অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೋಂಕುಗಳನ್ನು ತಡೆಗಟ್ಟುವುದು

ಸೋಂಕುಗಳನ್ನು ತಡೆಗಟ್ಟುವುದು

ಹೆರಿಗೆಗಳು ಆಸ್ಪತ್ರೆಗಳಲ್ಲಿಯೇ ನಡೆಯಬೇಕೆಂದು ಮಹಿಳೆಯರಿಗೆ ಮತ್ತು ಕುಟುಂಬಗಳಿಗೆ ತಿಳುವಳಿಕೆ ಕೊಡಿ.

ತಜ್ಞ ವ್ಯಕ್ತಿಗಳು ಮಾತ್ರ ಹೆರಿಗೆಗಳನ್ನು ಮಾಡಬೇಕು.

ನೋಂದಾಯಿತ ಆಸ್ಪತ್ರೆಗಳಲ್ಲಿ ಮಾತ್ರ ಗರ್ಭಪಾತಗಳನ್ನು ಮಾಡಿಸಿಕೊಳ್ಳಬೇಕು.

ಮುಟ್ಟಿನ ಸಮಯದಲ್ಲಿ ಜನನೇಂದ್ರಿಯದ ನೈರ್ಮಲ್ಯವನ್ನು ಕಾಪಾಟಿಕೊಳ್ಳಬೇಕು.

ಕಾಂಡೋಮ್ ಬಳಸುವ ಮೂಲಕ ಅಸುರಕ್ಷಿತ ಸಂಭೋಗವನ್ನು ತಡೆಗಟ್ಟುವುದು. ಮಹಿಳೆ ಯಾವಾಗಲೂ ತನ್ನ ಸಂಗಾತರಿಗೆ ಕಾಂಡೋಮ್ ಬಳಸಬೇಕೆಂದು ಒತ್ತಾಯ ಹೇರಲಾಗದು. ಕಾಂಡೋಮ್ ಬಳಕೆಗೆ ಮನವೊಲಿಸುವ ಕೌಶಲವನ್ನು ಅವರು ಕಲಿಯಬೇಕಾದ ಅವಶ್ಯಕತೆಯಿದೆ. ಅಂತಹ ಸನ್ನಿವೇಶಗಳಲ್ಲಿ ಸ್ತ್ರೀಯರ ಕಾಂಡೋಮ್‍ಗಳ ಲಭ್ಯತೆ ಕೂಡ ಅವರನ್ನು ಇದರಿಮದ ಪಾರು ಮಾಡಬಹುದು.

ಅರ್ಹ ವ್ಯಕ್ತಿಗಳಿಂದ ಮಾತ್ರ ಚಿಕಿತ್ಸೆಯನ್ನು ಪಡೆಯಲು ಮಹಿಳೆಯರಿಗೆ ಉತ್ತೇಜನ ಕೊಡಬೇಕು ಮಹಿಳೆಯರೊಂದಿಗೆ ಪಿಎಚ್‍ಸಿ/ನಗರದಲ್ಲಿನ ಆಸ್ಪತ್ರೆಗಳಿಗೆ ನೀವು ಹೋಗುವ ಮುಲಕ ಸೇವೆಗಳನ್ನು ಪಡೆಯಲು ಅವರಿಗೆ ಸಹಾಯ ಮಾಡಬಹುದು. ಸಾಮಾನ್ಯವಾಗಿ ಮಹಿಳೆಯರು ಈ ವಿಚಾರವಾಗಿ ಮಾತನಾಡಲು ನಾಚಿಕೊಳ್ಳುತ್ತಾರೆ ಮತ್ತು ಮುಜುಗರ ಪಡುತ್ತಾರೆ.

ಅರ್ಹವೈದ್ಯರು ಸಲಹೆ ಮಾಡಿದಂತೆ ಸಂಪೂರ್ಣ ಚಿಕಿತ್ಸೆಯನ್ನು ಪಡೆಯುವುದೂ ಕಡ್ಡಾಯವಾದದದು, ಎಸ್‍ಟಿಐ ಪ್ರಕರಣಗಳಲ್ಲಿ ಸಂಗಾತಿಯೂ ಚಿಕಿತ್ಸೆಯನ್ನು ಪಡೆಯಬೇಕು. ಗಂಡಂದಿರು ಚಿಕಿತ್ಸೆಯನ್ನು ಪಡೆಯುಬಂತೆ ಮತ್ತು ಕಾಂಡೋಮ್‍ಗಳನ್ನು ಉಪಯೋಗಿಸುವಂತೆ ಮನವೊಲಿಸುವುದು ಮಹಿಳೆಯರಿಗೆ ಬಹಳ ಕಷ್ಟವಾಗಿ ತೋರುತ್ತದೆ. (ಪತಿಯೂ ಸೇರಿದಂತೆ) ಕುಟುಂಬಕ್ಕೆ ನೀವು ತಿಳಿವಳಿಕೆ ಕೊಡಬೇಕು.

ಇದನ್ನು ತಡೆಗಟ್ಟುವುದಕ್ಕೆ ಅತ್ಯುತ್ತಮ ವಿಧಾನವೆಂದರೆ  ಅಪಾಯಕಾರಿ ಲೈಂಗಿಕ ನಡವಳಿಕೆಯನ್ನು ಮಾಡಬಾರದು.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate