অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟೈಫಾಯಿಡ್ (ವಿಷಮ ಶೀತ ಜ್ವರ)

ಟೈಫಾಯಿಡ್ ಪ್ರಾಣಾಪಾಯ ಮಾಡುವ ರೋಗ. ಬ್ಯಾಕ್ಟೀರಿಯಮ್ ಸಲ್ಮೊನೆಲ್ಲಾ ಟೈಫಿ ಇದಕ್ಕೆ ಕಾರಣ ಟೈಫಾಯಿಡ್ ಜ್ವರವನ್ನು ತಡೆಯಬಹುದು ಮತ್ತು ಆಂಟಿಬಯೋಟಿಕ್ ನೀಡಿ ಚಿಕಿತ್ಸೆ ಮಾಡಬಹುದು.

ಟೈಫಾಯಿಡ್ ಹೇಗೆ ಹರಡುತ್ತದೆ?

ಸಲ್ಮೊನೆಲ್ಲಾ ಟೈಫಿ ಮಾನವರಲ್ಲಿ ಮಾತ್ರ ಜೀವಿಸುತ್ತದೆ. ಟೈಫಾಯಿಡ್ ಜ್ವರವಿರುವ ಜನರ ರಕ್ತ ಪ್ರವಾಹದಲ್ಲಿ ಮತ್ತು ಕರುಳಿನಲ್ಲಿ ಬ್ಯಾಕ್ಟೀರಿಯಾ ಇರುವುದು. ಸ್ವಲ್ಪ ಜನರಿಗೆ ಗುಣವಾದ ಮೇಲೂ ಅವರು ಬ್ಯಾಕ್ಟೀರಿಯಾವನ್ನು ಹೊಂದಿರುವುರು. ಅವರನ್ನು ವಾಹಕರು ಎನ್ನುವರು. ರೋಗಿಗಳು ಮತ್ತು ವಾಹಕರು ಇಬ್ಬರೂ ತಮ್ಮ ಮಲದಲ್ಲಿ ಬ್ಯಾಕ್ಟೀರಿಯಾವನ್ನು ಹೊರಹಾಕುವರು. ಬ್ಯಾಕ್ಟೀರಿಯಾ ಹೊರಹಾಕುವ ವ್ಯಕ್ತಿಯು ಸಂಪರ್ಕದ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ನಿಮಗೆ ಟೈಫಾಯಿಡ್ ರೋಗವು ಬರಬಹುದು. ಅಥವ ಬ್ಯಾಕ್ಟೀರಿಯಾ ಇರುವ ಚರಂಡಿಯ ನೀರು ಕುಡಿಯುವ ನೀರಿಗೆ ಸೇರಿದರೆ ಅಥವ ಆ ನೀರಿನಿಂದ ತರಕಾರಿ ತೊಳೆದರೆ ರೋಗ ಹರಡುವುದು ಆದ್ದರಿಂದ ಟೈಫಾಯಿಡ್ ಜ್ವರವು ಯಾವ ಪ್ರದೇಶದಲ್ಲಿ ಕೈ ತೊಳೆಯುವುದು ಕಡಿಮೆ ಯಾಗಿರುವುದೋ ಮತ್ತು ನೀರು ಚರಂಡಿ ನೀರಿನ ಜೊತೆ ಮಲಿನವಾಗಿರುವುದೋ ಆ ಪ್ರದೇಶದಲ್ಲಿ ಹೆಚ್ಚಾಗಿರುವುದು, ಒಂದು ಸಲ ಟೈಫಿ ಬ್ಯಾಕ್ಟೀರಿಯಾ ಇರುವವುದನ್ನು ಸೇವಿಸದರೆ ಅವು ರಕ್ತ ಪ್ರವಾಹದಲ್ಲಿ ಸೇರಿ ಹೆಚ್ಚುತ್ತಾ ಹೋಗುತ್ತವೆ. ಅದಕ್ಕೆ ದೇಹವು ಪ್ರತಿಕ್ರಯಿಸುವುದು. ಜ್ವರ ಮತ್ತು ಇತರೆ ಲಕ್ಷಣಗಳು ಹೊರಬರುತ್ತವೆ

ಟೈಫಾಯಿಡ್ ಲಕ್ಷಣ ಮತ್ತು ಕುರುಹುಗಳು ಯಾವು ?

ಟೈಫಾಯಿಡ್ ಬಂದವರಿಗೆ ಸದಾ 103° ನಿಂದ 104° F (39° to 40° C).ಜ್ವರ ಇರುತ್ತದೆ. ಅವರು ಸುಸ್ತಾಗುವರು ಅಥವ ಹೊಟ್ಟೆನೋವು, ತಲೆ ನೋವು ನಿಪ್ಪ ಹಸಿವು ಕಾಣವುದು. ಕೆಲವು ಸಲ ಮೈ ಮೇಲೆ ಗುಲಾಬಿ ಬಣ್ಣದ ಚಿಕ್ಕಚಿಕ್ಕ ಗುಳ್ಳೆಗಳು ಆಗಬಹುದು. ಟೈಫಾಯಿಡ್ ಜ್ವರದ ಒಂದೆ ಪರೀಕ್ಷೆ ಎಂದರೆ ರಕ್ತ ಮತ್ತು ಮಲದಲ್ಲಿ ಟೈಫಿ ಬ್ಯಾಕ್ಟೀರಿಯಾ ಇರುವುದರ ಪರೀಕ್ಷೆ .

ಟೈಫಾಯಿಡ್ ಅನ್ನು ತಡೆಯುವುದು ಹೇಗೆ ?

ಟೈಫಾಯಿಡ್ ಜ್ವರವನ್ನು ತಡೆವ ಎರಡು ಮುಖ್ಯ ಕ್ರಮಗಳು:

  1. ತೊಂದರೆ ದಾಯಕ ಆಹಾರ ಮತ್ತು ಪಾನೀಯಗಳ ಸೇವನೆ ಬೇಡ..
  2. ಟೈಫಾಯಿಡ್ ಜ್ವರ ಬಾರದಂತೆ ಚುಚ್ಚುಮದ್ದು (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ..

ಕುಡಿಯುವ ನೀರನ್ನು ಕುಡಿವ ಒಂದು ಗಂಟೆಗೂ ಮುನ್ನ ಕುದಿಸಿ ಆರಿಸಿ ಕುಡಿಯಬೇಕು

ಯಾವುದೆ ಪಾನಿಯ ಸೇವಿಸುವಾಗ ಐಸ್ ಇಲ್ಲದೆ ಕುಡಿಯಿರಿ. ಐಸ್ ಅನ್ನು ಬಾಟಲಿಯ ನೀರಿನಿಂದ ಇಲ್ಲವೆ ಕುದಿಸಿದ ನೀರಿನೀದ ತಯಾರಿಸಿದ್ರೆ ಮಾತ್ರ ಅದನ್ನು ಬಳಸಿ. ಮತ್ತು ಸುವಾಸನೆ ಇರುವ ಐಸ್ ಬಳಸಬೇಡಿ. ಅವನ್ನು ಕುಲುಷಿತ ನೀರಿನಿಂದ ಮಾಡಿರಬಹುದು. ಚೆನ್ನಾಗಿ ಬೇಯಿಸಿದ ಉಗಿ ಹಾಯುತ್ತಿರುವ ಆಹಾರವನ್ನು ಮಾತ್ರ ಸೇವಿಸಿ.

ಸಿಪ್ಪೆ ಸುಲಿಯಲಾಗದ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬಳಸಬೇಡಿ. ಲೆಟ್ಯೂಸ್ ಬಹು ಸುಲಭವಾಗಿ ಕಲುಷಿತವಾಗುವುದು. ಮತ್ತು ಅದನ್ನು ತೊಳೆಯುವುದು ಬಹು ಕಷ್ಟ. ಸಿಪ್ಪೆ ಸುಲಿಯಬಹುದಾದ ಹಣ್ಣು ತರಕಾರಿಗಳಾದರೆ ನೀವೆ ಸ್ವತಃ ಸಿಪ್ಪೆ ಸುಲಿಯಿರಿ. ಸಿಪ್ಪೆ ತಿನ್ನಬೇಡಿ. ಸ್ವಚ್ಛತೆ ಇಲ್ಲದ ಅಂಗಡಿಯಿಂದ ಆಹಾರ , ಪಾನಿಯ ಕೊಳ್ಳ ಬೇಡಿ.

ನಿಮಗೆ ವ್ಯಾಕ್ಸಿನೇಷನ್ ಅವಶ್ಯಕತೆ ಇರುವುದನ್ನು ಮರೆಯಬೇಡಿ . ಟೈ ಫಾಯಿಡ್ ವ್ಯಾಕ್ಸೀನ್ ಕೆಲವುವರ್ಷಗಳ ನಂತರ ಪರಿಣಾಮಕಾರಿ ಆಗಿರುವುದಿಲ್ಲ. ನಿಮ್ಮ ವೈದ್ಯರನ್ನು ಕೇಳಿ. ಅಗತ್ಯ ಬಿದ್ದರೆ ಬೂಷ್ಟರ್ ಡೋಜು ತೆಗೆದು ಕೊಳ್ಳಿ. ಆಂಟಿಬಯಾಟಿಕ್ ನಿಂದ ಟೈಫಾಯಿಡ್ ತಡೆಗಟ್ಟಲಾಗುವುದಿಲ್ಲ. ಅದು ಚಿಕಿತ್ಸೆಗೆ ಮಾತ್ರ ಸಹಾಯಕ


ವ್ಯಾಕ್ಸಿನ್ ಹೆಸರು ಟಿವೈ ೨೧ಎ

ಹೇಗೆ ನೀಡುವುದು

ಅಗತ್ಯವಾದ ಡೋಜುಗಳ ಸಂಖ್ಯೆ

ಡೋಜುಗಳ ನಡುವಣ ಅವಧಿ

ವ್ಯಾಕ್ಸಿನೇಷನ್ ಬಿಡಲು ಬೆಕಾದ ಅವಧಿ

ವ್ಯಕ್ಸಿನೇಷನ್ ಗೆ ಕನಿಷ್ಟ ವಯಸ್ಸು

ಬೂಷ್ಟರ್ ಪಡೆಯಬೆಕದುದು

Ty21a (ವಿವೊಟಿಫ್ ಬೆರ್ನಾ, ಸ್ವಿಸ್ ಸಿರಮ್ ಮತ್ತು ವ್ಯಕ್ಸಿನ್ ಸಂಸ್ಥೆ)

ತಿಂಗಳಿಗೆ 1 ಕ್ಯಾಪ್ಸುಲು

4

2 ದಿನಗಳು

2 ವಾರಗಳು

6.ವರ್ಷಗಳು

5 ವರ್ಷಗಳು

ViCPS (Typhim Vi, Pasteur Merieux)

ಇಂಜೆಕ್ಷನ್

1

ಅನ್ವಯ ಆಗೊಲ್ಲ

2 ವಾರಗಳು

2 ವರ್ಷಗಳು

2 ವರ್ಷಗಳು

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate