অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಂದಿ ಜ್ವರ

ಹಂದಿ ಜ್ವರ ಎಂದರೇನು ?

ಹಂದಿ ಜ್ವರವು ಹಂದಿಗಳಿಗೆ ಬರುವ ಶ್ವಾಸಕೋಶದ ಖಾಯಿಲೆ. ಇದು ಒಂದು ರೀತಿಯ ಇನ್ ಫ್ಲೂಯಂಜಾದ ವೈರಸ್ ನಿಂದ ಅವುಗಳಿಗೆ ಆಗಾಗ ಬರುವುದು, ಮಾನವರಿಗೆ ಸಾಮಾನ್ಯವಾಗಿ ಹಂದಿ ಜ್ವರ ಬರುವುದಿಲ್ಲ. ಆದರೆ ಮಾನವರಿಗೆ ಸೋಂಕು ತಗುಲಬಹುದು.ಹಂದಿ ಜ್ವರದ ವೈರಾಣುಗಳು ಮೊದಲು ಒಬ್ಬರಿಂದ ಒಬ್ಬರಿಗೆ ಹರಡಿದ ವರದಿಗಳು ಇವೆ. ಅವು ಮೂರಕ್ಕಿಂತ ಹೆಚ್ಚು ಜನರಿಗೆ ಹರಡಲಾರವು.

ಮಾರ್ಚ್ ಮತ್ತು ಎಪ್ರಿಲ್ 2009 ರಲ್ಲಿ , ಹಂದಿ ಜ್ವರದ ಇನ್ ಫ್ಲೂಯಂಜ A (H1N1) ಸೋಂಕು ತಗುಲಿದ ಮಾನವರ ಪ್ರಕರಣಗಳು ಮೊದಲು, ಅಮೇರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತು ಟೆಕ್ಸಾಸಿನ ಸ್ಯಾನ್ ಆಂಟೋನಿಯೊ ದಲ್ಲಿ ವರದಿಯಾದವು. ನಂತರದಲ್ಲಿಅಮೇರಿಕಾದ ಇತರ ರಾಜ್ಯಗಳಲ್ಲಿ ಅಲ್ಲಂದು ಇಲ್ಲೊಂದು ಪ್ರಕರಣಗಳು ವರದಿಯಗುತ್ತಲೆ ಇವೆ

ಹಂದಿ ಜ್ವರದ ಚಿಕಿತ್ಸೆಗಾಗಿ ನಿಗದಿ ಪಡಿಸಿದ ಸರ್ಕಾರಿ ಆಸ್ಪತ್ರೆಗಳು

ಹಂದಿ ಜ್ವರದ ಲಕ್ಷಣಗಳೇನು ?

ಹಂದಿಜ್ವರ ಬಂದಾಗಿನ ಲಕ್ಷಣಗಳು ಮಾನವರಿಗೆ ಫ್ಲೂ ಬಂದಾಗಿನ ಲಕ್ಷಣಗಳನ್ನೆ ಹೋಲುತ್ತವೆ. ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು, ತಲೆ ನೋವು, ಚಳಿ, ಸುಸ್ತು ಇರುತ್ತವೆ, ಕೆಲವರಿಗೆ ಭೇದಿ ಮತ್ತು ವಾಂತಿ ಸಹಾ ಬರಬಹುದು. ಈ ಮುಂಚೆ ತೀವ್ರವಾದ ಅನಾರೋಗ್ಯ (ನ್ಯುಮೋನಿಯಾ ಮತ್ತು ಶ್ವಾಸ ಕೋಶದ ವಿಫಲತೆ )ದಿಂದ ಈ ಸೋಂಕಿನಿಂದ ಸಾವು ಸಂಭವಿಸಿರುವುದು ವರದಿಯಾಗಿದೆ. ಋತುಮಾನಕ್ಕೆ ಅನುಗುಣವಾಗಿ ಬರುವ ಫ್ಲೂ ನಂತೆ ಹಂದಿಜ್ವರವೂ ಸುಧೀರ್ಘವಾದ ವೈದ್ಯಕೀಯ ಸಮಸ್ಯೆ ಯಾಗಲಿದೆ.

ಸೊಂಕಿತರಿಗೆ ಕೆಮ್ಮಿದ್ದಾಗ ಮತ್ತು ಸೀನಿದಾಗ ಫ್ಲೂ ವೈರಾಣುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಕೆಲವು ಸಲ ಫ್ಲೂ ವೈರಾಣುವಿರುವ ವಸ್ತುವನ್ನು ಮುಟ್ಟಿ ಅದೆ ಕೈ ಅನ್ನು ಬಾಯಿ ಅಥವ ಮೂಗಿನ ಹತ್ತಿರ ಇಟ್ಟು ಕೊಂಡರೂ ಸೋಂಕು ತಗುಲಬಹುದು.

ಫ್ಲೂ ಇದ್ದ ಒಬ್ಬನು ಇನ್ನೊಬ್ಬರಿಗೆ ಹೇಗೆ ಸೋಂಕು ಹರಡಬಹುದು ?

ಸೋಂಕು ತಗುಲಿದವರು ಇನ್ನೊಬ್ಬರಿಗೆ ತಮಗೆ ಲಕ್ಷಣ ಕಾಣಿಸಿ ಕೊಳ್ಳುವ ಒಂದು ದಿನ ಮೊದಲಿನಿಂದ ನಂತರ ಬಂದ ಏಳು ದಿನಕ್ಕೂ ಮೀರಿ ಸೋಂಕು ಹರಡುವರು. ಅಂದರೆ ನೀವು ಅನಾರೋಗ್ಯ ಪೀಡಿತರು ಎಂದು ತಿಳಿಯುವ ಮೊದಲು ಮತ್ತು ಬಂದ ನಂತರವೂ ಸೊಂಕು ಹರಡಬಹುದು.

ಫ್ಲೂ ಬಾರದಂತೆ ನಾನು ಏನು ಮಾಡ ಬೇಕು ?

ಕೈತೊಳೆಯುವುದು ಪ್ರಥಮ ಮತ್ತು ಅತಿ ಮುಖ್ಯ ಕೆಲಸ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಉತ್ತಮ. ಚೆನ್ನಾಗಿ ನಿದ್ರೆ ಮಾಡಿ, ದೈಹಿಕ ಚಟುವಟಿಕೆ ಇರಲಿ, ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ, ಹೆಚ್ಚು ನೀರು ಕುಡಿಯಿರಿ . ಪೌಷ್ಟಿಕ ಆಹಾರ ಸೇವಿಸಿರಿ. ವೈರಾಣು ಇರಬಹುದಾದ ಮಲಿನವಾದುದ್ದನ್ನು ಮುಟ್ಟಬೇಡಿ, ರೋಗ ಪೀಡಿತರೊಡನೆ ಹತ್ತಿರದ ಸಂಪರ್ಕ ಬೇಡ.

ರೋಗ ಬಾರದಂತೆ ನಾನು ಹೇಗೆ ರಕ್ಷಣೆ ಪಡೆಯಬೇಕು?

ಹಂದಿ ಜ್ವರದಿಂದ ರಕ್ಷಣೆ ಪಡೆಯಲು ಸಧ್ಯಕ್ಕೆ ಯಾವ ಔಷಧಿ (ವ್ಯಾಕ್ಸಿನ್) ಯೂ ಇಲ್ಲ. ನೀವುತೆಗೆದುಕೊಳ್ಳುವ ದೈನಂದಿನ ಚಟುವಟಿಕೆಗಳಿಂದ ರೋಗಾಣ ಹರಡುವುದನ್ನು ತಡೆಯಬಹುದು.ಈ ಕೆಳಗಿನ ಕ್ರಮಗಳಿಂದ ಆರೋಗ್ಯ ರಕ್ಷಣೆ ಸಾಧ್ಯ :

  • ಕೆಮ್ಮುವಾಗ ಅಥವ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಸ್ಯೂಪೇಪರಿನಿಂದ ಮುಚ್ಚಿಕೊಳ್ಳಿ
  • ಕೈಯನ್ನು ಸೋಪು ಮತ್ತು ನೀರನಿಂದ ಆಗಾಗ ತೊಳೆದು ಕೊಳ್ಳಿ. ವೀಶೇಷವಾಗಿ ಕೆಮ್ಮಿದಾದ ಮತ್ತು ಸೀನಿದಾಗ. ಆಲ್ಕೋಹಾಲ್ ಪೂರಿತವಾದವು ಉಪಯುಕ್ತ.
  • ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳ ಬೇಡಿ ಅದರಿಂದ ವೈರಾಣು ಹರಡುವುದು ತಪ್ಪುತ್ತದೆ.
  • ನೀವು ಇನ್‌ಫ್ಲುಯೇಂಜಾದಿಂದ ಬಳಲುತ್ತಿದ್ದರೆ, ಶಾಲೆಗೆ, ಆಫೀಸಿಗೆ ಹೋಗದೆ ಮನೆಯಲ್ಲೇ ಇರಿ, ಜನರೊಂದಿಗೆ ಹೆಚ್ಚಿನ ಸಂಪರ್ಕ ಬೇಡ, ಹೆಚ್ಚಿನ ಜನರೊಂದಿಗೆ ಬೆರೆಯುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತದೆ.

ಕೆಮ್ಮು ಮತ್ತು ಸೀನುವುದರಿಂದ ವೈರಾಣು (ವೈರಸ್) ಹರಡುವುದನ್ನು ತಡೆಯುವ ಉತ್ತಮ ವಿಧಾನ ಯಾವುದು?

ನೀವು ರೋಗಿಗಳಾಗಿದ್ದರೆ, ಸಾಧ್ಯವಾದಷ್ಟು ಇತರರ ಸಂಪರ್ಕ ಕಡಿಮೆ ಮಾಡಿಕೊಳ್ಳಿ. ಶಾಲೆಗೆ ಅಥವ ಕೆಲಸಕ್ಕೆ ಹೋಗಬೇಡಿ. ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಶೂ ಪೇಪರಿನಿಂದ ಮುಚ್ಚಿ ಕೊಳ್ಳಿ ಅದರಿಂದ ನಿಮ್ಮ ಸುತ್ತ ಮುತ್ತ ಇದ್ದವರಿಗೆ ರೋಗ ಹರಡುವುದಿಲ್ಲ.. ಆ ಟಿಶ್ಶೂ ಪೇಪರನ್ನು ಕಸದ ಬುಟ್ಟಿಗೆ ಹಾಕಿ. ಟಿಶ್ಶೂ ಇಲ್ಲದಿದ್ದರೆ ಕೈ ಬಳಸಿ. ಆದರೆ ಪ್ರತಿಸಲ ಚೆನ್ನಾಗಿ ಕೈ ತೊಳೆದುಕೊಳ್ಳಿ.

ಹಂದಿ ಜ್ವರ ತಡೆಯಲು ಕೈತೊಳಯುವ ಉತ್ತಮ ವಿಧಾನ ಯಾವುದು ?

ಕೈ ಯನ್ನು ಆಗಾಗ ತೊಳೆಯುವುದರಿಂದ ಕ್ರಿಮಿಗಳಿಂದ ರಕ್ಷಣೆ ದೊರೆಯುವುದು. ಸೋಪು ಮತ್ತು ಬೆಚ್ಚನೆ ನೀರು ಬಳಸಿ 15 ರಿಂದ 20 ಸೆಕೆಂಡುಗಳ ಕಾಲ ಕೈ ತೊಳೆಯಿರಿ. ಅಥವ ಆಲ್ಕೋಹಾಲ್‌ ಆಧಾರಿತ ದ್ರಾವಣ ಬಳಸಬಹುದು ಸೋಪು. ನೀರು ಸಿಗದಿದ್ದರೆ ಬಳಸಿ ಎಸೆಯಬಹುದಾದ ಅಲ್ಕೊಹಾಲ ಯುಕ್ತ ಕೈವರಸುಗಳು ಅಥವಾ ಶುಚಿ ಮಾಡುವ ಜೆಲ್ ಬಳಸಿ. ಅವು ಔಷಧಿ ಅಂಗಡಿಯಲ್ಲಿ ಲಭ್ಯ. ಜೆಲ್ ಬಳಸಿದಾಗ ಕೈ ಒಣಗುವವರೆಗೆ ಉಜ್ಜಿಕೊಳ್ಳ ಬೇಕು. ಜೆಲ್ ಬಳಸಿದಾಗ ನೀರು ಬೇಕಿಲ್ಲ ಅಲ್ಕೊಹಾಲು ಕ್ರಿಮಿಗಳನ್ನು ಕೊಲ್ಲುತ್ತದ.

ನಿಮಗೆ ಅನಾರೋಗ್ಯದ ಕೆಳಗಿನ ಲಕ್ಷಣಗಳು ಗೋಚರಿಸಿದರೆ ತಕ್ಷಣ ತುರ್ತು ಚಿಕಿತ್ಸೆ ಪಡೆಯಿರಿ

ಮಕ್ಕಳಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆ ಬೇಕಾಗುವ ತುರ್ತು ಸಂದರ್ಭದ ಲಕ್ಷಣಗಳು:

  • ಏದುಸಿರು ಅಥವ ಉಸಿರಾಟದ ತೊಂದರೆ
  • ನೀಲಿಯಾದ ಚರ್ಮ
  • ಸಾಕಷ್ಟು ದ್ರವ ಸೇವಿಸದೆ ಇರುವುದು
  • ಏಳದಿರುವುದು ಮತ್ತು ಮೌನವಾಗಿರುವುದು
  • ಎತ್ತಿ ಕೊಂಡರು ಕಿರಿಕಿರಿ ಮಾಡುವುದು
  • ಫ್ಲೂನ ಲಕ್ಷಣಗಳು ಸುಧಾರಿಸಿ ಮತ್ತೆ ಜ್ವರ, ಕೆಮ್ಮು ಬರುವುದು
  • ಜ್ವರ ಮತ್ತು ಚಿಕ್ಕ ಚಿಕ್ಕ ಗುಳ್ಳೆಗಳು

ಮಾಡ ಬೇಕಾದ ಮತ್ತು ಮಾಡ ಬಾರದ ಕ್ರಮಗಳು (ಮಾಡಿ ಮತ್ತು ಮಾಡಬೇಡಿ

ಮಾಡ ಬೇಕಾದವುಗಳು (ಮಾಡಿ)

  • ಕೆಮ್ಮುವಾಗ , ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ದಿಂದ ಮುಚ್ಚಿಕೊಳ್ಳಿ
  • ಕೆಮ್ಮಿದಾಗ ಮತ್ತು ಸೀನಿದಾಗ ಮೂಗು, ಕಣ್ಣು ಗಳನ್ನು ಮುಟ್ಟುವ ಮೊದಲು ಮತ್ತು ನಂತರ ಕೈ ಯನ್ನು ಸಾಬೂನಿನಿಂದ (ಸೋಪಿನಿಂದ) ತೊಳೆದುಕೊಳ್ಳಿ
  • ಗುಂಪಿನಲ್ಲಿ ಇರಬೇಡಿ
  • ಫ್ಲೂ ನ ಸೋಂಕು ಇದ್ದರೆ ಮನೆಯಲ್ಲೆ ಇರಿ.
  • ಫ್ಲೂನ ಲಕ್ಷಣಗಳಾದ ಕೆಮ್ಮು ಮೂಗು ಸೋರುವುದು, ಸೀನು ಮತ್ತು ಜ್ವರ ಇರುವವರಿಂದ ದೂರವಿರಿ
  • ಚೆನ್ನಾಗಿ ನಿದ್ರಿಸಿ, ದೈಹಿಕ ಚಟುವಟಿಕೆ ಇರಲಿ, ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ
  • ಹೆಚ್ಚು ನೀರು ಕುಡಿಯಿರಿ . ಪೌಷ್ಟಿಕ ಆಹಾರ ಸೇವಿಸಿ.

ಮಾಡ ಬಾರದವುಗಳು (ಮಾಡಬೇಡಿ)

  • ಕೈಕುಲುಕುವುದು, ಸಾಮಾಜಿಕವಾದ ಅಪ್ಪುಗೆ ಮತ್ತು ಮುದ್ದಿಸುವುದು ಅಥವ ಸ್ವಾಗತಕ್ಕಾಗಿ ಯಾವದೆ ದೈಹಿಕ ಸಂಪರ್ಕ
  • ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದು
  • ಎಲ್ಲೆಂದರಲ್ಲಿ ಉಗುಳುವುದು.
  • ಮಕ್ಕಳಿಗೆ ಆಸ್ಪರಿನ್ ಕೊಡುವುದು.

ಮೂಲ: ಸಿ.ಡಿ.ಸಿ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate