অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೆನಂಜೈಟಿಸ್

ಮೆನಂಜೈಟಿಸ್ ಬೆನ್ನು ಹುರಿ ಮತ್ತು ಮೆದುಳನ್ನು ಸುತ್ತುವರಿದ ಜೀವ ದ್ರವದ ಸೊಂಕಿನಿಂದ ಬರುವುದು. ಇದನ್ನು ಜನರು ಬೆನ್ನುಹುರಿ ಮೆನಂಜೈಟಿಸ್ ಎನ್ನುವರು

ಮೆನಂಜೈಟಿಸ್ ಸಾಧಾರಣವಾಗಿ ವೈರಲ್ ಅಥವ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುವುದು. ಮೆನಂಜೈಟಿಸ್ ವೈರಾಣು (ವೈರಸ್ಸಿ) ವಿನಿಂದ ಆಗಿದೆಯೋ ಅಥವ ಬ್ಯಾಕ್ಟೀರಿಯಾದಿಂದ ಬಂದಿದೆಯೋ ಎಂಬುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ. ರೋಗದ ತೀವ್ರತೆ ಮತ್ತು ಚಿಕಿತ್ಸೆಯು ಬಹಳ ಭಿನ್ನವಾಗಿರುವುದು, ವೈರಲ್ ಮೆನಂಜೈಟಿಸ್ ಸಾಧಾರಣವಾಗಿ ಕಡಿಮೆ ತೀವ್ರವಾಗಿದೆ ಮತ್ತು ಹೆಚ್ಚು ಚಿಕಿತ್ಸೆ ಇಲ್ಲದೆ ಗುಣವಾಗುವುದು

ಮೆನಂಜೈಟಿಸ್

ಮೆನಂಜೈಟಿಸ್ ಕಾರಣವಾಗುವ ವೈರಾಣುಗಳ ಪ್ರಕಾರಗಳು

  • 1ವೈರಲ್ ("ಅಸೆಪ್ಟಿಕ್")ಮೆನಂಜೈಟಿಸ್ 2 ಎನ್ಟರೊ ವೈರಾಣು (ವಯರಸ್) ಗಳು
  • 3 ಕಾಕ್ಸಾಚಿ ವೈರಾಣು (ವಯರಸ್) ಗಳು 4 ಹರ್ಪಿಸ್ ವೈರಾಣು (ವಯರಸ್) ಗಳು.
  • 5 ಲಿಂಫೋಸೈಟಿಕ್ ಕೊರಿ ಮೆನಂಝೈಟಿಸ್ ವೈರಾಣು (ವಯರಸ್) ಗಳು (LCMV) ( ಮೂಷಿಕದಿಂದಾಗುವ ವೈರಲ್ ಸೋಂಕಿನ ರೋಗಗಳು ಅಸೆಪ್ಟಿಕ್ ಮೆನಂಜೈಟಿಸ್ ಗೆ ಕಾರಣ ವಾಗುವವು)

ವೈರಲ್ ಮೆನಂಜೈಟಿಸ್ ಬಗೆಗಿನ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವೈರಲ್ ಮೆನಂಜೈಟಿಸ್ ಗಂಭೀರವಾದ ರೋಗವೆ ?

ವೈರಲ್ ಮೆನಂಜೈಟಿಸ್ ಗಂಭಿರವಾದ ರೋಗ. ಆದರೆ ಸಾಧಾರಣ ನಿರೋಧ ವ್ಯವಸ್ಥೆ ಇರುವವರಿಗೆ ಪ್ರಾಣಾಪಾಯಕಾರಿಯಲ್ಲ. ಸಾಧಾರಣವಾಗಿ ಲಕ್ಷಣಗಳು 7 ರಿಂದ 10 ದಿನ ಇರುತ್ತವೆ. ನಂತರ ರೋಗಿಯು ಪೂರ್ಣ ಗುಣ ಮುಖನಾಗುವನು. ಬ್ಯಾಕ್ಟೀರಿಯಲ್ ಮೆನಂಜೈಟಿಸ್ , ಮಾತ್ರ ಬಹಳ ಆತಂಕಕಾರಿ ಮತ್ತು ಸರಿಯಾದ ಚಿಕಿತ್ಸೆ ಸಿಗದಿದ್ದರೆ ವಿಕಲತೆ ಅಥವ ಸಾವಿಗೆ ಕಾರಣವಾಗಬಹುದು. ಅನೇಕ ಸಲ ವೈರಲ್ ಮೆನಂಜೈಟಿಸ್ ಮತ್ತು ಬ್ಯಾಕ್ಟೀರಿಯಲ್ ಮೆನಂಜೈಟಿಸ್ ಒಂದೆ ರೀತಿ ಇರತ್ತವೆ

ವೈರಲ್ ಮೆನಂಜೈಟಿಸ್

ಬ್ಯಾಕ್ಟೀರಿಯಲ್ ಮೈನಂಜೈಟಿಸ್ ಗೆ ಅನೇಕ ವಿಧದ ವೈರಸ್ಸುಗಳು ಕಾರಣವಾಗಬಹುದು. ಸುಮಾರು 90% ವೈರಲ್ ಮೆನಂಜೈಟಿಸ್ ಪ್ರಕರಣಗಳು, ಕೊಕ್ಸಕಿ ವೈರಾಣು (ವಯರಸ್) ಗಳು ಮತ್ತು ಎಕೊ ವೈರಾಣು (ವಯರಸ್) ಗಳು ಎಂಟರೊವೈರಸ್ ಗುಂಪಿಗೆ ಸೇರಿದವುಗಳಿಂದ ಬರುತ್ತವೆ. ಈ ವೈರಾಣು (ವಯರಸ್) ಗಳು ಬೇಸಿಗೆ ಮತ್ತು ಚಳಿಗಾಲದಲ್ಲಿ ಹೆಚ್ಚು ಪ್ರಬಲವಾಗಿರುವವು. ಹರ್ಪಿಸ್ ವೈರಾಣು (ವಯರಸ್) ಗಳು ಮತ್ತು ಮಂಪ್ಸ ವೈರಾಣು (ವಯರಸ್) ಗಳು ಕೂಡಾ ವೈರಲ್ ಮೆನಂಜೈಟಿಸ್ ಗೆ ಕಾರಣವಾಗುತ್ತವೆ

ವೈರಾಣು (ವೈರಸ್) ಗಳು ಹರಡುವುದು ಹೇಗೆ?

ಎಂಟರೊ ವೈರಾಣು (ವಯರಸ್) ಗಳು ಬಹು ಸಾಮಾನ್ಯವಾಗಿ ವೈರಲ್ ಮೆನಂಜೈಟಿಸ್ ಬರಲುಕಾರಣ ವಾಗಿವೆ. ಇದು ಬಹಳ ಸಲ ಸೊಂಕಿತರ ಶ್ವಾಸ ಕೋಶದ ಸ್ರಾವಗಳ ನೇರ ಸಂಪರ್ಕದಿಂದ ಬರುವುದು (ಉಗುಳು, ಸಿಂಳ, ಕಫ). ವೈರಲ್ ಮೆನಂಜೈಟಿಸ್ಗೆ ಕಾರಣ ವಾಗುವ ವೈರಸ್ ಗಳು ಸಾಂಕ್ರಾಮಿಕವಾಗಿವೆ.ಇ ದು ಸೋಂಕಿತರ ಕೈಕುಲುಕುವುದು, ಅಥವ ಅವರು ಉಪಯೋಗಿಸಿದ ವಸ್ತುವನ್ನು ಮುಟ್ಟಿ ಅದೆ ಕೈನಿಂದ ಮೂಗು, ಬಾಯಿ, ಕಣ್ಣುಗಳನ್ನು ಉಜ್ಜುವುದರಿಂದ ಹರಡುವುದು. ಸೊಂಕಿತರ ಮಲದಲ್ಲೂ ವೈರಾಣುಗಳು ಇರುತ್ತವೆ. ಶೌಚ ತರಬೇತಿ ಇಲ್ಲದ ಮಕ್ಕಳಿಗೆ ಈ ಮಾರ್ಗವಾಗಿಯೇ ರೋಗಗಳು ಹರಡುತ್ತದೆ. ಇದು ಆ ಸೊಂಕಿತ ಮಕ್ಕಳ ಡಯಫರ್ ಅನ್ನು ಬದಲಾಯಿಸುವ ವಯಸ್ಕರಿಗೂ ಹರಡುವ ಸಂಭವ ಇದೆ. ಎಂಟ್ರೊವೈರಸ್ ಗುಪ್ತಾವಸ್ಥೆಯಲ್ಲಿರುವ ಅವಧಿ ಸೊಂಕು ತಗಲಿ ಅದು ಹೊರಬರುವ ವರೆಗಿನ 3 ರಿಂದ 7 ದಿನಗಳು. ಅದು ಬರುವ ಮೊದಲ ಮೂರು ದಿನ ನಂತರ ಅದು ಗುಣವಾದ 10 ದಿನದ ವರೆಗೆ ಸೊಂಕು ಹರಡಬಹುದು. ಬಹುತೇಕ ಸೋಂಕಿತ ಜನರಿಗೆ ಯಾವುದೆ ಲಕ್ಷಣ ಕಂಡುಬರುವುದಿಲ್ಲ ಅಥವ ಸ್ವಲ್ಪ ನೆಗಡಿ ಕಾಣಿಸಬುದು.ಅಥವ ಜ್ವರ ಬರಬಹುದು. ಅತಿ ಕಡಿಮೆ ಪ್ರಮಾಣದ ಜನರಿಗೆ ವೈರಲ್ ಮೆನಂಜೈಟಿಸ್ ಪೂರ್ಣ ಪ್ರಮಾಣದಲ್ಲಿ ಬರುವುದು

ತಡೆಗಟ್ಟುವಿಕೆ

ಎಂಟ್ರೊವೈರಸ್ನಿಂದ ಸೊಂಕಿತರಾದವರು ಬಹಳ ಜನ ಅನರೋಗ್ಯ ಪೀಡಿತರಾಗುವುದಿಲ್ಲ. ಆದ್ದರಿಂದ ವೈರಸ್ಸು ಹರಡುವುದನ್ನು ತಡೆಯುವುದು ಬಹು ಕಷ್ಟ. ಆದರೂ ವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸುವುದರಿಂದ ಸೋಂಕು ತಗುಲುವ ಅವಕಾಶ ಕಡಿಮೆಯಾಗುವುದು. ನಿಮಗೆ ವೈರಲ್ ಮೆನಂಜೈಟಿಸ್ ಸೊಂಕನ್ನು ತಡೆಯಲು ಉತ್ತಮ ಉಪಾಯವೆಂದರೆ ಕೈಗಳನ್ನು ಚೆನ್ನಾಗಿ ಆಗಾಗ ತೊಳೆದುಕೊಳ್ಳುವುದು. (" ಕೈ ತೊಳೆಯುವುದು": ಹಿಡಿಯಷ್ಟು ತಡೆ : ಕ್ರಿಮಿಗಳನ್ನು ಗಳನ್ನ ದೂರವಿಡುವುದು). ಅಲ್ಲದೆ, ಕಲುಷಿತವಾದ ಪ್ರದೇಶ ಮತ್ತು ಮಲಿನವಾದ ವಸ್ತುಗಳನ್ನು ಸಾಬೂನು (ಸೋಪು) ಮತ್ತು ನೀರಿನಿಂದ ಚೆನ್ನಾಗಿ ತೊಳೆಯ ಬೇಕು. ನಂತರ ಅವನ್ನು ಕ್ಲೋರಿನ್ ಇರುವ ಚೆಲುವೆ ಪುಡಿ ( ¼ ಕಪ್ಪು ಚೆಲವೆ ಪುಡಿ ಜೊತೆ 1 ಗ್ಯಾಲನ್ ನೀರು ಸೇರಿಸಿ ಮಾಡಬೇಕು) ವೈರಾಣುವನ್ನು ನಿಷ್ಕ್ರಿಯೆಗೋಳಿಸಲು ಉತ್ತಮ ಉಪಾಯವೆಂದರೆ. ವಿಶೇಷವಾಗಿ ಶಿಶುಪಾಲನ ಕೇಂದ್ರಗಳ ತರಹದ ಸಂಸ್ಥೆಗಳಲ್ಲಿ ಇದನ್ನು ಅಳವಡಿಸಬೇಕು.

ಬ್ಯಾಕ್ಟೀರಿಯಲ್ ಮೆನಂಜೈಟಿಸ್

ಬ್ಯಾಕ್ಟೀರಿಯಲ್ ಮೆನಂಜೈಟಿಸ್ ಬೆನ್ನು ಹುರಿಯಲ್ಲಿನ ಜೀವದ್ರವದ ಮತ್ತು ಮೆದುಳನ್ನು ಸುತ್ತುವರಿದ ದ್ರವದ ಬಹಳ ಗಂಭೀರವಾದ ಸೋಂಕು

ಬ್ಯಾಕ್ಟೀರಿಯದ ವಿಧಗಳು

  • ನಿಸ್ಸೆರಿಯಾ ಮೆನಂಜೈಟಿಸ್ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಬ್ಯಾಕ್ಟೀರಿಯಲ್ ಮೆನಂಜೈಟಿಸ್ ಬರಲು ಕಾರಣವಾಗುವುದು
  • 2ಸ್ಟ್ರೆಪ್ಟೊಕೊಕಸ್ ನ್ಯುಮೋನಿಯಾ 3 B ಗುಂಪಿನ ಸ್ಟ್ರೆಪ್ಟೊಕೊಕಸ್(GBS)ರೋಗ .
  • 4ಹೆಮೊಫಿಲಿಲಸ್ ಇನಫ್ಲುಯಂಜಾ ಸೆರೊಟೈಪ್ ಬಿ (Hib) ರೋಗ .

ಬ್ಯಾಕ್ಟೀರಿಯಲ್ ಮೆನಂಜೈಟಿಸ್ ನ ಬಗ್ಗೆ ಪದೇಪದೇ ಕೇಳುವ ಪ್ರಶ್ಣೆಗಳು

ಬ್ಯಾಕ್ಟೀರಿಯಲ್ ಮೆನಂಜೈಟಿಸ್ ಗಂಭೀರವಾದ ರೋಗವೇ ಮತ್ತು ಅದಕ್ಕೆ ಕಾರಣವೇನು ?

ಲಕ್ಷಣಗಳು ಯಾವು ?

ಯಾರೆ 2 ವರ್ಷದ ಮೇಲಿನವರಿಗೆ, ತೀವ್ರ ಜ್ವರ, ತಲೆನೋವು, ಕತ್ತು ಬಿಗಿತ ಬರುವುದು ಇದರ ಲಕ್ಷಣಗಳು. ಈವು ಕೆಲವೆ ಗಂಟೆಗಳಲ್ಲಿ ಅಥವ 1 ರಿಂದ 2 ದಿನಗಳಲ್ಲಿ ಬರಬಹುದು. ಇತರ ಲಕ್ಷಣಗಳೆಂದರೆ ವಾಕರಿಕೆ, ವಾಂತಿ ,ಬೆಳಕಿಗೆ ಸಂವೇದನೆ, ಗೊಂದಲ,ನಿದ್ರಾಹೀನತೆ. ರೋಗ ಬಲಿತಾಗ ಚರ್ಮದ ಕೆಳಗೆ ವ್ರಣ ಮತ್ತು ಅದು ತ್ವರಿತವಾಗಿ ಹರಡುತ್ತದೆ.ನವಜಾತ ಶಿಶುಗಳಲ್ಲಿ ಪ್ರಾತಿನಿಧಿಕ ಲಕ್ಷಣ ವಾಕರಿಕೆ, ವಾಂತಿ ಮತ್ತು ಕತ್ತು ಬಿಗಿತ ಆದರೆ ಅದನ್ನು ಪತ್ತೆಹಚ್ಚುವುದ ಕಠಿನ. ಕಿರಿ ಕಿರಿ, ಆಹಾರದಲ್ಲಿ ನಿರಾಸಕ್ತಿ ಇತರ ಹೆಚ್ಚಿನ ಲಕ್ಷಣಗಳು. ರೋಗ ಮುಂದುವರೆದಾಗ ಯಾವುದೆ ವಯಸ್ಸಿನ ರೋಗಿಗೆ ಸೆಳೆತ ಬರಬಹುದು

ಅಪಾಯದಲ್ಲಿ ಇರುವವರು ಯಾರು ?

ಯಾರಿಗಾದರೂ ಬ್ಯಾಕ್ಟೀರಿಯಲ್ ಮೆನಂಜೈಟಿಸ್ ಬರಬಹುದು,ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಬಹು ಸಾಮಾನ್ಯ. ಮೆನಂಜೈಟಿಸ್ ರೋಗಿಳ ಜೊತೆ ಹತ್ತಿರ ದ ಮತ್ತು ಬಹುಕಾಲದ ಸಂಪರ್ಕವಿರುವವರಿಗೆ , ನಿಸ್ಸೆರಿಯಾ ಮೆನಂಜೈಟಿಸ್ ಅಥವ Hib ಗಳು ಸಹಾ ಅಪಾಯವನ್ನು ಹೆಚ್ಚಿಸುತ್ತವೆ, ಇವರಲ್ಲಿ ಒಂದೆ ಮನೆಯಲ್ಲಿರುವ ಶಾಲೆಯಲ್ಲಿರುವವ ಜನ ಅಥವ ರೋಗಿಗಳ ಮೂಗಿ ಮತ್ತು ಬಾಯಿಯಯಿಂದ ಹೊರ ಬರುವ ವಿಸರ್ಜನೆಯ ಜತೆ ನೇರ ಸಂಪರ್ಕಕ್ಕೆ ಬರುವವರ. ಮೆನಂಜೈಟಿಸ್ ಮೆದುಳ ಹಾನಿ, ಕೋಮಾ ಮತ್ತು ಮರಣಕ್ಕೆ ಕಾರಣವಾಗಬಹುದು . ಬದುಕಿ ಉಳಿದವರು ದೀರ್ಘಕಾಲದ ಸಮಸ್ಯೆಗಳಾದ ಕಿವುಡತನ, ಬುದ್ಧಿಮಾಂದ್ಯ, ಪಾರ್ಶ್ವ ವಾಯು, ಮತ್ತು ಸೆಳೆತಗಳಿಗೆ ತುತ್ತಾಗುವರು.

ತಡೆಗಟ್ಟುವಿಕೆ

  • ವ್ಯಾಕ್ಸಿನಗಳು -- Hib ವಿರುದ್ಧ ಅನೇಕ ವ್ಯಾಕ್ಸಿನುಗಳಿವೆ, ದುರ್ಬಲ ನಿಸ್ಸೆರಿಯಾ ಮೆನಂಜೈಟಿಸ್, ಮತ್ತು ಹಲವುವಿಧದ ಸ್ಟ್ರೆಪ್ಟೊಕೊಕಸ್ನ್ಯುಮೊನಿಯಾ.

Hib ವಿರುದ್ಧದ ವ್ಯಾಕ್ಸಿನುಗಳು ಸುರಕ್ಷಿತ ಮತ್ತು ತುಂಬ ಪರಿಣಾಮಕಾರಿ. ಪ್ರತಿ ಮಗುವೂ 6 ತಿಂಗಳಾಗುವ ಮೊದಲೆ ಮೂರು ಡೋಜು Hib ವ್ಯಾಕ್ಸಿನು ಪಡದಿರಬೇಕು.ನಾಲ್ಕನೆ ಡೋಜು( ಬೂಸ್ಟರ್) ಅನ್ನು 12 ರಿಂದ 18 ತಿಂಗಳ ಒಳಗೆ ನೀಡ ಬೇಕು.

ಮೂಲ : ಸೆಂಟರ್ ಫಾರ್ ಡಿಸ್ಈಸ್ ಕಂಟ್ರೋಲ್ ಅಂಡ್ ಪ್ರೆವೆನ್ಶೇನ್ 

ಕೊನೆಯ ಮಾರ್ಪಾಟು : 7/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate