অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೋಲಿಯೋಮೆಲೈಟಿಸ್

ಪೋಲಿಯೋ ಸೋಂಕು ಪೂರ್ತಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದು ನರಗಳನ್ನು ಮತ್ತು ಸ್ನಾಯುಗಳ ಮೇಲೆ ಯಾವಾಗಲೂ ಪರಿಣಾಮ ಬೀರುವುದು.

ಕಾರಣಗಳು ಪೋಲಿಯೋ ವೈರಾಣುವಿನ ಸೋಂಕಿನಿಂದ ಬರುವುದು. ಪೋಲಿಯೋ ವೈರಾಣು ಸಾಧಾರಣವಾಗಿ ಮಾನವನ ಮಲ ಮತ್ತು ಮೂತ್ರ ವಿಸರ್ಜನೆಗಳಿಂದ ಹರಡುವುದು. ಮಾನವ ಮಲ ಮತ್ತು ಮೂತ್ರ ವಿಸರ್ಜನೆಗಳು ಕುಡಿವ ನೀರನ್ನು , ಕೆರೆ, ಭಾವಿ, ಕೊಳಗಳನ್ನು ಕಲುಷಿತ ಗೊಳಿಸಿದಾಗ ರೋಗ ಹರಡುವುದು. ವೈರಾಣುವು ಬಂದ ದೊಡ್ಡ ಮಕ್ಕಳನ್ನು, ವಯಸ್ಕರನ್ನು ಅವರು ಈಜುವಾಗ, ಸ್ನಾನ ಮಾಡುವಾಗ ಅಥವ ಕೃಷಿ ಕೆಲಸ ಮಾಡುವಾಗ ಸಂಪರ್ಕಕ್ಕೆ ಬಂದರೆ ಸೋಂಕು ತಗುಲಿಸುತ್ತದೆ. ಇದು ಒಬ್ಬನಿಂದ ಇನ್ನೊಬ್ಬನಿಗೆ ಅವರ ಬಾಯಿ ಮತ್ತು ಮಲ ದ್ವಾರಗಳ ಮೂಲಕ ಹರಡಬಹುದು ವೈರಾಣುವು ಬಾಯಿಯ ಅಥವ ಮೂಗಿನಮೂಲಕ ಪ್ರವೇಶಿಸಬಹುದು. ಅಲ್ಲಿಂದ ಅವು ಕರುಳಿನ ಮೇಲೆ ದಾಳಿ ಮಾಡುವವು . ಅಲ್ಲಿ ಕರುಳಿನ ಜೀವ ಕೋಶದಲ್ಲಿ ನೆಲೆ ಮಾಡುವವು ಮತ್ತು ಪೂರ್ಣ ಸಮುದಾಯವನ್ನೆ ಸೋಂಕಿನ ಅಪಾಯಕ್ಕೆ ಈಡು ಮಾಡುವುದು.

ಲಕ್ಷಣಗಳು

ಲಘು ಸೊಂಕು

ಮೆದುಳಿನ ಮತ್ತು ಬೆನ್ನೆಲುಬಿನ ಸಾಧಾರಣ ಸೋಂಕು

ಮೆದುಳಿನ ಮತ್ತು ಬೆನ್ನೆಲುಬಿನ ತೀವ್ರ ಸೋಂಕು

ಬಹಳ ಸಲ ರೋಗಿಗೆ ಲಕ್ಷಣಗಳ ಅನುಭವ ಆಗುವುದಿಲ್ಲ
. ಇನ್ನುಳಿದವರಲ್ಲಿ ಲಕ್ಷಣಗಳೆಂದರೆ

  • ಫ್ಲೂ ನಂತಹ ಲಕ್ಷಣಗಳು
  • ಹೊಟ್ಟೆ ನೋವು
  • ಅತಿಸಾರ
  • ವಾಂತಿ
  • ಗಂಟಲ ನೋವು
  • ಲಘು ಜ್ವರ
  • ತಲೆನೋವು
  • ಲಘು ಸೋಂಕಿನ ಲಕ್ಷಣಗಳು
  • ತುಸು ಜ್ವರ
  • ಕತ್ತು ಬಿಗಿತ
  • ಸ್ನಾಯುಗಳ ದೌರ್ಬಲ್ಯ ಮತ್ತು ದೇಹದ ವಿವಿಧ ಭಾಗಗಳಲ್ಲಿ ನೋವು. ಕಣಕಾಲಿನಲ್ಲಿ (ಕಾಲ ಹಿಂಭಾಗ)
  • ಬೆನ್ನು ನೋವು
  • ಹೊಟ್ಟೆನೋವು
  • ಬಿಗಿದ ಸ್ನಾಯುಗಳು
  • ಅತಿಸಾರ
  • ಚರ್ಮದ ಮೇಲೆ ಕಿರು ಗುಳ್ಳೆಗಳು
  • ಅತಿಯಾದ ದುರ್ಬಲತೆ ಅಥವ ಸುಸ್ತು
  • ಸ್ನಾಯುಗಳ ದೌರ್ಬಲ್ಯ ಮತ್ತು ಪಾರ್ಶ್ವ ವಾಯು ಆಗುವ ಸಾಧ್ಯತೆ (ಕಾರ್ಯ ವೈಫಲ್ಯ) ನರದಮೇಲೆ ಅವಲಂಬಿಸಿದೆ (ಅಂದರೆ, ಕೈ , ಕಾಲು).
  • ಮಾಂಸ ಖಂಡಗಳ ನೋವು, ಮೃದುತ್ವ, ಮತ್ತು ಸೆಳೆತ (ಕತ್ತು, ಬೆನ್ನು, ಕೈ ,ಅಥವ ಕಾಲುಗಳು)
  • ಕತ್ತು ಬಾಗಿಸಲು ಆಗದು, ನೇರವಾಗಿ ಹಿಡಿಯಲಾಗದು, ಅಥವ ಕೈ ಕಾಲು ಎತ್ತಲಾಗದು.
  • ಕಿರಿಕಿರಿ
  • ಹೊಟ್ಟೆ ಉಬ್ಬರ
  • ಉಸಿರುಗಟ್ಟುವುದು
  • ಮುಖ ಭಾವ ಪ್ರದರ್ಶನಕ್ಕೆ ತೊಂದರೆ
  • ಮೂತ್ರ ಮತ್ತು ಮಲ ವಿಸರ್ಜನೆಯಲ್ಲಿ ತೊಂದರೆ (ಮಲಬದ್ದತೆ)
  • ನುಂಗುವಾಗ ತೊಂದರೆ
  • ಉಸಿರಾಟದ ತೊಂದರೆ

ಆತಂಕದ ಅಂಶಗಳು

  • ಮಕ್ಕಳಿಗೆ ಈ ಸೋಂಕು ತಗಲುವ ಅಪಾಯ ಹೆಚ್ಚು, ಅದರಲ್ಲೂ ಇನ್ನೂ ಶೌಚಾಲಯ ಬಳಸುವ ತರಬೇತಿ (ಟಾಯ್ಲೆಟ್‌ ಟ್ರೇನಿಂಗ್‌) ಪಡೆಯದ ಮಕ್ಕಳಿಗೆ ಸೋಂಕಿನ ಸಾಧ್ಯತೆ ಬಹಳ
  • ರೋಗನಿರೋಧಕ ಲಸಿಕೆ ಪಡೆಯದ ಪ್ರೌಢರಲ್ಲೂ ಇದನ್ನು ಕಾಣಬಹುದು
  • ಸೋಂಕಿತ ಮಲವನ್ನು ಸ್ಪರ್ಶಿಸಿದ ನೊಣಗಳು ಆಹಾರದ ಮೇಲೆ ಕೂಡುವ ಸಾಧ್ಯತೆಯಿರುವ ಪ್ರದೇಶಗಳಲ್ಲೂ ಸೋಂಕಿನ ಸಾಧ್ಯತೆ
  • ತಿಪ್ಪೆ ಚರಂಡಿ ಬಳಿಯಿರುವ ನೀರಿನ ಮೂಲಗಳು
  • ಏಡ್ಸ್‌ ಮತ್ತು ಕ್ಯಾನ್ಸರ್‌ನಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ

ಪೋಲಿಯೋ ತಡೆಗಟ್ಟುವಿಕೆ

  • ನೀವು ಸ್ವಚ್ಛವಾಗಿರಿ, ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛ ವಾಗಿಡಿ
  • ಮಕ್ಕಳಿಗೆ ರೋಗ ನಿರೋಧಕ ಲಸಿಕೆ ಕೊಡಿಸಿ (ರೋಗನಿರೋಧಕ ಪಟ್ಟಿಯನ್ನು ನೋಡಿ)
  • ಪೌಷ್ಟಿಕ ಆಹಾರ ಸೇವಿಸಿ
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate