಐವಿ
  • ಸಿಫಿಲಿಸ್

ಗ ರ್ಭಿಣಿ ಯಾಗಿದ್ದಾಗ ಲೈಂಗಿಕವಾಗಿ ಹರಡುವ ಖಾಯಿಲೆ STD ಗಳಿಗೆ ಚಿಕಿತ್ಸೆ ಪಡೆಯಬಹುದೆ?

ಗರ್ಭೀಣಿಯರಿಗೆ ಕ್ಲಮಿಡಿಯಾ, ಗನೊರಿಯಾ, ಸಿಫಿಲಿಸ್, ಟ್ರಿಕೊಮೊನಸ್ ಮತ್ತು ಬ್ಯಾಕ್ಟೀರಯಲ್ ವಜಿನೊಸಿಸ್ ರೋಗಗಳಿದ್ದರೆ ಆಂಟಿ ಬಯೋಟಿಕ್ಸ ನೀಡಿ, ಚಿಕಿತ್ಸೆ ಮಾಡಿ ಗುಣಪಡಿಸಬಹುದು. ಆದರೆ ವೈರಲ್ ಲೈಂಗಿಕವಾಗಿ ಹರಡುವ ಖಾಯಿಲೆ STD ಇದ್ದರೆ ಅದಕ್ಕೆ ಔಷಧಿ ಇಲ್ಲ. ಜನನಾಂಗದ ಹರ್ಪಿಸ್ ಮತ್ತು ಹೆಚ್ ಐ ವಿ ವೈರಲ್ ಸೋಂಕು ಇದ್ದಾಗ ಆಂಟಿ ವೈರಲ್ ಔಷಧಿಗಳನ್ನು ನೀಡಿ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಹರ್ಪಿಸ್ ವ್ರಣಗಳಿದ್ದ ಗರ್ಭೀಣಿಯು ಸಿಸೆರಿಯನೆ ಹೆರಿಗೆ ಮಾಡಿಸಕೊಳ್ಳಬೇಕು ಅದರಂದ ನವಜಾತ ಶಿಶುವಿಗೆ ರೋಗ ಹರಡುವುದನ್ನು ತಡೆಯಬಹುದು. ಹೆಚ್ ಐ ವಿ ಸೋಂಕು ಇದ್ದವರೂ ಸಿಸೆರಿಯನ್ ಹೆರಿಗೆ ಮಾಡಿಸಿಕೊಂಡರೆ ಉತ್ತಮ. ಹೆಪಿಟೈಟಿಸ್ ಬಿ ನೆಗಿಟಿವ್ ಇದ್ದವರು ಗರ್ಭೀಣಿ ಇದ್ದಾಗಲೇ ಹೆಪಿಟೈಟಿಸ್ ಬಿ ವ್ಯಾಕ್ಸಿನ್ ತೆಗೆದುಕೊಳ್ಳ ಬೇಕು.

ಗರ್ಭಿಣಿ ಮಹಿಳೆಯರು ತಮ್ಮನ್ನು ಸೊಂಕಿನಿಂದ ಹೇಗೆ ಕಾಪಾಡಿಕೊಳ್ಳಬಹುದು?

ಖಚಿತವಾಗಿ ಲೈಂಗಿಕವಾಗಿ ಹರಡುವ ರೋಗವನ್ನು ತಡೆಯುವ ವಿಧಾನ ವೆಂದೆರ ಲೈಂಗಿಕ ಸಂಪರ್ಕದಿಂದ ದೂರವಿರುವುದು .ಅಥವ ಬಹು ಕಾಲ ಸೋಂಕಿತರಲ್ಲದ ಮತ್ತು ರಕ್ತ ಪರೀಕ್ಷೆಗೊಳಗಾಗಿರುವ ಏಕ ವ್ಯಕ್ತಿಯೊಂದಿಗೆ ಸಂಬಂಧವಿರಿಸಿಕೊಳ್ಳುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate