ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಎಂ.ಟಿ.ಪಿ

ಸುರಕ್ಷಿತವಲ್ಲದ ಗರ್ಭಪಾತಗಳು ಮತ್ತು ವೈದ್ಯಕೀಯ ಗರ್ಭಪಾತ (ಎಂ.ಟಿ.ಪಿ.)

ನಿಮಗೆ ಗೊತ್ತು, ಕೆಲವು ಸಮಯ ಇಷ್ಟವಿಲ್ಲದೆ ಗರ್ಭಧಾರಣೆಯಾಗುತ್ತದೆ. ಅಂತಹ ಪ್ರಕಜಣಗಳಲ್ಲಿ ಮಹಿಳೆಗೆ ಅಥವಾ ಕುಟುಂಬಕ್ಕೆ ಗರ್ಭಪತ ಮಾಡಿಸಲು ಇಚ್ಛೆ ಇರುತ್ತದೆ. ಈ ರೀತಿ ಗರ್ಭಪಾತ ಮಾಡಿಸಿಕೊಳ್ಳಲು ಗರ್ಭಿಣಿ ತರಬೇತಿ ಪಡೆಯದೆ ಇರುವ ವ್ಯಕ್ತಿಗಳು, ದಾದಿಯರು, ಇತರೆ ವ್ಯಕ್ತಿಗಳ ಬಳಿಗೆ ಹೋಗುತ್ತಾರೆ. ಅವರು ಗರ್ಭಪಾತ ಮಾಡುವ ವಿಧಾನ ಸುರಕ್ಷಿತವಾಗಿರುವುದಿಲ್ಲ. ಅನಾರೋಗ್ಯಕರ ಸೌಲಭ್ಯಗಳಿರುತ್ತವೆ. ಗರ್ಭಧಾರಣೆ ಇಷ್ಟವಿಲ್ಲದ ಮಹಿಳೆಯರಿಗೆ ಸುರಕ್ಷಿತವಲ್ಲದ, ಕಾನೂನುಬಾಹಿರ ಗರ್ಭಪಾತದ ಅಪಾಯಗಳ ಬಗ್ಗೆ ತಿಳುವಳಿಕೆ ನೀಡಬೇಕು. ಅಂತಹ ಮಹಿಳೆಯರು ಗರ್ಭ ಧರಿಸಿರುವ ಅಥವಾ ಇಲ್ಲವೆ ಎಂಬ ಬಗ್ಗೆ ದೃಢಪಡಿಸಿಕೊಳ್ಳಬಹುದು. ಗರ್ಭಧರಿಸಿದ್ದರೆ ಅಂತಹ ಮಹಿಳೆಯರು ಸರ್ಕಾರದಿಂದ ಅನುಮತಿ ಪಡೆದಿರುವ ಖಾಸತಿ ಆಸ್ಪತ್ರೆ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಪ್ರಯತ್ಮಿಸಬಹುದು.

ಸರ್ಕಾರ ಗರ್ಭಪಾತವನ್ನು ಕೆಲಬು ನಿಬಂಧನೆಗಳ ಮೇಲೆ 1971ರಿಂದ ಕಾನೂನು ಬದ್ಧ ಮಾಡಿದೆ. ವೈದ್ಯಕೀಯ ಗರ್ಭಪಾತದ ಕಾಯ್ದೆ ಅಡಿಯಲ್ಲಿ ಇರುತ್ತದೆ. (ಎಂ.ಟಿ.ಪಿ. ಕಾಯ್ದೆ) ಗರ್ಭಪಾತಗಳನ್ನು ಗರ್ಭಧರಿಸಿದ 5 ತಿಂಗಳವರೆಗೆ ಮಾಡಬಹುದು (20 ವಾರಗಳು).

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಂಟು ವಾರಗಳವರೆಗೆ (2 ತಿಂಗಳು) ಗರ್ಭಪಾತ ಮಾಡಬಹುದು. ಈ ಅವಧಿಯ ನಂತರ ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಬೇಕು. ಗರ್ಭ ಧರಿಸಿದ ಮೇಲೆ ತುಂಬ ತಡವಾಗಿ ಗರ್ಭಪಾತ ಮಾಡಿಸುವುದಕ್ಕಿಂತ ಬೇಗನೆ ಗರ್ಭಪಾತ ಮಾಡಿಸುವುದು ಸುರಕ್ಷಿತ. ಗರ್ಭಾವಸ್ಥೆ ಮುಂದುವರಿಸಲು ಕಾಯಬಾರದು.

ಪಿ.ಎನ್.ಡಿ.ಟಿ. ಕಾಯ್ದೆ ಪ್ರಕಾರ

 1. ಗರ್ಭಾವಸ್ಥೆಯಲ್ಲಿ ಭ್ರೂಣ ಲಿಂಗ ಪತ್ತೆ ಕಾನೂನುಬಾಹಿರ.
 2. ಭ್ರೂಣಲಿಂಗ ಹೆಣ್ಣು ಎಂದು ಪತ್ತೆ ಮಾಡಿದ ಮೇಲೆ ವೈದ್ಯಕೀಯ ಗರ್ಭಪಾತ ಕಾನೂನುಬಾಹಿರ.

ವೈದ್ಯಕೀಯ ಗರ್ಭಪಾತದಲ್ಲಿ ಎರಡು ವಿಧಾನಗಳಿವೆ.

 • ಸರ್ಜಿಕಲ್ ಗರ್ಭಪಾತ
 • ಕೈನಲ್ಲಿ ಹಿಡಿದುಕೊಳ್ಳುವ ಸಿರಂಜಿನಿಂದ ಅಥವಾ ಎಲೆಕ್ಟ್ರಿಕ್ ಸಕ್‍ಸನ್ ಯಂತ್ರದಿಂದ ಭ್ರೂಣವನ್ನು ವಿಸರ್ಜಿಸಲಾಗುತ್ತದೆ ಅಥವಾ ತೆಗೆಯಲಾಗುತ್ತದೆ.
 • ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ :
 • ವೈದ್ಯಕೀಯ ಗರ್ಭಪಾತ
 • ಗುಳಿಗೆಉಪಯೋಗಿಸುವುದರಿಂದ ಈ ಗರ್ಭಪಾತ ಮಾಡಲಾಗುತ್ತದೆ.

ಈ ಎರಡು ಪ್ರಕರಣಗಳಲ್ಲಿ ಗರ್ಭಪಾತವನ್ನು ಅಂಗೀಕೃತ ಕೇಂದ್ರಗಳಲ್ಲಿ ತಜ್ಞ ವೈದ್ಯರು ಮಾಡುತ್ತಾರೆ. ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳುವಾಗ ಪ್ರಾಥಮಿಕ ಆರೋಗ್ಯ ಕೇಂದ್ರ ವಿವರವಾದ ಮಾಹಿತಿ ನೀಡುತ್ತದೆ. ಎರಡು ವಿಧಾನಗಳಲ್ಲಿ ಅನುಕೂಲ/ಅನಾನುಕೂಲಗಳು ಇರುತ್ತವೆ. ಗರ್ಭಪಾತಕ್ಕೆ ಒಳಗಾದ ಮಹಿಳೆಗೆ ಗರ್ಭಪಾತ ನಂತರದ ಆರೈಕೆ ಇರಬೇಕು.

 • ಗರ್ಭಪಾತ ನಂತರದ ಆರೈಕೆ
 • ವಿಶೇಷ ಗುಳಿಗೆ ನುಂಗಿ ವೈದ್ಯಕೀಯ ಗರ್ಭಪಾತವಾದ ಮೇಲೆ ಅನುಸರಣೆ ಇರಬೇಕು
 • ಮಹಿಳೆಗೆ ಈ ಕೆಳಕಂಡ ಲಕ್ಷಣಗಳು ಇದ್ದಲ್ಲಿ, ತಕ್ಷಣ ಹತ್ತಿರದ ಎಫ್.ಆರ್.ಯು/ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಬೇಕು.
 • ರಕ್ತಸ್ರವ ಹೆಚ್ಚಾಗಿದ್ದರೆ ಅಥವಾ ವಾಸನೆಯುಕ್ತ ಸ್ರಾವವಿದ್ದರೆ.
 • ಹೊಟ್ಟೆ ನೋವು ತೀವ್ರವಾಗಿದ್ದರೆ.
 • ಜ್ವರ
 • ವಾಂತಿ ಹೆಚ್ಚಾಗಿದ್ದರೆ ಅಥವಾ ಹೊಟ್ಟೆ ಊತವಿದ್ದರೆ.

ಮಹಿಳೆಗೆ ನೀಡುವ ಸಲಹೆ, ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ಸಹಾಯವಾಗುತ್ತದೆ. ಇದು ಗರ್ಭಿಣಿಯರ ಮರಣ ಪ್ರಮಾಣ ಕಡಿಮೆಯಾಗಲು ಸಹಾಯವಾಗುತ್ತದೆ. ಗರ್ಭಪಾತದಿಂದ 6 ತಿಂಗಳ ನಂತರ ಮಹಿಳೆ ಪುನಃ ಗರ್ಭಿಣಿಯಾಗಬಹುದು. ಆದುದರಿಂದ ಮಹಿಳೆಗೆ (ಮತ್ತು ಅವಳ ಸಂಗಾತಿಗೆ) ಸೂಕ್ತ ಗರ್ಭನಿರೋಧಕಗಳ ಬಗ್ಗೆ ಮಾರ್ಗದರ್ಶನ ನೀಡಬಹುದು ಮತ್ತು ಸೂಕ್ತ ಗರ್ಭನಿರೋಧಕಗಳು ದೊರಕಿಸುವುದಕ್ಕೆ ಸಹಾಯ ಮಾಡಬೇಕು.

ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು

ನೀವು ಸುರಕ್ಷಿತವಲ್ಲದ ಗರ್ಭಪಾತದ ಬಗ್ಗೆ ಕುಟುಂಬ ಮತ್ತು ಸಮುದಾಯಕ್ಕೆ ಶಿಕ್ಷಣ ನೀಡಬೇಕು.

ನೀವು ತಿಳಿದುಕೊಂಡಿರಬೇಕು.

 1. ನೀವು ಹಳ್ಳಿಗೆ ಹತ್ತಿರವಿರುವ ಸರ್ಕಾರದಿಂದ ವೈದ್ಯಕೀಯ ಗರ್ಭಪಾತ ಮಾಡಲು ಮಾನ್ಯತೆ ಪಡೆದಿರುವ ಕೇಂದ್ರಗಳು/ಸಂಸ್ಥೆಗಳು.
 2. ವೈದ್ಯಕೀಯ ಗರ್ಭಪಾತ ಮಾಡುವ ದಿನಾಂಕಗಳ ಬಗ್ಗೆ.
 3. ತಗಲುವ ವೆಚ್ಚ.

ದಗತ್ಯಬಿದ್ದಲ್ಲಿ ಮಾನ್ಯತೆ ಇರುವ ಆಸ್ಪತ್ರೆಗೆ ಮಹಿಳೆಯ ಜೊತೆ ಹೋಗಬಹುದು.

ಗರ್ಭಧರಿಸಿದ 20 ವಾರಗಳವರೆಗೆ ವೈದ್ಯಕೀಯ ಗರ್ಭಪಾತ ಮಾಡಬಹುದಾದರೂ, 12 ವಾರದೊಳಗೆ ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳುವುದು ಸುರಕ್ಷಿತ ಎಂದು ಸಲಹೆ ನೀಡುವುದು.

ವೈದ್ಯಕೀಯ ಗರ್ಭಪಾತದ ನಂತರ ಪರಿಣಾಮಕಾರಿಯಾದ ಗರ್ಭನಿರೋಧಕಗಳನ್ನು ಬಳಸುವುದರ ಅಗತ್ಯದ ಬಗ್ಗೆ ಶಿಕ್ಷಣ ನೀಡುವುದು. ಇದರಿಂದ ಮತ್ತೆ ಮತ್ತೆ ಗರ್ಭಪಾತ ಮಾಡಿಸುವುದನ್ನು ತಪ್ಪಿಸಬಹುದು.

ಮೂಲ :ಆಶಾ ಕಲಿಕೆ ಕೈಪಿಡಿ

2.98947368421
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top