অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಡಯೇರಿಯಾ (ಅತಿಸಾರ)

  • ಅತಿಸಾರ ಎಂದರೆ ಹೆಚ್ಚುಬಾರಿ ಮಲವಿಸರ್ಜನೆಗೆ ಹೋಗುವುದು, ನೀರಿನಿಂದ ಕೂಡಿದ ಮಲವಿಸರ್ಜನೆ ಇಲ್ಲವೇ ಎರಡೂ ಇರುವುದು.
  • ಕರುಳಿನಲ್ಲಿ ದ್ರವಗಳ ಉತ್ಪಾದನೆ ಜಾಸ್ತಿಯಾಗುವುದು ಇಲ್ಲವೇ ದ್ರವಗಳ ಹೀರುವಿಕೆ ಕಡಿಮೆಯಾಗುವುದು ಅಥವಾ ಕರುಳಿನ ಮೂಲಕ ಮಲವು ಶೀಘ್ರವಾಗಿ ಬರುವುದು ಅತಿಸಾರಕ್ಕೆ ಕಾರಣ
  • ಅತಿಸಾರವನ್ನು ಎರಡು ವಿಧಗಳಲ್ಲಿ ಹೇಳಬಹುದು ಒಂದು ಸಂಪೂರ್ಣ ಅತಿಸಾರ ಮತ್ತೊಂದು ಭಾಗಶಃ ಅತಿಸಾರ. ನೀರಿನಂತಿರುವ ಅಥವಾ ಒಂದು ದಿನದಲ್ಲಿ ೫ ಕ್ಕಿಂತ ಹೆಚ್ಚುಬಾರಿ ಮಲವಿಸರ್ಜನೆ ಮಾಡುವುದನ್ನು ಸಂಪೂರ್ಣ ಅತಿಸಾರ ಎನ್ನುತ್ತಾರೆ. ರಿಲೇಟಿವ್‌ ಡಯಾರಿಯಾ ಅಂದರೆ ಒಬ್ಬ ವ್ಯಕ್ತಿಯ ಮಲ ವಿಸರ್ಜನೆಯ ರೀತಿಯನ್ನು ಆಧರಿಸಿ ಅದಕ್ಕಿಂತ ಹೆಚ್ಚು ಬಾರಿ ಹೋದರೆ ಅಥವಾ ನೀರಿನಂತೆ ಹೋದರೆ ಅದಕ್ಕೆ ಅತಿಸಾರ ಎನ್ನುತ್ತಾರೆ.
  • ಅತಿಸಾರವು ತೀವ್ರವಾಗಿರಬಹುದು ಇಲ್ಲವೇ ದೀರ್ಘ ಕಾಲೀನವಾಗಿರಬಹುದು. ಎರಡಕ್ಕೂ ಬೇರೆಬೇರೆ ಕಾರಣ ಮತ್ತು ಚಿಕಿತ್ಸೆಗಳಿವೆ.
  • ಅತಿಸಾರದಿಂದಾಗಿ ನಿರ್ಜಲೀಕರಣ, ಖನಿಜಾಂಶಗಳ ಕೊರತೆ, ಅಸಹಜತೆ ಮತ್ತು ಗುದದ್ವಾರದಲ್ಲಿ ತುರಿಕೆ ಉಂಟಾಗಬಹುದು.
  • ದೇಹ ಕಳೆದುಕೊಳ್ಳುವ ನೀರನ್ನು ಜಲಮರುಪೂರಣ ಮಾಡುವ ದ್ರಾವಣಗಳನ್ನು ಬಾಯಿಯ ಮೂಲಕ ನೀಡುವುದರಿಂದ ಚಿಕಿತ್ಸೆ ನೀಡಬಹುದು.

ಕುಡಿಯುವ ಪುನರ್ಜಲೀಕರಣ ದ್ರಾವಣ

ಮನೆಯಲ್ಲೇ ತಯಾರಿಸುವ ಕುಡಿಯುವ ಪುನರ್ಜಲೀಕರಣ ದ್ರಾವಣ

ಅತಿಸಾರದಿಂದ ಉಂಟಾದ ನಿರ್ಜಲೀಕರಣವನ್ನು ಎದುರಿಸುವ ಅತ್ಯಂತ ಸಮರ್ಥ, ಕಡಿಮೆ ಖರ್ಚಿನ ನೀವೇ ಮಾಡಬಹುದಾದ ದಾರಿ ಇದು. ಅತಿಸಾರವನ್ನು ಎದುರಿಸುವ ಅತ್ಯಂತ ಸಮರ್ಥ ಕಡಿಮೆ ಖರ್ಚಿನ, ಅತ್ಯಂತ ಪರಿಣಾಮಕಾರಿ ದ್ರಾವಣ ಇದು.

ಉಪ್ಪು ಮತ್ತು ಸಕ್ಕರೆಯ ದ್ರಾವಣ ಮಾಡುವ ವಿಧಾನ

ಸಾಮಾಗ್ರಿಗಳು:

  • ಒಂದು ಟೀ ಚಮಚ ಉಪ್ಪು
  • ಎಂಟು ಟೀ ಚಮಚ ಸಕ್ಕರೆ

ಒಂದು ಲೀಟರ್ ಶುದ್ಧ ಕುಡಿಯುವ ನೀರು ಅಥವ ಕುದಿಸಿ ಆರಿಸಿದ ನೀರು. 5 ಕಪ್ಪು ತುಂಬ ( ಪ್ರತಿಯೊಂದು 200ಮಿಲಿ.)

ತಯಾರಿಸುವ ವಿಧಾನ

ಸಕ್ಕರೆ ಮತ್ತು ಉಪ್ಪು ಕರಗುವವರೆಗೆ ದ್ರಾವಣವನ್ನು ಕಲಕುತ್ತಿರಿ.

ನೀರಿನಂತಹ ಅತಿಸಾರದಿಂದ ಬಳಲುತ್ತಿರುವಾಗ ಸಮರ್ಥ ಮತ್ತು ಪರಿಣಾಮಕಾರಿ ಮನೆಮದ್ದು ಬಳಸಬೇಕು. ಇದು ಒ.ಆರ್.ಎಸ್‌ಗೆ ಉತ್ತಮ ಬದಲಿ

ಸಾಮಾಗ್ರಿಗಳು

  • ಅರ್ಧ ಕಪ್‌ ಮೆತ್ತಗೆ ಬೇಯಿಸಿದ ಅನ್ನ ಅಥವಾ ೧/1/2 ಟೇಬಲ್‌ ಸ್ಪೂನ್‌ ಸಕ್ಕರೆ ಹರಳು
  • 2 ಕಪ್ ನೀರು
  • ಅರ್ಧಟಿ ಸ್ಪೂನ್‌ ಉಪ್ಪು

ಸೂಚನೆಗಳು

ಅಕ್ಕಿಹಿಟ್ಟನ್ನು ಚೆನ್ನಾಗಿ ಕಲಿಸಿ, ನೀರು ಉಪ್ಪು ಮತ್ತು ಸಕ್ಕರೆ ಕುಡಿಯಲು ಬರುವಷ್ಟು ತೆಳುವಾಗಿ ಕಲಸಿ.

ಚಮಚದಿಂದ ರೋಗಿಗೆ ಕುಡಿಸಿ ಅಥವಾ ಮಗು ಕುಡಿಯುವಷ್ಟನ್ನು ಕೊಡಿ (ಮಗು ಕುಡಿದರೆ ಪ್ರತಿ ನಿಮಿಷಕ್ಕೊಮ್ಮೆ ಕೊಡಿ)

ಕಳೆದುಕೊಂಡಿರುವ ನೀರನ್ನು ಪಡೆಯುವುದನ್ನೇ ಗುರಿಯಾಗಿಟ್ಟುಕೊಂಡು ಸತತವಾಗಿ ನೀರು ಕುಡಿಸುತ್ತಿರಿ. ಒಂದು ಕಪ್‌ ನೀರು ಕಳೆದುಕೊಂಡರೆ. ಒಂದು ಕಪ್ ನೀರನ್ನು ಚಿಕ್ಕ ಚಿಕ್ಕ ಪ್ರಮಾಣದಲ್ಲೂ ಕೊಡಬಹುದು. ಪ್ರತಿ ನಿಮಿಷಕ್ಕೊಮ್ಮೆ ಸಾಧ್ಯವಾದರೆ ಕೊಡಬೇಕು. ಮಗುವೂ ವಾಂತಿ ಮಾಡಿದರೂ, ದ್ರವಣವನ್ನು ಸಣ್ಣ ಪ್ರಮಾಣದಲ್ಲಿ ನೀಡಬಹುದು (2-1 ಚಮಚ). ಪ್ರತಿ ಕೆಲ ನಿಮಿಷಗಳಲ್ಲಿ

  • ಸಕ್ಕರೆ ಬೆರೆಸದ ಮೆದುವಾಗಿ ಹಿಸುಕಿದ ಬಾಳೆಹಣ್ಣು ಕೊಡುವುದರಿಂದ ದೇಹದಲ್ಲಿನ ಪೊಟಾಶಿಯಂ ಮರುಪೂರ್ಣವಾಗುತ್ತೆದೆ.
  • ಮಕ್ಕಳು ರೋಗಪೀಡಿತರಾದಾಗ ಮಕ್ಕಳಿಗೆ ಆಹಾರ ಕೊಡಿ. ಮಗುವಾಗಿದ್ದರೆ ಎದೆ ಹಾಲೂಡಿಸಿ.

ಮನೆಯಲ್ಲಿ ತಯಾರಿಸಿದ ದ್ರಾವಣಗಳ ಬಗ್ಗೆ ಪ್ರಶ್ನೆಗಳು

ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಅಳೆಯುವುದು ಹೇಗೆ?

ವಿವಿಧ ಗುಂಪುಗಳು ಬೇರೆ ಬೇರೆ ಬಗೆಯ ವಿಧಾನವನ್ನು ಅನುಸರಿಸುತ್ತವೆ.

  • ಚಿಟಿಕೆ ಮತ್ತು ಕೈನಲ್ಲಿ ಅಳೆಯುವುದು ಮತ್ತು ಸ್ಥಳೀಯ ಟೀ ಚಮಚದ ಬಳಕೆಯನ್ನು ಯಶಸ್ವಿಯಾಗಿ ಕಲಿಸಬಹುದು.
  • ಪ್ಲಾಸ್ಟಿಕ್ ಅಳತೆ ಚಮಚ

ಯಾವುದೆ ವಿಧಾನ ಬಳಸಲಿ, ಜನರಿಗೆ ಎಚ್ಚರಿಕೆಯಿಂದ ದ್ರಾವಣವನ್ನು ಮಿಶ್ರ ಮಾಡುವ ಬಗ್ಗೆ ತಿಳಿಸಬೇಕು

ಅತಿ ಹೆಚ್ಚು ಉಪ್ಪು ಉಪಯೋಗಿಸಬಾರದು. ದ್ರಾವಣ ಬಹಳ ಉಪ್ಪಾದರೆ ಮಗು ಕುಡಿಯದೆ ಇರಬಹುದು. ಅಲ್ಲದೆ , ಅತಿ ಹೆಚ್ಚಿನ ಉಪ್ಪಿನಿಂದ ವಿರಳವಾಗಿ ಸೆಳತ ಬರಬಹುದು. ಉಪ್ಪು ಕಡಿಮೆಯಾದರೆ ತೊಂದರೆ ಇಲ್ಲ. ಆದರೆ ನಿರ್ಜಲೀಕರಣವನ್ನು ತಡೆಯುವಲ್ಲಿ ಅದು ಪರಿಣಾಮಕಾರಿ ಆಗಿರುವುದಿಲ್ಲ.

ಒಂದು ಸ್ಥೂಲ ಮಾರ್ಗದರ್ಶಿ ಎಂದರೆ ದ್ರಾವಣವು ಕಣ್ಣೀರಿಗಿಂತ ಹೆಚ್ಚು ಉಪ್ಪಾಗಿರಬಾರದು.

ಎಷ್ಟು ದ್ರಾವಣ ಕುಡಿಸಬೇಕು ?

ಪ್ರತಿಸಲ ನೀರಾಗಿ ಭೇದಿಯಾದ ಮೇಲೆ ಕುಡಿಸಿ.

ವಯಸ್ಕರು ಮತ್ತು ದೊಡ್ಡ ಮಕ್ಕಳು ದಿನಕ್ಕೆ ಕನಿಷ್ಟ ಮುಕ್ಖಾಲು ಅಥವ ಒಂದು ಲೀಟರ್ ದ್ರಾವಣ (ಓ ಅರ ಎಸ್ ) ವನ್ನು ಗುಣ ವಾಗುವವರೆಗೆ ಕುಡಿಯಬೇಕು.

ಪ್ರತಿಸಲ ಕುಡಿಯ ಬೇಕಾದದ್ದು:

  • ಎರಡು ವರ್ಷದ ಒಳಗಿನ ಮಗುವಿಗೆ ದೊಡ್ಡ ಲೋಟದ ಕಾಲು ಭಾಗ ಅಥವ ಅರ್ಧ ದೊಡ್ಡ ಲೋಟ

ದೊಡ್ಡ ಮಕ್ಕಳಿಗೆ ಅರ್ಧ ದಿಂದ ಒಂದು ದೊಡ್ಡ ಲೋಟದ ತುಂಬ

  • ತೀವ್ರ ನಿರ್ಜಲೀಕರಣವಾದಾಗ:

ಪ್ರತಿ 5 ನಿಮಿಷಕ್ಕೆ ತುಸು ತುಸು ಓ ಅರ ಎಸ್ ಕುಡಿಯುತ್ತಲೆ ಇರಲಿ (ಅಥವ ಎಚ್ಚರವಿರುವ ನಿರ್ಜಲೀಕರಣ ಆದವರಿಗೆ ಕೊಡಿ) ಇದು ಮೂತ್ರವಿಸರ್ಜನೆ ಸಹಜವಾಗಿ ಆಗುವವರೆಗೆ ಮುಂದುವರಿಯಬೇಕು. (ದಿನಕ್ಕೆ ನಾಲಕ್ಕು ಐದು ಸಲ ಮೂತ್ರ ವಿಸರ್ಜನೆ ಸಹಜ.)

ಪ್ರತಿ 5 ನಿಮಿಷಕ್ಕೆ ತುಸು ತುಸು ಓ ಅರ ಎಸ್ ಕುಡಿಯುತ್ತಲೆ ಇರಲಿ (ಅಥವ ಎಚ್ಚರವಿರುವ ನಿರ್ಜಲೀಕರಣ ಆದವರಿಗೆ ಕೊಡಿ) ಇದು ಮೂತ್ರವಿಸರ್ಜನೆ ಸಹಜವಾಗಿ ಆಗುವವರೆಗೆ ಮುಂದುವರಿಯಬೇಕು. (ದಿನಕ್ಕೆ ನಾಲಕ್ಕು ಐದು ಸಲ ಮೂತ್ರ ವಿಸರ್ಜನೆ ಸಹಜ.)

ದ್ರಾವಣ ಹೇಗೆ ಕುಡಿಸಬೇಕು ?

  • ಸಾವಕಾಶವಾಗಿ ಕುಡಿಸಬೇಕು, ಟೀ ಚಮಚದಿಂದ ಕುಡಿಸಿದರೆ ಉತ್ತಮ.
  • ಮಗು ವಾಂತಿ ಮಾಡಿಕೊಂಡರೆ, ಮತ್ತೆ ಕೊಡಿ.

ಲೋಟದಲ್ಲಿ ಕುಡಿಯಲು ಕೊಡಬೇಕು. (ಬಾಟಲಿಯಲ್ಲಿ ಬೇಡ. ಶುಚಿ ಮಾಡುವುದ ಕಷ್ಟ).ದ್ರಾವಣವನ್ನು ಸ್ವಲ್ಪ ಸ್ವಲ್ಪ ಸಾವಕಾಶವಾಗಿ ಕುಡಿಸಲು ನೆನಪಿಡಿ.

ಮಗು ವಾಂತಿ ಮಾಡಿಕೊಂಡರೆ ಹೇಗೆ ?

ಮಗು ವಾಂತಿ ಮಾಡಿಕೊಂಡರೆ ಹತ್ತು ನಿಮಿಷ ಕಾಯಿರಿ. ನಂತರ ಮತ್ತೆ ಕುಡಿಸಿ. ಸಾವಕಾಶವಾಗಿ ಸ್ವಲ್ಪ ಸ್ವಲ್ಪ ಕುಡಿಸುವ ಪ್ರಯತ್ನ ಮುಂದುವರಿಸಿ. ವಾಂತಿಯಾದರೂ ದೇಹವು ಸ್ವಲ್ಪ ದ್ರಾವಣ ಮತ್ತು ಲವಣಗಳನ್ನು ಉಳಿಸಿಕೊಂಡಿರುವುದು.

ಎಲ್ಲಿಯವರೆಗೆ ದ್ರಾವಣವನ್ನು ಕುಡಿಸಬೇಕು ?

ದ್ರಾವಣವನ್ನು ಅತಿಸಾರ ನಿಲ್ಲುವವರೆಗೆ ನೀಡಬೇಕು. ಅದು ಮೂರರಿಂದ ಐದು ದಿನ ಆಗಬಹುದು.

ಓ ಅರ ಎಸ್ಗೆ ದ್ರಾವಣವನ್ನು ಹೇಗೆ ಸಂಗ್ರಹಿಸಿ ಇಡಬಹುದು?

ತಂಪಾದ ಸ್ಥಳದಲ್ಲಿ ಸಂಗ್ರಹಿಸಿ ಇಡಿ. ಅದನ್ನು ಪೂರ್ಣ ತಂಪು ಮಾಡಬಹುದು.ಮಗುವಿಗೆ ಓ ಅರ ಎಸ್ ದ್ರಾವಣವು 24 ಗಂಟೆಯ ನಂತರ ಮತ್ತೆ ಬೇಕಾದರೆ ತಾಜ ದ್ರಾವಣ ತಯಾರಿಸಿ ಕೊಡಿ.

10 ಮಗುವನ್ನು ಪುನರ್ಜಲೀಕರಣ ಮಾಡಲು ನೀವು ತಿಳದಿರಬೇಕಾದದ್ದು

  1. ದ್ರಾವಣ ತಯಾರಿಸುವ ಮುನ್ನ ನಿಮ್ಮ ಕೈಅನ್ನು ಸಾಬೂನು (ಸೋಪು) ಮತ್ತು ನೀರಿನಿಂದ ಚೆನ್ನಾಗಿ ತೊಳೆದು ಕೊಳ್ಳಿ
  2. ದ್ರಾವಣವನ್ನು ಶುಚಿಯಾದ ಪಾತ್ರೆಯಲ್ಲಿ ಮಿಶ್ರಮಾಡಿ
    • ಒಂದು ಟೀ ಚಮಚ ಉಪ್ಪು ಮತ್ತು ಎಂಟು ಟೀ ಚಮಚ ಸಕ್ಕರೆ
    • ಅಥವ ಬಾಯಿಯ ಮೂಲಕ ನೀಡುವ ಪುನರ್ಜಲೀಕರಣ ಲವಣದ ಒಂದು ಪಾಕೆಟ್ (ಓ ಅರ ಎಸ್)
    • ಒಂದು ಲೀಟರ್ ಶುದ್ಧ ಕುಡಿಯುವ ನೀರು ಅಥವ ಕುದಿಸಿ ಆರಿಸಿದ ನೀರು
    ಮಿಶ್ರಣವನ್ನು ಅದರಲ್ಲಿರುವ ಲವಣ ಪೂರ್ಣ ಕರಗುವವರೆಗೆ ಕಲಕಿ
  3. ನಿಮ್ಮ ಮತ್ತು ಮಗುವಿನ ಕೈಯನ್ನು ದ್ರಾವಣ ಕುಡಿಸುವ ಮುನ್ನ ಸೋಪು ಮತ್ತು ನೀರಿನಿಂದ ತೊಳೆಯಿರಿ
  4. ಅನಾರೋಗ್ಯದ ಮಗುವಿಗೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ದ್ರಾವಣವನ್ನುಅಗತ್ಯ ಬಿದ್ದಷ್ಟನ್ನು ಅಗಾಗ ಸ್ವಲ್ಪ ಸ್ವಲ್ಪ ಕುಡಿಸಿ
  5. ಮಧ್ಯ ಬೇರೆ ದ್ರವಗಳನ್ನು , ಎದೆ ಹಾಲು ಅಥವ ಹಣ್ಣಿನ ರಸ,ಪಾನಕವನ್ನು ಕೊಡಿ
  6. ಮಗುವಿಗೆ ನಾಲಕ್ಕು ತಿಂಗಳ ಮೇಲೆ ವಯಸ್ಸಾಗಿದ್ದರೆ ಘನ ಆಹಾರ ನೀಡಿ
  7. ಮಗುವಿಗೆ ದ್ರಾವಣವು 24 ಗಂಟೆಯಾದ ಮೇಲೆ ಬೇಕಾದರೆ ಮತ್ತೆ ಆಗಲೇ ತಾಜಾವಾಗಿ ತಯಾರಿಸಿ
  8. ದ್ರಾವಣವು (ಓ ಅರ ಎಸ್) ಅತಿಸಾರವನ್ನು ನಿಲ್ಲಿಸುವುದಿಲ್ಲ. ಅದು ದೇಹ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ ಆಗ ಅತಿಸಾರ ತನ್ನಿಂದ ತಾನೆ ಕಡಿಮೆಯಾಗುವುದು.
  9. ಮಗು ವಾಂತಿ ಮಾಡಿಕೊಂಡರೆ , ಹತ್ತು ನಿಮಿಷ ತಡೆಯಿರಿ, ನಂತರ ದ್ರಾವಣ (ಓ ಅರ ಎಸ್) ಮತ್ತೆ ನೀಡಿ. ಸಾಧಾರಣವಾಗಿ ವಾಂತಿ ನಿಲ್ಲುತ್ತದೆ.
  10. ಅತಿಸಾರ ಹೆಚ್ಚಾದರೆ ಮತ್ತು ಅಥವ ವಾಂತಿ ಮುಂದುವರೆದರೆ, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಿರಿ.

ದೇಹದ ನಿರ್ಜಲೀಕರಣವನ್ನು ತಡೆಯಲು ಪರಿಣಾಮಕಾರಿಯಾದ ಪುನರ್ಜಲೀಕರಣ ದ್ರಾವಣವನ್ನು ಎಲ್ಲರ ಮನೆಯಲ್ಲಿ ಬಹುತೇಕ ದೊರೆಯುವ ವಸ್ತುಗಳನ್ನೆ ಬಳಸಿ ತಯಾರಿಸಬಹುದು. ಪ್ರತಿಸಲ ಮಗುವು ಭೇದಿ ಮಾಡಿಕೊಂಡಾಗ ಅದನ್ನು ಕುಡಿಸಬೇಕು.

ಈ ಪಾನೀಯಗಳು ( ಕುದಿಸಿದರೆ ಆದ್ಯತೆ) ಕೆಳಗಿನವುಗಳನ್ನು ಹೊಂದಿರಬೇಕು:

  • ಪಿಷ್ಟ ಮತ್ತು ಅಥವ ಸಕ್ಕರೆಗಳು ಗ್ಲೂಕೋಸು ಮತ್ತು ಶಕ್ತಿಯ ಮೂಲಗಳಾಗಿರುವವು,
  • ಸ್ವಲ್ಪ ಸೋಡಿಯಂ ಮತ್ತು
  • ತುಸು ಪೊಟಾಸಿಯಂ

ಕೆಳಗಿನ ಸಾಂಪ್ರದಾಯಿಕ ಔಷಧಿಗಳು ಬಹು ಪರಿಣಾಮಕಾರಿಯಾದ ಪುನರ್ಜಲಿಕರಣದ ದ್ರಾವಣಗಳಾಗಿವೆ ಮತ್ತು ಮಗುವು ಅತಿಸಾರದಿಂದ ಬಳಲುತ್ತಿದ್ದಾಗ ಅತಿ ಹೆಚ್ಚು ಜೀವ ದ್ರವ ನಷ್ಟವಾಗುವುದನ್ನು ತಡೆಯುತ್ತವೆ:

  • ಎದೆಹಾಲು
  • ಗ್ರೂಯಲ್ಸ ( ದುರ್ಬಲ ಗೊಳಿಸಿದ ಬೇಯಿಸಿದ ಬೇಳೆ ಮತ್ತು ನೀರು)
  • ಕ್ಯಾರೆಟ್ ಸೂಪು
  • ಗಂಜಿ

ಸೂಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ಮಗುವನ್ನು ಪುನರ್ಜಲಿಕರಣ ಮಾಡಲು ಸರಳವಾದ ದ್ರಾವಣವನ್ನು ಸಕ್ಕರೆ ಮತ್ತು ಉಪ್ಪಿನಿಂದ ಮಾಡಬಹುದು .

ಸಾಧ್ಯವಾದರೆ, 1/2 ಲೋಟ ಕಿತ್ತಳೆ ರಸ ಅಥವ ಕಿವುಚಿದ ಬಾಳೆಹಣ್ಣು ಪೊಟಾಸಿಯಂ ಮಟ್ಟವನ್ನು ಸುಧಾರಿಸುವುದು.

ಕಾಕಂಬಿ ಮತ್ತು ಇತರ ಸಕ್ಕರೆಗಳನ್ನೂ ಬಿಳಿ ಸಕ್ಕರೆ ಬದಲಾಗಿ ಬಳಸಬಹುದು ಮತ್ತು ಅವುಗಳಲ್ಲಿ ಬಿಳಿ ಸಕ್ಕರೆಗಿಂತ ಹೆಚ್ಚು ಪೊಟಾಸಿಯಂ ಇರುತ್ತದೆ.

ಮೇಲಿನ ಯಾವ ಪಾನೀಯಗಳೂ ಸಿಗದಿದ್ದಾಗ ಪರ್ಯಾಯವಾಗಿ ಇವನ್ನು ಬಳಸಬಹುದು:

  • ತಾಜಾ ಹಣ್ಣಿನ ರಸ
  • ತೆಳುವಾದ ಚಹಾ
  • ಎಳನೀರು

ಇವು ಯಾವು ಸಿಗದಿದ್ದರೆ ಸಾಧ್ಯವಾದಷ್ಟು ಶುದ್ಧವಾದ ಮೂಲದಿಂದ ಪಡೆದ ನೀರನ್ನು ಕೊಡಿ.( ಸಾಧ್ಯವಾದರೆ ಕುದಿಸಿ ಆರಿಸಿ).

ಅಡಿ ಬರಹ

ಜನರು ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸಿದ ಪುನರ್ಜಲೀಕರಣ ದ್ರಾವಣವನ್ನು ಮನೆಯಲ್ಲಿ ಭಟ್ಟಿ ಇಳಿಸಿದ್ದು "home-brew." ಎನ್ನುವರು. ಈ ಮಾತಿಗೆ ಉತ್ತೇಜನ ನೀಡಬಾರದು. ಅದರ ಅರ್ಥ ಬೇರೆಯೇ ಆಗುವುದು:

  • ಫರ್ಮೆಂಟ್ ಮಾಡುವುದು ಮನೆಯಲ್ಲಿ ಮಾಡುವ ಗಂಜಿ ಮೊದಲಾದವಕ್ಕೆ ಅಡ್ಡಿಮಾಡುತ್ತದೆ.
  • ಅಥವ ಇದು ಟೀ ಮಾಡಿದಂತೆ ಸಕ್ಕರೆ ಮತ್ತು ಉಪ್ಪು ಹಾಕಿ ಕುದಿಸ ಬೇಕು ಎಂದು ಸೂಚಿಸುವುದು. ಅಥವ ORS, ಪ್ಯಾಕೆಟಿನಲ್ಲಿನ ಲವಣವನ್ನು ಹಾಕಿ ಕುದಿಸುವುದು ಎಂದಾಗುತ್ತದೆ. ಅದನ್ನು ಮಾಡಬಾರದು. ಇದರಿಂದ ಸಕ್ಕರೆ ವಿಘಟನೆ ಯಾಗುವುದು ಅಥವ ಕಾರ್ಮಲೈಜ ಆಗುವುದು
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/12/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate